Omicron ಬಗ್ಗೆ ಭಯ ಬೇಡ; ಹೊಸ ವರ್ಷಾಚರಣೆ, ನೈಟ್ ಕರ್ಫ್ಯೂ ಬಗ್ಗೆ ಮುಂದಿನ ವಾರ ತೀರ್ಮಾನ; CM Bommai

ಪೋಷಕರು ಎರಡು ಡೋಸ್ ವ್ಯಾಕ್ಸಿನ್ ಪಡೆಯುವುದು ಕಡ್ಡಾಯ ಮಾಡಿಲ್ಲ. ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಕಾನೂನಿನಲ್ಲಿ ಇಲ್ಲ. ಹಾಗಾಗಿ ನಾವು ಪೋಷಕರು ಎರಡು ಡೋಸ್ ಪಡೆದಿಲ್ಲ ಎಂದು ಮಕ್ಕಳಿಗೆ ಯಾವುದೆ ನಿರ್ಬಂಧ ಮಾಡಿಲ್ಲ. ಎಲ್ಲಾ ಪೋಷಕರು ಎರಡು ಡೋಸ್ ಪಡೆಯಿರಿ ಎಂದು ಮನವಿ ಮಾಡಿಕೊಳ್ಳಲಾಗುವುದು ಅಷ್ಟೇ ಎಂದು ಹೇಳಿದರು.

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

  • Share this:
    ಬೆಂಗಳೂರು: ಕೋವಿಡ್ ಮೂರನೇ ಅಲೆಯ (COVID Third Wave) ಆತಂಕದ ಕಾರಣ ಇಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಮಹತ್ವದ ಸಚಿವ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು,  ಒಂದು ವಾರದ ಬೆಳವಣಿಗೆ ನೋಡಿಕೊಂಡು ನೈಟ್ ಕರ್ಫ್ಯೂ (Night Curfew) ಬಗ್ಗೆ ತೀರ್ಮಾನ ಮಾಡಲಾಗುವುದು. ಸದ್ಯಕ್ಕೆ ಯಾವುದೇ ವಿಶೇಷ ಮಾರ್ಗಸೂಚಿ ಇಲ್ಲ ಎಂದು ಹೇಳಿದರು.

    ತಜ್ಞರು ಸಂಪುಟ ಸಭೆಗೆ ಕೋವಿಡ್ ಕುರಿತು ಮಾಹಿತಿ ನೀಡಿದ್ದಾರೆ. ಬಹಳ ಗಾಬರಿ ಪಡುವ ಅವಶ್ಯಕತೆ ಇಲ್ಲ. ಹಾಸ್ಟೆಲ್ ಗಳಿಗೆ ವಿಶೇಷ ಮಾರ್ಗದರ್ಶನ ನೀಡಿದ್ದಾರೆ. ಎರಡು ಬಾರಿ ಸ್ಯಾನಿಟೈಸೇಶನ್, ಹಾಸ್ಟೆಲ್‌ಗಳಿಗೆ ವಿಸಿಟರ್ ಕಡಿಮೆ ಮಾಡುವುದು, ಅಡುಗೆ ಕೆಲಸಗಾರರಿಗೆ ಡಬಲ್ ಡೋಸ್ ಲಸಿಕೆ, ಐಸೋಲೇಶನ್ ರೂಂ ಮಾಡುವುದಕ್ಕೆ ಸೂಚಿಸಿದ್ದಾರೆ. ಜತೆಗೆ ಕ್ಲಸರ್ ಮ್ಯಾನೇಜ್ ಮೆಂಟ್‌ಗೆ ಸೂಚನೆ ನೀಡಿದ್ದಾರೆ. ವ್ಯಾಕ್ಸಿನೇಶನ್ ಡ್ರೈವ್ ಮಾಡಲು ಸಚಿವರು ಸಲಹೆ ನೀಡಿದ್ದಾರೆ. ಬರುವ ದಿನಗಳಲ್ಲಿ ಲಸಿಕೆ ಅಭಿಯಾನ ಮಾಡುತ್ತೇವೆ.
    ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತದೆ. ಕೇರಳ ವಿಚಾರದಲ್ಲಿ ನಿಯಮ‌ ಮುಂದುವರಿಯಲಿದೆ. ಕ್ರಿಸ್ಮಸ್, ಹೊಸ ವರ್ಷ, ನೈಟ್ ಕರ್ಫ್ಯೂ ವಿಚಾರದಲ್ಲಿ ಮುಂದಿನ ವಾರ ತೀರ್ಮಾನ‌ ಮಾಡಲಾಗುವುದು. ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕಡ್ಡಾಯ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಅವರು ಮಾಹಿತಿ ನೀಡಿದರು.

    ಶಾಲೆಗಳನ್ನು ಕ್ಲೋಸ್ ಮಾಡಲ್ಲ; ಶಿಕ್ಷಣ ಸಚಿವ

    ಶಿಕ್ಷಣ ಸಚಿವ ಬಿ ಸಿ ನಾಗೇಶ್ (Education Minister BC Nagesh) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ದಿನದಿಂದ ಕೋವಿಡ್ ಸಂಖ್ಯೆ ಇಳಿಮುಖವಾಗಿದೆ. ಒಂದರಿಂದ ಹತ್ತನೆ ತರಗತಿವರೆಗೆ ಕೋವಿಡ್ ಕಂಡು ಬಂದಿಲ್ಲ. ಎರಡು ದಿನದಿಂದ ಡಾ ಸುದರ್ಶನ್ ಜೊತೆ ಕುಳಿತು ಚರ್ಚೆ ಮಾಡಲಾಗಿದೆ. ಶಾಲೆಗಳನ್ನು ಕ್ಲೋಸ್ ಮಾಡುವ ಗಂಭೀರ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ. ಯಾವುದೇ ಭಯವಿಲ್ಲ. ಯಾವುದೇ ಕಾರಣಕ್ಕೂ ಶಾಲೆಗಳನ್ನು ಕ್ಲೋಸ್ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

    ಮಕ್ಕಳ ಅಟೆಂಡೆನ್ಸ್ ಚೆನ್ನಾಗಿದೆ. ಇವತ್ತಿಗೆ 172 ಶಿಕ್ಷಕರು ಮತ್ತು ಮಕ್ಕಳಿಗೆ ಕೋವಿಡ್ ಆಗಿತ್ತು.
    ಇದರಲ್ಲಿ 100 ಮಕ್ಕಳು ಗುಣಮುಖರಾಗಿದ್ದಾರೆ. ಶಾಲೆಗಳಲ್ಲಿ 1 ರಿಂದ 10 ವರೆಗೂ ಮಕ್ಕಳಲ್ಲಿ ಕೋವಿಡ್ ಇಲ್ಲ. ವಸತಿ ಶಾಲೆ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಾಸಿಟಿವ್ ಆಗಿದೆ. ಮಕ್ಕಳ ಸಂಖೆಯಲ್ಲಿ ಕಡಿಮೆ ಆಗಿಲ್ಲ. ಸೋಂಕಿತ ಮಕ್ಕಳು ಆರೋಗ್ಯವಾಗಿದ್ದಾರೆ. ತಜ್ಞರ ಸಮಿತಿ ಸಚಿವ ಸಂಪುಟದಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ಶಾಲೆ ಮುಚ್ಚುವ ಪರಿಸ್ಥಿತಿ ಇಲ್ಲ. ಜಂಟಿ ಕಮಿಟಿ ರಚನೆ ಮಾಡಿ, ಆ ಸಮಿತಿ ಎಸ್​ಓಪಿ ಪಾಲನೆ ಮಾಡುವ ಬಗ್ಗೆ ಪರಿಶೀಲನೆ ಮಾಡಲು ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಇದನ್ನು ಓದಿ: Omicron Variant; ರಾಜ್ಯದಲ್ಲಿ ಶುರುವಾದ 3ನೇ ಅಲೆಯ ಆತಂಕ; ಸರ್ಕಾರಕ್ಕೆ ತಜ್ಞರು ಮಾಡಿರುವ ಶಿಫಾರಸ್ಸುಗಳೇನು?

    ಪೋಷಕರಿಗೆ ಎರಡು ಡೋಸ್ ಕಡ್ಡಾಯವಲ್ಲ

    ಪೋಷಕರು ಎರಡು ಡೋಸ್ ವ್ಯಾಕ್ಸಿನ್ ಪಡೆಯುವುದು ಕಡ್ಡಾಯ ಮಾಡಿಲ್ಲ. ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಕಾನೂನಿನಲ್ಲಿ ಇಲ್ಲ. ಹಾಗಾಗಿ ನಾವು ಪೋಷಕರು ಎರಡು ಡೋಸ್ ಪಡೆದಿಲ್ಲ ಎಂದು ಮಕ್ಕಳಿಗೆ ಯಾವುದೆ ನಿರ್ಬಂಧ ಮಾಡಿಲ್ಲ. ಎಲ್ಲಾ ಪೋಷಕರು ಎರಡು ಡೋಸ್ ಪಡೆಯಿರಿ ಎಂದು ಮನವಿ ಮಾಡಿಕೊಳ್ಳಲಾಗುವುದು ಅಷ್ಟೇ ಎಂದು ಹೇಳಿದರು.

    ಹಾಸ್ಟೆಲ್‌ಗಳಲ್ಲಿ ಒಟ್ಟಿಗೆ ಊಟಕ್ಕೆ ಹೋಗಬಾರದು. ದೂರ ದೂರದಲ್ಲಿ ಕೂತು ಊಟ ಮಾಡಬೇಕು. ಸ್ನಾನ ಮಾಡುವಾಗ ಒಟ್ಟಿಗೆ ಹೋಗಬಾರದು. ಮಲಗುವಾಗಲೂ ಸಾಧ್ಯವಾದಷ್ಟು ದೂರ ಮಲಗಬೇಕು. ಆದರೆ ಈ ಬಗ್ಗೆ ಯಾವುದೇ ಮಾರ್ಗಸೂಚಿ ಮಾಡಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದರು.
    Published by:HR Ramesh
    First published: