ಮಂತ್ರಾಲಯ: ಕರ್ನಾಟಕದ ಜನಪ್ರಿಯ ವಾಹಿನಿ ನ್ಯೂಸ್ 18 ಕನ್ನಡ (News 18 Kannada) ಹೊಸತನದೊಂದಿಗೆ ಜನರ ಮುಂದೆ ಬಂದಿದೆ. ‘ಹೊಸ ರೂಪ.. ಹೊಸ ಹುರುಪು’ ಎಂಬ ಘೋಷ ವಾಕ್ಯದೊಂದಿಗೆ ವಿನೂತನ ಬದಲಾವಣೆ ಮತ್ತು ವಿಶ್ವಾಸಾರ್ಹ ಪರಂಪರೆಯ ಜೊತೆಗೆ ವಿಶ್ವಾಸಾರ್ಹತೆಗೆ ಹೊಸತನದ ಮುದ್ರೆಯನ್ನು ಒತ್ತಿರುವ ನ್ಯೂಸ್ 18 ಕನ್ನಡ ವಾಹಿನಿಗೆ ನಾಡಿನ ಪ್ರಸಿದ್ಧ ಮಠಗಳ ಮಠಾಧೀಶರು ‘ಶ್ರೀಕಾರ’ ಎಂಬ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು.
ನ್ಯೂಸ್ 18 ಕನ್ನಡ ವಾಹಿನಿಗೆ ಬಂದು ಶುಭ ಹಾರೈಸಿದ ನಾಡಿನ ಪ್ರಸಿದ್ಧ ಮಠಾಧೀಶರಾದ ತೋಟಂದಾರ್ಯ ಮಠದ ತೋಂಟದ ಸಿದ್ದರಾಮ ಶ್ರೀ, ಮಾದಾರ ಗುರು ಪೀಠದ ಮಾದಾರ ಚೆನ್ನಯ್ಯ ಶ್ರೀ ಮತ್ತು ಕೂಡಲಸಂಗಮ ಪಂಚಮಸಾಲಿ ಮಠದ ಬಸವಜಯ ಮೃತ್ಯುಂಜಯ ಶ್ರೀ ದೀಪ ಪ್ರಜ್ವಲಿಸುವ ಮೂಲಕ ಶುಭ ಹಾರೈಸಿದರು.
ಇದನ್ನೂ ಓದಿ: Karnataka Election 2023: ಈ ಬಾರಿ ಬಿಜೆಪಿ 150 ಸ್ಥಾನ ಪಡೆದು ಅಧಿಕಾರಕ್ಕೆ ಬರುತ್ತೆ: ನಳಿನ್ ಕುಮಾರ್ ಕಟೀಲ್
ಬಸವಜಯ ಮೃತ್ಯುಂಜಯ ಶ್ರೀ ನುಡಿ
ಈ ವೇಳೆ ಮಾತನಾಡಿದ, ಬಸವಜಯ ಮೃತ್ಯುಂಜಯ ಶ್ರೀ, ಕರ್ನಾಟಕದ ಇತಿಹಾಸದಲ್ಲಿ ಮಾಧ್ಯಮದ ಪಾತ್ರ ವಿಶಿಷ್ಟವಾದುದು. ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಇತ್ತೀಚಿನ ಸಂದರ್ಭಗಳಲ್ಲಿ, ನ್ಯಾಯಾಂಗದ ಮೇಲೂ ಆತಂಕ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ನಾವು ಇಟ್ಟಿರುವ ಬಹುದೊಡ್ಡ ವಿಶ್ವಾಸಾರ್ಹ ವ್ಯವಸ್ಥೆ ಅದು ಮಾಧ್ಯಮ ವ್ಯವಸ್ಥೆ. ಅಂತಹ ವ್ಯವಸ್ಥೆಗಳ ಪೈಕಿ ಮೌನ ಕ್ರಾಂತಿಯನ್ನು ಮಾಡುತ್ತಿರುವ ನ್ಯೂಸ್ 18 ಕನ್ನಡ ವಾಹಿನಿ ಹೊಸ ಹುರುಪು, ಹುಮ್ಮಸ್ಸಿನೊಂದಿಗೆ ಹೊಸ ಪರಂಪರೆಗೆ ನಾಂದಿ ಹಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ನ್ಯೂಸ್ 18 ವಾಹಿನಿ ಆರಂಭವಾದಾಗಿನಿಂದ ಮನೆ ಮನದ ವಿಶ್ವಾಸ ಗಳಿಸುವಲ್ಲಿ ಸಫಲವಾಗಿದೆ. ನ್ಯೂಸ್ 18 ವಾಹಿನಿಯ ಹೊಸ ಹೆಜ್ಜೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಾಣೆಹಳ್ಳಿ ಶ್ರೀಗಳ ಮೌಲಿಕ ಮಾತು
ತರಳಬಾಳು ಶಾಖಾ ಮಠ ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಕಾರ್ಯಾಂಗ, ರಾಜ್ಯಾಂಗ ವಿಶ್ವಾಸ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮಾಧ್ಯಮದ ಪಾತ್ರ ಬಹಳ ಮಹತ್ತರವಾದುದು. ಮಾಧ್ಯಮಗಳು ಕೂಡ ಒಂದು ರೀತಿ ಮಾಯಾಜಾಲ ಇದ್ದಂತೆ. ಮೌಲ್ಯಗಳನ್ನು ಮರೆತಿರುವಂತಹ ಸಂದರ್ಭದಲ್ಲಿ ಮಾಧ್ಯಮಗಳು ಯಾವಾಗ ಯಾರನ್ನು ಹೇಗೆ ಮೇಲೆತ್ತುತ್ತವೆಯೋ ಅಥವಾ ಕೆಳಗೆ ತುಳಿಯುತ್ತವೆಯೋ ಹೇಳೋಕೆ ಸಾಧ್ಯವಿಲ್ಲ. ಈಗ ನ್ಯೂಸ್ 18 ಕನ್ನಡ ವಾಹಿನಿ ಹೊಸ ರೂಪ, ಹೊಸ ಹುರುಪಿನೊಂದಿಗೆ ಸಾಮಾಜಿಕ ನ್ಯಾಯ, ಮೌಲ್ಯವನ್ನು ಎತ್ತಿಹಿಡಿಯಲಿಕ್ಕೆ ಮುಂದಾಗಿರುವಂತಹದ್ದು ತುಂಬಾ ಸಂತೋಷ ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: Narendra Modi Conversation: ರಾಜ್ಯದ 50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ; ಪಕ್ಷದಲ್ಲಿ ತುಂಬಿದ ಉತ್ಸಾಹ
ಮಂತ್ರಾಲಯ ಶ್ರೀಗಳಿಂದ ಶುಭಾಶಿರ್ವಾದ
ನ್ಯೂಸ್ 18 ಕನ್ನಡದ ವಿನೂತನ ಪ್ರಯೋಗಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳು ಕೂಡ ಶುಭ ಹಾರೈಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಶ್ರೀಗಳು, ನ್ಯೂಸ್ 18 ಕನ್ನಡ ವಾಹಿನಿಯ ವ್ಯವಸ್ಥಾಪಕರಿಗೆ, ವೀಕ್ಷಕರಿಗೆ ರಾಘವೇಂದ್ರ ಸ್ವಾಮಿಗಳವರ ಆಶಿರ್ವಾದಗಳು. ಉತ್ತಮವಾದ ಸಮಾಜ ನಿರ್ಮಾಣದ ಗುರುತರ ಜವಾಬ್ದಾರಿ ಮಾಧ್ಯಮಗಳಿಗಿದೆ. ಅಂತಹ ಮಾದ್ಯಮಗಳಲ್ಲಿ ನ್ಯೂಸ್ 18 ಕೂಡ ಒಂದು. ಈಗಾಗಲೇ ನಾಡಿನಲ್ಲೆಡೆ ನ್ಯೂಸ್ 18 ಜನಮನ್ನಣೆ ಪಡೆದಿದೆ ಎಂದರು.
ಅಲ್ಲದೇ, ಸಂಪಾದಕ ನಿಖಿಲ್ ಜೋಶಿ ನೇತೃತ್ವದಲ್ಲಿ ಈಗಾಗಲೇ ನ್ಯೂಸ್ 18 ವಾಹಿನಿ ಜನಪ್ರಿಯತೆ ಗಳಿಸಿದ್ದರೂ ಕೂಡ, ಈಗ ಅದಕ್ಕೊಂದು ಹೊಸ ಹುರುಪು, ಹೊಸ ವಿಚಾರಧಾರೆ, ಹೊಸ ರೂಪ ಕಲ್ಪನೆಗಳೊಂದಿಗೆ ಜನ ಮಾನಸಕ್ಕೆ ಹರಿಬಿಡುವ ಕೆಲಸಕ್ಕೆ ನಿಖಿಲ್ ಜೋಶಿ ಕೈ ಹಾಕಿದ್ದಾರೆ. ಸಂಪಾದಕ ನಿಖಿಲ್ ಜೋಶಿ, ಹಾಗೂ ಅವರ ಸಂಪೂರ್ಣ ತಂಡಕ್ಕೆ ಶುಭವಾಗಲಿ. ರಾಜ್ಯದಲ್ಲಿ ಇನ್ನಷ್ಟು ಉತ್ತಮವಾದ ಸುದ್ದಿ, ಜನರಿಗೆ ಪೂರಕವಾದ ಕೆಲಸಗಳಾಗಲಿ ಎಂದು ಆಶೀರ್ವಾದ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ