NIA Raid: ಬೆಂಗಳೂರಿನ 12 ಸ್ಥಳ, ಮಂಗಳೂರಿನ 10 ಕಡೆ NIA ರೇಡ್‌; PFI ಕಾರ್ಯಕರ್ತರಿಂದ ಗೋ ಬ್ಯಾಕ್ ಪ್ರತಿಭಟನೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿಪ್ಪು ನಗರದ ಎಸ್​ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಮನೆ ಮೇಲೆ ದಾಳಿ ಎನ್‌ಐಎ ಹಾಗೂ ಐಬಿ ತಂಡದಿಂದ ದಾಳಿ ನಡೆದಿದ್ದು, 1 ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕ ಹಾಗೂ ಸಿಡಿ ಜಪ್ತಿ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ರಾಷ್ಟ್ರವ್ಯಾಪಿ ಎನ್​ಐಎ (NIA) ತಂಡ  ಪಿಎಫ್​ಐ (PFI) ಮತ್ತು ಎಸ್​ಡಿಪಿಐ (SDPI) ಕಚೇರಿ ಮತ್ತು ಸ್ಥಳೀಯ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಿ, ಶೋಧ ನಡೆಸುತ್ತಿದ್ದಾರೆ. ಇನ್ನು ದಾಳಿಯನ್ನು ವಿರೋಧಿಸಿ ರಸ್ತೆಗೆ ಇಳಿದಿರುವ ಪಿಎಫ್​ಐ ಮತ್ತು ಎಸ್​ಡಿಪಿಐ ಕಾರ್ಯಕರ್ತರು (Activist Protest) ಗೋ ಬ್ಯಾಕ್ ಎನ್ಐಎ ಎಂದು ಘೋಷಣೆ ಆಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 13 ರಾಜ್ಯಗಳಲ್ಲಿ ನಡೆದಿರುವ ದಾಳಿ ಯಲ್ಲಿ ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ನಂತರ ಬಂಧಿಸಿ ಎಲ್ಲರನ್ನು ದೆಹಲಿಗೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ. ಬೆಂಗಳೂರಿನ 12 ಸ್ಥಳ, ಮಂಗಳೂರಿನ 10 ಕಡೆ ಮತ್ತು ಕಾರವಾರ, ಮೈಸೂರಿನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡಿರುವ ಎನ್ಐಎ ತೀವ್ರ ವಿಚಾರಣೆಗೆ (NIA Investigation) ಒಳಪಡಿಸಿದೆ.

ಮೈಸೂರಿನ ಶಾಂತಿ ನಗರದಲ್ಲಿರುವ PFI ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನಾ ಮಹಮದ್ ಕಲಿಮುಲ್ಲಾ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇದೀಗ ಪಿಎಫ್​ಐ ಮುಖಂಡನನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.

ಶಿರಸಿಯಲ್ಲಿಯೂ ದಾಳಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿಪ್ಪು ನಗರದ ಎಸ್​ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಮನೆ ಮೇಲೆ ದಾಳಿ ಎನ್‌ಐಎ ಹಾಗೂ ಐಬಿ ತಂಡದಿಂದ ದಾಳಿ ನಡೆದಿದ್ದು, 1 ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕ ಹಾಗೂ ಸಿಡಿ ಜಪ್ತಿ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ.  SDPI ಮುಖಂಡ ಅಜೀಜ್ ಮನೆ ಗೋಡೆ ಮೇಲೆ ರಿಜೆಕ್ಟ್ ಸಿಎಎ ಹಾಗೂ ಎನ್‌ಐಎ ಎಂದು ಬರೆಯಲಾಗಿದೆ. ಅಜೀಜ್ ಇಲ್ಲದ ಕಾರಣಕ್ಕೆ ಸಹೋದರನನ್ನು ವಶಕ್ಕೆ ಪಡೆಯಲಾಗಿದೆ. ಸಹೋದರರಿಬ್ಬರು ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ  ಭಾಗಿಯಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು.

ಯಾವ್ಯಾವ ರಾಜ್ಯಗಳಲ್ಲಿ ದಾಳಿ?

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ರಾಜಸ್ಥಾನ, ಬಿಹಾರ, ದೆಹಲಿ ಮತ್ತು ಉತ್ತರ ಪ್ರದೇಶ

PFI ರಾಷ್ಟ್ರೀಯ ಅಧ್ಯಕ್ಷ OMA ಸಲಾಂ, PFI ರಾಷ್ಟ್ರೀಯ ಕಾರ್ಯದರ್ಶಿ ಇಲಾಮರನ್ ನಾಸಿರುದ್ದೀನ್ ಎಂಬವರನ್ನು ಸಹ ವಶಕ್ಕೆ ಪಡೆಯಲಾಗಿದೆ.ಕೇರಳದ PFI ಅಧ್ಯಕ್ಷ CP ಮೊಹಮದ್ ಬಶೀರ್ ಎಂಬವರನ್ನು ನಿಷೇಧಿತ ಸಂಘಟನೆಗಳಿಗೆ ಯುವಕರಿಗೆ ತರಬೇತಿ ನೀಡಿದ ಆರೋಪದಡಿ ಮತ್ತು ಫಂಡಿಂಗ್ ಮಾಡಿದ ಆರೋಪದಡಿ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ:  NIA Raids: ಮಂಗಳೂರಿನ PFI, SDPI ಕಚೇರಿ ಮೇಲೆ ಎನ್​ಐಎ ದಾಳಿ; ಅರೆ ಮೀಸಲು ಪಡೆಯಿಂದ ಭದ್ರತೆ

ರಾಜ್ಯದಲ್ಲಿ ಯಾರು ವಶಕ್ಕೆ?

ಮೈಸೂರು PFI ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನ ಮಹಮ್ಮದ್ ಕಲಿಮುಲ್ಲಾ, ಕೊಪ್ಪಳದ PFI ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್, ಹೊನ್ನಾವರದ ಮೌಸಿನ್ ಅಬ್ದುಲ್ ಶುಕುರ್, PFI ರಾಜ್ಯ ಕಾರ್ಯದರ್ಶಿ ಎ ಕೆ ಅಶ್ರಫ್, ಮೊಯಿದ್ದಿನ್ ಹಳೆಯಂಗಡಿ, ನವಾಜ್ ಕಾವೂರು

ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಖಚಿತ ಮಾಹಿತಿ ಮೇಲೆ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ. ದೇಶದ ಏಕತೆ‌, ಸಮಗ್ರತೆ ಹಾಳು ಮಾಡೋ ಸಂಘಟನೆಗಳ ಮೇಲೆ ರೇಡ್‌ ಮಾಡಲಾಗಿದೆ ಎಂದು ರಾಜ್ಯದಲ್ಲಿ NIA ದಾಳಿ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇದನ್ನೂ ಓದಿ:  Bengaluru Pothole: ಅಯ್ಯಯ್ಯೋ ಬೆಂಗಳೂರಿನ ಗುಂಡಿಗಳಿಗೆ 5 ಸ್ಟಾರ್ ಕೊಡ್ತಂತೆ ಗೂಗಲ್!

ಶಿವಮೊಗ್ಗ ಪ್ರಕರಣದಲ್ಲಿ ಬಾಂಬ್ ತಯಾರು ಮಾಡಲಾಗಿತ್ತು. ಅದನ್ನ ಪೊಲೀಸರು ಟ್ರಯಲ್ ಕೂಡ ಮಾಡಿದ್ದಾರೆ. ಅವರ ಬಂಧನದಿಂದ ರಕ್ತಹಾನಿ ಜೀವಹಾನಿ ತಡೆಗಟ್ಟಲಾಗಿದೆ. ತಪ್ಪಿತಸ್ಥರು ಅಲ್ಪಸಂಖ್ಯಾತರಾ ಅಲ್ವಾ ಅಂತ ನೋಡಿ ಕೆಲಸ‌ ಮಾಡಲಾಗಲ್ಲ. ಸಂಘಟನೆ ಬ್ಯಾನ್ ಆದ್ರೆ ವ್ಯಕ್ತಿಗಳ ರಾಕ್ಷಸ ಮನೋಭಾವ ಬದಲಾಗೋದಿಲ್ಲ. ತಲೆಮರೆಸಿಕೊಂಡಿರೋ ಆತನನ್ನು ಹಿಡಿಯಲಾಗುತ್ತೆ. ಶಿವಮೊಗ್ಗ ಪೊಲೀಸರಿಗೆ ಹೇಗೆ ಹ್ಯಾಟ್ಸ್ ಆಫ್ ಸಲ್ಲಿಸಬೇಕೋ ಗೊತ್ತಾಗ್ತಿಲ್ಲ ಎಂದ ಹೇಳಿದರು.
Published by:Mahmadrafik K
First published: