• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Rains: ರಾಜ್ಯದಲ್ಲಿ ಇನ್ನೆರಡು ದಿನ ರಣ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Karnataka Rains: ರಾಜ್ಯದಲ್ಲಿ ಇನ್ನೆರಡು ದಿನ ರಣ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು ಮಳೆ

ಬೆಂಗಳೂರು ಮಳೆ

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಜಿಗಣಿ ಕೆರೆ ತುಂಬಿ ಕೋಡಿ ಹರಿದಿದ್ದು, ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಮಧು ಮಿತ್ರ ಬಡಾವಣೆಗೆ ನೀರು ನುಗ್ಗಿದೆ. ಪರಿಣಾಮ ಬಡಾವಣೆಯ ರಸ್ತೆಗಳು ಕೆರೆಯಂತಾಗಿದೆ.

  • Share this:

ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಮಳೆಯಾಗಲಿದೆ (Karnataka Rains) ಎಂದು ಹವಾಮಾನ ಇಲಾಖೆ (IMD) ಹೇಳಿದೆ. ಈಗಾಗಲೇ 16 ಜಿಲ್ಲೆಗಳಲ್ಲಿ ಪ್ರವಾಹ (Flood) ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಮತ್ತೆ ಮಳೆ ಮುಂದುವರಿಯುವ ಆತಂಕ ಎದುರಾಗಿದೆ. ಬೆಳಗಾವಿ, ಗದಗ, ಬೆಂಗಳೂರು, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ಹಳದಿ ಅಲರ್ಟ್ (Yellow Alert)  ಪ್ರಕಟಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಗಳಿವೆ. ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ,  ಚಿತ್ರದುರ್ಗ, ಕೋಲಾರ, ಚಿಕ್ಕಮಗಳೂರು, ಶಿವಮೊಗ್ಗ, ರಾಮನಗರ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಮುಂದಿನ 3 ದಿನ ಜೋರಾಗಿ ಮಳೆ ಅಬ್ಬರಿಸಲಿದೆ. ಸೆ.2ರವರೆಗೆ ಯೆಲ್ಲೋ ಅಲರ್ಟ್ ಘೋಷನೆ ಮಾಡಲಾಗಿದೆ.


next two days rain predictions  Karnataka Weather Report 31 August 2022 mrq
ಬೆಂಗಳೂರು ರಸ್ತೆ


ವರುಣಾರ್ಭಟಕ್ಕೆ ಹೆಚ್ಚಿದ ರಸ್ತೆಗುಂಡಿಗಳು


ನಿರಂತರ ಮಳೆಯಯಿಂದ ಲಕ್ಷಾಂತರ ಪ್ರಯಾಣಿಕರು ಓಡಾಡೋ ರಸ್ತೆ ತುಂಬೆಲ್ಲ ಗುಂಡಿಗಳು ನಿರ್ಮಾಣಗೊಂಡಿವೆ. ರೈಲ್ವೆ ನಿಲ್ದಾಣದ ಮುಂಭಾಗದ ರಸ್ತೆ ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿವೆ. ರೈಲ್ವೆ ನಿಲ್ದಾಣದ ರಸ್ತೆಯ ಸ್ಕೈ ವಾಕ್ ನಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್​ವರೆಗೆ ಗುಂಡಿಗಳು ಉಂಟಾಗಿವೆ.


ಇದನ್ನೂ ಓದಿ:  Karnataka Rains: ದಬ್ಬಡ್ಕದಲ್ಲಿ ಭೀಕರ ಜಲಸ್ಫೋಟಕ್ಕೆ ಕಾರಣವೇನು? ಜನರಲ್ಲಿ ಭಾರೀ ಆತಂಕ


ಬೆಂಗಳೂರಿನಲ್ಲಿ ಎಲ್ಲ ಕಡೆ ಗುಂಡಿಗಳು ಹೆಚ್ಚಾಗಿದ್ದು, ಅಪಘಾತಗಳ ಸಂಖ್ಯೆ ಏರಿಕೆಯಾಗಿವೆ.  ಮಳೆಯಿದ್ದಾಗ ಗುಂಡಿ ಯಾವುದು? ರಸ್ತೆ ಯಾವುದು ಗೊತ್ತಾಗಲ್ಲ. ಎಂಎಲ್ ಎ, ಎಂಪಿ ಮನೆ ಮುಂದೆ ಒಳ್ಳೆ ರೋಡ್, ನಾವು ಓಡಾಡೋ ರೋಡ್ ಹಾಳಾಗಿವೆ ಎಂದು ಆಟೋ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ,


ಇಂದು ರಾಜಧಾನಿ ಬೆಂಗಳೂರಿನಲ್ಲಿ ಮಳೆ (Bengaluru Rains) ಮುಂದುವರಿಯಲಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ನಗರದಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ (Bengaluru Traffic) ಜಾಮ್ ಉಂಟಾಗಿತ್ತು. ಇಂದು ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)


ಬೆಂಗಳೂರು 29-19, ಮೈಸೂರು 30-21, ಚಾಮರಾಜನಗರ 29-21, ರಾಮನಗರ 30-21, ಮಂಡ್ಯ 31-21, ಬೆಂಗಳೂರು ಗ್ರಾಮಾಂತರ 29-19, ಚಿಕ್ಕಬಳ್ಳಾಪುರ 29-20, ಕೋಲಾರ 29-20, ಹಾಸನ 29-19, ಚಿತ್ರದುರ್ಗ 31-21, ಚಿಕ್ಕಮಗಳೂರು 28-19, ದಾವಣಗೆರೆ 31-22, ಶಿವಮೊಗ್ಗ 31-21, ಕೊಡಗು 26-18, ತುಮಕೂರು 29-21, ಉಡುಪಿ 29-24


ಮಂಗಳೂರು 29-24, ಉತ್ತರ ಕನ್ನಡ 31-22, ಧಾರವಾಡ 30-21, ಹಾವೇರಿ 31-22, ಹುಬ್ಬಳ್ಳಿ 31-22, ಬೆಳಗಾವಿ 29-21, ಗದಗ 31-22, ಕೊಪ್ಪಳ 31-23, ವಿಜಯಪುರ 31-23, ಬಾಗಲಕೋಟ 32-23 , ಕಲಬುರಗಿ 32-23, ಬೀದರ್ 31-22, ಯಾದಗಿರಿ 32-24, ರಾಯಚೂರ 32-24 ಮತ್ತು ಬಳ್ಳಾರಿ 32-23


next two days rain predictions  Karnataka Weather Report 31 August 2022 mrq
ರಸ್ತೆಗಳು ಜಲಾವೃತ


ಜನವಸತಿ ಪ್ರದೇಶಗಳಿಗೆ ನೀರು


ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಜಿಗಣಿ ಕೆರೆ ತುಂಬಿ ಕೋಡಿ ಹರಿದಿದ್ದು, ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಮಧು ಮಿತ್ರ ಬಡಾವಣೆಗೆ ನೀರು ನುಗ್ಗಿದೆ. ಪರಿಣಾಮ ಬಡಾವಣೆಯ ರಸ್ತೆಗಳು ಕೆರೆಯಂತಾಗಿದೆ.


ಇದನ್ನೂ ಓದಿ:  Muruga Mutt Case: ಮುರುಘಾ ಶ್ರೀಗೆ ಮತ್ತೊಂದು ಸಂಕಷ್ಟ, ಅಟ್ರಾಸಿಟಿ ಪ್ರಕರಣವೂ ದಾಖಲು!


ಬಹುತೇಕ ಮನೆಗಳ ನೆಲ ಮಹಡಿಗಳ ಬಳಿ ಮಳೆ ನೀರು ನಿಂತಿದ್ದು, ಸ್ಥಳೀಯ ನಿವಾಸಿಗಳು ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಸ್ಥಳೀಯ ಪುರಸಭೆ ಸಿಬ್ಬಂದಿ ಜೆಸಿಬಿ ಮೂಲಕ ಕಿರಿದಾದ ರಾಜಕಾಲುವೆಯಲ್ಲಿ ತುಂಬಿದ್ದ ಕಸಕಡ್ಡಿಯನ್ನು ತೆರವುಗೊಳಿಸಿದ್ದು, ಬಳಿಕ ಕೆರೆ ಕೋಡಿ ನೀರು ಸಾರಾಗವಾಗಿ ಹರಿದು ಹೋಗುತ್ತಿದ್ದು, ಬಡಾವಣೆಗೆ ನುಗ್ಗಿದ್ದ ನೀರು ನಿದಾನವಾಗಿ ಕಡಿಮೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ .

Published by:Mahmadrafik K
First published: