ಬೆಳ್ಳಂದೂರು ಕೆರೆ ಮಾಲಿನ್ಯ; ಬಿಬಿಎಂಪಿಗೆ 25 ಕೋಟಿ, ಸರ್ಕಾರಕ್ಕೆ 50 ಕೋಟಿ ರೂ. ದಂಡ!

ಬೆಂಗಳೂರಿನ ಬೆಳ್ಳಂದೂರು ಕೆರೆ, ವರ್ತೂರು ಕೆರೆ, ಅಗರ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಪಾಲನೆ ಉಸ್ತುವಾರಿಗೆ ನಿವೃತ್ತ ನ್ಯಾ. ಸಂತೋಷ್​ ಹೆಗ್ಡೆ ನೇತೃತ್ವದ ಸಮಿತಿ ರಚಿಸಲಾಗುವುದು ಎಂದು ನ್ಯಾಯಾಧಿಕರಣ ತಿಳಿಸಿದೆ.

Sushma Chakre | news18
Updated:December 6, 2018, 3:49 PM IST
ಬೆಳ್ಳಂದೂರು ಕೆರೆ ಮಾಲಿನ್ಯ; ಬಿಬಿಎಂಪಿಗೆ 25 ಕೋಟಿ, ಸರ್ಕಾರಕ್ಕೆ 50 ಕೋಟಿ ರೂ. ದಂಡ!
ಬೆಳ್ಳಂದೂರು ಕೆರೆಯಲ್ಲಿನ ನೊರೆ
  • News18
  • Last Updated: December 6, 2018, 3:49 PM IST
  • Share this:
ಧರಣೀಶ್​ ಬೂಕನಕೆರೆ

ನವದೆಹಲಿ (ಡಿ. 6):  ಬೆಂಗಳೂರಿನ ಬೆಳ್ಳಂದೂರು ಕೆರೆಗೆ ರಾಸಾಯನಿಕಗಳನ್ನು ಹರಿಯಬಿಟ್ಟ ಪರಿಣಾಮ ಬಿಳಿ ನೊರೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇಷ್ಟಾದರೂ ಕೆರೆಯ ಮಾಲಿನ್ಯವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಬಿಬಿಎಂಪಿಗೆ 25 ಕೋಟಿ ಮತ್ತು ರಾಜ್ಯ ಸರ್ಕಾರಕ್ಕೆ 50 ಕೋಟಿ ದಂಡ ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ  ಇಂದು ಮಹತ್ವದ ತೀರ್ಪು ನೀಡಿದೆ.

ರಾಜ್ಯ ಸರ್ಕಾರ ಮತ್ತು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಗೆ ವಿಧಿಸಿದ ದಂಡವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ 500 ಕೋಟಿ ರೂ. ಮೀಸಲು ನಿಧಿಗೆ ನೀಡಲು ಸೂಚನೆ ನೀಡಲಾಗಿದೆ. ಆ ಹಣವನ್ನು ಕೆರೆ ಸಂರಕ್ಷಣೆಗೆ ಬಳಸಲಾಗುವುದು. ಮುಂದೆ ಬೆಳ್ಳಂದೂರು ಕೆರೆ  ಮತ್ತೆ ಕಲುಷಿತಗೊಂಡರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಅಲ್ಲದೆ, ಆ ವಿಷಯವನ್ನು ಅಧಿಕಾರಿಗಳ ಕೆರಿಯರ್ ರೆಕಾರ್ಡ್​ನಲ್ಲಿ ಬರೆಯಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶ ನೀಡಿದೆ.ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ:

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನ್ಯಾ. ಆದರ್ಶ ಕುಮಾರ್ ಗೋಯಲ್ ನೇತೃತ್ವದ ಪೀಠ ಇಂದು ದೆಹಲಿಯಲ್ಲಿ ಬೆಳ್ಳಂದೂರು ಕೆರೆ ಮಾಲಿನ್ಯದ ಕುರಿತು ವಿಚಾರಣೆ ನಡೆಸಿದ್ದು, ಬೆಂಗಳೂರಿನ ಬೆಳ್ಳಂದೂರು ಕೆರೆ ರಕ್ಷಣೆ ಆಗಿಲ್ಲ. ಮಳೆ ಬಂದಾಗಲೆಲ್ಲ ಕೆರೆಯ ರಾಸಾಯನಿಕಯುಕ್ತ ನೀರು ಮೇಲೆ ಉಕ್ಕಿಹರಿದು ರಸ್ತೆಯ ತುಂಬ ಬಿಳಿನೊರೆಗಳು ತುಂಬುತ್ತಿವೆ. ಹಲವು ಬಾರಿ ಕೆರೆಯ ಮಧ್ಯಯೇ ಬೆಂಕಿಯೂ ಹೊತ್ತಿಕೊಂಡಿತ್ತು. ಇದರಿಂದ ಸುತ್ತಮುತ್ತಲಿನವರಿಗೆ ರೋಗಗಳು ಹರಡುವ ಅಪಾಯವಿದೆ. ಆದರೂ ರಾಜ್ಯ ಸರ್ಕಾರ, ಬಿಬಿಎಂಪಿ ನಿರ್ಲಕ್ಷ್ಯ ವಹಿಸಿವೆ. ರಾಜಕಾಲುವೆ ಅತಿಕ್ರಮಣವನ್ನು ತಡೆಯುವಲ್ಲಿ ವಿಫಲವಾಗಿದೆ. ಜಲಮಾಲಿನ್ಯ ಮಾಡುವುದು ಅಪರಾಧ ಎಂದು ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ಕೇಜ್ರಿವಾಲ್​ ಸರ್ಕಾರಕ್ಕೆ 25 ಕೋಟಿ ರೂ. ದಂಡ!

ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕರ್ತವ್ಯ. ಇದನ್ನು ಸಂವಿಧಾನದಲ್ಲಿ ಕೂಡ ಹೇಳಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ, ಬಿಬಿಎಂಪಿ ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಗೋಯಲ್,  ಜವಾಬ್ದಾರಿ ನಿಭಾಯಿಸದಿದ್ದರೆ ಅಧಿಕಾರಿಗಳೇ ಹೊಣೆ ಎಂದಿದ್ದಾರೆ.

ನ್ಯಾ. ಸಂತೋಷ್​ ಹೆಗ್ಡೆ ನೇತೃತ್ವದಲ್ಲಿ ಸಮಿತಿ:

ಬೆಂಗಳೂರಿನ ಬೆಳ್ಳಂದೂರು ಕೆರೆ, ವರ್ತೂರು ಕೆರೆ, ಅಗರ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಉನ್ನತ ಸಮಿತಿ ನೀಡಿರುವ ಶಿಫಾರಸು ಪಾಲಿಸಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಪಾಲನೆ ಉಸ್ತುವಾರಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ನೇತೃತ್ವದ ಸಮಿತಿ ರಚನೆ ಮಾಡಲಾಗುವುದು.  ಈ ಕುರಿತು ವಿವರಗಳಿರುವ ವೆಬ್ ಸೈಟ್ ರಚಿಸಲು ಸಮಿತಿಗೆ ನಿರ್ದೇಶನ ನೀಡಲಾಗುವುದು. ಇದರಿಂದ ಜನರು ವೆಬ್ ಸೈಟ್​ನಲ್ಲಿ ದೂರು, ಸಲಹೆಗಳನ್ನು ನೀಡಬಹುದು ಎಂದು ಹೇಳಿದ್ದಾರೆ.ಇದನ್ನೂ ಓದಿ: ಮಹಿಳೆಯರೇ ಹುಷಾರ್! ಚೆನ್ನೈ ಪಿಜಿ ಬೆಡ್​ರೂಂ, ಬಾತ್​ರೂಂನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ

ಆದೇಶವನ್ನು ಉಲ್ಲಂಘಿಸಿದರೆ 100 ಕೋಟಿ ರೂ. ದಂಡ:

ಇನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ಕೆರೆಗಳ ಅಭಿವೃದ್ಧಿಯ ಕುರಿತು ಪರ್ಫಾರ್ಮೆನ್ಸ್​ ಖಾತರಿ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನ್ಯಾಯಮೂರ್ತಿ ಆದರ್ಶ ಗೋಯಲ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಕೆರೆಗಳನ್ನು ಸಂರಕ್ಷಣೆಯ ಖಾತರಿಯನ್ನು ಉಲ್ಲಂಘಿಸಿದರೆ 100 ಕೋಟಿ ರೂ. ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದರು.ಬೆಳ್ಳಂದೂರು ಕೆರೆ ಪ್ರಕರಣವನ್ನು ಮಾತ್ರ ಪರಿಗಣಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಬಳಿಕ ವರ್ತೂರು ಮತ್ತು ಅಗರ ಕೆರೆ ಬಗ್ಗೆಯೂ ದೂರು ನೀಡಲಾಯಿತು. ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ನೀಡಿದ ದೂರನ್ನು ಅಂಗೀಕರಿಸಿದ ನಂತರ ನಮ್ಮ ಬೆಂಗಳೂರು ಫೌಂಡೇಷನ್​ ಕೂಡ ನ್ಯಾಯಾಧಿಕರಣಕ್ಕೆ ದೂರು ನೀಡಿತ್ತು. ಆ ಎಲ್ಲ ದೂರುಗಳನ್ನು ಆಲಿಸಿ ಇಂದು ತೀರ್ಪು ನೀಡಿ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯೊಳಗೆ 10 ಅಡಿ ಎತ್ತರದ ದೈತ್ಯ ಬಿಳಿ ನೊರೆ..! ದೇಶಾದ್ಯಂತ ಟ್ರೆಂಡಿಂಗ್ ಆಯ್ತು ಬೆಳ್ಳಂದೂರು ಕೆರೆ..!

 

First published: December 6, 2018, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading