New Year 2021: ಬೆಂಗಳೂರಿಗರೇ ಎಚ್ಚರ!; ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡಿದರೆ ಜೈಲೂಟ ಖಚಿತ

Happy New Year 2021: ಡಿ. 20ರಿಂದ ಜ. 2ರವರೆಗೆ ಹೊಸ ವರ್ಷಾಚರಣೆ ಮಾಡದಂತೆ ಕರ್ನಾಟಕ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗುವುದು. ಸರ್ಕಾರದ ಆದೇಶ ಉಲ್ಲಂಘಿಸಿ, ಸಾರ್ವಜನಿಕವಾ ನ್ಗಿಯೂ ಇಯರ್ ಆಚರಿಸುತ್ತೇನೆಂದು ಬಂದರೆ ಅವರನ್ನು ಬಂಧಿಸಲಾಗುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಡಿ. 11): ಪ್ರತಿ ವರ್ಷ ಹೊಸ ವರ್ಷದ ದಿನದಂದು ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಗಿಜಿಗುಡುತ್ತಿರುತ್ತವೆ. ನಗರದ ಯುವಪೀಳಿಗೆ ಎಂಜಿ ರಸ್ತೆಯ ಸುತ್ತಮುತ್ತ ಬೀಡು ಬಿಟ್ಟಿರುತ್ತದೆ. ಆದರೆ, ಈ ವರ್ಷ ಅದಕ್ಕೆ ಅವಕಾಶ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಹೊಸ ವರ್ಷಾಚರಣೆಗೆ ಎಂಜಿ ರಸ್ತೆ ಕಡೆಗೆ ಹೋಗುವ ಪ್ಲಾನ್​ ಇದ್ದರೆ ಅಂತಹ ಪ್ರಯತ್ನ ಮಾಡಬೇಡಿ. ಹೊಸ ವರ್ಷಾಚರಣೆಗೆ ಎಂಜಿ ರಸ್ತೆ, ಬ್ರಿಗೇಡ್ ರೋಡ್ ಕಡೆಗೆ ಬಂದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ನ್ಯೂ ಇಯರ್ ಆಚರಿಸಿದರೆ ಅವರನ್ನು ಬಂಧಿಸಲಾಗುವುದು. ಹೀಗಾಗಿ, ಈ ವರ್ಷ ಮನೆಯಲ್ಲೇ ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಒಳ್ಳೆಯದು.

ಇನ್ನೇನು ಸದ್ಯದಲ್ಲೇ 2020 ಮುಕ್ತಾಯವಾಗುವುದರಿಂದ ಈ ಬಾರಿ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಮೋಜು ಮಸ್ತಿ ಮಾಡಲು ಈ ಬಾರಿ ಸಂಪೂರ್ಣ ನಿಷೇಧ ಹೇರಲಾಗಿದೆ. ಹೊಸ ವರ್ಷಾಚರಣೆ ವೇಳೆ ಕಿಕ್ಕಿರಿದು ಜನ ಸೇರುತ್ತಾರೆ. ಸಾಮಾಜಿಕ ಅಂತರ, ಮಾಸ್ಕ್ ಎಲ್ಲ ನಿಯಮಗಳನ್ನೂ ಪಾಲನೆ ಮಾಡುವುದು ಅಸಾಧ್ಯ. ಸಾವಿರಾರು ಜನರು ಒಂದೇ ಕಡೆ ಸೇರಿ ಸಂಭ್ರಮಾಚರಣೆ ಮಾಡಿದರೆ ಮತ್ತೆ ಕೊರೋನಾ ಹೆಚ್ಚಾಗುವ ಸಾಧ್ಯತೆ ಇರುವುದರಿಂದ 2021ರ ಸಂಭ್ರಮಾಚರಣೆಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ.

ಈ ಬಗ್ಗೆ ಕಂದಾಯ ಸಚಿವ ಆರ್​. ಅಶೋಕ್ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಇಬ್ಬರೂ ಇಂದು ಅಧಿಕೃತ ಘೋಷಣೆ ಮಾಡಿದ್ದಾರೆ. ಹೊಸ ವರ್ಷಾಚರಣೆಯಂದು ಸಂಭ್ರಮಾಚರಿಸಲು ರಸ್ತೆಗಿಳಿದರೆ ಸಂಕಷ್ಟ ಎದುರಾಗುವುದು ಖಚಿತ. ಹೊಸ ವರ್ಷದ ಹಿಂದಿನ ರಾತ್ರಿ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಬಂದ್ ಆಗಿರುತ್ತದೆ. ಡಿ. 20ರಿಂದ ಜ. 2ನೇ ತಾರೀಖಿನವರೆಗೆ ಹೊಸ ವರ್ಷಾಚರಣೆ ಮಾಡದಂತೆ ಮಾರ್ಗಸೂಚಿ ಹೊರಡಿಸಲಾಗುವುದು. ಸರ್ಕಾರದ ಆದೇಶ ಉಲ್ಲಂಘಿಸಿದರವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ; ಸಚಿವ ಆರ್​. ಅಶೋಕ್ ಆರೋಪ

ಕೊರೋನಾದಿಂದಾಗಿ ರಸ್ತೆಗಿಳಿದು, ಜನರ ಜೊತೆ ಸೇರಿ ಹೊಸ ವರ್ಷಾಚರಣೆ ಮಾಡುವ ಬದಲು ಮನೆಯಲ್ಲೇ ಕುಟುಂಬದ ಜೊತೆ ಸೆಲಬ್ರೇಷನ್ ಮಾಡಿ. ಕೋವಿಡ್ ನಿಂದ ಸಾವಿರಾರು ಜನರು ಮೃತರಾಗಿದ್ದಾರೆ. ಈ ವರ್ಷ ಶೋಕಾಚರಣೆ ವರ್ಷ. ಹೀಗಾಗಿ, ಡಿ. 31ರಂದು ಎಂ.ಜಿ ರೋಡ್, ಬ್ರಿಗೇಡ್ ರೋಡಿಗೆ ಪ್ರವೇಶ ನಿಷೇಧಿಸಲಾಗಿದೆ. ಒಂದು ವೇಳೆ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸ್ಟಾರ್ ಹೋಟೆಲ್, ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಯಥಾಸ್ಥಿತಿಯಲ್ಲಿ ಇರಬೇಕು. ಒಂದುವೇಳೆ ಹೊಸ ವರ್ಷಕ್ಕೆ ವಿಶೇಷವಾಗಿ ಏನಾದರೂ ಮಾಡಿದರೆ ವಿಪತ್ತು ನಿಯಂತ್ರಣ ಕಾಯ್ದೆ ಅಡಿ ದಂಡ ಮತ್ತು ಶಿಸ್ತು ಕ್ರಮ ಜರುಗಿಸಲಾಗುವುದು. ಹೊಸ ವರ್ಷಾಚರಣೆಯಂದು ಜನರು ಸೇರದಂತೆ ಎಚ್ಚರ ವಹಿಸಲು ಬಾರ್, ರೆಸ್ಟೋರೆಂಟ್, ಪಬ್​ಗಳಿಗೂ ನೋಟೀಸ್ ಜಾರಿ ಮಾಡಲಾಗಿದೆ. ಯಾರಾದರೂ ಸಾರ್ವಜನಿಕವಾಗಿ ಆಚರಣೆ ಮಾಡುತ್ತೇನೆಂದು ಬಂದರೆ ಅವರನ್ನು ಬಂಧಿಸಲಾಗುವುದು ಎಂದು ಸಚಿವ ಆರ್​. ಅಶೋಕ್ ಎಚ್ಚರಿಸಿದ್ದಾರೆ.

ಈ ವರ್ಷ ನಾನು ಮನೆಯಲ್ಲೇ ಹೊಸ ವರ್ಷಾಚರಣೆ ಮಾಡುತ್ತೇನೆ. ಬಿಜೆಪಿ ಯುವಕರು ಸೇರಿದಂತೆ ಎಲ್ಲರೂ ಮನೆಯಲ್ಲೇ ಕುಟುಂಬದ ಸದಸ್ಯರ ಜೊತೆ ಸೆಲೆಬ್ರೇಷನ್ ಮಾಡಿ. ನಿಮ್ಮ ನಿಮ್ಮ ಮನೆಗಳಲ್ಲಿ ಮಾತ್ರ ನ್ಯೂ ಇಯರ್ ಆಚರಣೆ ಮಾಡಿ. ಶೇ. 50ರಷ್ಟು ಜನರನ್ನು ಇಟ್ಟುಕೊಂಡು ಪಬ್, ಬಾರ್​ನಲ್ಲಿ ಹೊಸ ವರ್ಷಾಚರಣೆ ಮಾಡಬಹುದು. ಆದರೆ, ಎಂಜಿ ರೋಡ್, ಬ್ರೀಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಆಚರಣೆ ಬೇಡ. ಕೋವಿಡ್ ಇರುವುದರಿಂದ ಹೊರಗೆ ಬಾರದೆ ಮನೆಯಲ್ಲಿಯೇ ಆಚರಣೆ ಮಾಡಿ ಎಂದು ಕಂದಾಯ ಸಚಿವ ಆರ್. ಅಶೋಕ್ ಮನವಿ ಮಾಡಿದ್ದಾರೆ.
Published by:Sushma Chakre
First published: