HOME » NEWS » State » NEW YEAR CELEBRATION DONE AS POLICE PLAN IN BENGALURU RHHSN KMTV

ರಾಜಧಾನಿಯಲ್ಲಿ ಪೊಲೀಸರ ಫ್ಲಾನ್​ನಂತೆ ನಡೆಯಿತು ನ್ಯೂ ಇಯರ್ ಸೆಲೆಬ್ರೆಷನ್!

ಕಳೆದ ರಾತ್ರಿ ಸಂಚಾರಿ ಪ್ರಕರಣಗಳು ಸಹ ದಾಖಲಾಗಿಲ್ಲ. ಪೊಲೀಸರು ಎಲ್ಲೆಡೆ ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿ ಬಿಗಿ ಕ್ರಮಗಳನ್ನ ಕೈಗೊಂಡು ವಾಹನಗಳ ತಪಾಸಣೆ ನಡೆಸಿದ್ದರು. ನಗರದಾದ್ಯಂತ ಸುಮಾರು 5000 ಪೊಲೀಸರು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು.

news18-kannada
Updated:January 1, 2021, 6:17 PM IST
ರಾಜಧಾನಿಯಲ್ಲಿ ಪೊಲೀಸರ ಫ್ಲಾನ್​ನಂತೆ ನಡೆಯಿತು ನ್ಯೂ ಇಯರ್ ಸೆಲೆಬ್ರೆಷನ್!
ಎಂ.ಜಿ.ರಸ್ತೆ (ಕಳೆದ ವರ್ಷದ ಸಂಭ್ರಮಾಚರಣೆಯ ದೃಶ್ಯ)
  • Share this:
ಬೆಂಗಳೂರು; ಒಂದೆಡೆ ರೂಪಾಂತರ ಕೊರೋನಾ ಆತಂಕ, ಇನ್ನೊಂದೆಡೆ ಹೊಸ ವರ್ಷದ ಆಗಮನ. ಹೊಸ ವರ್ಷದ ಸಂಭ್ರಮದ ಭೀತಿಯಲ್ಲಿದ್ದ ಪೊಲೀಸರಿಗೆ ಕಡೆಗೂ ಕೈ ಹಿಡಿದಿದ್ದು ಅವರ ಕಟ್ಟುನಿಟ್ಟಿನ ಕ್ರಮಗಳು. ಎಲ್ಲ ಅಂದುಕೊಂಡಂತೆ ಆಯ್ತು ಅಂತ ನ್ಯೂ ಇಯರ್ ಖುಷಿಯಲ್ಲಿ ಇದ್ದಾರೆ ಖಾಕಿ ಪಡೆ. ಕಡೆಗೂ ಈ ಬಾರಿ ಹೊಸ ವರ್ಷದ ಸಂಭ್ರಮ ಪೊಲೀಸರ ಫ್ಲಾನ್ ನಂತೆ ಮುಗಿದಿದೆ‌. ರೂಪಾಂತರ ಕೊರೋನಾ ಹಾವಳಿಯಿಂದ ಭೀತಿಗೊಂಡಿದ್ದ ಸರ್ಕಾರ ಮತ್ತು ಪೊಲೀಸರು ಹೊಸ ವರ್ಷಕ್ಕೆ ಟೈಟ್ ರೂಲ್ಸ್ ಜಾರಿಗೊಳಿಸಿದ್ದರು‌. ನ್ಯೂ ಇಯರ್ ಸೆಲೆಬ್ರೆಷನ್ ಹೆಸರಲ್ಲಿ ಸಾರ್ವಜನಿಕರಾಗಲಿ ಇತರೆ ಯಾರೆ ಆಗಲಿ ರಸ್ತೆಗೆ ಬಂದರೆ ದಂಡಂ ದಶಗುಣಂ ಕಟ್ಟಿಟ್ಟ ಬುತ್ತಿ ಅಂತ ಖಡಕ್ ಸಂದೇಶ ರವಾನಿಸಿದ್ದರು.

ಪೊಲೀಸರ ಈ ಪ್ರಯತ್ನಕ್ಕೆ ರಾತ್ರಿ ಫಲ ಸಿಕ್ಕಿದೆ‌. ಸಿಲಿಕಾನ್ ಸಿಟಿಯ ನ್ಯೂ ಇಯರ್  ಆಕರ್ಷಣೆಯ ಕೇಂದ್ರಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಮತ್ತು ಕೋರಮಂಗಲದಲ್ಲಿ ಸಾರ್ವಜನಿಕರು ಅಷ್ಟಾಗಿ ರಸ್ತೆಗೆ ಬರಲು ಹಿಂದೇಟು ಹಾಕಿದ್ದರು. ರಸ್ತೆಗಳು, ಓಪನ್ ಪ್ಲೇಸ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನ್ಯೂ ಆಚರಿಸುವಂತಿಲ್ಲ ಎಂದು ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ ಪರಿಣಾಮ ಜನ ರಸ್ತೆಗೆ ಬರಲು ಹಿಂದು ಮುಂದು ನೋಡಿದರು. ಅಲ್ಲದೇ ನಿನ್ನೆ ಮಧ್ಯಾಹ್ನದಿಂದಲೇ 144 ಸೆಕ್ಷನ್ ಜಾರಿಯಾಗಿದ್ದು ಸಾರ್ವಜನಿಕರು ಗುಂಪುಗೂಡುವುದು, ಸಂಭ್ರಮಾಚರಣೆ ಮಾಡುವುದು ನಿಷೇಧಿಸಲಾಗಿತ್ತು. ಇದರಿಂದ ಜನ ಗಲಿಬಿಲಿಗೊಂಡು ನ್ಯೂ ಇಯರ್ ಸೆಲೆಬ್ರೆಷನ್​ಗೆ ರಸ್ತೆಗಳಿಗೆ ಬರಲಿಲ್ಲ ಎನ್ನಲಾಗಿದೆ. ಇನ್ನೂ ಹೊಸ ವರ್ಷದ ಬಂದೋಬಸ್ತ್ ಮತ್ತು ಜನರ ಸಹಕಾರಕ್ಕೆ ಕಮೀಷನರ್ ಕಮಲ್ ಪಂತ್ ಹರ್ಷ ವ್ಯಕ್ತಪಡಿಸಿದರು. ಕೋವಿಡ್ ನಿಯಮಗಳ ಉಲ್ಲಂಘನೆ ಇಲ್ಲದೆ ಹೊಸ ವರ್ಷದ ಸಂಭ್ರಮ ಮುಗಿದಿದೆ ಎಂದು ನಗರದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದರು.

ಇದನ್ನು ಓದಿ: ಜಿಎಸ್​ಟಿ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣ ತೆರಿಗೆ ಸಂಗ್ರಹ

ಇನ್ನೂ ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಗಳಲ್ಲಿಯೂ ಸಹ ಕಡಿಮೆ ಜನ ಸೇರಿದ್ದು, ಇದೇ ಮೊದಲ ಬಾರಿಗೆ ನ್ಯೂ ಇಯರ್ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎನ್ನಲಾಗಿದೆ. ಟ್ರಾಫಿಕ್ ಪೊಲೀಸರು ಕೆಲವು ರಸ್ತೆಗಳನ್ನು ಬಂದ್ ಮಾಡಿ, ಮೇಲ್ಸೇತುವೆಗಳನ್ನು ಬಂದ್ ಮಾಡಿದ್ದರು. ಇದರಿಂದ ರಾತ್ರಿ ಯಾವುದೇ ಅಹಿತಕರ ಘಟನೆಗಳು ಇಲ್ಲದೆ ನ್ಯೂ ಇಯರ್ ಸೆಲೆಬ್ರೆಷನ್ ಮುಗಿದಿದ್ದು ನಗರ ಪೊಲೀಸರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹೊಸ ವರ್ಷದ ಸಂಭ್ರಮ ಹಂಚಿಕೊಳ್ಳುವ ಸಲುವಾಗಿ ಕಮೀಷನರ್ ಅವರ ನಿವಾಸದಲ್ಲಿ ಎಲ್ಲಾ ಡಿಸಿಪಿ, ಎಸಿಪಿ ಮತ್ತು ಇನ್ಸ್‌ಪೆಕ್ಟರ್ ಗಳು ಕಮಲ್ ಪಂತ್ ಅವರಿಗೆ ಶುಭ ಕೋರಿದರು.
Youtube Video

ಇನ್ನೂ ಕಳೆದ ರಾತ್ರಿ ಸಂಚಾರಿ ಪ್ರಕರಣಗಳು ಸಹ ದಾಖಲಾಗಿಲ್ಲ. ಪೊಲೀಸರು ಎಲ್ಲೆಡೆ ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿ ಬಿಗಿ ಕ್ರಮಗಳನ್ನ ಕೈಗೊಂಡು ವಾಹನಗಳ ತಪಾಸಣೆ ನಡೆಸಿದ್ದರು. ನಗರದಾದ್ಯಂತ ಸುಮಾರು 5000 ಪೊಲೀಸರು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು.
Published by: HR Ramesh
First published: January 1, 2021, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories