• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ganesha Festival Rules: ಈ ಬಾರಿಯೂ ಇಲ್ಲ ಅದ್ಧೂರಿ ಗಣೇಶೋತ್ಸವ; 1 ವಾರ್ಡ್​ಗೆ ಒಂದೇ ಗಣಪತಿ ಮೂರ್ತಿ!?

Ganesha Festival Rules: ಈ ಬಾರಿಯೂ ಇಲ್ಲ ಅದ್ಧೂರಿ ಗಣೇಶೋತ್ಸವ; 1 ವಾರ್ಡ್​ಗೆ ಒಂದೇ ಗಣಪತಿ ಮೂರ್ತಿ!?

ಗಣೇಶ ಹಬ್ಬಕ್ಕೆ ಬಿಬಿಎಂಪಿ ರೂಲ್ಸ್​

ಗಣೇಶ ಹಬ್ಬಕ್ಕೆ ಬಿಬಿಎಂಪಿ ರೂಲ್ಸ್​

ಗಣೇಶ ಚತುರ್ಥಿಗೆ ಬಿಬಿಎಂಪಿ‌ಯಿಂದ ಹಲವು ನಿಯಮಗಳಿಗೆ. ಕಳೆದ ಬಾರಿಯ ನಿಯಮಗಳನ್ನೇ ಈ ಬಾರಿಯೂ ಮುಂದುವರೆಸುವ ಬಗ್ಗೆ ಚರ್ಚೆ ಮಾಡ್ತೀವಿ ಎಂದು  ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​ ಹೇಳಿದ್ದಾರೆ.

  • Share this:

ಈ ಬಾರಿಯ ಗಣೇಶ ಹಬ್ಬ ಕೂಡ ಸಮೀಪಿಸಿದೆ‌. ಕಳೆದ ಬಾರಿ ಕೊರೋನಾ (Corona) ನೆಪಕೊಟ್ಟು ಸಾರ್ವಜನಿಕವಾಗಿ ಆದ್ದೂರಿಯಾಗಿ ಆಚರಣೆ (Celebration) ಮಾಡಲು ಅವಕಾಶ ಕೊಟ್ಟಿರಲಿಲ್ಲ. ಆದರೆ ಈ ಬಾರಿಯೂ ಹಲವು ನಿರ್ಬಂಧನೆಗಳು ಗಣೇಶೋತ್ಸವದ ಮೇಲೆ ಬೀಳುವ ಸಾಧ್ಯತೆ ಇದೆ‌. ಜೊತೆಗೆ ಈ ಬಾರಿಯೂ ಪಿಓಪಿ ಗಣೇಶ (POP Ganesh) ಮೂರ್ತಿಗಳನ್ನು ನಿಷೇಧಿಸಲಾಗಿದೆ. ಗಣೇಶ ಚತುರ್ಥಿಗೆ ಬಿಬಿಎಂಪಿ‌ಯಿಂದ ಹಲವು ನಿಯಮಗಳಿಗೆ. ಕಳೆದ ಬಾರಿಯ ನಿಯಮಗಳನ್ನೇ ಈ ಬಾರಿಯೂ ಮುಂದುವರೆಸುವ ಬಗ್ಗೆ ಚರ್ಚೆ ಮಾಡ್ತೀವಿ ಎಂದು  ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​ (BBMP Commissioner Tushar Girinath) ಹೇಳಿದ್ದಾರೆ.


NGT ಆದೇಶ ಹಿನ್ನೆಲೆ.. ಈ ಬಾರಿಯೂ POP ಗಣೇಶನ ಮೂರ್ತಿ ನಿಷೇಧ !


ಕೊರೋನಾ ಬಂದಾಗಿಂದ ಎಲ್ಲದರಂತೆ ಗಣೇಶೋತ್ಸವದ ಮೇಲೂ ಕರಿ ನೆರಳು ಬೀರಿತ್ತು. ಕಳೆದ ವರ್ಷ ಕೊರೋನಾ ಬಾಟಲ್ ನೆಕ್ ನಲ್ಲಿದೆ ಎಂದು ಹೇಳಿಕೆ ಅದ್ದೂರಿಯಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ತಡೆಯೊಡ್ಡಲಾಗಿದೆ. ಇದೀಗ ಈ ಬಾರಿಯೂ ಕಳೆದ ವರ್ಷದಂತೆಯೇ ಗಣೇಶೋತ್ಸವದ ಮೇಲೆ ನಿಯಮಗಳ ಹೇರುವ ಸಾಧ್ಯತೆಗಳು ದಟ್ಟವಾಗಿದೆ. ಆಗಸ್ಟ್ 31ರಂದು ಈ ಸಲದ ಗಣೇಶೋತ್ಸವ ನಡೆಯಲಿದ್ದು, ಒಂದು ವಾರ್ಡ್ ಗೆ ಒಂದೇ ಗಣೇಶನ ಮೂರ್ತಿ ಮಾತ್ರ ಅನುಮತಿ ಆದೇಶ ಜಾರಿಯಾಗುವ ಸಾಧ್ಯತೆ ಇದೆ.


Ganesha Festival 2022 Pramod muthalik calls for purchasing in only hindu shops myd mrq
ಗಣೇಶ ವಿಗ್ರಹ


ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಾತನಾಡಿದ್ದು, ಗಣೇಶ ಚತುರ್ಥಿಗೆ ಬಿಬಿಎಂಪಿ‌ಯಿಂದ ಹಲವು ನಿಯಮಗಳಿಗೆ. ಕಳೆದ ಬಾರಿಯ ನಿಯಮಗಳನ್ನೇ ಈ ಬಾರಿಯೂ ಮುಂದುವರೆಸುವ ಬಗ್ಗೆ ಚರ್ಚೆ ಮಾಡ್ತೀವಿ. ಕಳೆದ ಬಾರಿ ವಾರ್ಡಿಗೆ ಒಂದು ಗಣಪ ಅನ್ನೊ ನಿಯಮವಿತ್ತು. ಈ ಬಾರಿಯೂ ಕಳೆದ ವರ್ಷದ ನಿಯಮ ಜಾರಿ ಬಗ್ಗೆ ಪ್ರಸ್ತಾಪ ಇದೆ. ಪಿಒಪಿ ಗಣಪತಿಗಳನ್ನ ತಯಾರು ಮಾಡಬಾರದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಸೇರಿ ರೇಡ್ ಮಾಡಿ ಕ್ರಮ‌ ಕೈಗೊಳ್ಳಲಾಗುತ್ತದೆ ಎಂದರು.


ಇದನ್ನೂ ಓದಿ:  Cow Dung: ಬಣ್ಣ ಅಲ್ಲ, ಸಗಣಿ ಎರಚಿ ಇಲ್ಲಿ ಓಕುಳಿ ಆಡ್ತಾರೆ ಜನ! ನಾಗರ ಪಂಚಮಿ ಮರುದಿನ ವಿಶಿಷ್ಟ ಆಚರಣೆ


POP ಗಣೇಶನ ಮೂರ್ತಿಗೆ ಈ ಬಾರಿಯೂ ಇಲ್ಲ ಅವಕಾಶ !


ಇನ್ನು ಎಂದಿನಂತೆ ಈ ಬಾರಿಯೂ ಪಿಓಪಿಯಿಂದ ತಯಾರಿಸಲಾಗುವ ಗಣೇಶನ ವಿಗ್ರಹಗಳ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದಂತೆ ಪರಿಸರಕ್ಕೆ ಧಕ್ಕೆ ತರುವ ವಸ್ತುಗಳಿಂದ ತಯಾರಿಸಬಾರದು ಎಂದಿದೆ. ಹೀಗಾಗಿ ಬಿಬಿಎಂಪಿ ಕೂಡ ಪಿಓಪಿ ಗಣೇಶನ ಮೂರ್ತಿಬಳಸುವುದಕ್ಕೆ ನಿಷೇಧ ಹೇರಿದೆ. ಇನ್ನು ಇದಕ್ಕೂ ಮೀರಿ ಪಿಓಪಿ ಮೂರ್ತಿಗಳನ್ನು ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ಪಾಲಿಕೆ ಆಯುಕ್ತರು ಹೇಳಿದ್ದಾರೆ.


ಈ ಬಾರಿಯೂ ವಾರ್ಡಿಗೆ ಒಂದೇ ಗಣೇಶ ನಿಯಮ ತರುತ್ತಾ ಬಿಬಿಎಂಪಿ!?


ಕಳೆದ ಬಾರಿ ಬಿಬಿಎಂಪಿ ತಂದ ಈ ಆದೇಶ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಹಿಂದೂ ಪರ ಸಂಘಟನೆಗಳು ಗಣೇಶನ ಮೂರ್ತಿ ಬಿಬಿಎಂಪಿ ಕೇಂದ್ರ ಕಚೇರಿಗೆ ತಂದು ಬೃಹತ್ ಪ್ರತಿಭಟನೆಯನ್ನು ಮಾಡಿ ಆಕ್ರೋಶ ಹೊರ ಹಾಕಿತ್ತು. ಇದೀಗ ಈ ಬಾರಿಯೂ ಅದೇ ನಿಯನ ಜಾರಿ ಮಾಡಿದರೆ ಮತ್ತೊಂದು ಸುತ್ತಿನ ಕೋಲಾಹಲ ನಡೆಯಲಿದೆ. ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡರೊಬ್ಬರು, POP ಗಣಪತಿ ಮೂರ್ತಿ ಮಾರಾಟ ಮಾಡಬಾರದು ಎಂಬುವುದು ನ್ಯಾಯಯುತ ಬೇಡಿಕೆ. ಪರಿಸರಕ್ಕೆ ತೊಂದರೆ ಕೊಡುವುದಕ್ಕೆ ಅದನ್ನು ನಿಷೇಧಿಸಲಾಗಿದೆ. ಆದರೆ ಒಂದೇ ವಾರ್ಡಿಗೆ ಒಂದೇ ಗಣೇಶನ ಮೂರ್ತಿ ಎಂಬ ನಿಯಮ ಜಾರಿ ಮಾಡುವುದು ಸರಿಯಲ್ಲ ಎಂದಿದ್ದಾರೆ.


ಗಣೇಶೋತ್ಸವದಲ್ಲೂ ಶುರುವಾಯಿತು ಧರ್ಮ ದಂಗಲ್ !!


ಇನ್ನು ಗಣೇಶೋತ್ಸವಕ್ಕೆ 20ಕ್ಕೂ ಅಧಿಕ ದಿನಗಳು ಬಾಕಿ ಇರುವಾಗಲೇ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಗಣೇಶೋತ್ಸವಕ್ಕೆ ಸಂಬಂಧ ಪಟ್ಟ ಯಾವ ಖರೀದಿಯಲ್ಲೂ, ವ್ಯಾಪಾರದಲ್ಲೂ ಮುಸ್ಲಿಮರಿಗೆ ಅವಕಾಶ ಕೊಡಬಾರದು ಎಂದಿರುವುದು ಇದೀಗ ಮತ್ತೊಂದು ಸುತ್ತಿನ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.


ಇದನ್ನೂ ಓದಿ: Plastic Road: ಪ್ಲಾಸ್ಟಿಕ್ ಬಳಸಿ ತಯಾರಾಗಿದೆ ಈ ರೋಡ್, ಇದಕ್ಕಿದ್ಯಂತೆ ಇಷ್ಟೊಂದು ವರ್ಷ ಗ್ಯಾರೆಂಟಿ


ಒಟ್ಟಾರೆ ಗಣೇಶೋತ್ಸವಕ್ಕೆ ಬಿಬಿಎಂಪಿ ಒಂದಿಷ್ಟು ರೂಲ್ಸ್ ಆ್ಯಂಡ್ ರೆಗ್ಯೂಲೇಷನ್ ಸಿದ್ದ ಮಾಡಿಟ್ಟುಕೊಂಡಿದ್ದರೆ, ಅತ್ತ ಹಿಂದೂ ಪರ ಸಂಘಟನೆಗಳು ಮುಸ್ಲಿಮರಿಗೆ‌ ನೋ ಎಂಟ್ರಿ ಅಂತಿದೆ. ಇದರ ಜೊತೆಗೆ ಈ ಬಾರಿ ಎಲ್ಲಾ ಕಡೆಗಳಲ್ಲಿ ಗಣಪತಿಯನ್ನು ಕೂರಿಸಿ ಮೆರವಣಿಗೆ ನಡೆಸಲು ಅವಕಾಶಕೊಡುವಂತೆ ಒತ್ತಡ ಹೇರಲಾಗುತ್ತಿದೆ.

Published by:Pavana HS
First published: