Tracking App: ಇನ್ಮುಂದೆ ಕ್ರಿಮಿನಲ್ ಗಳನ್ನು ಹಿಡಿಯೋಕೆ ಮತ್ತಷ್ಟು ಸುಲಭ! ಪೊಲೀಸರಿಗೆ ವರವಾದ ಟ್ರ್ಯಾಕಿಂಗ್ ಅಪ್ಲಿಕೇಷನ್

ಅಪರಾಧಿಗಳನ್ನು ಬೆನ್ನತ್ತಿ ಹೋಗುವ, ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವ ಪೊಲೀಸರ ಪಾಲಿಗಂತೂ ಹೊಸ ತಂತ್ರಜ್ಞಾನ ವರವಾಗಿದೆ. ಅಲ್ಲದೇ ಇಂದಿನ ಬಹುತೇಕ ಕ್ರೈಂಗಳಲ್ಲಿ ಪ್ರಮುಖ ಸಾಕ್ಷಿಯಾಗುತ್ತವೆ ಮೊಬೈಲ್‌ ನಂಬರ್‌ ಗಳು ಹಾಗೂ ಮೊಬೈಲ್‌ ಟವರ್‌ ಗಳು. ತಪ್ಪಿತಸ್ಥರನ್ನು ಹಿಡಿಯೋಕೆ ಮೊಬೈಲ್‌ ತುಂಬಾ ಸಹಾಯ ಮಾಡುತ್ತೆ ಅನ್ನೋದು ಸುಳ್ಳಲ್ಲ. ಇದೀಗ ಕ್ರಿಮಿನಲ್‌ ಹಿನ್ನೆಲೆ ಹೊಂದಿರುವವರನ್ನು ಹಿಡಿಯೋಕೆ ಬಂದಿದೆ ಹೊಸ ಮೊಬೈಲ್‌ ಅಪ್ಲಿಕೇಷನ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ತಂತ್ರಜ್ಞಾನ (Technology) ಮುಂದುವರೆದ ಹಾಗೆ ಮೊದಲು ಕಷ್ಟವಾಗುತ್ತಿದ್ದ ಬಹಳಷ್ಟು ಕೆಲಸಗಳು ಇಂದು ಸುಲಭವಾಗುತ್ತಿವೆ. ಅದರಲ್ಲೂ ಅಪರಾಧಿಗಳನ್ನು (Criminal) ಬೆನ್ನತ್ತಿ ಹೋಗುವ, ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವ ಪೊಲೀಸರ ಪಾಲಿಗಂತೂ ಹೊಸ ತಂತ್ರಜ್ಞಾನ ವರವಾಗಿದೆ. ಅಲ್ಲದೇ ಇಂದಿನ ಬಹುತೇಕ ಕ್ರೈಂಗಳಲ್ಲಿ (Crime) ಪ್ರಮುಖ ಸಾಕ್ಷಿಯಾಗುತ್ತವೆ ಮೊಬೈಲ್‌ ನಂಬರ್‌ ಗಳು ಹಾಗೂ ಮೊಬೈಲ್‌ ಟವರ್‌ ಗಳು. ತಪ್ಪಿತಸ್ಥರನ್ನು ಹಿಡಿಯೋಕೆ ಮೊಬೈಲ್‌ ತುಂಬಾ ಸಹಾಯ ಮಾಡುತ್ತೆ ಅನ್ನೋದು ಸುಳ್ಳಲ್ಲ. ಇದೀಗ ಕ್ರಿಮಿನಲ್‌ ಹಿನ್ನೆಲೆ ಹೊಂದಿರುವವರನ್ನು ಹಿಡಿಯೋಕೆ ಬಂದಿದೆ ಹೊಸ ಮೊಬೈಲ್‌ ಅಪ್ಲಿಕೇಷನ್ (Mobile Application).‌ ಈಗ ಬಂದಿರುವ ಹೊಸ ಅಪ್ಲಿಕೇಷನ್‌ ನಿಂದ ಕ್ರಿಮಿನಲ್‌ ಗಳನ್ನು ಹಿಡಿಯೋದು ಪೊಲೀಸರಿಗೆ (Police) ಮತ್ತಷ್ಟು ಸುಲಭವಾಗಿದೆ. ಹೌದು ಇದಕ್ಕೆ ಕಾರಣವಾಗಿದ್ದು ಹೊಸದಾಗಿ ಬಂದ ಟ್ರಾಕಿಂಗ್‌ ಅಪ್ಲಿಕೇಷನ್.

ಪೊಲೀಸರು ಈ ಹೊಸ ಅಪ್ಲಿಕೇಷನ್‌ ಸಹಾಯದಿಂದ ಕ್ರಿಮಿನಲ್‌ ಬ್ಯಾಕ್‌ ಗ್ರೌಂಡ್‌ ಹೊಂದಿರುವವರನ್ನು ಸುಲಭವಾಗಿ ಪತ್ತೆ ಹಚ್ಚುತ್ತಿದ್ದಾರೆ. ಹಾಗಿದ್ರೆ ಏನದು ಅಪ್ಲಿಕೇಷನ್‌, ಅದರಿಂದ ರೌಡಿಗಳನ್ನು, ಕಳ್ಳರನ್ನು, ಕ್ರಿಮಿನಲ್‌ ಇತಿಹಾಸ ಹೊಂದಿರುವವರನ್ನು ಹೇಗೆ ಪತ್ತೆ ಮಾಡಬಹುದು ಅಂದುಕೊಂಡ್ರಾ.. ಇಲ್ಲಿದೆ ಅದರ ಬಗ್ಗೆ ಸಂಪೂರ್ಣ ಡೀಟೇಲ್ಸ್.‌

ಏನಿದು ಹೊಸ ಅಪ್ಲಿಕೇಷನ್?
ಅಂದಹಾಗೆ M-CCTNS (ಮೊಬೈಲ್‌ ಕ್ರೈಮ್‌ ಆಂಡ್‌ ಕ್ರಿಮಿನಲ್‌ ಟ್ರ್ಯಾಕಿಂಗ್‌ ನೆಕ್‌ ವರ್ಕ್‌ ಸಿಸ್ಟಮ್)‌ ಅನ್ನೋ ಅಪ್ಲಿಕೇಷನ್‌ ಹಾಗೂ ಫಿಂಗರ್‌ ಪ್ರಿಂಟ್‌ ಸ್ಕಾನರ್‌ ಡಿವೈಸ್‌ ಅನ್ನೋದೇ ಈ ಹೊಸ ತಂತ್ರಜ್ಞಾನ. ಇದೊಂದು ಕ್ರಿಮಿನಲ್‌ ಹಿಸ್ಟರಿ ಹೊಂದಿರುವವರನ್ನು ಬೆರಳಚ್ಚು ಸಹಾಯದಿಂದ ಪತ್ತೆ ಮಾಡುವಂಥ ಅಪ್ಲಿಕೇಷನ್.‌ ಈ ಮೊಬೈಲ್‌ ಅಪ್ಲಿಕೇಷನ್‌ ಮೇಲೆ ಬೆರಳನ್ನು ಸ್ಕ್ಯಾನ್‌ ಮಾಡಿದರೆ ಅದರಲ್ಲಿ ವ್ಯಕ್ತಿಯ ಕ್ರಿಮಿನಲ್‌ ಬ್ಯಾಕ್‍ಗ್ರೌಂಡ್ ಮಾಹಿತಿ ದೊರೆಯುತ್ತೆ. ಇದರ ಸಹಾಯದಿಂದ ಪೊಲೀಸರು ಸುಲಭವಾಗಿ ಕ್ರಿಮಿನಲ್‌ ಗಳನ್ನು ಪತ್ತೆ ಹಚ್ಚಬಹುದಾಗಿದೆ.

ಇದನ್ನೂ ಓದಿ: Hubballi: ತಾಯಿ ಅಗಲಿಕೆಯ ನೋವಲ್ಲೂ ಕರ್ತವ್ಯಕ್ಕೆ ಹಾಜರಾದ ಇನ್ಸ್​ಪೆಕ್ಟರ್​; ಕುಖ್ಯಾತ ಕಳ್ಳನ ಹೆಡೆಮುರಿ ಕಟ್ಟಿದ ಪಿಐ

ಅಂದಹಾಗೆ ರಸ್ತೆಯಲ್ಲಿ ರಾತ್ರಿ 11 ಗಂಟೆಯ ಮೇಲೆ ಓಡಾಡುವವರ ಬೆರಳಚ್ಚು ಪಡೆಯಲಾಗುತ್ತೆ. ಹಾಗೆ ಪಡೆಯಲಾದವರ ಬಗ್ಗೆ ಏನಾದರೂ ಕ್ರಿಮಿನಲ್‌ ರೆಕಾರ್ಡ್ಸ್‌ ಇದ್ದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತೆ. ಅಲ್ಲದೇ ಎಲ್ಲ ಪೊಲೀಸ್‌ ಠಾಣೆಗಳಲ್ಲೂ ಅರೆಸ್ಟ್‌ ಮಾಡಲಾಗಿರುವ ವ್ಯಕ್ತಿಗಳ ಬೆರಳಚ್ಚುಗಳನ್ನು ಈ ಅಪ್ಲಿಕೇಷನ್‌ ನಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳಲಾಗುತ್ತದೆ.

ಮೂಲಗಳ ಪ್ರಕಾರ, ಕೇಂದ್ರ ಗೃಹ ಇಲಾಖೆ ಈ ಮೊಬೈಲ್‌ ಅಪ್ಲಿಕೇಷನ್‌ ಅನ್ನು 2021 ರಲ್ಲೇ ಬಿಡುಗಡೆ ಮಾಡಿದ್ದು ಪೊಲೀಸರು ಅದನ್ನು ಬಳಸುತ್ತಿದ್ದಾರೆ. ಕರ್ನಾಟಕ ಈಗಾಗಲೇ 792 ಜನ ಕ್ರಿಮಿನಲ್‌ ರೆಕಾರ್ಡ್‌ ಹೊಂದಿರುವವರನ್ನು ಪತ್ತೆ ಮಾಡಿದೆ. 30842 ಜನರನ್ನು ಈ ಅಪ್ಲಿಕೇಷನ್‌ ಮೂಲಕ ಚೆಕ್‌ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಕ್ರಿಮಿನಲ್‌ ರೆಕಾರ್ಡ್‌ ಹೊಂದಿರುವ 51 ಜನರನ್ನು ಪತ್ತೆ ಮಾಡಿದ್ದು ಇದು ಕರ್ನಾಟಕದಲ್ಲಿ 2 ನೇ ಸ್ಥಾನದಲ್ಲಿದೆ. ಇನ್ನು ಹಾಸನ ಮೂರನೇ ಸ್ಥಾನದಲ್ಲಿದೆ ಅಂತ ಅಸಿಸ್ಟಂಟ್‌ ಕಮಿಷನರ್‌ ಆಫ್‌ ಪೊಲೀಸ್‌ ಬಿ ಎಸ್‌ ಚವಾಣ್ ಹೇಳಿದ್ದಾರೆ.‌

ಕ್ರಿಮಿನಲ್‌ ಹಿಸ್ಟರಿ ಇದ್ದರೆ ತಕ್ಷಣ ವಿಚಾರಣೆ!
ಫಿಂಗರ್‌ ಪ್ರಿಂಟ್‌ ಸ್ಕ್ಯಾನಿಂಗ್‌ ಡಿವೈಸ್‌ ಸದ್ಯ ಎಲ್ಲ ಪೊಲೀಸ್‌ ಠಾಣೆಗಳಲ್ಲೂ ಇನ್‌ಸ್ಟಾಲ್‌ ಮಾಡಲಾಗಿದೆ. ಅಲ್ಲದೇ ಎಲ್ಲ ಪೊಲೀಸರ ಮೊಬೈಲ್‌ ಗಳಲ್ಲೂ ಈಗ ಈ ಅಪ್ಲಿಕೇಷನ್‌ ಇರುತ್ತವೆ. ಈ ಅಪ್ಲಿಕೇಷನ್‌ ಗಳಲ್ಲಿ ಸ್ಕ್ಯಾನ್‌ ಮಾಡಿದರೆ ಸಾಕು ಅವರ ಕ್ರಿಮಿನಲ್‌ ಹಿಸ್ಟರಿ ಇದ್ದರೆ ತತ್‌ ಕ್ಷಣವೇ ಅದರ ಬಗ್ಗೆ ಮಾಹಿತಿ ನೀಡುತ್ತೆ. ಇನ್ನು ಶಂಕಿತರ ಬೆರಳನ್ನು ಸ್ಕ್ಯಾನ್‌ ಮಾಡಿ ಅದು ಅವರ ಕ್ರಿಮಿನಲ್‌ ಹಿಸ್ಟರಿಯ ಬಗ್ಗೆ ತೋರಿಸಿದಲ್ಲಿ ಪೊಲೀಸರು ತಕ್ಷಣವೇ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಬಹುದಾಗಿದೆ.

ಇದನ್ನೂ ಓದಿ:  Bengaluru Traffic: ಇದೊಂದು ಟ್ರಾಫಿಕ್ ಪ್ರೇಮ್​ ಕಹಾನಿ​, ಈ ಜೋಡಿ ಮದ್ವೆಯಾದ್ರೂ ಆ ರೋಡ್​ ಇನ್ನೂ ಸರಿಯಾಗಿಲ್ಲ!

ಒಟ್ಟಾರೆ, ಸಮಾಜದಲ್ಲಿ ಶಾಂತಿ ನೆಲೆಸುವ ಕಾರ್ಯಕ್ಕೆ ಈ ಮೊಬೈಲ್‌ ಅಪ್ಲಿಕೇಷನ್‌ ಪರೋಕ್ಷ ಕೊಡುಗೆ ನೀಡುತ್ತೆ ಅಂದರೆ ತಪ್ಪಾಗೋದಿಲ್ಲ. ಅಲ್ಲದೇ ಕ್ರಿಮಿನಲ್‌ ಗಳನ್ನು ಹಿಡಿಯೋ ಕೆಲಸಲದಲ್ಲಿ ಈ ಟೆಕ್ನಾಲಜಿ ಪೊಲೀಸರಿಗೆ ಸ್ವಲ್ಪವಾದರೂ ಸಹಾಯ ಮಾಡುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ.
Published by:Ashwini Prabhu
First published: