ನ್ಯೂಸ್​18 ಕನ್ನಡದ ನ್ಯೂಸ್​ ಎಡಿಟರ್​ ಅಭಿನಂದನ್​ಗೆ ಕೆಂಪೇಗೌಡ ಪ್ರಶಸ್ತಿ

news18
Updated:September 1, 2018, 9:19 PM IST
ನ್ಯೂಸ್​18 ಕನ್ನಡದ ನ್ಯೂಸ್​ ಎಡಿಟರ್​ ಅಭಿನಂದನ್​ಗೆ ಕೆಂಪೇಗೌಡ ಪ್ರಶಸ್ತಿ
news18
Updated: September 1, 2018, 9:19 PM IST
ಶ್ಯಾಮ್​, ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 1): ಬಿಬಿಎಂಪಿಯ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಯ ಮಾಧ್ಯಮ ವಿಭಾಗದಿಂದ ನ್ಯೂಸ್​18 ಕನ್ನಡ ನ್ಯೂಸ್​ ಎಡಿಟರ್​ ಅಭಿನಂದನ್ ಅವರಿಗೆ ಮೇಯರ್ ಸಂಪತ್ ರಾಜ್ ಶನಿವಾರ ಪ್ರಶಸ್ತಿ ಪ್ರದಾನ ಮಾಡಿದರು.

ಪಾಲಿಕೆಯ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು. ಪಾಲಿಕೆಯಲ್ಲಿ ಈ ಹಿಂದೆ ಪ್ರಶಸ್ತಿ ಘೋಷಣೆ ಮಾಡಿದಾಗ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 277 ಮಂದಿ ಗಣ್ಯರ ಹೆಸರನ್ನು ಪ್ರಕಟಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿತ್ತು.

ಇಂದು ಪ್ರಶಸ್ತಿ ಪಟ್ಟಿ ಘೋಷಣೆ ಮಾಡಿದಾಗ ಆ ಸಂಖ್ಯೆ 500 ದಾಟಿತ್ತು. ನಟ ದರ್ಶನ್, ಸುದೀಪ್ ಹಾಗೂ ಸೃಜನ್ ಲೋಕೇಶ್ ಕೂಡ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ, ಸೃಜನ್ ಲೋಕೇಶ್ ಮಾತ್ರ ಪ್ರಶಸ್ತಿ ಸ್ವೀಕರಿಸಲು ಸಮಾರಂಭಕ್ಕೆ ಬಂದಿದ್ದರು. ಇದೇ ಸಂದರ್ಭದಲ್ಲಿ ದರ್ಶನ್ ಮತ್ತು ತಾವು ಪಾಲಿಕೆ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ವೈಯಕ್ತಿಕವಾಗಿ ತಲಾ 50 ಸಾವಿರ ರೂ. ನೀಡುವುದಾಗಿ ಸೃಜನ್​ ಪ್ರಕಟಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ರಾಜ್ಯ ಸರ್ಕಾರ ನಗರದಲ್ಲಿ ಸಂಗ್ರಹಿಸುತ್ತಿರುವ ಮನರಂಜನಾ ತೆರಿಗೆ, ವೃತ್ತಿ ತೆರಿಗೆ, ಸ್ಟ್ಯಾಂಪ್ ಡ್ಯೂಟಿ ಮೇಲಿನ ಸರ್ ಚಾರ್ಜ್ ಮತ್ತಿತರ ವರಮಾನವನ್ನು ಪಾಲಿಕೆಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಡಿಸಿಎಂ ಪರಮೇಶ್ವರ್ ನಗರದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು. ಸೆಪ್ಟೆಂಬರ್ 24 ಹಾಗೂ 25ರಂದು ಸಿಎಂ ಕುಮಾರಸ್ವಾಮಿ ಕೆಂಪೇಗೌಡ ಬಡಾವಣೆಯ ನಿವೇಶನದಾರರಿಗೆ ನಿವೇಶನ ಹಂಚಿಕೆ ಮಾಡಲಿದ್ದಾರೆ ಎಂದು ತಿಳಿಸಿದರು.  ಪೌರಕಾರ್ಮಿಕರಿಗೆ ಪಾಲಿಕೆಯಲ್ಲಿ ಪ್ರತ್ಯೇಕ ಆಸ್ಪತ್ರೆ ನಿಗದಿ ಮಾಡಲು ಸೂಚಿಸಿದ್ದಾಗಿ ಹೇಳಿದರು.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ