• Home
  • »
  • News
  • »
  • state
  • »
  • Karnataka Politics: ನನ್ನಪ್ಪನಾಣೆ ಇನ್ನೂ ಐದು ವರ್ಷ ನಾನೇ ಎಂಎಲ್​ಎ ಎಂದ ಶಾಸಕ ಎಸ್​​ಆರ್​ ಶ್ರೀನಿವಾಸ್​​

Karnataka Politics: ನನ್ನಪ್ಪನಾಣೆ ಇನ್ನೂ ಐದು ವರ್ಷ ನಾನೇ ಎಂಎಲ್​ಎ ಎಂದ ಶಾಸಕ ಎಸ್​​ಆರ್​ ಶ್ರೀನಿವಾಸ್​​

ಎಸ್​ಆರ್​ ಶ್ರೀನಿವಾಸ್​

ಎಸ್​ಆರ್​ ಶ್ರೀನಿವಾಸ್​

ನನ್ನನು ಸುಲಭವಾಗಿ ಸೋಲಿಸಿ ಬಿಡಬಹುದು ಅಂತ ತಿಳಿದಿಕೊಂಡಿದ್ರೆ ಅದು ಸುಳ್ಳು. ನನ್ನನ್ನು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಇನ್ನು  ಈ ವೇಳೆ ಕಾಂಗ್ರೆಸ್ ಎಂಎಲ್​ಸಿ ರಾಜೇಂದ್ರ ರಾಜಣ್ಣ ಸಹ ಉಪಸ್ಥಿತರಿದ್ರು,

  • Share this:

ಕರ್ನಾಟಕ ರಾಜಕಾರಣದಲ್ಲಿ (Karnataka Politics) ಆಣೆ ಪ್ರಮಾಣಕ್ಕೆ ಏನು ಕೊರತೆ ಇಲ್ಲ. ಭಾಷಣ ಮಾಡುವಾಗ ರಾಜಕೀಯ ನಾಯಕರು (Political Leaders) ದೇವರ ಮುಂದೆ ಆಣೆ ಮಾಡು, ಧರ್ಮಸ್ಥಳಕ್ಕೆ ಬರಲಿ, ತಾಯಿ ಚಾಮುಂಡೇಶ್ವರಿ ಮುಂದೆ ಪ್ರತಿಜ್ಞೆ  ಮಾಡಲು ಸವಾಲು ಹಾಕೋದು ಸಾಮಾನ್ಯ. ಒಂದಿಷ್ಟು ಹಿರಿಯ ರಾಜಕೀಯ ಮುಖಂಡರು ಕೆಲವರ ಭವಿಷ್ಯವನ್ನು (Political Predictions) ನುಡಿಯುತ್ತಿರುತ್ತಾರೆ. ಆದ್ರೆ ಇಂದು ಗುಬ್ಬಿ (Gubbi) ಕ್ಷೇತ್ರದ ಜೆಡಿಎಸ್​ ಉಚ್ಛಾಟಿತ ಶಾಸಕ ಎಸ್​.ಆರ್​.ಶ್ರೀನಿವಾಸ್ (MLA SR Srinivas) ತಮ್ಮ ಬಗ್ಗೆ ತಾವೇ ಭವಿಷ್ಯ ನುಡಿದುಕೊಂಡಿದ್ದಾರೆ. ತಮ್ಮ ತಂದೆ ಮೇಲೆ ತಾವೇ ಆಣೆ ಮಾಡ್ಕೊಂಡು ಮುಂದಿನ ಐದು ವರ್ಷ ನಾನೇ ಎಂಎಲ್​​ಎ ಆಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ​​


ಇಂದು ಶಾಸಕ ಶ್ರೀನಿವಾಸ್ ಗುಬ್ಬಿ ತಾಲೂಕಿನ ಯಕ್ಕಲಕಟ್ಟೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಾವ ಜ್ಯೋತಿಷ್ಯ ಶಾಸ್ತ್ರದವರು ನನ್ನ ಕುಂಡಲಿ ನೋಡಿದ್ರೆ ಉಚ್ಚೆ ಹುಯ್ಕೊಂಡು ಓಡ್ತಾರೆ. ಹಂಗಿದೆ ನನ್ನ‌ ಕುಂಡಲಿ. ಯಾರ ಊಹೆಗೂ ನಿಲುಕದ್ದು ನನ್ನ ಭವಿಷ್ಯ ಎಂದು ಹೇಳಿದ್ದಾರೆ.


ವಿರೋಧಿಗಳಿಗೆ ಟಾಂಗ್


ಚುನಾವಣೆ ಹತ್ತಿರ ಬಂದಾಗ ಕಾಗೆ ಗೂಬೆಗಳೆಲ್ಲ ವೇಷ ಹಾಕಿಕೊಂಡು ಬರುತ್ತಾರೆ. ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಕಿಸ್ದು  ಆಮೇಲೆ ಎಂಎಲ್ಎ ಆದೋನು ನಾನು. ನಮ್ಮಪ್ಪರಾಣೆ ನಾನೇ ಮುಂದಿನ ಐದು ವರ್ಷ ಎಂಎಲ್​ಎ ಆಗಿರುತ್ತೀನಿ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದರು.


ನನ್ನನು ಸುಲಭವಾಗಿ ಸೋಲಿಸಿ ಬಿಡಬಹುದು ಅಂತ ತಿಳಿದಿಕೊಂಡಿದ್ರೆ ಅದು ಸುಳ್ಳು. ನನ್ನನ್ನು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಇನ್ನು  ಈ ವೇಳೆ ಕಾಂಗ್ರೆಸ್ ಎಂಎಲ್​ಸಿ ರಾಜೇಂದ್ರ ರಾಜಣ್ಣ ಸಹ ಉಪಸ್ಥಿತರಿದ್ರು,


karnataka politics, sr srinivas expell, jds expell sr srinivas, kannada news, karnataka news, ಎಸ್​ ಆರ್ ಶ್ರೀನಿವಾಸ್ ರಾಜಕೀಯ, ಭಾರತ್ ಜೋಡೋ ಯಾತ್ರೆ, ಕರ್ನಾಟಕ ಚುನಾವಣೆ 2023
ಎಸ್​ ಆರ್​ ಶ್ರೀನಿವಾಸ್


ಭಾರತ್ ಜೋಡೋ ಯಾತ್ರೆಯಲ್ಲಿ ರಾಗಾ ಜೊತೆ ಹೆಜ್ಜೆ


ಅಕ್ಟೋಬರ್ 9ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ತುಮಕೂರು ತಲುಪಿತ್ತು. ಈ ವೇಳೆ ಕಾಂಗ್ರೆಸ್ ಯಾತ್ರೆಯಲ್ಲಿ ಎಸ್.ಆರ್.ಶ್ರೀನಿವಾಸ್ ಭಾಗಿಯಾಗಿ ಹೆಜ್ಜೆ ಹಾಕಿದ್ದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ ಪರಮೇಶ್ವರ್ ಜೊತೆ ಅತ್ಯಂತ ಉತ್ಸಾಹದಿಂದ ಎಸ್​ಆರ್​ ಶ್ರೀನಿವಾಸ್​ ಹೆಜ್ಜೆ ಹಾಕಿದ್ದರು.


ಪಾದಯಾತ್ರೆ ವೇಳೆ ಜಿ. ಪರಮೇಶ್ವರ್​ ಅವರು ಎಸ್​.ಆರ್.ಶ್ರೀನಿವಾಸ್​ ಅವರನ್ನು ರಾಹುಲ್ ಗಾಂಧಿ ಬಳಿ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದ್ದರು. ಸದ್ಯ ಎಸ್​ಆರ್​ ಶ್ರೀನಿವಾಸ್​ ಜೆಡಿಎಸ್​ ನಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ:  MLA Renukacharya: ಶಾಸಕ ರೇಣುಕಾಚಾರ್ಯ ಆಪ್ತ ಸಹಾಯಕನ ಮೇಲೆ ಹಲ್ಲೆ


ಫೇಸ್​​ಬುಕ್​ನಲ್ಲಿ ಫೋಟೋ ಶೇರ್


ಶ್ರೀ ರಾಹುಲ್ ಗಾಂಧಿಯವರ ನೇತ್ರತ್ವದಲ್ಲಿ ನಡೆಯುತ್ತಿರುವ ಐತಿಹಾಸಿಕ "ಭಾರತ ಐಕ್ಯತಾ ಯಾತ್ರೆ" ನಮ್ಮ ಕಲ್ಫತರು ನಾಡು ತುಮಕೂರು ಜಿಲ್ಲೆಗೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಯಾತ್ರೆಯೊಂದಿಗೆ ಹೆಜ್ಜೆ ಹಾಕಿದೆ ಎಂದು ಫೇಸ್​ಬುಕ್​​ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದರು.


karnataka politics, sr srinivas expell, jds expell sr srinivas, kannada news, karnataka news, ಎಸ್​ ಆರ್ ಶ್ರೀನಿವಾಸ್ ರಾಜಕೀಯ, ಭಾರತ್ ಜೋಡೋ ಯಾತ್ರೆ, ಕರ್ನಾಟಕ ಚುನಾವಣೆ 2023
ಎಸ್​ ಆರ್​ ಶ್ರೀನಿವಾಸ್


ಈ ಹಿಂದೆ ಭಾರತ್ ಜೋಡೋ ಯಾತ್ರೆಗೆ ಬರುತ್ತಿರುವ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಹೋಗುತ್ತೇವೆ. ಆದರೆ ಪಾದಾಯಾತ್ರೆಯಲ್ಲಿ ಭಾಗಿಯಾಗುವ ಕುರಿತು ನಿರ್ಧರಿಸಿಲ್ಲ ಎಂದು ಹೇಳಿದ್ದರು.


ಇದನ್ನೂ ಓದಿ:  Chamaajanagar: ಕರ್ನಾಟಕ-ತಮಿಳುನಾಡು ಗಡಿಯನ್ನ ಬಂದ್ ಮಾಡಿದ ಗಜಪಡೆ


ಜೆಡಿಎಸ್​​ನಿಂದ ಉಚ್ಛಾಟನೆ


ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆ ಎಸ್​.ಆರ್​.ಶ್ರೀನಿವಾಸ್​​ ಅವರನ್ನು ಶಾಸಕ ಸ್ಥಾನದಿಂದ ಉಚ್ಛಾಟಿಸಬೇಕೆಂದು ಜೆಡಿಎಸ್​ ಸ್ಪೀಕರ್​​ಗೆ ಪತ್ರ ಬರೆದಿತ್ತು. ಈ ಸಂಬಂಧ ವಿಧಾನಸಭಾ ಕಾರ್ಯದರ್ಶಿಗಳು ಕಾರಣ ಕೇಳಿ ಶಾಸಕರಿಗೆ ನೋಟಿಸ್​ ನೀಡಿದ್ದಾರೆ.

Published by:Mahmadrafik K
First published: