Uttar Kannada ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ‌ ಪರಿಚಯಕ್ಕೆ ಸಿದ್ಧವಾಯಿತು ಹೊಸ ವೆಬ್​ಸೈಟ್​

Tourism: ಸದ್ಯ ‘ಉತ್ತರಕನ್ನಡ ಡಾಟ್ ಆರ್ಗ್’ ಪ್ರಾಥಮಿಕ ಹಂತದಲ್ಲಿದೆ. ಪ್ರತಿದಿನವೂ ಮಾಹಿತಿಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇನ್ನಷ್ಟು ಹೊಸ ಫೀಚರ್‌ಗಳೊಂದಿಗೆ ವೆಬ್‌ಸೈಟ್ ಅಪ್ಡೇಟ್ ಆಗಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾರವಾರ: ರಾಷ್ಟೀಯ ಪ್ರವಾಸೋದ್ಯಮ (National Tourism Day) ದಿನದಂದು ಉತ್ತರ ಕನ್ನಡ (Uttar Kannada) ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಗುರುತೊಂದು ದೊರೆತಿದೆ. ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮಕ್ಕಾಗಿ ಸಿದ್ಧಪಡಿಸಿದ್ದ ಲೋಗೋವನ್ನು(Logo) ಬಿಡುಗಡೆಗೊಳಿಸಲಾಗಿದೆ. ಅದರೊಂದಿಗೆ ನೂತನ ಪ್ರವಾಸೋದ್ಯಮ ವೆಬ್‌ಸೈಟ್ (Website) ಅನ್ನೂ ಉದ್ಘಾಟಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನೂತನ ವೆಬ್ ಸೈಟ್ ಸಿದ್ಧಪಡಿಸಲಾಗಿದೆ.. ಜಿಲ್ಲೆಯಲ್ಲಿ ಎಲ್ಲದೆ ಸುತ್ತ‌ಬೇಕು ಅಂದ್ರೆ ಉತ್ತರ ಕನ್ನಡ ಜಿಲ್ಲೆಯ ವೆಬ್ ಸೈಟ್ ಗೆ ಭೇಟಿ ನೀಡಬಹುದು..

UttaraKannada.org ಹೊಸ ವೆಬ್ ಸೈಟ್ ಮೂಲ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ

ಹಲವು ವೈವಿಧ್ಯಮಯ ತಾಣ, ಬಹು ಸಂಸ್ಕೃತಿಯ ಜಿಲ್ಲೆಯಾಗಿರುವ ಉತ್ತರ ಕನ್ನಡ ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದ್ದು, ದೇಶಿ- ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಕರಾವಳಿಯಲ್ಲಿ ಓಂ, ಕುಡ್ಲೆ, ಟ್ಯಾಗೋರ್, ತೀಳಮಾತಿಯಂಥ ಕಡಲತೀರಗಳು, ಗೋಕರ್ಣ, ಮರ್ಡೇಶ್ವರ, ಶಿರಸಿಯ ಮಾರಿಕಾಂಬೆಯ ದೇಗುಲದಂಥ ಧಾರ್ಮಿಕ ತಾಣಗಳು, ಟಿಬೆಟಿಯನ್ ಕಾಲೋನಿಯೆಂಬ ಸಂಸ್ಕೃತಿ ತಾಣ, ಗೌಳಿಗರು, ಹಾಲಕ್ಕಿಗರು, ಗೊಂಡ ಸಮಾಜಗಳೆಂಬ ಒಂದಕ್ಕಿಂತ ಒಂದು ವಿಭಿನ್ನ ಸಮುದಾಯಗಳನ್ನು ಹೊಂದಿರುವ ಜಿಲ್ಲೆ ವಿವಿಧತೆಯಲ್ಲಿ ಏಕತೆ ಮೆರೆಯುತ್ತದೆ.

ವಿವಿಧ ಮಾಹಿತಿಯನ್ನು ಒಂದೆಡೆ ಪಡೆಯಬಹುದು

ಈ ವಿವಿಧತೆಯನ್ನು ಒಂದೆಡೆ ಕ್ರೋಢೀಕರಿಸಿ, ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ಕನಸು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರದ್ದು. ದಾಂಡೇಲಿ, ಜೊಯಿಡಾದ ಅಡವಿ ನೋಡ ಬರುವವರು ಅನತಿ ದೂರದ ಕಾರವಾರ, ಕುಮಟಾದ ಪ್ರವಾಸಿ ತಾಣಗಳಿಗೂ ಭೇಟಿ ನೀಡುವಂತಾಗಬೇಕು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಹಜವಾಗಿ ಅವರ ಅಂಗೈನಲ್ಲಿ ಜಿಲ್ಲೆಯ ಸಂಪೂರ್ಣ ಮಾಹಿತಿ ಒದಗಿಸಬೇಕು. ಜಿಲ್ಲೆಯ ಸಂಸ್ಕೃತಿಗಳನ್ನ, ಇಲ್ಲಿನ ಆಹಾರ ವೈವಿಧ್ಯತೆಗಳನ್ನ, ಸಂಪ್ರದಾಯಗಳನ್ನ ಜಗತ್ತಿಗೆ ತಿಳಿಸಬೇಕೆಂಬ ಮಹಾದಾಸೆ ಅವರದು.

ಇದನ್ನೂ ಓದಿ: ರಮೇಶ್​ ಬಾಂಬ್​ ಠುಸ್ಸ್ ಆಗುತ್ತೆ- ಸಹೋದರನ ವಿರುದ್ಧ ಸತೀಶ್ ಜಾರಕಿಹೊಳಿ ಆಕ್ರೋಶ

ಅದರಂತೆ ಇಂದು ಅವರು ಉದ್ಘಾಟಿಸಿರುವ https://uttarakannada.org/ ನಲ್ಲಿ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳ ಮಾಹಿತಿಗಳನ್ನ, ಅಲ್ಲಿಗೆ ತಲುಪುವ ವಿವರಗಳನ್ನ ಕ್ರೋಢೀಕರಿಸಿ ಅಪ್ಲೋಡ್ ಮಾಡಲಾಗಿದೆ.

ಇನ್ನು ಈ ವೆಬ್‌ಸೈಟ್ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿದ್ದರೂ, ಇದು ರೂಪುಗೊಳ್ಳುವಲ್ಲಿ ಮೂವರು ಯುವಕರ ಹಗಲಿರುಳಿನ ಪರಿಶ್ರಮವಿದೆ. ಉರಗ ತಜ್ಞರೂ ಆಗಿರುವ ಓಂಕಾರ್ ಪೈ, ವೆಬ್‌ಸೈಟ್‌ನಲ್ಲಿ ವೈಲ್ಡ್ ಲೈಫ್ ಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರೆ, ಸಾತ್ವಿಕ್ ಭಟ್ ವೆಬ್‌ಸೈಟ್‌ನ ಚೆಂದದ ಡಿಸೈನ್ ಮಾಡಿದ್ದಾರೆ.

ಗೋಪಿ ಜೋಲಿ ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದ ಅತ್ಯುತ್ತಮ ಫೊಟೊಗಳನ್ನ ನೀಡಿ ವೆಬ್‌ಸೈಟ್ ಅನ್ನು ಇನ್ನಷ್ಟು ಅಂದಗೊಳಿಸಿದ್ದಾರೆ. ಮೂವರೂ ಜಿಲ್ಲಾಡಳಿತದಿಂದ ಇದಕ್ಕಾಗಿ ಯಾವುದೇ ಹಣ ಪಡೆಯದೇ, ಸ್ವಯಂಪ್ರೇರಿತರಾಗಿ ಈ ಕೆಲಸಗಳನ್ನ ಮಾಡಿಕೊಟ್ಟಿದ್ದಾರೆ.ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮೂವರನ್ನೂ ಅಭಿನಂದಿಸಿದೆ. ಜಿಲ್ಲಾಧಿಕಾರಿ ಕೂಡ ವೆಬ್‌ಸೈಟ್‌ನ ಕುರಿತು ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ವೆಬ್‌ಸೈಟ್‌ನಲ್ಲಿ ಇನ್ನಷ್ಟು ಅಪ್ಡೇಟ್‌ಗಳನ್ನು ಮಾಡಿಸುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಂದ `ರಾಜರತ್ನ’ ಮೂರ್ತಿ ಪ್ರತಿಷ್ಠಾಪನೆ, ಪುನೀತ್​ ತತ್ವ-ಆದರ್ಶ ಪಾಲನೆಗಾಗಿ ಪತ್ರಿಮೆ ಅನಾವರಣ!

ಸದ್ಯ ‘ಉತ್ತರಕನ್ನಡ ಡಾಟ್ ಆರ್ಗ್’ ಪ್ರಾಥಮಿಕ ಹಂತದಲ್ಲಿದೆ. ಪ್ರತಿದಿನವೂ ಮಾಹಿತಿಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇನ್ನಷ್ಟು ಹೊಸ ಫೀಚರ್‌ಗಳೊಂದಿಗೆ ವೆಬ್‌ಸೈಟ್ ಅಪ್ಡೇಟ್ ಆಗಲಿದೆ. ಪ್ರವಾಸೋದ್ಯಮದ ಸಮಗ್ರ ಮಾಹಿತಿ ಇನ್ಮುಂದೆ ಈ ತಾಣದಲ್ಲಿ ಪ್ರವಾಸಿಗರಿಗೆ ಲಭ್ಯವಾಗಲಿದೆ ಎಂದು ವೆಬ್‌ಸೈಟ್ ಡೆವಲಪರ್ • ಸಾತ್ವಿಕ್ ಭಟ್ ತಿಳಿಸಿದ್ದಾರೆ.

ವರದಿ: ದರ್ಶನ್ ನಾಯಕ್ 
Published by:Sandhya M
First published: