News18 Impact: ಮಕ್ಕಳಿಗೆ ಆನ್​ಲೈನ್ ಶಿಕ್ಷಣ ನೀಡಲು ತಾಳಿ ಮಾರಿದ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಸದ್ಯ ಈ ಘಟನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಷ್ಟೇ ಅಲ್ಲ, ಈ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು. ಟಿವಿ ತರಲು ಮಾರಾಟ ಮಾಡಿದ ತಾಳಿಯನ್ನು ಮರಳಿ ಆ ಮಹಿಳೆಗೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

news18-kannada
Updated:July 31, 2020, 3:38 PM IST
News18 Impact: ಮಕ್ಕಳಿಗೆ ಆನ್​ಲೈನ್ ಶಿಕ್ಷಣ ನೀಡಲು ತಾಳಿ ಮಾರಿದ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ
ಸದ್ಯ ಈ ಘಟನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಷ್ಟೇ ಅಲ್ಲ, ಈ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು. ಟಿವಿ ತರಲು ಮಾರಾಟ ಮಾಡಿದ ತಾಳಿಯನ್ನು ಮರಳಿ ಆ ಮಹಿಳೆಗೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
  • Share this:
ಬೆಂಗಳೂರು (ಜು.31): ಮಕ್ಕಳಿಗೆ ಆನ್​ಲೈನ್​  ಶಿಕ್ಷಣ ನೀಡುವ ಉದ್ದೇಶದಿಂದ ಗದಗದಲ್ಲಿ ತಾಯಿಯೊಬ್ಬಳು ತಾಳಿ ಮಾರಿದ್ದರು. ಈ ಬಗ್ಗೆ ನ್ಯೂಸ್​18 ಕನ್ನಡ ವಿಶೇಷ ವರದಿ ಮಾಡಿತ್ತು. News18 ಕನ್ನಡ ವರದಿ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ಕರುಣಾಜನಕ ಘಟನೆಯ ಕುರಿತಂತೆ ವ್ಯಾಪಕ ಚರ್ಚೆ ಆರಂಭವಾಗಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಕಸ್ತೂರಿ ಅನ್ನೋ ಮಹಿಳೆಯ ತನ್ನ ಇಬ್ಬರು ಮಕ್ಕಳು ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಓರ್ವ ವಿದ್ಯಾರ್ಥಿನಿ ಎಂಟನೇ ತರಗತಿಯಲ್ಲಿ ಇನ್ನೋರ್ವ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನ ಕೇಳಲು ಪ್ರತಿದಿನ ಟಿವಿ ನೋಡುವಂತೆ ಶಿಕ್ಷಕರು ಹೇಳಿದ್ದರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳುತ್ತಿದ್ದರು.

ಈ ಮಕ್ಕಳಿಗೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಟಿವಿ ನೋಡೋದಕ್ಕೆ ಆಗುತ್ತಿರಲಿಲ್ಲ. ಜೊತೆಗೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಕ್ಕಳಿಗೆ ಸಾಧ್ಯವಾಗುತ್ತಿರಲಿಲ್ಲ. ಇವರ ಮನೆಯಲ್ಲಿ ಈ ಮೊದಲು ಇದ್ದ ಟಿವಿ ಸುಟ್ಟು ಹೋಗಿತ್ತು. ಹೀಗಾಗಿ ಮಕ್ಕಳು ಟಿವಿ ನೋಡಲು ಕಷ್ಟ ಪಡುತ್ತಿದ್ದರು. ಬೇರೆಯವರ ಮನೆಗೆ ಹೋದ್ರೆ ಅವರು ಸಿನಿಮಾ ಇನ್ನಿತರ ಕಾರ್ಯಕ್ರಮಗಳನ್ನು ನೋಡ್ತಿದ್ರು, ಹೀಗಾಗಿ ತಾಯಿ ತನ್ನ ತಾಳಿಯನು ಅಡವಿಟ್ಟು ಟಿವಿ ಖರೀದಿ ಕೊಡಿಸಿದ್ದರು.

ಇದನ್ನೂ ಓದಿ: ಗದಗ: ಮಕ್ಕಳ ಆನ್​ಲೈನ್​ ಶಿಕ್ಷಣಕ್ಕೆ ಟಿವಿ ತರಲು ತಾಳಿಯನ್ನೇ ಅಡವಿಟ್ಟ ತಾಯಿ



ಈ ಬಗ್ಗೆ ನ್ಯೂಸ್​18 ಕನ್ನಡ ವರದಿ ಮಾಡಿತ್ತು. ನ್ಯೂಸ್​18 ಕನ್ನಡದ ಸುದ್ದಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆರಂಭವಾಗಿದೆ. “ಕೊರೋನಾ ಸೋಂಕು ಜನರ ಜೀವ-ಜೀವನದ ಜೊತೆ ಮಾತ್ರ ಚೆಲ್ಲಾಟ ಮಾಡುತ್ತಿಲ್ಲ. ಇಡೀ ಮನುಕುಲದ  ರೀತಿ-ರಿವಾಜುಗಳನ್ನು ಬುಡಮೇಲು ಮಾಡುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ತಾಯಿ ಒಬ್ಬರು ಮಕ್ಕಳ  ಆನ್ಲೈನ್ ಶಿಕ್ಷಣಕ್ಕಾಗಿ  ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ,” ಎಂದು ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿದ್ದರು.

ಸದ್ಯ ಈ ಘಟನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಷ್ಟೇ ಅಲ್ಲ, ಈ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು. ಟಿವಿ ತರಲು ಮಾರಾಟ ಮಾಡಿದ ತಾಳಿಯನ್ನು ಮರಳಿ ಆ ಮಹಿಳೆಗೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
Published by: Rajesh Duggumane
First published: July 31, 2020, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading