NIA Raid: 6 ರಾಜ್ಯಗಳ 13 ಸ್ಥಳಗಳಲ್ಲಿ ಎನ್ಐಎ ದಾಳಿ; ತುಮಕೂರಲ್ಲಿ ವಿದ್ಯಾರ್ಥಿ, ಭಟ್ಕಳದಲ್ಲಿ ಶಂಕಿತರು ಅರೆಸ್ಟ್

ಕರ್ನಾಟಕದ ತುಮಕೂರು (Tumkur) ಹಾಗೂ ಭಟ್ಕಳದಲ್ಲಿ (Bhatkal) ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭಟ್ಕಳದಲ್ಲಿ ಸಹೋದರರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ತುಮಕೂರಿನಲ್ಲಿ ಪ್ರತಿಷ್ಠಿತ ಕಾಲೇಜ್‌ನಲ್ಲಿ (Collage) ಓದುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು (Student) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು: ದೇಶಾದ್ಯಂತ ಇಂದು ರಾಷ್ಟ್ರೀಯ ತನಿಖಾ ದಳದ (NIA) ತಂಡ ಭರ್ಜರಿ ಬೇಟೆಯಾಡಿದೆ. ಕರ್ನಾಟಕ (Karnataka), ಮಹಾರಾಷ್ಟ್ರ (Maharashtra) ಸೇರಿದಂತೆ 6 ರಾಜ್ಯಗಳ 13 ಸ್ಥಳಗಳ ಮೇಲೆ ಎನ್ಐಎ ಅಧಿಕಾರಿಗಳು (NIA Officers) ದಾಳಿ (Raid) ಮಾಡಿದ್ದಾರೆ. ಉಗ್ರ ಸಂಘಟನೆ (Terrorist Organization) ಜೊತೆ ಸಂಪರ್ಕ, ದೇಶದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ಸೇರಿದಂತೆ ಇನ್ನಿತರ ದೇಶದ್ರೋಹಿ ಚಟುವಟಿಕೆ ನಡೆಸುತ್ತಿರುವವರಿಗೆ ಶಾಕ್ ಕೊಟ್ಟಿದೆ. ಕರ್ನಾಟಕದ ತುಮಕೂರು (Tumkur) ಹಾಗೂ ಭಟ್ಕಳದಲ್ಲಿ (Bhatkal) ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭಟ್ಕಳದಲ್ಲಿ ಸಹೋದರರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ತುಮಕೂರಿನಲ್ಲಿ ಪ್ರತಿಷ್ಠಿತ ಕಾಲೇಜ್‌ನಲ್ಲಿ (Collage) ಓದುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು (Student) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ತುಮಕೂರಿನಲ್ಲಿ ವಿದ್ಯಾರ್ಥಿ ವಶಕ್ಕೆ

ತುಮಕೂರಿನಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ತುಮಕೂರಿನ ಎಚ್ಎಂಎಸ್‌ ಯುನಾನಿ ಕಾಲೇಜ್‌ನ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ವಿದ್ಯಾರ್ಥಿ ವಿಚಾರಣೆ

ಈ ವಿದ್ಯಾರ್ಥಿ ಮಹಾರಾಷ್ಟ್ರ ಮೂಲದವನಾಗಿದ್ದು, ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ. ಈತ ತುಮಕೂರಿನ ಮರಳೂರು ದಿಣ್ಣೆ ಬಳಿ ವಾಸವಿದ್ದ ಎನ್ನಲಾಗ್ತಿದೆ‌. ಈ ವಿದ್ಯಾರ್ಥಿ ಎಚ್ಎಂಎಸ್‌ ಯುನಾನಿ ಕಾಲೇಜ್‌ನಲ್ಲಿ ವೈದ್ಯಕೀಯ ಪದವಿ ಪಡೆಯುತ್ತಿದ್ದ. ಸದ್ಯ ಓರ್ವ ವಿದ್ಯಾರ್ಥಿಯನ್ನ ವಶಕ್ಕೆ ಪಡೆದಿರುವ ಎನ್ಐಎ ಟೀಂ, ಆತನನ್ನು ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: Breaking News: ಐಸಿಸ್ ಜೊತೆ ನಂಟು ಹೊಂದಿರೋ ಶಂಕೆ, ಭಟ್ಕಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದ NIA

ಭಟ್ಕಳದಲ್ಲಿ  ಎನ್ಐಎ ದಾಳಿ

ಐಸಿಸ್ ಸೇರಿದಂತೆ ಕೆಲವು ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ದ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಮಾಹಿತಿ ತಿಳಿದು ಬಂದಿದೆ. ಇಂದು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿ ಭಟ್ಕಳ ಮೂಲದ 30 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ ಅಂತ ಮೂಲಗಳು ತಿಳಿಸಿವೆ.

ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದನಾ ಶಂಕಿತ ವ್ಯಕ್ತಿ?

ಭಟ್ಕಳದಲ್ಲಿದ್ದ 30 ವರ್ಷದ ಈ ವ್ಯಕ್ತಿಯು ಐಸಿಸ್​​ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಐಸಿಸ್ ಬರಹಗಳನ್ನು ಭಾಷಾಂತರ ಮಾಡುತ್ತಿದ್ದ ಎಂಬ ಶಂಕೆಯ ಮೇಲೆ ಆತನನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಆತನನ್ನು ಗುಪ್ತ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಬಂಧಿತ ವ್ಯಕ್ತಿ ಯಾರು?

ಭಟ್ಕಳ ಪಟ್ಟಣದ ನಿವಾಸಿ 30 ಅಬ್ದುಲ್ ಮುಕ್ತದೀರ್ ಎಂಬಾತನೇ ಬಂಧಿತ ಆರೋಪಿ. ಈತನ ಜೊತೆಗೆ ಈತನ ಸಹೋದರನನ್ನೂ ಕೂಡ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿದ ಎನ್‌ಐಎ ತಂಡ, ಅಬ್ದುಲ್ ಮುಕ್ತದೀರ್ ಹಾಗೂ ಆತನ ಸಹೋದರು ಅವರ ಪತ್ನಿಯ ಮನೆಯಲ್ಲಿದ್ದಾಗಲೇ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Surathkal Murder: ಹತ್ಯೆಗೆ ಬಳಸಿದ ಕಾರ್ ಮಾಲೀಕ ವಶಕ್ಕೆ ಪಡೆದ ಬಳಿಕ ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿ

ದೇಶದ ವಿವಿಧೆಡೆ ಎನ್ಐಎ ದಾಳಿ

ಇಂದು ಎನ್ಐಎ ಅಧಿಕಾರಿಗಳು ಮಧ್ಯ ಪ್ರದೇಶದ ಎರಡು ಕಡೆ, ಗುಜರಾತ್ ರಾಜ್ಯದ ನಾಲ್ಕು ಕಡೆ, ಮಹಾರಾಷ್ಟ್ರ, ಕರ್ನಾಟಕದಲ್ಲಿ ತಲಾ ಎರಡು ಕಡೆ ಹಾಗೂ ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ದಾಳಿ ನಡೆಸಿದ್ದಾರೆ.
Published by:Annappa Achari
First published: