• Home
  • »
  • News
  • »
  • state
  • »
  • Kannada Sahitya Sammelana: ನುಡಿ ಜಾತ್ರೆಗೆ ಸಂಭ್ರಮದ ತೆರೆ; ಸಮಾರೋಪದಲ್ಲಿ ರಾಜಕೀಯದ ಮಾತುಗಳು; ವೇದಿಕೆಯಲ್ಲಿ ಏಟು-ತಿರುಗೇಟು

Kannada Sahitya Sammelana: ನುಡಿ ಜಾತ್ರೆಗೆ ಸಂಭ್ರಮದ ತೆರೆ; ಸಮಾರೋಪದಲ್ಲಿ ರಾಜಕೀಯದ ಮಾತುಗಳು; ವೇದಿಕೆಯಲ್ಲಿ ಏಟು-ತಿರುಗೇಟು

ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಸಮ್ಮೇಳನ

ಹಾವೇರಿಯಲ್ಲಿ ನಡೆದ ನುಡಿ ಜಾತ್ರೆಗೆ ಸಂಭ್ರಮದ ತೆರೆ ಬಿದ್ದಿದೆ. ಆದರೆ ಸಮಾರೋಪ ಸಮಾರಂಭದಲ್ಲಿ ರಾಜಕೀಯದ ಮಾತುಗಳು ಕೇಳಿಬಂದು, ಆರೋಪ - ಪ್ರತ್ಯಾರೋಪಗಳಿಂದ ವೇದಿಕೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.

  • Share this:

 ಹಾವೇರಿ: ಏಲಕ್ಕಿ ನಗರಿ ಹಾವೇರಿಯಲ್ಲಿ (Haveri) ನುಡಿತೇರ ಜಾತ್ರೆಗೆ ಸಂಭ್ರಮದ ತೆರೆ ಬಿದ್ದಿದೆ. ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಮುಂದಿನ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ಕಾನೂನಿನ ರೂಪ ನೀಡುವಂತೆ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ‌ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಸಮ್ಮೇಳನದ ನಿರ್ಣಯ ಯಥಾವತ್ತಾಗಿ ಜಾರಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಸಮಾರೋಪ ಸಮಾರಂಭ ಆರೋಪ ಪ್ರತ್ಯಾರೋಪಕ್ಕೆ ವೇದಿಕೆಯಾಗಿ, ರಾಜಕೀಯ ಸಮಾವೇಶವಾಗಿ ಮಾರ್ಪಟ್ಟಿತ್ತು.


ಹಾವೇರಿಯಲ್ಲಿ ಮೂರು ದಿನಗಳ ಕಾಲ ನಡೆದ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಅದ್ಧೂರಿ ತೆರೆ ಬಿದ್ದಿದೆ. ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಬಹಿರಂಗ ಅಧಿವೇಷನದಲ್ಲಿ ಆರು ನಿರ್ಣಯಗಳ ಅಂಗೀಕರಿಸಲಾಯಿತು.


ಆರು ನಿರ್ಣಯಗಳ ಅಂಗೀಕಾರ


ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಕೂಡಲೇ ಸುಗ್ರೀವಾಜ್ಞೆ ಮೂಲಕ ಕಾನೂನಿನ ರೂಪ ನೀಡಬೇಕು. ಶಿಕ್ಷಣ, ನ್ಯಾಯಾಂಗ ಮತ್ತು ಆಡಳಿಯದಲ್ಲಿ ಕನ್ನಡ ಪರಿಣಾಮಕಾರಿ ಅನುಷ್ಠಾನ ಮಾಡಬೇಕು.


ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಮಹಾಜನ ವರದಿ ಅನ್ವಯ, ನ್ಯಾಯಾಲಯ ಅಂತಿಮ ತೀರ್ಪಿನ ಮಾರ್ಗದರ್ಶನದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು.


Next Kannada sahitya sammelana will host in mandya saklb mrq
ಬಸವರಾಜ್ ಬೊಮ್ಮಾಯಿ, ಸಿಎಂ


ಬಹಿರಂಗ ಅಧಿವೇಷನದ ನಂತರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಶಿವರಾಂ ಹೆಬ್ಬಾರ, ಬಿ.ಸಿ.ಪಾಟೀಲ್, ಬಿ.ಸಿ. ನಾಗೇಶ್, ಸಂಸದ ಶಿವಕುಮಾರ್ ಉದಾಸಿ ಮತ್ತಿತರರು ಭಾಗಿಯಾಗಿದ್ದರು.


ಕನ್ನಡಕ್ಕೆ ಆದ್ಯತೆ


ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸ್ತೇನೆ. ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ಕಾನೂನಿನ ಸ್ವರೂಪ ನೀಡ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.


ಇದೇ ವೇಳೆ ಮಾತನಾಡಿದ ಪ್ರಹ್ಲಾದ್ ಜೋಶಿ ನಾನು ಕನ್ನಡ ಶಾಲೆಯಲ್ಲಿ ಓದಿದ್ದೆ ಅಂತ ಹೆಮ್ಮೆಯಿಂದ ಹೇಳ್ತೇನೆ. ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ಕೊಟ್ಟಿದ್ದೇವೆ ಎಂದರು.


ವೇದಿಕೆಯಲ್ಲಿಯೇ ಏಟು-ತಿರುಗೇಟು


ಇದೇ ವೇಳೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಕ್ಷೇತ್ರವನ್ನು ಮೀರಿದ ರಾಜಕಾರಣ ನಡೆಯುತ್ತಿದೆ. ಕೆಲ ಸಾಹಿತಿಗಳನ್ನು ಹೊರಗಿಟ್ಟು ಸಮ್ಮೇಳನ ಮಾಡ್ತಿದಾರೆ ಅನ್ನೋ ಆರೋಪವಿತ್ತು. ಸಮ್ಮೇಳನ  ಆಹ್ವಾನ ಪತ್ರಿಕೆ ನೋಡಿದ ನಂತರ ಇದು ಸತ್ಯ ಅನ್ನಿಸುತ್ತಿದೆ ಎಂದರು.


ನಂತರ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಾಹಿತ್ಯ ಕ್ಷೇತ್ರದಲ್ಲಿ ರಾಜಕಾರಣ ಮಾಡಬಾರದ ರಾಜಕಾರಣ ಮಾಡುವ ತುರ್ತು ನಮಗೆ ಬಂದಿಲ್ಲ.
ಹಾಗೊಂದು ವೇಳೆ ಮಾಡಿದರೆ ಅದೊಂದು‌ ವ್ಯರ್ಥ ಪ್ರಯತ್ನ ಎಂದು ಬಿ.ಕೆ.ಹರಿಪ್ರಸಾದ್ ಗೆ ಟಾಂಗ್ ಕೊಟ್ಟರು.


ಕನ್ನಡ ಸಾಹಿತ್ಯ ಸಮ್ಮೇಳನ


11 ಜನ ಮುಸ್ಲಿಮರಿಗೆ ಅವಕಾಶ


ಇದೇ ವೇಳೆ ವೇದಿಕೆ ಮೇಲೆಯೇ ಉತ್ತರಿಸಿದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಶಿಶುನಾಳ ಶರೀಫರ ನಾಡಿನಲ್ಲಿ ಮುಸ್ಲಿಮರಿಗೆ ಅನ್ಯಾಯ ಬಿಡಲು ಸಾಧ್ಯವೇ? ದಾಖಲೆ ಸಮೇತ ಹೇಳ್ತೇನೆ. 11 ಜನರಿಗೆ ಅವಕಾಶ ನೀಡಲಾಗಿದೆ. ಇಬ್ಬರಿಗೆ ಸನ್ಮಾನ‌ ಮಾಡಿದ್ದೇವೆ. ನಾವು ಧರ್ಮ ಆಧಾರಿತ ಕನ್ನಡ ಸಾಹಿತ್ಯ ಸಮ್ಮೇಳನ‌ ಮಾಡ್ತಿಲ್ಲ. ಇದಕ್ಕೆ ಇಲ್ಲಿಗೇ ಪೂರ್ಣ ವಿರಾಮ ಹಾಕಿ ಎಂದು ಜೋಶಿ ತಿಳಿಸಿದರು.


ಇದನ್ನೂ ಓದಿ:  Siddeshwara Swamiji: ಗೋಕರ್ಣ ಕಡಲತೀರ, ಕೂಡಲಸಂಗಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಚಿತಾಭಸ್ಮ ವಿಸರ್ಜನೆ


ಮೂರೂ ದಿನಗಳ ಕಾಲ ಸಮ್ಮೇಳನ‌ ಪ್ರಾಂಗಣಕ್ಕೆ ಜನಸಾಗರವೇ ಹರಿದು ಬಂದಿತ್ತು. ಲಕ್ಷಾಂತರ ಜನ ನುಡಿ ಜಾತ್ರೆಗೆ ಆಗಮಿಸಿದ್ದರಿಂದ ಎಲ್ಲಿ ನೋಡಿದರೂ ಜನಜಂಗುಳಿ ವಾತಾವರಣ ನಿರ್ಮಾಣವಾಗಿತ್ತು.


ಪುಸ್ತಕ ಮಳಿಗೆ, ಫಲಪುಷ್ಪ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳ ಬಳಿ ಜನ ಕಿಕ್ಕಿರಿದಿತ್ತು. ಪುಸ್ತಕ ಮಾರಾಟದಲ್ಲಿ ಶೆ. 40 ಪ್ರತಿಶತದಷ್ಟು ಹೆಚ್ಚಳವಾಗಿದೆ.


ಒಂದು ಕೋಟಿಗೂ ಅಧಿಕ ವಹಿವಾಟು


ಒಟ್ಟು 300 ಪುಸ್ತಕ ಮಳಿಗೆಗಳಲ್ಲಿ‌ 181 ಪ್ರಕಾಶಕರು ಒಂದು ಕೋಟಿ ರೂಪಾಯಿಗೂ  ವಹಿವಾಟು ನಡೆದಿದೆ‌. ಕನಿಷ್ಟ ಮೂರು ಲಕ್ಷ ರೂಪಾಯಿಯಿಂದ ಹಿಡಿದು ಗರಿಷ್ಠ 10 ಲಕ್ಷ ರೂಪಾಯಿವರೆಗೂ ವಹಿವಾಟು ನಡೆದಿದೆ. ಇಂಟರ್ನೆಟ್ ಕೊರತೆಯಿಂದ ಆನ್ ಲೈನ್ ವಹಿವಾಟಿಗೆ ಒಂದಷ್ಟು ಹಿನ್ನಡೆಯಾಯಿತು


ವರದಿ - ಶಿವರಾಮ ಅಸುಂಡಿ, ಶರಣು ಹಂಪಿ, ರಮೇಶ್, ಹಾವೇರಿ.

Published by:Mahmadrafik K
First published: