ಮುಂದಿನ ವಾರ ಪೂರ್ತಿ ಬ್ಯಾಂಕುಗಳಿಗೆ ರಜೆಯೇ? ನಿಜ ತಿಳಿಯಲು ಇದನ್ನು ಓದಿ

news18
Updated:August 31, 2018, 5:00 PM IST
ಮುಂದಿನ ವಾರ ಪೂರ್ತಿ ಬ್ಯಾಂಕುಗಳಿಗೆ ರಜೆಯೇ? ನಿಜ ತಿಳಿಯಲು ಇದನ್ನು ಓದಿ
news18
Updated: August 31, 2018, 5:00 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ.31): ಮುಂದಿನ ತಿಂಗಳ ಮೊದಲ ವಾರಪೂರ್ತಿ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸುವ ಮೂಲಕ ಗಾಳಿಸುದ್ದಿಗೆ ತೆರೆ ಎಳೆದಿದೆ.

ಹಬ್ಬ ಹಾಗೂ ಬ್ಯಾಂಕರ್ಸ್​ಗಳ ಮುಷ್ಕರದ ಕಾರಣದಿಂದ ಬ್ಯಾಂಕುಗಳಿಗೆ ಸೆ.2ರಿಂದ 9ರವರೆಗೆ ರಜೆ ಇರಲಿದೆ. ಆರು ದಿನಗಳ ಕಾಲ ಬ್ಯಾಂಕಿನಲ್ಲಿ ಯಾವುದೇ ಹಣಕಾಸು ವಹಿವಾಟು ನಡೆಯುವುದಿಲ್ಲ. ಹಾಗಾಗಿ ಇಂದೇ ಗ್ರಾಹಕರು ಎಟಿಎಂಗಳಿಂದ ಹಣ ಪಡೆದುಕೊಳ್ಳಿ ಹಾಗೂ ಬ್ಯಾಂಕಿಂಗ್ ವ್ಯವಹಾರ ಮುಗಿಸಿಕೊಳ್ಳಿ ಎಂಬ ಗಾಳಿಸುದ್ದಿ ಎಲ್ಲೆಡೆ ಹರಡಿತ್ತು. ಆದರೆ, ಇದು ಕೇವಲ ವದಂತಿ ಅಷ್ಟೇ, ಮುಂದಿನ ವಾರ ಬ್ಯಾಂಕುಗಳಿಗೆ ಯಾವುದೇ ರಜೆ ಇರುವುದಿಲ್ಲ. ಎಲ್ಲ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸೆ.2 ಭಾನುವಾರ ಹಾಗೂ ಸೆ.8 ಎರಡನೇ ಶನಿವಾರ. ಈ ಎರಡು ದಿನಗಳು ಮಾತ್ರ ಆ ವಾರದಲ್ಲಿ ರಜೆ ಇರುತ್ತದೆ. ಇನ್ನು ಸೆ.3ರಂದು ಶ್ರೀಕೃಷ್ಣ ಜನ್ಮಾಷ್ಠಮಿ ಇದ್ದು, ಆ ದಿನ ಸಾರ್ವಜನಿಕ ರಜೆ ಇರುವುದಿಲ್ಲ. ಕೆಲವು ರಾಜ್ಯಗಳು ಮಾತ್ರ ರಜೆ ಘೋಷಿಸಿವೆ.

ಎಂದಿನಂತೆ ಮುಂದಿನ ವಾರದ ಎಲ್ಲ ದಿನಗಳು ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ಗ್ರಾಹಕರು ನಿಶ್ಚಿಂತರಾಗಿ ಮುಂದಿನ ವಾರವೂ ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳಬಹುದು. ಎಟಿಎಂನಲ್ಲಿ ಹಣ ಖಾಲಿಯಾಗುವುದಿಲ್ಲ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.

ಸೆ.4 ಮತ್ತು 5ರಂದು ಪಿಂಚಣಿಗಾಗಿ ಬ್ಯಾಂಕ್​ಗಳ ಮುಷ್ಕರ ನಡೆಯಲಿದೆ ಎಂದು ಹೇಳಲಾಗುತ್ತಿದೆಯಾದರೂ, ಆ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ