• Home
  • »
  • News
  • »
  • state
  • »
  • New Year Celebration: ಗಾಂಜಾ ವ್ಯಸನಿಗಳಿಗೆ ಲಾಠಿ ರುಚಿ, ಯುವತಿಯ ಜಡೆ ಎಳೆದ ಪುಂಡ

New Year Celebration: ಗಾಂಜಾ ವ್ಯಸನಿಗಳಿಗೆ ಲಾಠಿ ರುಚಿ, ಯುವತಿಯ ಜಡೆ ಎಳೆದ ಪುಂಡ

ಹೊಸ ವರ್ಷದ ಆಚರಣೆ

ಹೊಸ ವರ್ಷದ ಆಚರಣೆ

ಬ್ರಿಗೇಡ್ ರೋಡ್​ನಲ್ಲಿ ಕೆಲವರು ಗಾಂಜಾ ಸೇವನೆ ಮಾಡಿ, ಅದೇ ಮತ್ತಿನಲ್ಲಿ ಜನರೊಂದಿಗೆ ಗಲಾಟೆ ಮಾಡಿಕೊಂಡಿದ್ದರು.  ಕಬ್ಬನ್ ಪಾರ್ಕ್​ ಪೊಲೀಸರು ಗಾಂಜಾ ವ್ಯಸನಿಗಳಿಗೆ ಲಾಠಿ ಏಟು ನೀಡಿ ವಶಕ್ಕೆ ಪಡೆದುಕೊಂಡಿದ್ದಾರೆ.

  • Share this:

New Year Celebration: ಬೆಂಗಳೂರಿನಲ್ಲಿ (Bengaluru) ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ. ಸಣ್ಣ ಪುಟ್ಟ ಗಲಾಟೆ ಹೊರತುಪಡಿಸಿದ್ರೆ ರಾಜಧಾನಿಯಲ್ಲಿ ಪೊಲೀಸ್(Bengaluru Police) ಕಣ್ಗಾವಲಿನಲ್ಲಿಯೇ ಹೊಸ ವರ್ಷ ಆಚರಣೆ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಲಕ್ಷಾಂತರ ಜನರು ಸೇರಿದ್ದರಿಂದ ರಾತ್ರಿ ಮನೆಗಳಿಗೆ ತೆರಳಲು ಪರದಾಡುವಂತಾಯ್ತು. ಬ್ರಿಗೇಡ್ ರೋಡ್ (Brigade Road), ಎಂಜಿ ರೋಡ್ (MG Road), ಚರ್ಚ್ ಸ್ಟ್ರೀಟ್ (Church Street) ಸೇರಿದಂತೆ ಹಲವು ರಸ್ತೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿತ್ತು. 12 ಗಂಟೆ ಆಗುತ್ತಿದ್ದಂತೆ ಪೊಲೀಸರು ಜನರನ್ನು ಕಳುಹಿಸಲು ಮುಂದಾದರು. ಬೆಂಗಳೂರಿನ ಚರ್ಚ್ ಸ್ಟ್ರೀಟ್​ನಲ್ಲಿ ದುಷ್ಕರ್ಮಿಯೋರ್ವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಬಗ್ಗೆ ವರದಿಯಾಗಿದೆ. ಇದರಿಂದ ಯುವತಿ ಜೊತೆಯಲ್ಲಿದ್ದ ಆಕೆಯ ಗೆಳೆಯ ಕೋಪಗೊಂಡು ಜಗಳ ಮಾಡಿದ್ದಾನೆ. ನಂತರ ದುಷ್ಕರ್ಮಿ ಪರಾರಿಯಾಗಿದ್ದಾನೆ.


ಬ್ರಿಗೇಡ್ ರೋಡ್​ನಲ್ಲಿ ಕೆಲವರು ಗಾಂಜಾ ಸೇವನೆ ಮಾಡಿ, ಅದೇ ಮತ್ತಿನಲ್ಲಿ ಜನರೊಂದಿಗೆ ಗಲಾಟೆ ಮಾಡಿಕೊಂಡಿದ್ದರು.  ಕಬ್ಬನ್ ಪಾರ್ಕ್​ ಪೊಲೀಸರು ಗಾಂಜಾ ವ್ಯಸನಿಗಳಿಗೆ ಲಾಠಿ ಏಟು ನೀಡಿ ವಶಕ್ಕೆ ಪಡೆದುಕೊಂಡಿದ್ದಾರೆ.


ಮದ್ಯದಂಗಡಿ ಮುಂದೆ ಹುಚ್ಚಾಟ


ಕಬ್ಬನ್ ಪಾರ್ಕ್​ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಟಾನಿಕ್ ಮದ್ಯದಂಗಡಿ ಮುಂದೆ ಸೇರಿದ ಯುವಕ-ಯುವತಿಯರು ಎಣ್ಣೆ ಬೇಕೆಂದು ಕೂಗಿ ಗಲಾಟೆ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು. ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಬಾಟಲ್ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.


new year celebration in bengaluru mrq
ಹೊಸ ವರ್ಷದ ಆಚರಣೆ


ಟ್ರಾಫಿಕ್​ನಲ್ಲಿ ಸಿಲುಕಿದ ಅಂಬುಲೆನ್ಸ್​


ಕೋರಮಂಗಲದ ರಸ್ತೆಯಲ್ಲಿ ದುಷ್ಕರ್ಮಿಯೋರ್ವ ಯುವತಿಯ ಜಡೆ ಎಳೆದು ಮಿಂಚಿನಂತೆ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ಜನರು ಸಿಲುಕಿದ್ದರಿಂದ ಅಂಬುಲೆನ್ಸ್​ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿತ್ತು.


ಇದನ್ನೂ ಓದಿ:  Bengaluru: ಕೊಟ್ಟ ಮಾತಿನಂತೆ ನಡೆದ KSRTC ನಿಗಮ; ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಕೋಟಿ ರೂಪಾಯಿ ನೆರವು


ಕಂಠಪೂರ್ತಿ ಕುಡಿದ ಯುವತಿಯೋರ್ವಳನ್ನು ಪೊಲೀಸರು ರಕ್ಷಣೆ ಮಾಡಿದ ಘಟನೆಯೂ ಸಹ ನಡೆದಿದೆ.

Published by:Mahmadrafik K
First published: