• Home
  • »
  • News
  • »
  • state
  • »
  • Bengaluru Police Holiday Rules: ಪೊಲೀಸ್ ಸಿಬ್ಬಂದಿ ರಜೆಗೆ ಹೊಸ ರೂಲ್ಸ್, DCP ಸುತ್ತೋಲೆ ಈಗ ವೈರಲ್; ಆದೇಶಕ್ಕೆ ಗೃಹ ಸಚಿವರು ಗರಂ

Bengaluru Police Holiday Rules: ಪೊಲೀಸ್ ಸಿಬ್ಬಂದಿ ರಜೆಗೆ ಹೊಸ ರೂಲ್ಸ್, DCP ಸುತ್ತೋಲೆ ಈಗ ವೈರಲ್; ಆದೇಶಕ್ಕೆ ಗೃಹ ಸಚಿವರು ಗರಂ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ ಬಾಬಾ (DCP CK Baba) ತಮ್ಮ ವಿಭಾಗದ ಸಿಬ್ಬಂದಿಗೆ ರಜೆ ತೆಗದುಕೊಳ್ಳುವ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯಲ್ಲಿ ಎರಡು ಕಾರಣಗಳಿಗೆ ಮಾತ್ರ ರಜೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

  • News18 Kannada
  • Last Updated :
  • Bangalore, India
  • Share this:

ಪೊಲೀಸ್ ಸಿಬ್ಬಂದಿಗಳಿಗೆ (Police Staff Holiday) ರಜೆ ನೀಡುವ ವಿಚಾರದ ಸುತ್ತೋಲೆ (Circular) ಫೋಟೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ ಬಾಬಾ (DCP CK Baba) ತಮ್ಮ ವಿಭಾಗದ ಸಿಬ್ಬಂದಿಗೆ ರಜೆ ತೆಗದುಕೊಳ್ಳುವ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯಲ್ಲಿ ಎರಡು ಕಾರಣಗಳಿಗೆ ಮಾತ್ರ ರಜೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಸುತ್ತೋಲೆ ಬಗ್ಗೆ ಪೊಲೀಸ್​ ಸಿಬ್ಬಂದಿ ಅಸಮಾಧಾನ ಹೊರ ಹಾಕಿದ್ರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ. ಬೆಂಗಳೂರು ಆಗ್ನೇಯ ವಿಭಾಗದಲ್ಲಿ ಪದೇ ಪದೇ ಸಿಬ್ಬಂದಿ ರಜೆಗಳ ಮೇಲೆ ತೆರಳ್ತಿರೋ ಹಿನ್ನೆಲೆ ಈ ಸುತ್ತೋಲೆ ಹೊರಡಿಸಲಾಗಿದೆ. ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರೆ ಹಾಗೂ ಮನೆಯಲ್ಲಿ ಸಾವಿನ ಕಾರಣವಿದ್ದರೆ ರಜೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.


ಸಕಾರಣವಿಲ್ಲದೆ ಸುಮ್ಮನೆ ರಜೆಗಳು ಹಾಕಿದಾಗ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ. ಎರಡು ಕಾರಣ ಬಿಟ್ಟು ಬೇರೆ ಕಾರಣಕ್ಕೆ ರಜೆ ಬೇಕಾಗಿದ್ದಲ್ಲಿ ಡಿಸಿಪಿಯಿಂದಲೇ ಅನುಮತಿ ಕಡ್ಡಾಯ ಎಂದು ಹೇಳಲಾಗಿದೆ. ಇತ್ತೀಚೆಗೆ ಆಗ್ನೇಯ ವಿಭಾಗದಲ್ಲಿ ರಜೆಗಳ ಮೆಲೆ ಸಿಬ್ಬಂದಿ ಹೆಚ್ಚು ಹೋಗ್ತಿದ್ದು, ಕರ್ತವ್ಯಕ್ಕೆ ಸಮಸ್ಯೆ ಹಿನ್ನೆಲೆ ಸುತ್ತೋಲೆ ಹೊರಡಿಸಲಾಗಿದೆ.


ಡಿಸಿಪಿ ಸಿ.ಕೆ ಬಾಬಾ ಆದೇಶಕ್ಕೆ ಗೃಹ ಸಚಿವರು ಗರಂ


ಯಾರಾದರೂ ಮೃತಪಟ್ಟರಷ್ಟೇ ಪೊಲೀಸರಿಗೆ ಸಿಗಲಿದೆ ರಜೆ ಕುರಿತ ಆದೇಶದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ಕೊಡುವಂತೆ ಡಿಸಿಪಿ ಅವರಿಗೆ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ತಕ್ಷಣ ಈ ಆದೇಶ ಹಿಂಪಡೆಯುವಂತೆ ಸೂಚಿಸಿದ್ದಾರೆ.


ಇದನ್ನೂ ಓದಿ:  MLA Tippareddy: ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ; ಬೆತ್ತಲಾದ ಯುವತಿಯಿಂದ ವಿಡಿಯೋ ಕಾಲ್?


ಡಿಸಿಪಿ ಸಿ‌ಕೆ ಬಾಬಾ ಸ್ಪಷ್ಟನೆ


ಇದು ನಮ್ಮ ವಿಭಾಗದ ಆಂತರಿಕ ಆಡಳಿತ ಸುತ್ತೋಲೆಯಾಗಿದ್ದು, ಇದನ್ನ ಸಿಬ್ಬಂದಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.  ನಾವು ಇನ್ಸ್ ಪೆಕ್ಟರ್ ಸೇರಿ ಮೇಲ್ಮಟ್ಟದ ಅಧಿಕಾರಿ ವರ್ಗಕ್ಕೆ ಅಷ್ಟೇ ರಜೆ ನೀಡಲಾಗುತ್ತದೆ.  ಸಿಬ್ಬಂದಿಗಳಿಗೆ ಆಯಾ ಠಾಣಾ ವ್ಯಾಪ್ತಿಯಲ್ಲಿನ ಠಾಣಾಧಿಕಾರಿಗಳಿಗೆ ನೀಡುತ್ತಾರೆ. ಮುಖ್ಯವಾದ ಹಬ್ಬ, ಬಂದೋಬಸ್ತ್ ಇನ್ನಿತರ ಸೂಕ್ಷ್ಮ ಘಟನಾವಳಿಗಳು ನಡೆದಾಗ ಕೆಲ ಸಿಬ್ಬಂದಿ ರಜೆಯಲ್ಲಿರುವ ಪ್ರವೃತ್ತಿ ಬೆಳೆಸಿಕೊಂಡಿರುತ್ತಾರೆ‌. ಇದು ಮುಂದಿನ ದಿನಗಳಲ್ಲಿ ಮುಂದುವರಿಯಬಾರದು ಅಂತಷ್ಟೇ ಠಾಣಾಧಿಕಾರಿಗಳಿಗೆ ಆದೇಶ ನೀಡಿದ್ದೇವೆ ಎಂದು ಎಸ್.ಕೆ.ಬಾಬಾ ತಮ್ಮ ಸುತ್ತೋಲೆಗೆ ಸ್ಪಷ್ಟನೆ ನೀಡಿದ್ದಾರೆ.


new rules announced for bengaluru police officers to get leave goes viral on social media mrq
ಸುತ್ತೋಲೆ


ಹಬ್ಬ, ಬಂದೋಬಸ್ತ್ ಇನ್ನಿತರ ಸೂಕ್ಷ್ಮ ಘಟನಾವಳಿಗಳು ನಡೆದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಯ ಸಿಬ್ಬಂದಿಯ ಕಾರ್ಯ ಹಾಜರಿ ಪ್ರಮುಖವಾಗಿರುತ್ತದೆ. ಈ ಸುತ್ತೋಲೆಯನ್ನು ಸಿಬ್ಬಂದಿ ತಪ್ಪಾಗಿ ತಿಳಿದುಕೊಂಡಿದ್ದಾರೆ.  ಸಕರಾತ್ಮಕ ಕಾರಣಗಳನ್ನ ಕೊಟ್ಟಾಗ ರಜೆ ಕೊಡಲಾಗುತ್ತದೆ ಎಂದು ಮಾಹಿತಿ  ನೀಡಲಾಗುತ್ತದೆ ಎಂದರು.


ಬೆಂಗಳೂರಿನಲ್ಲಿ ಗ್ಯಾಂಗ್​ವಾರ್, ಓರ್ವನ ಕೈ ಕಟ್​​


ಕುಡಿದ ನಶೆಯಲ್ಲಿ ಎರಡು ಗ್ಯಾಂಗ್​ ನಡುವೆ ಮಾರಾಮಾರಿ ನಡೆದು ಓರ್ವನ ಕೈ ಕತ್ತರಿಸಿದ ಘಟನೆ ಬೆಂಗಳೂರಲ್ಲಿ (Bengaluru Gangwar) ನಡೆದಿದೆ. ಲಗ್ಗೆರೆಯ ಕದಂಬ ಬಾರ್​ನಲ್ಲಿ ಪ್ರಜ್ವಲ್​ನ ಗ್ಯಾಂಗ್ ಮದ್ಯ ಸೇವಿಸ್ತಿತ್ತು. ಆಗ ಮತ್ತೊಂದು ಗ್ಯಾಂಗ್ ಜತೆ ಕಿರಿಕ್ ಆಗಿದೆ.


ಇದನ್ನೂ ಓದಿ:  Sriramulu: ಶ್ರೀರಾಮುಲು ಸೇತುವೆ ಪಾಲಿ'ಟ್ರಿಕ್ಸ್'; ಪವರ್ ಲೆಸ್​ ಆದ್ರಾ ಸಚಿವರು? ಪ್ರತಿಭಟನೆ ಹಿಂದಿನ ಲೆಕ್ಕಾಚಾರವೇನು?


ಬಾರ್ ಸಿಬ್ಬಂದಿ ಎರಡೂ ಗ್ಯಾಂಗ್​​ನ್ನು ಹೊರ ಕಳುಹಿಸಿದ್ದಾರೆ . ಆದ್ರೆ ಕುರುಬರ ಹಳ್ಳಿ ಬಳಿ ಗಲಾಟೆ ನಡೆದಿದ್ದು, ಪ್ರಜ್ವಲ್​ನನ್ನು ಬಿಟ್ಟು ಮೇಘರಾಜ್, ಯೋಗೇಶ್, ಕೌಶಿಕ್ ಎಸ್ಕೇಪ್ ಆಗಿದ್ದಾರೆ. ಆಗ ಎದುರಾಳಿ ಗ್ಯಾಂಗ್ ಮಚ್ಚು ಬೀಸಿದ್ದು, ಒಂದೇ ಏಟಿಗೆ ಪ್ರಜ್ವಲ್ ಕೈ ಕಟ್ ಆಗಿದೆ. ಸದ್ಯ ಜೆಸಿಬಿ ಕೈ ಮೇಲೆ ಹತ್ತಿ ಕಟ್ ಆಯ್ತು ಅಂತ ಸುಳ್ಳು ಹೇಳಿ ಪ್ರಜ್ವಲ್​ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

Published by:Mahmadrafik K
First published: