ಹನಿಮೂನ್​ ಕ್ಯಾನ್ಸಲ್ ಮಾಡಿ ಸಮುದ್ರವನ್ನು ಸ್ವಚ್ಛಗೊಳಿಸಲು ಹೊರಟ ನವ ಜೋಡಿ; ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ

ಕಳೆದ 10 ದಿನಗಳಿಂದ ಬೈಂದೂರು ಕಡಲ ತೀರದಲ್ಲಿ ಈ ಜೋಡಿಗಳು ಕೈಗೊಂಡಿರುವ ಕಾರ್ಯ ಇದೀಗ ಬೃಹತ್ ಆಂದೋಲನವಾಗಿ ಮಾರ್ಪಾಡಾಗಿದೆ. ಹಲವು ಸ್ಥಳೀಯರು ಸಹ ಈ ಕೆಲಸಕ್ಕೆ ಕೈಜೋಡಿಸಿದ್ದಾರೆ. ಪರಿಣಾಮ ಈವರೆಗೆ ಇಲ್ಲಿಂದ 800 ಕೆ.ಜಿಗಿಂತ ಹೆಚ್ಚು ತ್ಯಾಜ್ಯಗಳನ್ನು ಹೊರ ತೆಗೆದು ಸಾಗಿಸಲಾಗಿದೆ.

ನವ ದಂಪತಿಗಳು.

ನವ ದಂಪತಿಗಳು.

 • Share this:
  ಹೊಸ ಮದುಮಕ್ಕಳು ಮದುವೆಯ ನಂತರ ಮಧುಚಂದ್ರಕ್ಕೆ ವಿದೇಶಕ್ಕೆ ತೆರಳುವುದು ಸಾಮಾನ್ಯ. ಆದರೆ, ಇಲ್ಲೊಂದು ಕರ್ನಾಟಕದ ಜೋಡಿ ಮದುವೆಯ ನಂತರ ಹನಿಮೂನ್​​ಗೆ ತೆರಳುವ ಬದಲು ಸಮುದ್ರದ ತಟವನ್ನು ಶುಚಿಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.  ಅನುದೀಪ್​ ಹೆಗಡೆ ಮತ್ತು ಮಿನುಶಾ ಕಾಂಚನ್​ ದಂಪತಿಗಳು ತಮ್ಮ ಈ ವಿಚಾರವನ್ನು ಇನ್ಸ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಸುದ್ದಿಯ ಕೇಂದ್ರದಲ್ಲಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕರ್ನಾಟಕದ ಬೈಂದೂರು ಮೂಲದ ಅನುದೀಪ್ ಹೆಗ್ಡೆ ಡಿಜಿಟಲ್ ಮಾರ್ಕೆಟಿಂಗ್​ ವಿಭಾದ ಉದ್ಯೋಗಿಯಾಗಿದ್ದು, ಪ್ರಕೃತಿ ಸಂರಕ್ಷಣೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದವರಾಗಿದ್ದು, ಮದುವೆಯ ನಂತರ ಮಧುಚಂದ್ರಕ್ಕೆ ತೆರಳದೆ ಅನುದೀಪ್​ ಹಾಗೂ ಮಿನುಶಾ ಕಾಂಚನ್​ ಕರ್ನಾಟಕ ಕರಾವಳಿ ಭಾಗದ ಸೋಮೇಶ್ವರ ಬೀಚ್​ಗೆ ಆಗಮಿಸಿದ್ದಾರೆ. ಅಲ್ಲದೆ, ಇಡೀ ಬೀಚ್​ ಅನ್ನು ಶುದ್ಧಿಮಾಡಲು ಮುಂದಾಗಿದ್ದಾರೆ.

  ಸೋಮೇಶ್ವರ ಕಡಲ ತೀರವು ಇದೀಗ ಕಸದ ರಾಶಿಯಾಗಿ ಮಾರ್ಪಟ್ಟಿದೆ. ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳಿಂದಲೇ ತುಂಬಿ ಹೋಗಿದೆ. ಈ ದೃಶ್ಯವನ್ನು ಕಂಡು ದಿಗ್ಭ್ರಮೆಗೊಂಡ ಅನುದೀಪ್ ಮತ್ತು ಮಿನುಶಾ ಕಾಂಚನ್​ ಜೋಡಿ ತಮ್ಮ ಮಧುಚಂದ್ರದ ಯೋಜನೆಯನ್ನೇ ಕೈಬಿಟ್ಟು, ಈ ಕಡಲ ತೀರವನ್ನು ಶುದ್ಧಿಗೊಳಿಸಲು ಮುಂದಾಗಿದ್ದಾರೆ.
  ಕಳೆದ 10 ದಿನಗಳಿಂದ ಬೈಂದೂರು ಕಡಲ ತೀರದಲ್ಲಿ ಈ ಜೋಡಿಗಳು ಕೈಗೊಂಡಿರುವ ಕಾರ್ಯ ಇದೀಗ ಬೃಹತ್ ಆಂದೋಲನವಾಗಿ ಮಾರ್ಪಾಡಾಗಿದೆ. ಹಲವು ಸ್ಥಳೀಯರು ಸಹ ಈ ಕೆಲಸಕ್ಕೆ ಕೈಜೋಡಿಸಿದ್ದಾರೆ. ಪರಿಣಾಮ ಈವರೆಗೆ ಇಲ್ಲಿಂದ 800 ಕೆ.ಜಿಗಿಂತ ಹೆಚ್ಚು ತ್ಯಾಜ್ಯಗಳನ್ನು ಹೊರ ತೆಗೆದು ಸಾಗಿಸಲಾಗಿದೆ. ಇದು ಸವಾಲಿನ ಕೆಲಸವಾಗಿತ್ತು ಎಂದು ಈ ಜೋಡಿ ತಮ್ಮ ಇನ್ಸ್​ಸ್ಟಾಗ್ರಾಂನಲ್ಲಿ ದಾಖಲಿಸಿಕೊಂಡಿದ್ದು, ಈ ಫೊಸ್ಟ್ ಇದೀಗ ವೈರಲ್​ ಆಗುತ್ತಿದೆ. ಅಲ್ಲದೆ, ಇವರ ಕಾರ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
  ಸ್ವಚ್ಚ ಪರಿಸರವನ್ನು ಕಾಯ್ದುಕೊಳ್ಳುವ ಕುರಿತು ಜನರಲ್ಲಿ ಮನವಿ ಮಾಡಿರುವ ಅನುದೀಪ್ ಮತ್ತು ಮಿನುಶಾ ಜೋಡಿ, "ಜನರು ಸಾಧ್ಯವಾದಷ್ಟು ತಮ್ಮ ಸುತ್ತಲಿನ ಪ್ರಕೃತಿಯನ್ನು ಶುದ್ಧವಾಗಿಟ್ಟುಕೊಳ್ಳಬೇಕು, ಮಾಲಿನ್ಯವನ್ನು ತಡೆಗಟ್ಟಬೇಕು ಮತ್ತು ಜನರಿಗೆ ಈ ಕುರಿತು ಅರಿವು ಮೂಡಿಸಬೇಕು" ಎಂದು ಒತ್ತಾಯಿಸಿದ್ದಾರೆ.
  Published by:MAshok Kumar
  First published: