Karnataka Weather: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೋರು ಮಳೆ, ಭೂಕುಸಿತದ ಆತಂಕ; ನಾಲ್ಕು ದಿನ ಮಳೆ ಅಲರ್ಟ್

Karnataka Weather: ಇನ್ನೂ ಸಿಲಿಕಾನ್ ಸಿಟಿಯಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಅಬ್ಬರ ಶುರುವಾಗುತ್ತಿದೆ. ಅದು ಗುಡುಗು ಸಹಿತ ಮಳೆ. ರಾಜಧಾನಿಯಲ್ಲಿ ಅಲ್ಲದ ಮರಗಳು, ರಂಬೆ ಕೊಂಬೆಗಳು ಧರೆಗೆ ಉರುಳಿತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ರಾಜ್ಯದಲ್ಲಿ ಮಳೆ (Rain) ಮತ್ತೆ ಚುರುಕುಗೊಂಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿತ್ತು. ಇಂದಿನಿಂದ ಮುಂದಿನ ನಾಲ್ಕು ದಿನ (Next Four Days Rain) ರಾಜ್ಯದಲ್ಲಿ ಮಳೆಯ ಅಬ್ಬರ ಕೊಂಚ ಏರಿಕೆಯಾಗಲಿದ್ದು, ಎಲ್ಲಾ ಭಾಗಗಳಲ್ಲಿ ಸಂಜೆ ವೇಳೆಗೆ ವರುಣನ ಕೃಪೆ ಆಗಲಿದೆ. ಕಳೆದ ಎರಡು ವಾರಗಳಿಂದ ಮಳೆ ಬ್ರೇಕ್ ನೀಡಿದ ಕಾರಣ ರೈತರು (Farmers) ಸಹ ಕೃಷಿ ಚಟುವಟಿಕೆಗಳನ್ನು  (Agriculture Activities) ಪೂರ್ಣ ಮಾಡಿಕೊಂಡಿದೆ. ಉತ್ತರ ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಕಳೆ 15 ದಿನಗಳಿಂದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆ ಬೆಳೆಗಳಿಗೆ (Crops) ರೋಗ ತಗುಲಿದೆ. ಮತ್ತೊಂದಡೆ ಕಾಫಿ ಬೆಳೆಗಳಿಗೆ (Coffee Plants) ಕೂಳೆ ರೋಗದ ಭೀತಿ ಎದುರಾಗಿದೆ.

ಇನ್ನೂ ಸಿಲಿಕಾನ್ ಸಿಟಿಯಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಅಬ್ಬರ ಶುರುವಾಗುತ್ತಿದೆ. ಅದು ಗುಡುಗು ಸಹಿತ ಮಳೆ. ರಾಜಧಾನಿಯಲ್ಲಿ ಅಲ್ಲದ ಮರಗಳು, ರಂಬೆ ಕೊಂಬೆಗಳು ಧರೆಗೆ ಉರುಳಿತ್ತಿವೆ. ಇಂದು ರಾಜಧಾನಿಯಲ್ಲಿ ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-20, ಮೈಸೂರು 26-21, ಚಾಮರಾಜನಗರ 26-21, ರಾಮನಗರ 27-21, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 27-20, ಚಿಕ್ಕಬಳ್ಳಾಪುರ 27-20, ಕೋಲಾರ 28-21, ಹಾಸನ 25-19, ಚಿತ್ರದುರ್ಗ 27-21, ಚಿಕ್ಕಮಗಳೂರು 24-18, ದಾವಣಗೆರೆ 27-21, ಶಿವಮೊಗ್ಗ 27-21, ಕೊಡಗು 24-18, ತುಮಕೂರು 27-21, ಉಡುಪಿ 27-24

ಇದನ್ನೂ ಓದಿ:  Praveen Murder Case: ಮನೆಗೆ ಬರುವ ರಾಜಕಾರಣಿಗಳಿಗೆ ಪ್ರವೀಣ್ ಕುಟುಂಬಸ್ಥರ ಷರತ್ತು!

ಮಂಗಳೂರು 27-24, ಉತ್ತರ ಕನ್ನಡ 27-21, ಧಾರವಾಡ 28-21, ಹಾವೇರಿ 27-21, ಹುಬ್ಬಳ್ಳಿ 28-21, ಬೆಳಗಾವಿ 27-21, ಗದಗ 28-22, ಕೊಪ್ಪಳ 29-22, ವಿಜಯಪುರ 30-23, ಬಾಗಲಕೋಟ 30-23 , ಕಲಬುರಗಿ 30-23, ಬೀದರ್ 29-22, ಯಾದಗಿರಿ 29-23, ರಾಯಚೂರ 31-24 ಮತ್ತು ಬಳ್ಳಾರಿ 30-23

ಕರಾವಳಿ ಭಾಗಕ್ಕೆ ಆರೆಂಜ್ ಅಲರ್ಟ್

ಭಾನುವಾರ ಸುರಿದ ಒಂದೇ ಮಳೆಗೆ ಮಂಗಳೂರು ರಸ್ತೆಗಳೆಲ್ಲ ಈಜುಕೊಳಗಳಾಗಿದ್ದವು. ರೈಲ್ವೇ ನಿಲ್ದಾಣದ ಪಾರ್ಕಿಂಗ್, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀರು ಹೊಳೆಯಂತೆ ಹರಿದಿತ್ತು. ಇಂದಿನಿಂದ ಕರಾವಳಿ ಭಾಗದಲ್ಲಿ ನಾಲ್ಕು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿರುವ ಪರಿಣಾಮ ನದಿಗಳಲ್ಲಿ ನೀರಿನ ಮಟ್ಟ ಸಹ ಏರಿಕೆಯಾಗುತ್ತಿದೆ. ಜಲಾಶಯಗಳಿಗೆ ಒಳ ಹರಿವು ಹೆಚ್ಚಾದ ಹಿನ್ನೆಲೆ ಹೊರ ಹರಿವು ಪ್ರಮಾಣ ಸಹ ಏರಿಕೆಯಾಗುತ್ತಿದೆ. ನದಿ ತೀರಕ್ಕೆ ತೆರಳದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನಲ್ಲಿ ಆರೆಂಜ್ ಅಲರ್ಟ್

ಇಂದಿನಿಂದ ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಇಂದು ನಾಳೆ ಬೆಂಗಳೂರು ಮತ್ತು ಗ್ರಾಮಾಂತರದಲ್ಲಿ ಗುಡುಗು ಮಿಂಚು ಸಹಿತ ಹಲವೆಡೆ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ರಿಂದ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಆಗಸ್ಟ್ 3, 4 ರಂದು ಹಾಗೂ ಮಂಡ್ಯ ಮತ್ತು ರಾಮನಗರದಲ್ಲಿ ಆಗಸ್ಟ್ 4 ರಂದು ಭಾರಿ ಮಳೆ ಬೀಳುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಈ ಭಾಗದಲ್ಲಿ ಸಾಧಾರಣ ಮಳೆ

ಧಾರವಾಡ, ಗದಗ, ಬಳ್ಳಾರಿ, ಮಂಡ್ಯ, ರಾಮನಗರದಲ್ಲಿ ಆಗಸ್ಟ್ 2 ರಿಂದ 4ರವೆರೆಗೆ ಹಾಗೂ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ಆಗಸ್ಟ್ 4ರಂದು ಯೆಲ್ಲೋ ಅಲರ್ಟ್ ಇರಲಿದೆ. ರಾಜ್ಯದ ಉಳಿದೆಡೆ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ:  Hubballi: ಬ್ಲಾಸ್ಟ್ ಪ್ರಕರಣ, ಸಾವಿನ ಸಂಖ್ಯೆ ಐದಕ್ಕೆ ಏರಿಕೆ! ಕಾರ್ಖಾನೆ ಮಾಲೀಕ ಪೊಲೀಸರಿಗೆ ಶರಣು

ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ

ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಸಂಪಾಜೆ ಕಲ್ಲುಗುಂಡಿಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಕಾರ್ ಗಳು ನೀರಿನಲ್ಲಿ ತೇಲಿವೆ. ಸಂಪಾಜೆ, ಕಲ್ಲುಗುಂಡಿ ಪರಿಸರದಲ್ಲಿ ಅಧಿಕ ಮಳೆಯಾಗುತ್ತಿದ್ದು. ಅಪಾಯದಲ್ಲಿದ್ದ 15 ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಕೊಡಗಿನ ಜೋಡುಪಾಲದಂತೆ ಅರೆಕಲ್ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿರುವ ಶಂಕೆ ವ್ಯಕ್ತಿವಾಗಿದೆ.
Published by:Mahmadrafik K
First published: