News18 Is The New No. 1 : ಪ್ರಾದೇಶಿಕ ಭಾಷಾ ಡಿಜಿಟಲ್ ಮಾಧ್ಯಮದಲ್ಲಿ ನ್ಯೂಸ್ 18 ದೇಶದಲ್ಲೇ ನಂಬರ್ ಒನ್

ಸಾಧನೆಗೆ ಕಾರಣರಾದ ನಮ್ಮ ಓದುಗರಿಗೆ ನ್ಯೂಸ್​18 ಸಂಸ್ಥೆಯಿಂದ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಸಹಕಾರ, ನಮ್ಮ ಮೇಲಿನ ನಂಬಿಕೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.

ನ್ಯೂಸ್​​18

ನ್ಯೂಸ್​​18

 • Share this:
  ಮಾಧ್ಯಮ ಕ್ಷೇತ್ರದಲ್ಲೇ ತನ್ನದೇ ಛಾಪು ಮೂಡಿಸಿರುವ ನ್ಯೂಸ್​​ 18 ಮಾಧ್ಯಮ ಸಂಸ್ಥೆ ಮತ್ತೊಂದು ಮೈಲಿಗಲ್ಲನ್ನು ಮುಟ್ಟಿದೆ. ಭಾರತದ ಪ್ರಾದೇಶಿ ಭಾಷೆಗಳ ಡಿಜಿಟಲ್​​​ ನ್ಯೂಸ್​ ವೆಬ್​ಸೈಟ್​ಗಳಲ್ಲಿ ನ್ಯೂಸ್​ 18 ನಂಬರ್​​ ಒನ್​​ ಸ್ಥಾನಕ್ಕೇರಿದೆ. ಮೊದಲಿಗೆ ಓದುಗರಿಗೆ ನ್ಯೂಸ್​ 18 ವತಿಯಿಂದ ಹೃತ್ಪೂರ್ವಕ ವಂದನೆಗಳು. ಟೈಮ್ಸ್​ ಸಂಸ್ಥೆಯನ್ನು ಹಿಂದಿಕ್ಕಿರುವ ನ್ಯೂಸ್​ 18 ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಅತಿ ಹೆಚ್ಚು ಜನರನ್ನು ತಲುಪಿದ ಡಿಜಿಟಲ್​ ಮಾಧ್ಯಮ ಎನಿಸಿಕೊಂಡಿದೆ. ಡಿಜಿಟಲ್​ ಮಾಧ್ಯಮದ ಮೂಲಕ ಅಂದರೆ ಮೊಬೈಲ್​ನಲ್ಲಿ ದೇಶದ ಅತಿ ಹೆಚ್ಚು ಜನ ನ್ಯೂಸ್​ 18 ವೆಬ್​ ಓದುಗರಾಗಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇವೆ.

  ಪ್ರತಿಷ್ಠಿತ ಮಾಧ್ಯಮ ಓದುಗರ ದತ್ತಾಂಶ ಮತ್ತು ವಿಶ್ಲೇಷಣಾ ಕಂಪನಿಯಾದ ಕಾಮ್​ಸ್ಕೋರ್ (ComScore)​​​ ನೀಡಿರುವ ಅಂಕಿಅಂಶಗಳು ನ್ಯೂಸ್​ 18 ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ನ್ಯೂಸ್​ 18 ಸಂಸ್ಥೆಯ ಪ್ರಾದೇಶಿಕ ಭಾಷಾ ವೆಬ್​​​ಸೈಟ್​​ಗಳು 941 ಮಿಲಿಯನ್​​ ಪೇಜ್​ವ್ಯೂವ್​ಗಳನ್ನು ಗಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. 924 ಮಿಲಿಯನ್​ ಪೇಜ್​ ವ್ಯೂವ್​ಗಳ ಮೂಲಕ ಟೈಮ್ಸ್​ ಗ್ರೂಪ್​​ ಮಾಧ್ಯಮ ಡಿಜಿಟಲ್​​ ವೆಬ್​​ಸೈಟ್​ಗಳು 2ನೇ ಸ್ಥಾನದಲ್ಲಿದೆ.

  ಮಿಲಿಯನ್​​ ಗಟ್ಟಲೆ ಪೇಜ್​ವ್ಯೂವ್​ಗಳು ಜನರು ನ್ಯೂಸ್​18 ಸುದ್ದಿ ಸಂಸ್ಥೆ ಮೇಲಿಟ್ಟಿರುವ ನಂಬಿಕೆ, ವಿಶ್ವಾಸ, ಸುದ್ದಿಯ ನಿಖರತೆಗೆ ಹಿಡಿದ ಕೈಗನ್ನಡಿಯಾಗಿದೆ. ದೇಶದ ಜನ ಸಮಗ್ರ, ನಿಖರ ಸುದ್ದಿಯಾಗಿ ನ್ಯೂಸ್​​18 ಮಾಧ್ಯಮವನ್ನು ನಂಬಿರುವುದು ಮತ್ತೊಮ್ಮೆ ಸಾಬೀತಾಗಿದೆ. ನ್ಯೂಸ್​​18 ಮಾಧ್ಯಮ ಸಂಸ್ಥೆಯ ಎಲ್ಲಾ ಭಾಷೆಗಳ ಒಟ್ಟು ಓದುಗರ ಸಂಖ್ಯೆ ಲೈವ್​​ ಹಿಂದೂಸ್ಥಾನ (Live Hindustan) ಮಾಧ್ಯಮ ಸಂಸ್ಥೆಯ ಓದುಗರಿಗಿಂತ ದುಪಟ್ಟು ಇದೆ. ಇನ್ನು ನ್ಯೂಸ್​ 18, ಟೈಮ್ಸ್​ ಗ್ರೂಪ್​ ನಂತರದ ಸ್ಥಾನದಲ್ಲಿ ಅಂದರೆ 486 ಮಿಲಿಯನ್​ ಪೇಜ್​ವ್ಯೂವ್​ ಗಳ ಮೂಲಕ ಲೈವ್​ ಹಿಂದೂಸ್ಥಾನ್​ 3ನೇ ಸ್ಥಾನದಲ್ಲಿ ಹಾಗೂ 478 ಮಿಲಿಯನ್​ ಪೇಜ್​ ವ್ಯೂವ್​ ಮೂಲಕ ಆಜ್​ತಕ್​ (Aaj Tak) 4ನೇ ಸ್ಥಾನದಲ್ಲಿದೆ.

  ಪ್ರಾದೇಶಿಕ ಸುದ್ದಿಗಳಿಂದ ಹಿಡಿದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳಿಗೆ ದೇಶದ ಓದುಗರು ನ್ಯೂಸ್​​18 ಮಾಧ್ಯಮವನ್ನು ಆಯ್ಕೆ ಮಾಡಿರುವುದು ಅಂಕಿಅಂಶಗಳಿಂದ ಸಾಬೀತಾಗಿದೆ. ನಮ್ಮ ಸುದ್ದಿಗಳ ವಿಶ್ವಾಸಾರ್ಹತೆ, ಸುದ್ದಿಯ ನಿಖರತೆಯೇ ಈ ಸಾಧನೆಗೆ ಮೂಲಕ ಕಾರಣವಾಗಿದೆ. ಇನ್ನು ಪ್ರಸಕ್ತ ದೇಶದಲ್ಲಿ ಸುದ್ದಿಯನ್ನು ತ್ವರಿತವಾಗಿ, ನಿಖರವಾಗಿ ಜನರಿಗೆ ತಲುಪಿಸುವಲ್ಲಿ, ಓದುಗರ ವಿಶ್ವಾಸ ಗಳಿಸುವಲ್ಲಿ ಎಲ್ಲಾ ಸುದ್ದಿ ಮಾಧ್ಯಮಳಿಗಿಂತ ನ್ಯೂಸ್​ 18 ಮುಂದಿದೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇವೆ.

  ನ್ಯೂಸ್​18 ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಜನರನ್ನು ತಲುಪಿದೆ. ಹಿಂದಿ, ತೆಲುಗು, ಮರಾಠಿ, ತಮಿಳು, ಬಂಗಾಳ, ಮಲೆಯಾಳಂ, ಗುಜರಾತಿ, ಅಸ್ಸಾಮಿ, ಪಂಜಾಬಿ, ಒಡಿಯಾ, ಉರ್ದು ಹಾಗೂ ಕನ್ನಡದಲ್ಲಿ ಸುದ್ದಿಗಳನ್ನು ಓದುಗರಿಗೆ ತಲುಪಿಸಲು ಅವಿರತವಾಗಿ ತೊಡಗಿದೆ. ವಿಶೇಷ ವರದಿಗಳು, ಎಕ್ಸ್​ಕ್ಲೂಸಿವ್​​ ಸುದ್ದಿಗಳ ಹೆಡ್​ ಆಫೀಸ್​​ ನ್ಯೂಸ್​ 18 ಎಂಬ ಬಿರುದಿಗೆ ಪಾತ್ರವಾಗಿದೆ.

  ಈ ಎಲ್ಲಾ ಸಾಧನೆಗೆ ಕಾರಣರಾದ ನಮ್ಮ ಓದುಗರಿಗೆ ನ್ಯೂಸ್​18 ಸಂಸ್ಥೆಯಿಂದ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಸಹಕಾರ, ನಮ್ಮ ಮೇಲಿನ ನಂಬಿಕೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.
  Published by:Kavya V
  First published: