ಮಂಡ್ಯ (ಅ.22): ಜಿಲ್ಲೆಯಲ್ಲಿ ಸುದ್ದಿಯಾಗಿದ್ದ ದಲಿತ ಹುಡುಗಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಳೆದ ಐದು ವರ್ಷಗಳ ಹಿಂದೆ ಪೊಲೀಸರಿಗೆ ಸಿಕ್ಕ ಒಂದು ಅನಾಥ ಶವ ನಾಪತ್ತೆಯಾದ ದಲಿತ ಹುಡುಗಿಯದು ಎಂಬ ಮಾಹಿತಿ ಹೊರಬಿದ್ದಿದೆ. 2015ರಲ್ಲಿ ಸಿಕ್ಕ ಅನಾಥ ಶವ ಗುರುತು ಪತ್ತೆಯಾಗದ ಹಿನ್ನಲೆ ಪೊಲೀಸರು ಪ್ರಕರಣವನ್ನು ಮುಚ್ಚಿದ್ದರು. ಆದರೆ, ಈಗ ಆ ಶವ ತನ್ನ ಮಗಳದು ಎಂದು ದಲಿತ ಯುವತಿ ಮೇಘಾಳ ಅಮ್ಮ ಗುರುತಿಸಿದ್ದು, ಈ ಪ್ರಕರಣಕ್ಕೆ ಹೊಸ ಆಯಾಮ ದೊರಕಿದೆ. ಅಲ್ಲದೇ ಈ ಪ್ರಕರಣದ ಮರು ತನಿಖೆಗೆ ಪೊಲೀಸರು ಮುಂದಾಗಿದ್ದು, ಪೋಷಕರು ಆರೋಪಿಗಳ ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ನಂಜೇಗೌಡದೊಡ್ಡಿ ಗ್ರಾಮದ ದಲಿತ ಯುವತಿ ಮೇಘನಾ 2014ರಲ್ಲಿ ಪಾಂಡವಪುರದ ತಾಲೂಕಿನ ತಿರುಮಲಪುರದ ಸ್ವಾಮಿಗೌಡ ಎಂಬ ಮೇಲ್ಜಾತಿಯ ಯುವಕನ ಮದುವೆಯಾಗಿದ್ದಳು. ಇದಾದ ಬಳಿಕ ತವರಿಗೆ ಒಂದೆರಡು ಬಾರಿ ಬಂದಿದ್ದ ಮೇಘನಾ ಬಳಿಕ ತಾಯಿಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದಳು. ಇದಾದ ಬಳಿಕ ಮಗಳ ಹುಡುಕಾಟ ನಡೆಸಿದ ತಾಯಿಗೆ ಮೇಘ ಐಡಿ ಕಾರ್ಡ್ ಸಿಕ್ಕಿತ್ತು. ಆ ಕಾರ್ಡಿನ ವಿಳಾಸ ಹುಡುಕಿ ಹೊರಟ ತಾಯಿ ಆ ಊರಿನಲ್ಲಿ ಆ ವಿಳಾಸನೆಯವರನ್ನು ವಿಚಾರಿಸಿದಾಗ ತಮಗೇನು ಗೊತ್ತಿಲ್ಲ. ನಮ್ಮಮಗ ಕೂಡ ಇಲ್ಲಿಲ್ಲ ಎಂದು ಸಬೂಬು ಹೇಳಿ ಕಳಿಸಿದ್ದಾರೆ. ಯುವತಿ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಯುವತಿಯ ಹತ್ಯೆಯಾಗಿದೆ. ಈ ಪ್ರಕರಣ ಮುಚ್ಚೋಗಿದೆ ಎಂದಿದ್ದರು. ಬಳಿಕ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಫೋರಂ ಸಂಘಟನೆ ಸಹಾಯದಿಂದ ಮಾನವಹಕ್ಕು ಮತ್ತು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೇ ಪಾಂಡವಪುರದಲ್ಲಿ ಕೂಡ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಸುದ್ದಿಯಾಗುತ್ತಿದ್ದಂತೆ ಮಾತನಾಡಿದ ಜಿಲ್ಲಾ ಎಸ್ಪಿ ಈ ಕುರಿತು ಕೂಲಂಕುಶ ತನಿಖೆ ನೀಡುವ ಭರವಸೆ ನೀಡಿದ್ದರು. ಅದರಂತೆ ತನಿಖೆಗೆ ಮುಂದಾದ ಪೊಲೀಸರಿಗೆ ಈಗ ಹೊಸ ಸುಳಿವು ಸಿಕ್ಕಿದೆ.
2015ರಲ್ಲಿ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿನಕುರುಳಿಯ ಬಳಿಯ ನಿರ್ಜನ ಪ್ರದೇಶದಲ್ಲಿ ಕೊಲೆಯಾದ ರೀತಿಯಲ್ಲಿ ಅಪರಿಚಿತ ಯುವತಿಯ ಶವವೊಂದು ಪತ್ತೆಯಾಗಿತ್ತು. ಶವದ ಗುರುತು ಪತ್ತೆಯಾಗದ ಹಿನ್ನೆಲೆ ಆ ದಿನವೇ ಪೊಲೀಸರು ಅಪರಿಚಿತ ಶವವನ್ನು ಮಣ್ಣು ಮಾಡಿದ್ದರು. ಅಲ್ಲದೇ, ಎರಡು ವರ್ಷದ ಬಳಿಕವು ಶವದ ಗುರುತು ಪತ್ತೆ ಯಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಪತ್ತೆಯಾಗದ ಪ್ರಕರಣವೆಂದು ಮುಗಿಸಿದ್ದರು.
ಇದನ್ನು ಓದಿ: ಐದು ವರ್ಷದ ಹಿಂದೆ ನಾಪತ್ತೆಯಾದ ದಲಿತ ಯುವತಿಗಾಗಿ ಪೋಷಕರ ಹುಡುಕಾಟ; ಮರ್ಯಾದಾ ಹತ್ಯೆ ಶಂಕೆ?
ಮಹದೇವಮ್ಮ ದೂರು ನೀಡಿದ ಹಿನ್ನಲೆ ಪತ್ತೆಯಾಗದ ಅಪರಿಚಿತ ಯುವತಿ ಶವ ಪ್ರಕರಣದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವತಿಯ ಶವದ ಫೋಟೋ ವನ್ನು ಈ ಮಹಿಳೆಗೆ ತೋರಿಸಿದ್ದಾರೆ. ತಕ್ಷಣ ಈ ಮಹಿಳೆ ಇದು ತನ್ನ ಮಗಳದ್ದೆ ಗುರುತು ಪತ್ತೆ ಹಚ್ಚಿದ್ದು ಕೊಲೆಯಾದ ತನ್ನ ಮಗಳ ಸಾವಿಗೆ ತನಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದಾಳೆ.
ಮೇಘಶ್ರೀ ಶವದ ಗುರುತು ಪತ್ತೆಯಾದ ಬಳಿಕ ಇದೀಗ ಪೊಲೀಸರುಗ ತಿರುಮಲಾ ಪುರದ ಮೇಘಶ್ರೀ ಗಂಡ ಸ್ವಾಮಿಗೌಡ, ಹಾಗೂ ಆತನ ತಂದೆ ತಾಯಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಶವದ ಪೋಟೋ ನೋಡಿ ತನ್ನ ಮಗಳದ್ದೆ ಎಂದಿರುವುದರಿಂದ ಪ್ರಕರಣದ ಸತ್ಯಾ ಸತ್ಯತೆಗಾಗಿ ತಾಯಿಯ ಡಿಎನ್ ಎ ಪರೀಕ್ಷೆಗೆ ಮುಂದಾಗಿದ್ದಾರೆ. ಮುಚ್ಚಿಹೋಗಿದ್ದ ಈ ಪ್ರಕರಣಕ್ಕೆ ಡಿಎನ್ಎ ವರದಿ ಬಳಿಕ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ