• Home
  • »
  • News
  • »
  • state
  • »
  • Karnataka Rains: ಮನೆಯಿಂದ ಹೊರ ಹೋಗುವ ಮುನ್ನಎಚ್ಚರ; ಎಲ್ಲೆಲ್ಲಿ ರೆಡ್ ಅಲರ್ಟ್ ಇದೆ ಗೊತ್ತಾ?

Karnataka Rains: ಮನೆಯಿಂದ ಹೊರ ಹೋಗುವ ಮುನ್ನಎಚ್ಚರ; ಎಲ್ಲೆಲ್ಲಿ ರೆಡ್ ಅಲರ್ಟ್ ಇದೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿರಂತರ ಮಳೆಯಿಂದಾಗಿ (Karnataka Rainfall) ರಾಜ್ಯದ ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ. ಜಲಾಶಯಗಳ (Dams) ಸಹ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿ ಹೊರ ಹರಿವು ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆದ್ರಿಂದ ನದಿ ತೀರಕ್ಕೆ ತೆರಳದಂತೆ ಗ್ರಾಮಗಳಲ್ಲಿ ಡಂಗೂರ ಮೂಲಕ ಎಚ್ಚರಿಕೆ ನೀಡಲಾಗಿದೆ.

ಮುಂದೆ ಓದಿ ...
  • Share this:

ಇಂದು ರಾಜ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi Festival) ಆಚರಣೆ ಮಾಡಲಾಗುತ್ತಿದೆ. ಹಬ್ಬ ಅಂತ ಹೊರಗೆ ಹೋಗುವ ಮುನ್ನ ನೂರು ಬಾರಿ ಯೋಚನೆ ಮಾಡಿ. ಕಾರಣ ಇಂದು ಸಹ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ. ಈಗಾಗಲೇ ಹವಾಮಾನ ಇಲಾಖೆ ಮಲೆನಾಡು ಭಾಗದಲ್ಲಿ ರೆಡ್ ಅಲರ್ಟ್ (Red Alert) ಘೋಷಣೆ ಮಾಡಿದೆ. ಏಳಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ (Orange Alert) ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಮಲೆನಾಡು (Karnataka Malenadu) ಭಾಗಕ್ಕೆ ಬರೋ ಪ್ರವಾಸಿಗರು (Tourist) ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ನಿರಂತರ ಮಳೆಯಿಂದಾಗಿ (Karnataka Rainfall) ರಾಜ್ಯದ ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ. ಜಲಾಶಯಗಳ (Dams) ಸಹ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿ ಹೊರ ಹರಿವು ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆದ್ರಿಂದ ನದಿ ತೀರಕ್ಕೆ ತೆರಳದಂತೆ ಗ್ರಾಮಗಳಲ್ಲಿ ಡಂಗೂರ ಮೂಲಕ ಎಚ್ಚರಿಕೆ ನೀಡಲಾಗಿದೆ.


ಇನ್ನೂ ರಾಜಧಾನಿಯಲ್ಲಿ ಮಳೆ ಮುಂದುವರಿದಿದ್ದು, ಇಂದು ಗರಿಷ್ಠ 24 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇಂದು ಕೊಡಗಿನಲ್ಲಿ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮಲೆನಾಡು ಮತ್ತು ಕರಾವಳಿ ಭಾಗಕ್ಕೆ ಪ್ರವಾಸಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿದ್ರೆ ನಿಮ್ಮ ಯೋಜನೆಯನ್ನು ಮುಂದೂಡಿಕೊಳ್ಳಿ.


ಇದನ್ನೂ ಓದಿ:  Kodagu Rain: ಭಾರೀ ಶಬ್ಧದೊಂದಿಗೆ ಜಲಸ್ಫೋಟ, ನೋಡ ನೋಡುತ್ತಿದ್ದಂತೆ ಮನೆಯೊಳಗೆ ನುಗ್ಗಿದ ನೀರು


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)


ಬೆಂಗಳೂರು 24-19, ಮೈಸೂರು 24-21, ಚಾಮರಾಜನಗರ 24-21, ರಾಮನಗರ 25-21, ಮಂಡ್ಯ 25-21, ಬೆಂಗಳೂರು ಗ್ರಾಮಾಂತರ 24-19, ಚಿಕ್ಕಬಳ್ಳಾಪುರ 25-20, ಕೋಲಾರ 25-19, ಹಾಸನ 22-19, ಚಿತ್ರದುರ್ಗ 25-21, ಚಿಕ್ಕಮಗಳೂರು 21-18, ದಾವಣಗೆರೆ 26-22, ಶಿವಮೊಗ್ಗ 24-21, ಕೊಡಗು 19-18, ತುಮಕೂರು 24-21, ಉಡುಪಿ 26-24, ಮಂಗಳೂರು 26-24


Next Three day heavy rainfall in Karnataka IMD issues Red Alert several Areas mrq
ಕೊಡಗು ಮಳೆ


ಉತ್ತರ ಕನ್ನಡ 24-21, ಧಾರವಾಡ 24-21, ಹಾವೇರಿ 26-21, ಹುಬ್ಬಳ್ಳಿ 26-21, ಬೆಳಗಾವಿ 24-21, ಗದಗ 26-21, ಕೊಪ್ಪಳ 28-22, ವಿಜಯಪುರ 28-22, ಬಾಗಲಕೋಟ 28-23, ಕಲಬುರಗಿ 28-23, ಬೀದರ್ 27-22, ಯಾದಗಿರಿ 29-23, ರಾಯಚೂರ 29-23 ಮತ್ತು ಬಳ್ಳಾರಿ 29-23


ಇನ್ನೂ ಮೂರು ದಿನ ಮಳೆ


ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಇರಲಿದೆ ಮಳೆ. ಇಂದಿನಿಂದ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದದೆ. ಇನ್ನು ಕರಾವಳಿ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಅಬ್ಬರ ಇರಲಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ಆರೆಂಜ್ ಅಲರ್ಟ್, ನಾಳೆ ರೆಡ್ ಅಲರ್ಟ್, ಆ.6ರಂದು ಆರೆಂಜ್ ಅಲರ್ಟ್, ಕೊನೆಯ ಎರಡು ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.


ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್


ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬುರ್ಗಿ ವಿಜಯಪುರ ಜಿಲ್ಲಗೆಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಇರಲಿದೆ.


ರೆಡ್ ಅಲರ್ಟ್


ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಇದೆ. ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ನಾಳೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.


Next Three day heavy rainfall in Karnataka IMD issues Red Alert several Areas mrq
ಮರ ತೆರವು ಕಾರ್ಯಾಚರಣೆ


ಇದನ್ನೂ ಓದಿ: Dam Full: ಡ್ಯಾಂ ಭರ್ತಿಯಾಗಿದ್ದೇ ನಮ್ಮಿಂದ ಅಂತಾರೆ ರಾಜಕಾರಣಿಗಳು! ಕ್ರೆಡಿಟ್‌ ಪಡೆಯಲು ನಾಯಕರ ಪೈಪೋಟಿ


ಕೊಡಗಿನಲ್ಲಿ ಜಲಸ್ಫೋಟ 


ದಬ್ಬಡ್ಕದಲ್ಲಿ ಮಂಗಳವಾರ ತಡರಾತ್ರಿ ಹನ್ನೆರಡು ಗಂಟೆ ವೇಳೆಗೆ ಜಲಸ್ಫೋಟವಾಗಿದೆ. ದಬ್ಬಡ್ಕದ ರಾಜೇಶ್ವರಿ ಎಂಬುವರ ರಬ್ಬರ್ ತೋಟದಲ್ಲಿ ಭಾರೀ ಜಲಸ್ಫೋಟವಾಗಿದ್ದು, ಅರ್ಧ ಎಕರೆಯಷ್ಟು ಭೂಮಿ ಕುಸಿದು (Landslide)  ಕೆಸರಾಗಿ ಹರಿದು ಹೋಗಿದೆ. ಅಷ್ಟು ಪ್ರದೇಶದಲ್ಲಿದ್ದ 150 ಅಡಿಕೆ, 40 ರಬ್ಬರ್ ಮತ್ತು 150 ಕ್ಕೂ ಹೆಚ್ಚು ಕಾಫಿ ಗಿಡಗಳು ಕೊಚ್ಚಿ ಹೋಗಿವೆ.

Published by:Mahmadrafik K
First published: