NIA: ಭಟ್ಕಳದಲ್ಲಿ ಎನ್​ಐಎ ದಾಳಿ; ಶಂಕಿತ ಮೂವರು ವಶಕ್ಕೆ

ಕಳೆದ ಒಂದು ತಿಂಗಳಲ್ಲಿ ಅನಂತನಾಗ್, ಶ್ರೀನಗರ, ಬಂಡಿಪೋರ್, ಬಾರಾಮುಲ್ಲಾ, ಮಂಗಳೂರು, ಬೆಂಗಳೂರು ಮತ್ತು ಭಟ್ಕಳದ 21 ಸ್ಥಳಗಳಲ್ಲಿ ಎನ್​ಐಎ ದಾಳಿ ನಡೆಸಿದೆ

ದಾಳಿ ಪ್ರದೇಶ

ದಾಳಿ ಪ್ರದೇಶ

  • Share this:
     ಕಾರವಾರ (ಆ. 6):  ಉತ್ತರ ಕನ್ನಡ ಭಟ್ಕಳದಲ್ಲಿ ಭಯೋತ್ಪಾದನಾ ಚಟವಟಿಕೆ ನಡೆಸುತ್ತಿರುವ ಸುಳಿವಿನ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಭಟ್ಕಳದ ಸಾಗರ ರಸ್ತೆಯಲ್ಲಿರುವ ಉಮರ್‌ ಸ್ಟ್ರೀಟ್, ತೆಂಗಿನಗುಂಡಿ ಮನೆಯೊಂದರ ಮೇಲೆ ದಾಳಿ ನಡೆಸಲಾಗಿದ್ದು, ಮೂವರು ಶಂಕಿತರನ್ನು ಎನ್​ಐಎ ವಶಕ್ಕೆ ಪಡೆದಿದೆ. ಭಾರತದ ಗುಪ್ತಚರ ಸಂಸ್ಥೆ, ಎನ್ಐಎ ಮತ್ತು ರಾಜ್ಯ ಪೊಲೀಸ್ ನೇತೃತ್ವದ ಭಯೋತ್ಪಾದನೆ ಕಾರ್ಯಾಚರಣೆ ನಡೆಸಲಾಗಿದೆ. 

    ಶಂಕಿತ ಐಎಸ್​ಐಎಸ್​​ನ ಮೂವರು ಕಾರ್ಯಕರ್ತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಜುಫ್ರಿ ಜವಾಹರ್ ದಾಮುಡಿ ಅಕಾ ಅಬು ಹಾಜಿರ್ ಅಲ್ ಬದ್ರಿಯನ್ನು ಈ ವೇಳೆ ಬಂಧಿಸಲಾಗಿದೆ. ಈ ಹಿಂದೆ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ಓರ್ವನ ತಮ್ಮನ್ನನ್ನೂ ಕೂಡ ಈ ವೇಳೆ ವಶಕ್ಕೆ ಪಡೆಯಲಾಗಿದೆ.

    ಐಎಸ್ ಪ್ರಚಾರ ಮಾಸಿಕ ಆನ್‌ಲೈನ್ ನಿಯತಕಾಲಿಕೆ 'ವಾಯ್ಸ್ ಆಫ್ ಹಿಂದ್' ನಲ್ಲಿ ಬದ್ರಿ ಸಕ್ರಿಯವಾಗಿದ್ದ. ಐಸಿಸ್ ಪ್ರಚಾರ ಮತ್ತು ಮಾಧ್ಯಮ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಖರೀದಿ, ಮುಜಾಹಿದ್ದೀನ್ ಮತ್ತು ನೇಮಕಾತಿ ಸೇರಿದಂತೆ ಲಾಜಿಸ್ಟಿಕ್ ಬೆಂಬಲವನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

    ಇದನ್ನು ಓದಿ: ಗಡಿ ಜಿಲ್ಲೆಗಳಲ್ಲಿ ವೀಕೆಂಡ್​​​ ಕರ್ಫ್ಯೂ; ಆಗಸ್ಟ್​ 23 ರಿಂದ ಶಾಲೆ-ಕಾಲೇಜು ಆರಂಭ; ಸಿಎಂ ಬಸವರಾಜ್​ ಬೊಮ್ಮಾಯಿ

    ಈತ ಸೈಬರ್​ ಸಂಪರ್ಕದಲ್ಲಿದ್ದ ಅವಿಶ್ವಾಸಿಗಳು, ಪೊಲೀಸ್​ ಸಿಬ್ಬಂದಿ, ಪತ್ರಕರ್ತರು ಮತ್ತಿತರನ್ನು ಕೊಲ್ಲಲು ಸೂಚಿಸಿದ್ದ. ಜೊತೆಗೆ ದೇವಸ್ಥಾನ ಮತ್ತು ಸರ್ಕಾರಿ ಆಸ್ತಿಪಾಸ್ತಿ ಹಾನಿ ಮಾಡಲು ಉತ್ತೇಜಿಸಿದ್ದ ಎನ್ನಲಾಗಿದೆ.

    ಅಬು ಹಾಜಿರ್ ಅಲ್ ಬದ್ರಿ ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿತ್ತು. ಈ ಮೂಲಕ ಆತ ಗುಪ್ತಚರ ಸಂಸ್ಥೆಗಳಿಂದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದ್ದ. ಅಲ್ಲದೇ . ಸಾಮಾಜಿಕ ಮಾಧ್ಯಮಗಳಲ್ಲಿ ಆತ ಖೋರಾಸನ್ ಅಥವಾ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎಂದು ಹೇಳಿಕೊಂಡದ್ದ. ಆದರೆ, ಈ ಅಬು ಹಾಜಿರ್ ಅಲ್ ಬದ್ರಿ' ಭಾರತದಲ್ಲಿ ಇರಬಹುದೇ ಹೊರತು ಖೋರಾಸನ್ ಅಲ್ಲ ಎಂದು ಗುಪ್ತಚರ ಸಂಸ್ಥೆ ಅಂದಾಜಿಸಿತು.

    ದಾಳಿ ವೇಳೆ ಜಿಹಾದಿ ಸಾಹಿತ್ಯ ಕುರಿತು ಡಿಜಿಟಲ್​ ಸಾಧನಗಳನ್ನು ಭದ್ರತಾ ಪಡೆ ವಶಕ್ಕೆ ಪಡೆಯಲಾಗಿದೆ. ಕಳೆದ ಒಂದು ತಿಂಗಳಲ್ಲಿ ಅನಂತನಾಗ್, ಶ್ರೀನಗರ, ಬಂಡಿಪೋರ್, ಬಾರಾಮುಲ್ಲಾ, ಮಂಗಳೂರು, ಬೆಂಗಳೂರು ಮತ್ತು ಭಟ್ಕಳದ 21 ಸ್ಥಳಗಳಲ್ಲಿ ಎನ್​ಐಎ ದಾಳಿ ನಡೆಸಿದೆ

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: