• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Varshada Kannadiga 2023: ಕರುನಾಡ ಸಾಧಕರಿಗೆ ಹೆಮ್ಮೆಯ ಸನ್ಮಾನ, ನ್ಯೂಸ್‌ 18 'ವರ್ಷದ ಕನ್ನಡಿಗ' ಪ್ರಶಸ್ತಿ ಪ್ರದಾನ

Varshada Kannadiga 2023: ಕರುನಾಡ ಸಾಧಕರಿಗೆ ಹೆಮ್ಮೆಯ ಸನ್ಮಾನ, ನ್ಯೂಸ್‌ 18 'ವರ್ಷದ ಕನ್ನಡಿಗ' ಪ್ರಶಸ್ತಿ ಪ್ರದಾನ

ವರ್ಷದ ಕನ್ನಡಿಗ-2023

ವರ್ಷದ ಕನ್ನಡಿಗ-2023

ಕಳೆದ 20 ವರ್ಷಗಳಿಂದ ನ್ಯೂಸ್ 18 ಕನ್ನಡ ಈ ಹೆಮ್ಮಯ ಕಾರ್ಯಕ್ರಮವನ್ನ ನಡೆಸಿಕೊಂಡು ಬಂದಿದ್ದು, ರಾಜ್ಯದ ಮಹೋನ್ನತ ವ್ಯಕ್ತಿಗಳಿಗೆ, ಅಮೋಘ ಸಾಧಕರಿಗೆ ಪ್ರಶಸ್ತಿಗಳನ್ನ ನೀಡಿ, ಗೌರವಿಸುತ್ತಿದೆ. ಅದೇ ರೀತಿಯಾಗಿ 2023ನೇ ಸಾಲಿನ 'ವರ್ಷದ ಕನ್ನಡಿಗ' ಪ್ರಶಸ್ತಿ ಪ್ರದಾನ ಸಮಾರಂಭವೂ ಅದ್ಧೂರಿಯಾಗಿ ನೆರವೇರಿತ್ತು.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

  ಬೆಂಗಳೂರು: ‘ವರ್ಷದ ಕನ್ನಡಿಗ’ (Varshada Kannadiga) ಇದು ನ್ಯೂಸ್ 18 ಕನ್ನಡ (News18 Kannada) ಸುದ್ದಿ ವಾಹಿನಿ ಕರುನಾಡಿನ ಸಾಧಕರಿಗೆ (achievers of Karnataka) ಕೊಡುವಂತಾ ಪ್ರತಿಷ್ಠಿತ ಪ್ರಶಸ್ತಿ (Award). ಎಲೆಮರೆ ಕಾಯಿಯಂತೆ ಇರುವ ಸಾಧಕರನ್ನ ಗುರ್ತಿಸಿ, ಗೌರವಿಸುವ ಮಹೋನ್ನತ ಕಾರ್ಯಕ್ರಮ ಇದಾಗಿದೆ. ಕಳೆದ 20 ವರ್ಷಗಳಿಂದ ನ್ಯೂಸ್ 18 ಕನ್ನಡ ಈ ಹೆಮ್ಮಯ ಕಾರ್ಯಕ್ರಮವನ್ನ ನಡೆಸಿಕೊಂಡು ಬಂದಿದ್ದು, ರಾಜ್ಯದ ಮಹೋನ್ನತ ವ್ಯಕ್ತಿಗಳಿಗೆ, ಅಮೋಘ ಸಾಧಕರಿಗೆ ಪ್ರಶಸ್ತಿಗಳನ್ನ ನೀಡಿ, ಗೌರವಿಸುತ್ತಿದೆ. ಅದೇ ರೀತಿಯಾಗಿ 2023ನೇ ಸಾಲಿನ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭವೂ ಅದ್ಧೂರಿಯಾಗಿ ನೆರವೇರಿತ್ತು. 22 ಫೆಬ್ರವರಿ 2023ರಂದು ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.


  ನ್ಯೂಸ್ 18 ಕನ್ನಡ ‘ವರ್ಷದ ಕನ್ನಡಿಗ’ ಪ್ರಶಸ್ತಿ


  ನ್ಯೂಸ್ 18 ಕನ್ನಡದ ವರ್ಷದ ಕನ್ನಡಿಗ ಪ್ರಶಸ್ತಿ… ಇದು ಸಾಮಾನ್ಯ ಪ್ರಶಸ್ತಿ ಅಲ್ಲ, ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ, ಕರುನಾಡಿನ ಸಾಧಕರನ್ನು ಸನ್ಮಾನಿಸುವ, ಗೌರವಿಸುವ ಮಹೋನ್ನತ ಕಾರ್ಯಕ್ರಮವಿದು. ನಾಡಿನ ಗಣ್ಯರನ್ನು ಗೌರವಿಸುವ ಮೂಲಕ, ಅವ್ರ ಸಾಧನೆಯನ್ನ ಯುವ ಪೀಳಿಗೆಗೆ ತಲುಪಿಸುವ, ಸ್ಪೂರ್ತಿದಾಯಕ ಕಾರ್ಯಕ್ರಮವೂ ಹೌದು.


  ತೇಜಸ್ವಿನಿ ಅನಂತಕುಮಾರ್


  ಮಹೋನ್ನತ ಪ್ರಶಸ್ತಿಗೆ 20 ವರ್ಷಗಳ ಇತಿಹಾಸ


  ವರ್ಷದ ಕನ್ನಡಿಗ ಪ್ರಶಸ್ತಿಗೆ 20 ವರ್ಷಗಳ ಇತಿಹಾಸವಿದೆ. 2003ರಲ್ಲಿ ಕರುನಾಡಿನ ಮೇರುನಟ, ಡಾಕ್ಟರ್ ರಾಜ್ ಕುಮಾರ್ ಅವ್ರಿಗೆ ಪ್ರಪ್ರಥಮವಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಂತರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಇನ್ಪೋಸಿಸ್ ಸುಧಾಮೂರ್ತಿ ಸೇರಿದಂತೆ ಹಲವಾರು ಗಣ್ಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.


  ಡಾ. ಹರೀಶ್ ಹಂದೆ


  ಇದನ್ನೂ ಓದಿ: Padma Awards: ಪದ್ಮ ಪ್ರಶಸ್ತಿಗಳು ಏಕೆ ಶ್ರೇಷ್ಠ? ಈ ಅವಾರ್ಡ್‌ಗೆ ಸಾಧಕರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?


  ಸಾಧಕರನ್ನು ಆಯ್ಕೆ ಮಾಡಿದ ಗಣ್ಯರ ತಂಡ


  ಕೋಟ್ಯಾನು ಕೋಟಿ ಕನ್ನಡಿಗರಲ್ಲಿ, 8 ಮಂದಿ ಸಾಧಕರನ್ನು ಹೆಕ್ಕಿ ತೆಗೆಯೋದು ನಿಜಕ್ಕೂ ಸಾಹಸದ ಕಾರ್ಯ. ಅಂಥಾ ಕಾರ್ಯವನ್ನ ಈ ಬಾರಿ ಅತ್ಯುತ್ತಮವಾಗಿ ನಿರ್ವಹಿಸಿದ್ದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಅವರ ನೇತೃತ್ವದ ಜ್ಯೂರಿ ತಂಡ. ಇನ್ನು ಡಾ. ಸಿಎನ್ ಮಂಜುನಾಥ್ ಅವರ ಜೊತೆಗೆ ವಿವಿಧ ಕ್ಷೇತ್ರದ ಸಾಧಕರು ಈ ಆಯ್ಕೆ ಸಮಿತಿಯ ಭಾಗವಾಗಿದ್ದರು. ಇಸ್ರೋ ವಿಜ್ಞಾನಿಯಾಗಿದ್ದ, ಕರುನಾಡಿನ ಹೆಮ್ಮೆಯಾಗಿರೋ ಟಿ.ಕೆ. ಅನುರಾಧ, ಕನ್ನಡ ಚಿತ್ರಗಳ ಮೂಲಕ ಕನ್ನಡಿಗರನ್ನು ರಂಜಿಸಿದ ಖ್ಯಾತ ಚಲನಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ, ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ಡಾ. ವಸುಂಧರಾ ಭೂಪತಿ ಆಯ್ಕೆ ಸಮಿತಿಯ ಭಾಗವಾಗಿದ್ದರು.


  ಅಶ್ವಿನಿ ಪೊನ್ನಪ್ಪ


  ಸಮಿತಿಯಲ್ಲಿ ಇನ್ನು ಯಾರ್ಯಾರು ಇದ್ದರು?


  ಇಷ್ಟೇ ಅಲ್ಲ.. ಮೆಡಿಸಿನ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತಿದೊಡ್ಡ ಉದ್ಯಮ ಕಟ್ಟಿದ, ವಿಪ್ರಜೈನ್ ಬಯೋಸೈನ್ಸಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಚೈತ್ರಾ ಹರ್ಷ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕರುನಾಡಿನ ಖ್ಯಾತ ಕ್ರಿಕೆಟಿಗ ದೊಡ್ಡ ಗಣೇಶ್, ನೆಟ್‌ವರ್ಕ್ 18 ಸಂಸ್ಥೆಯ ಗ್ರೂಪ್ ಎಡಿಟೋರಿಯಲ್ ಅಡ್ವೈಸರ್ (ಸೌತ್) ಡಿಪಿ ಸತೀಶ್ ಹಾಗೂ ನ್ಯೂಸ್ 18 ಕನ್ನಡ ವಾಹಿನಿ ಸಂಪಾದಕರಾದ ನಿಖಿಲ್ ಜೋಶಿ ಅವರನ್ನೊಳಗೊಂಡ ಆಯ್ಕೆ ಸಮಿತಿ 2023ನೇ ಸಾಲಿನ ಸಾಧಕರನ್ನು ಹೆಕ್ಕಿ ತೆಗೆಯುವಲ್ಲಿ ಯಶಸ್ವಿಯಾಗಿತ್ತು.


  ಹಿರಿಯ ನಟ ಶ್ರೀನಾಥ್


  ಅಂತಿಮವಾಗಿ 8 ಸಾಧಕರ ಆಯ್ಕೆ


  ಹೀಗೆ ಜ್ಯೂರಿ ತಂಡವು ನೂರಾರು ಸಾಧಕರಲ್ಲಿ 8 ಅಣಿಮುತ್ತುಗಳನ್ನು ಹೆಕ್ಕಿ ತೆಗೆಯುವಲ್ಲಿ ಯಶಸ್ವಿಯಾಗಿತ್ತು. ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಆ 8 ಮಂದಿ ಸಾಧಕರನ್ನು  ಗೌರವಿಸಿದ್ದು ಸಾರ್ಥಕತೆಯ ಕ್ಷಣಗಳಾಗಿದ್ದವು..


  ಗಿರೀಶ್ ಭಾರದ್ವಾಜ್


  ‘ವರ್ಷದ ಕನ್ನಡಿಗ-2023’ ಸಾಧಕರು ಯಾರು?


  ಕ್ರೀಡೆ: ಶ್ರೀಮತಿ ಅಶ್ವಿನಿ ಪೊನ್ನಪ್ಪ, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು.


  ವಿಜ್ಞಾನ ಮತ್ತು ತಂತ್ರಜ್ಞಾನ: ಡಾ. ಪ್ರತಿಮಾ ಮೂರ್ತಿ, ನಿರ್ದೇಶಕರು, NIMHANS ಬೆಂಗಳೂರು


  ವಾಣಿಜ್ಯ: ಡಾ. ಹರೀಶ್ ಹಂದೆ, ಸೆಲ್ಕೋ ಇಂಡಿಯಾ, ಸಹ ಸಂಸ್ಥಾಪಕರು, ಬೆಂಗಳೂರು


  ಸಮಾಜ ಸೇವೆ: ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್, ಸಂಸ್ಥಾಪಕರು ಅದಮ್ಯ ಚೇತನ ಸಂಸ್ಥೆ, ಬೆಂಗಳೂರು


  ಮನರಂಜನೆ: ಶ್ರೀ ರಘು ದೀಕ್ಷಿತ್, ಸಂಗೀತ ನಿರ್ದೇಶಕರು


  ಸಾಹಿತ್ಯ: ಶ್ರೀ ಬೊಳುವಾರು ಮಹಮದ್ ಕುಂಞಿ, ಖ್ಯಾತ ಸಾಹಿತಿ, ಬೆಂಗಳೂರು.


  ಜೀವಮಾನ ಸಾಧನೆ: ಶ್ರೀ ಶ್ರೀನಾಥ್, ಖ್ಯಾತ ಚಲನಚಿತ್ರ ನಟ


  ವರ್ಷದ ಕನ್ನಡಿಗ-2023: ಶ್ರೀ ಗಿರೀಶ್ ಭಾರದ್ವಾಜ್, ತೂಗುಸೇತುವೆಗಳ ಸರದಾರ


  ರಘು ದೀಕ್ಷಿತ್


  ಸಮಾರಂಭದಲ್ಲಿ ಗಣ್ಯಾತಿಗಣ್ಯರು


  ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಕಂದಾಯ ಸಚಿವರಾದ ಆರ್. ಅಶೋಕ್, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಎ. ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಮಾಜಿ ಸಚಿವರಾದ ಯು.ಟಿ. ಖಾದರ್, ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ ಹಾಜರಿದ್ದರು.


  ಬೊಳುವಾರು ಮಹಮದ್ ಕುಂಞಿ


  ಇನ್ನು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು KSDL  ಚೇರ್ಮನ್ ಕೆ. ಮಾಡಾಳು ವಿರೂಪಾಕ್ಷಪ್ಪ, ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಡಾ. ಎಸ್.ಡಿ. ಶರಣಪ್ಪ, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಎಂ.ಎನ್. ಅನುಚೇತ್, ಬೆಂಗಳೂರು ನಗರ ಸಂಚಾರಿ ವಿಭಾಗದ ವಿಶೇಷ ಆಯುಕ್ತರಾದ ಎಡಿಜಿಪಿ ಎಂ.ಎ. ಸಲೀಂ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
  ಸಮಾರಂಭದಲ್ಲಿ ಸಿನಿತಾರೆಯರು


  ಕನ್ನಡ ಚಿತ್ರರಂಗದ ಗಣ್ಯರೂ ಈ ಕಾರ್ಯಕ್ರಮದ ಭಾಗವಾಗಿದ್ದು, ಸಾಧಕರನ್ನು ಸನ್ಮಾನಿಸಿ ಪ್ರಶಂಶನೀಯ ಮಾತುಗಳನ್ನಾಡಿದ್ದರು. ಕನ್ನಡದ ಖ್ಯಾತ ನಟ ಧೃವ ಸರ್ಜಾ, ಕಬ್ಜಾ ಚಿತ್ರದ ನಿರ್ದೇಶಕ ಆರ್.ಚಂದ್ರು, ಪಿ.ಆರ್.ಕೆ. ಪ್ರೊಡಕ್ಷನ್ಸ್‌ನ ನಿರ್ಮಾಪಕರಾದ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ವರ್ಷದ ಕನ್ನಡಿಗ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕರುನಾಡಿನ ಕಣ್ಮಣಿಗಳನ್ನು ಗೌರವಿಸಿದ್ದು ಸ್ಮರಣಾರ್ಹ.

  Published by:Annappa Achari
  First published: