ಮಗು ಹೆತ್ತ ಬಾಣಂತಿಗೂ ಕೊರೋನಾ; ನವಜಾತ ಶಿಶುವನ್ನು ನೋಡಲು ಬರಲಿಲ್ಲ ಕುಟುಂಬ!

ಕಳೆದ ಮೂರು ದಿನಗಳ ಹಿಂದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ  23 ವರ್ಷದ ಗರ್ಭಿಣಿ ಮಹಿಳೆ ಗದಗ ಜಿಮ್ಸ್ ಆಸ್ಪತ್ರೆ ಬಂದು ದಾಖಲಾಗಿದ್ದಳು. ಆದರೆ ಅವಳಿಗೆ ಮೊನ್ನೆ ಕೊರೋನಾ ಸೋಂಕು ತಗಲಿರುವದು ದೃಢಪಟ್ಟಿತ್ತು .

news18-kannada
Updated:July 6, 2020, 9:48 AM IST
ಮಗು ಹೆತ್ತ ಬಾಣಂತಿಗೂ ಕೊರೋನಾ; ನವಜಾತ ಶಿಶುವನ್ನು ನೋಡಲು ಬರಲಿಲ್ಲ ಕುಟುಂಬ!
ನವಜಾತ ಶಿಶು
  • Share this:
ಗದಗ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಕೊರೋನಾ ಪಾಸಿಟಿವ್ ಬಾಣಂತಿ ಮಹಿಳೆಗೆ ಹೆರಿಗೆಯಾಗಿದೆ. ಆದರೆ, ಮಗುವಿಗೆ ಉಸಿರಾಟದ ತೊಂದರೆ ಇರುವುದರಿಂದ ತೀವ್ರ ನಿಘಾ ಘಟಕದಲ್ಲಿ ಮಗುವನ್ನು ಉಪಚಾರ ಮಾಡಲಾಗುತ್ತಿದೆ. ಹೀಗಾಗಿ, ಮಗುವನ್ನು ಹೆತ್ತರೂ ಅದನ್ನು ನೋಡಲಾಗದ ಸ್ಥಿತಿಯಲ್ಲಿ ತಾಯಿ ಇದ್ದಾರೆ.

ಸದ್ಯ, ಮಗುವಿಗೆ ತಾಯಿಯ ಎದೆ ಹಾಲನ್ನು ಬಾಟಲಿಯಲ್ಲಿ ತೆಗೆದುಕೊಂಡು ಮಗುವಿಗೆ ಉಣಿಸಲಾಗುತ್ತಿದೆ. ಇನ್ನು, ಬಾಣಂತಿಯ ತಂದೆ ಹಾಗೂ ಬಂಧು ಬಳಗ ಇವರನ್ನು ನೋಡಲು ಬಂದಿಲ್ಲ. ಹೀಗಾಗಿ ಎಲ್ಲರೂ ಇದ್ದರೂ ನವಜಾತ ಶಿಶು ಹಾಗೂ ಬಾಣಂತಿ ಅನಾಥರಾಗಿದ್ದಾರೆ. ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳೇ ತಾಯಿ ಹಾಗೂ ಮಗುವನ್ನು ಉಪಚಾರ ಮಾಡುತ್ತಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ  23 ವರ್ಷದ ಗರ್ಭಿಣಿ ಮಹಿಳೆ ಗದಗ ಜಿಮ್ಸ್ ಆಸ್ಪತ್ರೆ ಬಂದು ದಾಖಲಾಗಿದ್ದಳು. ಆದರೆ ಅವಳಿಗೆ ಮೊನ್ನೆ ಕೊರೋನಾ ಸೋಂಕು ತಗಲಿರುವದು ದೃಢಪಟ್ಟಿತ್ತು . ನಿನ್ನೆ ಮುಂಜಾನೆ ಹೆರಿಗೆ ನೋವು ಕಂಡು ಬಂದಿರೋದರಿಂದ ಅವಳಿಗೆ ಸೀಜರಿನ್ ಮಾಡುವ ಮೂಲಕ ಹೆರಿಗೆ ಮಾಡಿಸಿಕೊಳ್ಳಲಾಗಿದೆ.

ಇದೇ ಮೊದಲ ಭಾರಿಗೆ ಕೊರೊನಾ ಸೋಂಕಿತ ತುಂಬ ಗರ್ಭಿಣಿ ಮಹಿಳೆಗೆ ಗದಗ ಜಿಮ್ಸ್ ವೈದ್ಯರಾದ ಡಾ: ಶಿವನಗೌಡ, ಡಾ: ಶೃತಿ ಬಾವಿ, ಡಾ: ಅಜಯ ಬಸರೀಗಿಡದ ನೇತೃತ್ವದಲ್ಲಿ ಹೆರಿಗೆ ಮಾಡಿಸಲಾಗಿದೆ. ನವಜಾತ ಶಿಶು 2.7 ಕಿ‌ ಜಿ ತೂಕ ಇದ್ದು, ಶಿಶುವಿಗೆ ಉಸಿರಾಟದ ತೊಂದರೆ ಕಂಡು ಬಂದಿರೋದರಿಂದ ಕೋವಿಡ್-19 ಟೆಸ್ಟ್ ಒಳಪಡೆಸಲಾಗಿದ್ದು, ವರದಿ ಬರುವುದು ಬಾಕಿ ಇದೆ.

ಇದನ್ನೂ ಓದಿ: ಕಂಪೆನಿ ದುಡ್ಡಲ್ಲಿ ಲಾಕ್​ಡೌನ್ ಸಮಯ ಕಳೆದ ಉದ್ಯೋಗಿಯ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಹಾಕಿದ ಮ್ಯಾನೇಜರ್

ತಾನೇ ಹೆತ್ತ ಮಗುವನ್ನು ಕೈಯಾರೆ ಎತ್ತಿಕೊಂಡು  ಎದೆ ಹಾಲು ಉಣಿಸದ ಸ್ಥಿತಿಯಲ್ಲಿ ಹೆತ್ತಮ್ಮ. ಬಂಧು ಬಳಗ ಇದ್ರು ಬಾಣಂತಿ ಅನಾಥಳಾಗಿದ್ದಾಳೆ. ಈಕೆಯ ಸ್ಥಿತಿ ನೋಡಿ ಕುಟುಂಬದವರು ಮರುಗಿದ್ದಾರೆ.
Published by: Rajesh Duggumane
First published: July 6, 2020, 9:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading