ತುಮಕೂರು: ಕೌಟುಂಬಿಕ (Family) ಕಲಹಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು (Tumakuru) ನಗರದ ಹನುಮಂತಪುರ 4ನೇ ಕ್ರಾಸ್ ನಲ್ಲಿ ನಡೆದಿದ್ದು, ಮೋನಿಕಾ (21) ಮೃತ ದುರ್ದೈವಿಯಾಗಿದ್ದಾರೆ. ಗುಬ್ಬಿ (Gubbi) ತಾಲೂಕಿನ ಮದನಘಟ್ಟ ಗ್ರಾಮದ ನಿವಾಸಿಯಾಗಿದ್ದ ಮೊನಿಕಾ, ಕಳೆದ ಮೂರು ವರ್ಷಗಳ ಹಿಂದೆ ತುಮಕೂರು ಮೂಲದ ಯುವಕ ಅಭಿರಾಮ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು (Love Marriage). ಇಬ್ಬರದ್ದು ಅಂತರ್ಜಾತಿ ವಿವಾಹವಾಗಿತ್ತು (Intercaste Marriage ). ಮದುವೆಯ ಬಳಿಕ ಗಂಡನ (Husband) ಜೊತೆ ಹನುಮಂತಪುರದ 4ನೇ ಕ್ರಾಸ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ತುಮಕೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ಮೋನಿಕಾ, ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಡರಾತ್ರಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಗಂಡನ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೊನಿಕಾ ಪೋಷಕರು ಆರೋಪ ಮಾಡಿದ್ದಾರೆ.
ಸ್ಥಳಕ್ಕೆ ತುಮಕೂರು ನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮೋನಿಕಾ ಗಂಡ ಅಭಿರಾಮ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
ಪೆಟ್ರೋಲ್ ಕಳ್ಳರಿದ್ದಾರೆ ಎಚ್ಚರ..!
ಬೆಂಗಳೂರಿನಲ್ಲಿ (Bengaluru) ರಾತ್ರಿಯಾದರೆ ಸಾಕು ಪೆಟ್ರೋಲ್ ಕಳ್ಳರ (Petrol THeft) ಹಾವಳಿ ಶುರುವಾಗುತ್ತೆ. ಹೌದು, ಮನೆ ಮುಂದೆ ನಿಲ್ಲಿಸಿರುವ ದ್ವಿಚಕ್ರ ವಾಹನದಿಂದ (Two Wheeler) ಪೆಟ್ರೋಲ್ ಕದಿಯಲಾಗುತ್ತೆ. ಕಾಟನ್ ಪೇಟೆಯಲ್ಲಿ (Cottonpete) ಮನೆ ಮುಂದೆ ನಿಲ್ಲಿಸಿದ ವಾಹನಗಳಿಂದ ಪೆಟ್ರೋಲ್ ಕದಿಯಲಾಗಿದೆ. ನಾಲ್ಕೈದು ಖಾಲಿ ಬಾಟಲ್ಗಳನ್ನ ತೆಗೆದುಕೊಂಡು ಬಂದು ಪೆಟ್ರೋಲ್ ಕದಿಯುತ್ತಿದ್ದವನನ್ನು ಹಿಡಿಯಲು ಯತ್ನಿಸಲಾಗಿದೆ. ಆದರೆ ಕಳ್ಳ ಎಸ್ಕೇಪ್ ಆಗಿದ್ದಾನೆ.
ಬೆಂಗಳೂರಿನಲ್ಲಿ ಮತ್ತೆ ವೀಲ್ಹಿಂಗ್ ಪುಂಡರ ಹಾವಳಿ ಶುರುವಾಗಿದೆ. ಮಹಾಲಕ್ಷ್ಮಿ ಲೇಔಟ್ ಪಾರ್ಕ್ ಬಳಿ ಪುಂಡರು ವ್ಹೀಲಿಂಗ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲೇ ವ್ಹೀಲಿಂಗ್ ಮಾಡೋ ವಿಡಿಯೋವನ್ನು ಟ್ಯಾಗ್ ಮಾಡಿ, ಸ್ಥಳೀಯರು ದೂರು ನೀಡಿದ್ದಾರೆ.
ಏರ್ಪೋರ್ಟ್ನಲ್ಲಿ ಅಗ್ನಿಅವಘಡ
ಹುಬ್ಬಳ್ಳಿ ವಿಮಾನ ನಿಲ್ದಾಣದ (Hubballi Airport) ಆವರಣದಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ಭಾರಿ ಪ್ರಮಾಣದ ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ನಿನ್ನೆಯಷ್ಟೇ ಸಾರಿಗೆ ಇಲಾಖೆ ಪ್ರಾದೇಶಿಕ ಕಾರ್ಯಾಗಾರದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು.
ಇತ್ತ ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬಿನ ಗದ್ದೆ ಹೊತ್ತಿ ಉರಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಳವಳ್ಳಿ ತಾಲೂಕಿನ ಹಲಗೂರಿನ ಚಂದ್ರಪ್ಪ ಎನ್ನುವವರ ಜಮೀನಿಗೆ ಬೆಂಕಿ ಬಿದ್ದಿದ್ದು, ಎರಡು ಎಕರೆ ಕಬ್ಬು ಭಾಗಶಃ ನಾಶವಾಗಿದೆ. ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಬೆಂಕಿ ನಂದಿಸುವಷ್ಟರಲ್ಲಿ ಒಂದೂವರೆ ಲಕ್ಷದಷ್ಟು ಬೆಳೆ ಹಾನಿಯಾಗಿದೆ. ಕೈಗೆ ಬಂದಿದ್ದ ಬೆಳೆಯನ್ನು ಕಳೆದುಕೊಂಡ ರೈತ ತೋಟವನ್ನು ನೋಡಿ ಕಣ್ಣೀರಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ