• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Assembly Election: ಅವಧಿಗೂ ಮೊದಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ? ಆಯೋಗದಿಂದ ಪೂರ್ವ ಸಿದ್ಧತೆಯ ಪ್ಲಾನ್ !

Karnataka Assembly Election: ಅವಧಿಗೂ ಮೊದಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ? ಆಯೋಗದಿಂದ ಪೂರ್ವ ಸಿದ್ಧತೆಯ ಪ್ಲಾನ್ !

ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಈ ಹಿಂದೆ ನಾಲ್ಕು ಗಂಟೆವರೆಗೆ ಮತದಾನ ನಡೆಯುತ್ತಿತ್ತು. ಅಭ್ಯರ್ಥಿಗಳ ಮನವಿ ಮೇರೆ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ.

ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಈ ಹಿಂದೆ ನಾಲ್ಕು ಗಂಟೆವರೆಗೆ ಮತದಾನ ನಡೆಯುತ್ತಿತ್ತು. ಅಭ್ಯರ್ಥಿಗಳ ಮನವಿ ಮೇರೆ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ.

ಅವಧಿಗೂ ಮೊದಲೇ ಆದರೂ ಸರಿ ಅಥವಾ ಅವಧಿ ಮುಗಿದ ಮೇಲೆಯಾದರೂ ಸರಿ. ನಾವು ಯಾವುದೇ ಸಮಯದಲ್ಲಿ ಚುನಾವಣೆ ನಡೆಸಲು ಸಿದ್ಧರಾಗಿರಬೇಕು ಎಂಬ ನಿಟ್ಟಿನಲ್ಲಿ ಆಯೋಗದ ಪೂರ್ವ ಸಿದ್ಧತೆಯ ಪ್ಲಾನ್ ನಲ್ಲಿ ತೊಡಗಿಕೊಂಡಿದೆ ಎನ್ನಲಾಗಿದೆ.

  • Share this:

ಕರ್ನಾಟಕದಲ್ಲಿ (Karnataka) ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ (Assembly Election) ನಡೆಯುತ್ತಾ ಅನ್ನೋ ಚರ್ಚೆಗಳು ನಡೆದಿವೆ. ಇತ್ತ ರಾಜಕೀಯ ನಾಯಕರು (Political Leaders) ಸಹ  ಚುನಾವಣೆಗೂ (Election Campaign) ಮೊದಲೇ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ರಾಜಕೀಯ ಅಂಗಳದಲ್ಲಿ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ (Election Commission) ಸಹ ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿರುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಗುಜರಾತ್ (Gujarat Election) ಜೊತೆಯಲ್ಲಿಯೇ ಕರ್ನಾಟಕದಲ್ಲಿ ಚುನಾವಣೆ ನಡೆಯುವ ಪೂರಕ ವಾತಾವರಣ ನಿರ್ಮಾಣವಾಗಿದೆ. ಈ ಮಾತುಗಳಿಗೆ ಪುಷ್ಟಿ ಎಂಬಂತೆ ಕೇಂದ್ರ ಚುನಾವಣಾ ಆಯೋಗ ಕೂಡ ಕೆಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರೂ ಗೊಂದಲಕ್ಕೆ ಒಳಗಾಗಬಾರದು. ಹಾಗಾಗಿ ಗುಜರಾತ್ ಚುನಾವಣೆಯ ಸಿದ್ಧತೆ ಜೊತೆಗೆ ಕರ್ನಾಟಕದತ್ತ ಸಹ ಕೇಂದ್ರ ಚುನಾವಣೆ ಆಯೋಗ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.


ಅವಧಿಗೂ ಮೊದಲೇ ಆದರೂ ಸರಿ ಅಥವಾ ಅವಧಿ ಮುಗಿದ ಮೇಲೆಯಾದರೂ ಸರಿ. ನಾವು ಯಾವುದೇ ಸಮಯದಲ್ಲಿ ಚುನಾವಣೆ ನಡೆಸಲು ಸಿದ್ಧರಾಗಿರಬೇಕು ಎಂಬ ನಿಟ್ಟಿನಲ್ಲಿ ಆಯೋಗದ ಪೂರ್ವ ಸಿದ್ಧತೆಯ ಪ್ಲಾನ್ ನಲ್ಲಿ ತೊಡಗಿಕೊಂಡಿದೆ ಎನ್ನಲಾಗಿದೆ.


ಆಯೋಗದ ಪೂರ್ವ ಸಿದ್ಧತೆ


ರಾಜ್ಯದ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿಗಳಿಗೆ ಚುನಾವಣೆ ಪ್ರಕ್ರಿಯೆಯ ತರಬೇತಿ ಆರಂಭವಾಗಿದೆ. ನವದೆಹಲಿಯಲ್ಲಿ ಸೋಮವಾರದಿಂದ ನಡೆಯುತ್ತಿರುವ ಐದು ದಿನದ ತರಬೇತಿಗೆ ರಾಜ್ಯದ 47 ಹಿರಿಯ ಶ್ರೇಣಿಯ ಅಧಿಕಾರಿಗಳು ಹಾಜರಾಗಿದ್ದಾರೆ.


ಇದನ್ನೂ ಓದಿ: H.D Kumaraswamy: ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ; ಸಿದ್ದು ಕಾಲೆಳೆದ ಕುಮಾರಸ್ವಾಮಿ


ಯಾವಾಗ ಚುನಾವಣೆ ಎದುರಾದರೂ ಸಿದ್ಧರಾಗುವಂತೆ ಆಯೋಗ ಪೂರ್ವ ತಯಾರಿ ನಡೆಸುತ್ತಿದೆ. ತರಬೇತಿಗೆ ತೆರಳಿರುವ ಅಧಿಕಾರಿಗಳ ಪಟ್ಟಿ ಸಹ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.


ಚುನಾವಣೆಗೆ ಸಿದ್ಧವಾಗುತ್ತಿರುವ ರಾಜಕೀಯ ಪಕ್ಷಗಳು


ರಾಜ್ಯದ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯ ಇರೋವಾಗಲೇ ಮೂರು ಪಕ್ಷಗಳು ತಯಾರಿ ನಡೆಸಿವೆ. ಈಗಾಗಲೇ ಬೃಹತ್ ಸಮಾವೇಶ, ಪಕ್ಷದೊಳಗೆ ನಿರಂತರ ಸಭೆಗಳನ್ನು ನಡೆಸುತ್ತಿವೆ. ಕಾಂಗ್ರೆಸ್, ಬಿಜೆಪಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸುತ್ತಿದ್ದು, ವರದಿಗಾಗಿ ಕಾಯುತ್ತಿವೆ.




ರಾಜ್ಯ ಪ್ರವಾಸದಲ್ಲಿ HDD ಮತ್ತು HDK


ಇತ್ತ ಜೆಡಿಎಸ್ ಸಹ ಜಲಧಾರೆ ಯಾತ್ರೆ ಮೂಲಕ ಚುನಾವಣೆ ಪ್ರಚಾರ ನಡೆಸುತ್ತಿದೆ. ಯಾತ್ರೆಯ ಹೆಸರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.


ಸಿಎಂ ಬೊಮ್ಮಾಯಿ ಫುಲ್ ಆಕ್ಟಿವ್


ಇತ್ತ ಸಿಎಂ ಬಸವರಾಜ್ ಬೊಮ್ಮಾಯಿ ಸಹ ರಾಜ್ಯ ಪ್ರವಾಸ ನಡೆಸುತ್ತಿದ್ದಾರೆ. ಅನ್ಯ ಪಕ್ಷಗಳ ನಾಯಕರ ತರಾತುರಿ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಇಲಾಖಾವಾರು ಬಜೆಟ್ ಅನುಷ್ಠಾನಗಳ ಸಭೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿಗಳ ಜೊತೆ ಸಭೆ ಮಾಡುತ್ತಿದ್ದಾರೆ.  ಐಎಎಸ್ , ಐಪಿಎಸ್ , ಕೆಎಎಸ್ ಅಧಿಕಾರಿಗಳ ಭಾರೀ ವರ್ಗಾವಣೆ ಸಹ ನಡೆಯುತ್ತಿದೆ.




ಸಮೀಕ್ಷೆ,  ಸಭೆ ಮತ್ತು ಪ್ರವಾಸದ ಬಳಿಕ ರಾಜ್ಯದಲ್ಲಿ ಪಕ್ಷಕ್ಕೆ ಪೂರ್ವಕ ವಾತಾವರಣ ಇದ್ರೆ ಚುನಾವಣೆಗೆ ಹೋಗಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಸಮೀಕ್ಷೆ ವರದಿ ಬಳಿಕ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ರೆ ಬಿಜೆಪಿ ಚುನಾವಣೆಗೆ ಹೋಗಲು ಮುಂದಾಗಬಹುದು ಎಂದು ತಿಳಿದು ಬಂದಿದೆ.


ಇದನ್ನೂ ಓದಿ:  Karnataka Politics: ಸೋಲಿನಿಂದ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿತಿ ಕಳ್ಕೊಂಡಿದ್ದಾರೆ- ಸಿ.ಟಿ ರವಿ


ಕಾರ್ಯಕರ್ತರಿಗೆ ಡಿಕೆಶಿ ಸಂದೇಶ


ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಚುನಾವಣೆಗೆ ಮಾನಸಿಕವಾಗಿ ಸಿದ್ಧರಾಗಿರುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

top videos
    First published: