Karnataka Weather Report: ಇಂದಿನಿಂದ ಮುಂದಿನ 5 ದಿನ ಈ ಭಾಗದಲ್ಲಿ ಸಣ್ಣ ಮಳೆ; ಇವತ್ತಿನ ಹವಾಮಾನ ವರದಿ

ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆಗೆ ಕೊಂಚ ಸೆಕೆ ಇರಲಿದೆ. ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದ ಜಲಾಶಯಗಳು, ಕೆರೆ ಕುಂಟೆಗಳು ಭರ್ತಿಯಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Weather Report: ರಾಜ್ಯದಲ್ಲಿ ಮಳೆ (Rainfall) ಸಂಪೂರ್ಣ ಕಡಿಮೆಯಾಗಿದೆ. ಬೆಳಗಾವಿ (Belagavi) ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ (Western Hills) ಸಣ್ಣದಾಗಿ ಮಳೆಯ ಸಿಂಚನ ಇದೆ. ಇದನ್ನು ಹೊರತುಪಡಿಸಿದ್ರೆ ಮಳೆ ಬ್ರೇಕ್ ನೀಡಿದ್ದು, ರಾಜ್ಯದಲ್ಲಿಂದು ಒಣ ಹವೆ ವಾತಾವರಣ ಇರಲಿದೆ. ಆದರೆ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆಗೆ ಕೊಂಚ ಸೆಕೆ ಇರಲಿದೆ. ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದ ಜಲಾಶಯಗಳು, ಕೆರೆ ಕುಂಟೆಗಳು ಭರ್ತಿಯಾಗಿವೆ. ಮತ್ತೊಂದೆಡೆ ನೆರೆಯ ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ (Maharashtra Rains) ಕೃಷ್ಣಾ ಮತ್ತು ಭೀಮಾ ನದಿ (Krishna And Bhima River) ಉಕ್ಕಿ ಹರಿಯುತ್ತಿವೆ.

  ರಾಜಧಾನಿ ಬೆಂಗಳೂರಿನಲ್ಲಿ 10 ಗಂಟೆ ನಂತರ ಸೂರ್ಯನ ಪ್ರಖರತೆ ಹೆಚ್ಚಾಗಲಿದೆ. ನಗರದಲ್ಲಿ ಸಂಜೆ ಆಗ್ತಿದ್ದಂತೆ ಸುಳಿಗಾಳಿ ಹೆಚ್ಚಾಗುತ್ತಿರುವ ಕಾರಣ ಚಳಿಯ ಪ್ರಮಾಣ ಕೊಂಚ ಏರಿಕೆಯಾಗಿದೆ. ಇಂದು ನಗರದಲ್ಲಿ ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

  ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

  ಬೆಂಗಳೂರು 28-20, ಮೈಸೂರು 29-21, ಚಾಮರಾಜನಗರ 30-21, ರಾಮನಗರ 30-21, ಮಂಡ್ಯ 30-21, ಬೆಂಗಳೂರು ಗ್ರಾಮಾಂತರ 28-20, ಚಿಕ್ಕಬಳ್ಳಾಪುರ 29-20, ಕೋಲಾರ 30-21, ಹಾಸನ 26-19, ಚಿತ್ರದುರ್ಗ 28-21, ಚಿಕ್ಕಮಗಳೂರು 25-18, ದಾವಣಗೆರೆ 28-21, ಶಿವಮೊಗ್ಗ 28-21, ಕೊಡಗು 24-18, ತುಮಕೂರು 29-20, ಉಡುಪಿ 29-24, ಮಂಗಳೂರು 28-24

  Next five day rain predicts this area Karnataka Weather Report 20 August 2022 mrq
  ಸಾಂದರ್ಭಿಕ ಚಿತ್ರ


  ಉತ್ತರ ಕನ್ನಡ 27-21, ಧಾರವಾಡ 27-21, ಹಾವೇರಿ 28-22, ಹುಬ್ಬಳ್ಳಿ 27-21, ಬೆಳಗಾವಿ 25-20, ಗದಗ 28-21, ಕೊಪ್ಪಳ 30-22, ವಿಜಯಪುರ 29-22, ಬಾಗಲಕೋಟ 30-23, ಕಲಬುರಗಿ 31-23, ಬೀದರ್ 28-22, ಯಾದಗಿರಿ 31-23, ರಾಯಚೂರ 32-23 ಮತ್ತು ಬಳ್ಳಾರಿ 32-23

  ಇದನ್ನೂ ಓದಿ:  Madhuswamy: ಕಾಂಗ್ರೆಸ್ ಸೇರ್ತಾರಾ ಸಚಿವ ಮಾಧುಸ್ವಾಮಿ? ಆಡಿಯೋ ಲೀಕ್ ಬೆನ್ನಲ್ಲೇ ಗುಸುಗುಸು!

  ಮುಂದಿನ 5 ದಿನ ಮಳೆಯ ನಿರೀಕ್ಷೆ

  ಒಂದೆರಡು ಜಿಲ್ಲೆಗಳಲ್ಲಿ (District) ಮಾತ್ರ ಮಳೆ ಇದ್ದು, ಇನ್ನೂ ಕೆಲವು ದಿನ ಈ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮಲೆನಾಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ.

  ಮಳೆಯ ಅಬ್ಬರದಿಂದ ತತ್ತರಿಸಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಇಂದಿನಿಂದ 5 ದಿನಗಳ ಕಾಲ ಮಳೆ ಬೀಳಲಿದ್ದು, ವಿಜಯಪುರದಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ, ಬೆಳಗಾವಿ, ಕೊಡಗು, ರಾಮನಗರ, ಗದಗ, ವಿಜಯಪುರ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಹ ಮಳೆಯಾಗುವ ನಿರೀಕ್ಷೆ ಇದೆ.

  ಈ ಭಾಗದಲ್ಲಿಂದು ಮಳೆ ಸಾಧ್ಯತೆ

  ಹವಾಮಾನ ಇಲಾಖೆಯ ಪ್ರಕಾರ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಾಗಲಿದೆ.ಈ ಮಳೆಯಿಂದಾಗಿ ತಾಪಮಾನ ಮೂರರಿಂದ ನಾಲ್ಕು ಡಿಗ್ರಿಗಳಷ್ಟು ಕಡಿಮೆಯಾಗಲಿದೆ.

  ಇದರ ಹೊರತಾಗಿ ಸೌರಾಷ್ಟ್ರ ಮತ್ತು ಕಛ್ ಪ್ರದೇಶಗಳಲ್ಲಿ ಮಳೆಯಾಗಬಹುದು. ಇತ್ತ ಗೋವಾ ಮತ್ತು ಕೊಂಕಣ ಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

  Next five day rain predicts this area Karnataka Weather Report 20 August 2022 mrq
  ಸಾಂದರ್ಭಿಕ ಚಿತ್ರ


  ಪೂರ್ವ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಡಿಶಾ. ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ವಿದರ್ಭದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

  ಇದನ್ನೂ ಓದಿ:  DK Shivakumr: ನಿಮ್ಮ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿಡಿ, ಸಿಎಂ ಬೊಮ್ಮಾಯಿಗೆ ಡಿಕೆಶಿ ವಾರ್ನಿಂಗ್!

  ಸಹಜ ಸ್ತಿತಿಯತ್ತ ಜನರು

  ಸುಮಾರು ಒಂದು ತಿಂಗಳು ಕಾಲ ಸುರಿದ ಮಳೆ ಹಲವು ಅವಾಂತರಗಳಿಗೆ ಕಾರಣವಾಗಿತ್ತು. ಕೆಲವೆಡೆ ಮನೆ ಕುಸಿದು ಜನ ಪರದಾಡಿದ್ದಾರೆ, ಇನ್ನೂ ಕೆಲವೆಡೆ ರಸ್ತೆಗಳು ಬಿರುಕು ಬಿಟ್ಟಿದ್ದವು. ಜನ ಜೀವನ ಅಸ್ತವ್ಯಸ್ತವಾಗಿತ್ತು. ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜನರು ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ.
  Published by:Mahmadrafik K
  First published: