News 18 Kannada Food Festival: ನ್ಯೂಸ್ 18 ಕನ್ನಡ ಆಹಾರ ಮೇಳ: ಬನ್ನಿ, ತಿನ್ನಿ, ಖರೀದಿಸಿ, ಆನಂದಿಸಿ!

ನಿಮಗಿದೋ ತುಂಬು ಹೃದಯದ ಸ್ವಾಗತ-ಸುಸ್ವಾಗತ. ಇಲ್ಲಿದೆ ಆಹ್ವಾನ ಪತ್ರಿಕೆ. ತಪ್ಪದೇ ಸಕುಟುಂಬ ಸಮೇತರಾಗಿ ನ್ಯೂಸ್ 18 ಕನ್ನಡ ಆಹಾರ ಮೇಳಕ್ಕೆ ಬನ್ನಿ!

ನಿಮಗಿದೋ ತುಂಬು ಹೃದಯದ ಆಹ್ವಾನ

ನಿಮಗಿದೋ ತುಂಬು ಹೃದಯದ ಆಹ್ವಾನ

  • Share this:
    ತಿನ್ನಿ! ಖರೀದಿಸಿ! ಆನಂದಿಸಿ! ಸಕಲ ಸಾರ್ವಜನಿಕರಿಗೆ ಎಂದೇ ನ್ಯೂಸ್18 ಕನ್ನಡ "ಆಹಾರ ಮೇಳ" ಆಯೋಜಿಸಿದೆ. ವೈವಿಧ್ಯಮಯ ತಿಂಡಿ ತಿನಿಸು ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ? ಅದರಲ್ಲೂ ಮಕ್ಕಳ ಪರೀಕ್ಷೆ ಮುಗಿದು ಬೇಸಿಗೆ ರಜೆಲಿ (Summer Holidays) ದಿನಕ್ಕೊಂದು ತಿಂಡಿ ತಿನಿಸು ಕಜ್ಜಾಯ ಸವಿಯೋಕೆ ಇಡೀ ಕುಟುಂಬಕ್ಕೆ ಕುಟುಂಬವೇ ಕಾದಿರುತ್ತೆ. ಇಂತಾದ್ರಲ್ಲಿ ಎಲ್ಲಾದರೂ ಬೊಂಬಾಟ್ ತಿಂಡಿ ಸಿಗುತ್ತೆ ಅಂದ್ರೆ ಬಿಡೋದಕ್ಕಾಗುತ್ತಾ? ಇಲ್ಲ ತಾನೆ.. ಹಾಗೆ ಹೋಗಲೇಬೇಕಾದ ಆಹಾರ ಮೇಳವೊಂದು (Food Festival) ಬಂದೇಬಿಟ್ಟಿದೆ.  ಏಪ್ರಿಲ್ 22, ಶುಕ್ರವಾರದಿಂದ 3 ದಿನಗಳ ಕಾಲ ಅಂದ್ರೆ ಶುಕ್ರವಾರ, ಶನಿವಾರ, ಭಾನುವಾರ ಬೆಂಗಳೂರಿನ ಆರ್.ಟಿ ನಗರದ ಹೆಚ್​ಎಂಟಿ ಮೈದಾನದಲ್ಲಿ (Bengaluru RT Nagar HMT Ground) ನ್ಯೂಸ್18 ಕನ್ನಡ "ಆಹಾರ ಮೇಳ" ಆಯೋಜಿಸಿದೆ.

    ಆಹಾರ-ಶಾಪಿಂಗ್-ಮನೋರಂಜನೆ ಈ ಮೂರು ಥೀಮ್ ಇಟ್ಕೊಂಡು ಈ ಆಹಾರ ಮೇಳವನ್ನು ಆಯೋಜಿಸಿದೆ ನ್ಯೂಸ್ 18 ಕನ್ನಡ.  ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ಯಾವಾಗ ಯಾರೂ ಬೇಕಾದ್ರೂ ನ್ಯೂಸ್ 18 ಕನ್ನಡ ಆಯೋಜಿಸಿರುವ ಆಹಾರ ಮೇಳಕ್ಕೆ ತಮ್ಮ ಕುಟುಂಬ, ಗೆಳೆಯರ ಸಮೇತ ಭೇಟಿ ಕೊಡಬಹುದು.  ರುಚಿ ರುಚಿ ತಿಂಡಿ ತಿನಿಸು ಕಜ್ಜಾಯ ಖಾದ್ಯಗಳನ್ನು ಮೆಲ್ಲನೆ ಸವಿಯಬಹುದಾಗಿದೆ.

    ನಿಮಗಿದೋ ತುಂಬು ಹೃದಯದ ಸ್ವಾಗತ-ಸುಸ್ವಾಗತ. ಇಲ್ಲಿದೆ ಆಹ್ವಾನ ಪತ್ರಿಕೆ. ತಪ್ಪದೇ ಸಕುಟುಂಬ ಸಮೇತರಾಗಿ ಬನ್ನಿ!





    ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕೊಡುಗೆ ಸಿಕ್ಕೇ ಸಿಗುತ್ತೆ!
    ನ್ಯೂಸ್ 18 ಕನ್ನಡ ಆಯೋಜಿಸಿರುವ ಮೂರು ದಿನಗಳ ಆಹಾರ ಮೇಳದ ಇನ್ನೊಂದು ವಿಶೇಷ ಅಂದ್ರೆ, ಭಾಗವಹಿಸುವ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕೊಡುಗೆ ಇಲ್ಲಿ ಸಿಕ್ಕೇ ಸಿಗುತ್ತದೆ. ಅಲ್ಲದೇ ಆಹಾರ ಮೇಳದಲ್ಲಿ ವಿವಿಧ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ.

    ವಿಶೇಷ ಸ್ಪರ್ಧೆಗಳಲ್ಲೂ ಭಾಗವಹಿಸಿ
    ಮೂರೂ ದಿನಗಳ ಕಾಲ ನೃತ್ಯ ಸ್ಪರ್ಧೆ, ಮಹಿಳೆಯರಿಗೆ ಅಡುಗೆ ಸ್ಪರ್ಧೆ, ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಹಾಂ! ಈ ಬೇಸಿಗೆ ರಜೆಯ ಮಜಾ ಅನುಭವಿಸಲು ಎಂದೇ ಮಕ್ಕಳಿಗೆ ಸಹ ವಿಶೇಷ ಸ್ಪರ್ಧೆ ಹಮ್ಮಿಕೊಂಡಿದೆ ನ್ಯೂಸ್ 18 ಕನ್ನಡ. ಅದೇನಂದ್ರೆ ಬೆಂಕಿ ಇಲ್ಲದೇ ಅಡುಗೆ ಮಾಡುವ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಗಳನ್ನು ಚಿಣ್ಣರಿಗೆ ಅಂತಲೇ ಏರ್ಪಡಿಸಲಾಗಿದೆ.


    ಇದನ್ನೂ ಓದಿ: Reliance Brands Limited ಜೊತೆ AJSK ಒಪ್ಪಂದ - ಜಾಗತಿಕ ಮಟ್ಟದಲ್ಲಿ ಹೊಸ ಹೆಜ್ಜೆ ಇಟ್ಟ ರಿಲಯನ್ಸ್

    ಮನರಂಜನಾ ಕಾರ್ಯಕ್ರಮಗಳೂ ಇವೆ!
    ಅರೇ! ನಾಲಿಗೆ ರುಚಿಗೆ ಬೇಕಾದಷ್ಟಾಯ್ತು. ಮಜಾ ಮಾಡೋಕೂ ಸ್ಪರ್ಧೆ ಆಯ್ತು. ಮನರಂಜನೆ ಅಂತ ಏನಾದ್ರೂ ಇದ್ರೆ ಒಳ್ಳೇದಿತ್ತು ಅಂತ ಅಂದ್ಕೊಳ್ತಿದ್ದೀರಾ? ಅದೂ ಇದೆ! ಏಪ್ರಿಲ್ 24ರ ಸಂಜೆ 7 ಗಂಟೆಗೆ ವಿಜಯೇಂದ್ರ ಮತ್ತು ತಂಡದವರಿಂದ ಡಾ. ರಾಜ್ ಸಂಗೀತ ಸಂಜೆ ಏರ್ಪಡಿಸಲಾಗಿದೆ. ಇದರ ಜೊತೆಗೆ ನಿಮಗೆ ಬೇಕಾಗಿದ್ದನ್ನೆಲ್ಲವನ್ನೂ ಶಾಪಿಂಗ್ ಕೂಡ ಮಾಡಲು ಅವಕಾಶ ಇದೆ.

    ಇದನ್ನೂ ಓದಿ: ಡಾಟಾ ಸೈನ್ಸ್, Artificial Intelligence, ಡಿಜಿಟಲ್ ಮೀಡಿಯಾ ಕೋರ್ಸ್​ ಓದ್ಬೇಕೇ? ಇಲ್ಲಿ ಅರ್ಜಿ ಹಾಕಿ

    ನ್ಯೂಸ್ 18 ಕನ್ನಡ ಆಹಾರ ಮೇಳಕ್ಕೆ ನೀವೂ ಬನ್ನಿ, ನಿಮ್ಮ ಕುಟುಂಬಸ್ಥರನ್ನು ಮುದ್ಧಾಂ ಮರೆಯದೇ ಕರೆತನ್ನಿ, ಸ್ನೇಹಿತರನ್ನೂ ಕರೆತನ್ನಿ, ನಿಮಗೆ ಇಷ್ಟವಾದ ಖಾದ್ಯಗಳನ್ನ ಸವಿಯಿರಿ... ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ... ಹಾಂ ದಿನಾಂಕ ಮರೆತುಬಿಡಬೇಡಿ, ಮತ್ತೆ ನೆನಪಿಸ್ತಿದ್ದೀವಿ, ಯಾವಾಗ? ಏಪ್ರಿಲ್ 22, ಶುಕ್ರವಾರದಿಂದ 3 ದಿನಗಳ ಕಾಲ ಅಂದ್ರೆ ಶುಕ್ರವಾರ, ಶನಿವಾರ, ಭಾನುವಾರ ಬೆಂಗಳೂರಿನ ಆರ್.ಟಿ ನಗರದ ಹೆಚ್​ಎಂಟಿ ಮೈದಾನದಲ್ಲಿ. ಈಗ್ಲೇ ನೋಟ್ ಮಾಡಿ ಇಟ್ಕೊಂಬಿಡಿ.
    Published by:guruganesh bhat
    First published: