• Home
  • »
  • News
  • »
  • state
  • »
  • Hebbal Traffic: ಹೆಬ್ಬಾಳ ಫ್ಲೈ ಓವರ್ ಟ್ರಾಫಿಕ್ ಕಡಿಮೆ ಮಾಡಲು ಹೊಸ ಪ್ಲ್ಯಾನ್​, ಯಾವ್ಯಾವ ರೂಟ್​ ಚೇಂಚ್​? ಇಲ್ಲಿದೆ ಫುಲ್ ಡೀಟೇಲ್ಸ್

Hebbal Traffic: ಹೆಬ್ಬಾಳ ಫ್ಲೈ ಓವರ್ ಟ್ರಾಫಿಕ್ ಕಡಿಮೆ ಮಾಡಲು ಹೊಸ ಪ್ಲ್ಯಾನ್​, ಯಾವ್ಯಾವ ರೂಟ್​ ಚೇಂಚ್​? ಇಲ್ಲಿದೆ ಫುಲ್ ಡೀಟೇಲ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru Traffic Problem: ಕೆಲವರಿಗೆ ಈ ಮಾಹಿತಿ ಗೊತ್ತಿರುವುದಿಲ್ಲ, ಹಾಗಾಗಿ ಬಿಬಿಎಂಪಿಯಿಂದ ಸೂಚನಾ ಫಲಕಗಳನ್ನ ಸಹ ಹಾಕಲಾಗಿದೆ. ಬಸ್ ನಿಲ್ದಾಣ ಮತ್ತು ಆಟೋ ನಿಲ್ದಾಣದ  ಸ್ಥಳ ಕೂಡ ಬದಲಾವಣೆ ಮಾಡಲಾಗಿದೆ.

  • Share this:

ಬೆಂಗಳೂರು (Bengaluru) ಹೆಚ್ಚು ಪ್ರಸಿದ್ದವಾಗಿರುವುದು ಟ್ರಾಫಿಕ್ (Traffic) ವಿಚಾರವಾಗಿ ಎಂದರೆ ತಪ್ಪಲ್ಲ. ಇಲ್ಲಿ ಕೇವಲ 15 ನಿಮಿಷದಲ್ಲಿ ತಲುಪುವ ಜಾಗವನ್ನು ಒಂದು ಗಂಟೆಯಲ್ಲಿ ತಲುಪುತ್ತೇವೆ. ಕೆಲವೊಂದು ಸ್ಥಳಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಆ ದಿನ ಪೂರ್ತಿ ಅಲ್ಲಿಯೇ ಎನ್ನುವಂತೆ ಪರಿಸ್ಥಿತಿ ಇದೆ. ಆದರೆ ಸದ್ಯ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆಯಾಗುವ ಹೆಬ್ಬಾಳ (Hebbala) ಮೇಲ್ಸೇತುವೆ ಜಂಕ್ಷನ್  ಬಳಿ ಇಂದಿನಿಂದ ಹೊಸ ರೂಲ್ಸ್ ಮಾಡಲಾಗಿದೆ.  


ತಾತ್ಕಾಲಿಕ ಮಾರ್ಗಬದಲಾವಣೆ ಮಾಡಿದ ಪೊಲೀಸರು


ಹೌದು, ಸಂಚಾರ ದಟ್ಟಣೆ ನಿಯಂತ್ರಿಸಲು ತಾತ್ಕಾಲಿಕ ಮಾರ್ಗಬದಲಾವಣೆಗೆ ಮಾಡಲು ಸಂಚಾರಿ ಪೊಲೀಸರು ಮುಂದಾಗಿದ್ದು, ಜಂಕ್ಷನ್ ನಲ್ಲಿ ಇಂದಿನಿಂದ ಹೊಸ ರೂಲ್ಸ್ ಜಾರಿ ಮಾಡಲಾಗಿದೆ.  ಟ್ರಾಫಿಕ್ ಪೊಲೀಸರ ಹೊಸ ಪ್ರಯತ್ನ ಇಂದಿನಿಂದ ಆರಂಭವಾಗಿದ್ದು, ಏರ್ಪೋರ್ಟ್ ಸರ್ವಿಸ್ ರಸ್ತೆಯಲ್ಲಿ ಬರುವ ಎಲ್ಲಾ ವಾಹನಗಳು ಮೈನ್ ರೋಡ್ ಗೆ ಎಂಟ್ರಿಯಾಗದಂತೆ ನಿರ್ಬಂಧ ಹೇರಲಾಗಿದೆ.


ಎರಡು ಕಡೆಗಳಲ್ಲಿ ಮೈನ್ ರೋಡ್ ಗೆ ವಾಹನಗಳು ಎಂಟ್ರಿಯಾಗದಂತೆ ಬ್ಯಾರಿಕೇಡ್ ಹಾಕಲಾಗಿದ್ದು, ನೇರವಾಗಿ ಹೆಬ್ಬಾಳ ಫ್ಲೈಓವರ್ ಕೆಳಭಾಗದ ಸಿಗ್ನಲ್ ನಲ್ಲಿ ರ್ಯಾಂಪ್ ಮೂಲಕ ಎಡ ತಿರುವು ಪಡೆದು ಸಿಟಿಗೆ ಎಂಟ್ರಿಯಾಗಲು ಅವಕಾಶ ಮಾಡಿಕೊಡಲಾಗಿದೆ.  ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಪೊಲೀಸರು ಕೈಹಾಕಿದ್ದು, ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ರಸ್ತೆ ಡೈ ವರ್ಶನ್​ ಬಗ್ಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ.


ಹೆಬ್ಬಾಳ ಫ್ಲೈ ಓವರ್  ಬಳಿ ಟ್ರಾಫಿಕ್ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಏರ್ಪೋರ್ಟ್ ನಿಂದ ಬರೋ ಬಿಎಂಟಿಸಿ,ಕೆಎಸ್ಆರ್ಟಿಸಿ ಬಸ್ ಗಳಿಗೆ ಮೈನ್ ರೋಡ್ ನಲ್ಲಿ ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಿಕೊಳ್ಳಲು ಅವಕಾಶ ಕೊಡುತ್ತಿಲ್ಲ. ಈ ರೀತಿ ಮಾಡುವುದರಿಂದ ಟ್ರಾಫಿಕ್ ಹೆಚ್ಚಾಗುವ ಕಾರಣ ಹೊಸ ನಿರ್ಧಾರ ಮಾಡಿದ್ದು,  ಸರ್ವಿಸ್ ರೋಡ್ ನಲ್ಲೇ ಬಸ್ ಗಳು ಸ್ಟಾಪ್ ಕೊಡಬೇಕು ಎಂದು ಹೇಳಲಾಗಿದೆ.


ಇದನ್ನೂ ಓದಿ: ನನ್ನ ಪ್ರಾಣ ಇರೋವರೆಗೂ ಈದ್ಗಾ ಮೈದಾನ ತೆಗೆಯಲು ಸಾಧ್ಯವೇ ಇಲ್ಲ - ಜಮೀರ್ ಅಹ್ಮದ್​


ಇನ್ನು ಸರ್ವಿಸ್ ರೋಡ್ ಗೆ ಬರಬೇಕು ಅಂದರೆ ಬಸ್ ಗಳು ಯಲಹಂಕ ಫ್ಲೈ ಮೇಲೆ ಬರುವಂತಿಲ್ಲ. ಯಲಹಂಕ ಬಳಿಯೇ ಸರ್ವಿಸ್ ರೋಡ್ ಮೂಲಕ ಬರಬೇಕು. ಅಲ್ಲದೇ, ಹೆಬ್ಬಾಳದ ಕೆಂಪಾಪುರ ಹೋಗುವ ವಾಹನಗಳು ಯಲಹಂಕ ಫ್ಲೈ ಓವರ್ ಹತ್ತುವಂತಿಲ್ಲ. ಒಂದು ವೇಳೆ ಯಲಹಂಕ ಫ್ಲೈ ಓವರ್ ಹತ್ತಿದ್ರೆ ಹೆಬ್ಬಾಳ ಸರ್ಕಲ್ ಗೆ ಹೋಗಿ ಒಂದು ಸುತ್ತು ಹಾಕಿಕೊಂಡು ಬರಬೇಕು. ಈ ಮೊದಲು ಕೆಂಪಾಪುರ ಹೋಗಲು ಮಾರ್ಗವಿತ್ತು. ಆದರೆ ಇಂದಿನಿಂದ ಆ ಮಾರ್ಗವನ್ನ ಬ್ಯಾರಿಕೇಡ್ ಮೂಲಕ ಕ್ಲೋಸ್ ಮಾಡಲಾಗಿದೆ.


ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್​


ಈ ಹೊಸ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯನ್ನು  ಟ್ರಾಫಿಕ್ ಈಶಾನ್ಯ ವಿಭಾಗದ ಡಿಸಿಪಿ ಸವಿತಾ.ಎನ್ ಪರಿಶೀಲನೆ ಮಾಡಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಂದಿನಿಂದ ಕೆಲ ಡೈವರ್ಷನ್ ಮಾಡಲಾಗಿದೆ.  ಏರ್ ಪೋರ್ಟ್ ಕಡೆಯಿಂದ ಬರುವರು ನೇರವಾಗಿ ಹೆಬ್ಬಾಳ ಮೇಲ್ಸೇತುವೆ ಹೋಗಬಹುದು. ಸರ್ವಿಸ್ ರಸ್ತೆಯಲ್ಲಿ ಬರುವರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ‌ ಎಂದು ತಿಳಿಸಿದ್ದಾರೆ.


ಕೆಲವರಿಗೆ ಈ ಮಾಹಿತಿ ಗೊತ್ತಿರುವುದಿಲ್ಲ, ಹಾಗಾಗಿ ಬಿಬಿಎಂಪಿಯಿಂದ ಸೂಚನಾ ಫಲಕಗಳನ್ನ ಸಹ ಹಾಕಲಾಗಿದೆ. ಬಸ್ ನಿಲ್ದಾಣ ಮತ್ತು ಆಟೋ ನಿಲ್ದಾಣದ  ಸ್ಥಳ ಕೂಡ ಬದಲಾವಣೆ ಮಾಡಲಾಗಿದೆ. ಮೂರ್ನಾಲ್ಕು ದಿನಗಳ ಕಾಲ ಈ ಪ್ರಯತ್ನ ಮಾಡಲಾಗುತ್ತದೆ. ಮುಂದೇನಾಗುತ್ತದೆ ನೋಡೋಣ ಎಂದಿದ್ದಾರೆ.


ಇದನ್ನೂ ಓದಿ: ಗೃಹ ಸಚಿವರು ಹೆಣ್ಣುಮಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ - ಹರ್ಷ ಸಹೋದರಿ ಆರೋಪ


ಇನ್ನು ಯಲಹಂಕ , ಬ್ಯಾಟರಾಯನಪುರ, ಕೊಡಿಗೇಹಳ್ಳಿ ಅಮೃತಹಳ್ಳಿ ಕಡೆಯಿಂದ ಬರುವವರು ಲೂಪ್ ಫ್ಲೈ ಓವರ್ ಬಳಿ ತೆಗೆದುಕೊಂಡು ನಗರ ಪ್ರವೇಶ ಮಾಡಬೇಕು. ಆಂಧ್ರ ಪ್ರದೇಶದಿಂದ ಬರುವ ಬಸ್ ಗಳು ಬಸ್ ಬೇರೆ ಸ್ಟಾಪ್ ಗೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆಟೋ ಸ್ಟ್ಯಾಂಡ್ ಕೂಡ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಪ್ರಾಯೋಗಿಕವಾಗಿ ಶುಕ್ರವಾರದಿಂದ ಈ ನಿಯಮಗಳು ಜಾರಿಗೆ ತರಲಾಗುತ್ತದೆ.

Published by:Sandhya M
First published: