ಅಬಕಾರಿ ಇಲಾಖೆ (Excise Department) ತಾತ್ಕಾಲಿಕ ಅಥವಾ ಸಾಂದರ್ಭಿಕ ಪರವಾನಗಿ (CL-5) ಪಡೆಯುವವರಿಗೆ ಮದ್ಯ ಖರೀದಿಸಲು ಇದ್ದ ನಿರ್ಬಂಧವನ್ನು ಸಡಿಲಗೊಳಿಸಲು ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಪ್ರಕಟಿಸಲಿರುವ ಅಬಕಾರಿ ಇಲಾಖೆ ಆ ಮೂಲಕ ಖುಷಿಯ ಸಂಗತಿಯನ್ನು ಹೇಳಲಿದೆ. ಏಪ್ರಿಲ್ (April) ತಿಂಗಳಿನಲ್ಲಿ ಕೆಎಸ್ಬಿಸಿಎಲ್ (KSBCL) ಡಿಪೋಗಳಲ್ಲಿ ಮಾತ್ರವಲ್ಲದೆ, ಇತರೆ ಮದ್ಯ ಮಳಿಗೆಯಲ್ಲೂ ಮದ್ಯ ಖರೀದಿಗೆ ಅವಕಾಶ ನೀಡುವುದಾಗಿ ಕರಡು ನಿಯಮ (Draft Rule) ಪ್ರಕಟಿಸಿತ್ತು. ಅಬಕಾರಿ ಕಾಯ್ದಿಯಡಿಯಲ್ಲಿ ತಿದ್ದುಪಡಿ ಮಾಡುವ ಮೂಲಕ ಈ ಕರಡು ಪ್ರತಿಯನ್ನು ಪ್ರಕಟಿಸಿತ್ತು. ಯಾರೂ ಕೂಡ ಕರಡು ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳು (Officers) ಸದ್ಯದಲ್ಲಿ ಅಂತಿಮ ಆದೇಶವನ್ನು ಪ್ರಕಟಿಸುವ ಬಗ್ಗೆ ತಿಳಿಸಿದ್ದಾರೆ. ಒಂದು ವೇಳೆ ಆದೇಶ ಹೊರಬಿದ್ದರೆ ಸಿಎಸ್-5 ಪಡೆದವರಿಗೆ ಮದ್ಯ ಖರೀದಿಸಲಿದ್ದ ನಿರ್ಬಂಧದ ವಿಚಾರದಲ್ಲಿ ಸಂತೋಷವಾಗುದಂತೂ ಖಚಿತ.
ಕರ್ನಾಟಕ ರಾಜ್ಯ ಪಾನೀಯ ಡಿಪೋಗಳಿಂದ ಮಾತ್ರ ಸಿಎಲ್-5 ಸನ್ನದುದಾರರು ಮದ್ಯ ಖರೀದಿಸಬೇಕಾಗಿತ್ತು. ನಿಗಿದಿತ ದಿನಾಂಕದಂದು ತೆರಳಿ ಇಂಟೆಂಟ್ ಸಲ್ಲಿಸುವ ಮೂಲಕ ಲಭ್ಯವಿರುವ ಮದ್ಯವನ್ನು ಮಾತ್ರ ಖರೀದಿಸಲು ಅವಕಾಶವಿತ್ತು. ಇಂಡೆಂಟ್ನಲ್ಲಿರುವಂತೆ ನಿಗಮದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಮದ್ಯವನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ ಈ ಸಮಯದಲ್ಲಿ ಖರೀದಿದಾದರು ಸಾಕಷ್ಟು ದೂರುಗಳನನ್ನು ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಅದರಲ್ಲಿ ಬೇಕಾದ ಮದ್ಯ ಸಿಗುತ್ತಿಲ್ಲ ಎಂದು ದೂರು ನೀಡುತ್ತಿದ್ದರು.
ಆದರೀಗ ಅಬಕಾರಿ ಇಲಾಖೆ ನಿಯಮ ತಿದ್ದುಪಡಿ ಮಾಡಲಿದೆ, ಸದ್ಯದಲ್ಲೇ ಈ ಪ್ರಕಟನೆಯನ್ನು ಹೊರಡಿಸಲಿದೆ. ಒಂದು ವೇಳೆ ಸಿಎಲ್-5 ಪಡೆಯುವವರಿಗೆ ಮದ್ಯ ಖರೀದಿಸಲು ಇದ್ದ ನಿರ್ಭಂಧ ಸಡಿಲಗೊಂಡರೆ ಸಿಎಲ್-11 (ವಿತರಕರು), ಸಿಎಲ್-2 ಚಿಲ್ಲರೆ ಮದ್ಯ ಮಾರಾಟ ಮಳಿಗೆ, ಸಿಎಲ್ 11ಸಿ ಎಂಎಸ್ಐಎಲ್ ಮಳಿಗೆಗಳಲ್ಲೂ ಸಿಎಲ್-5 ಸನ್ನದು ತೋರಿಸಿ ಮದ್ಯ ಖರೀದಿಸಬಹುದಾಗಿದೆ.
ಇದನ್ನೂ ಓದಿ: Datta Peetha: ದತ್ತಪೀಠದ ಹೋಮ ನಡೆಯುವ ಪವಿತ್ರ ಜಾಗದಲ್ಲಿ ಮಾಂಸಾಹಾರ! ಗೋರಿಗೆ ಅರ್ಪಿಸಿದರಾ ಕಿಡಿಗೇಡಿಗಳು?
ಸಿಎಲ್ 5 ಎಂದರೇನು?
ಸಿಎಲ್-5 ಎಂದರೆ ಮದ್ಯ ಬಳಕೆಗೆ ತಾತ್ಕಾಲಿಕ ಸನ್ನದು. ಅಂದರೆ ಮದುವೆ, ಹುಟ್ಟುಹಬ್ಬ ಆಚರಣೆ, ಬೀಗರೂಟ ಹೀಗೆ ಕಾರ್ಯಕ್ರಮದಂದು ಮದ್ಯ ಬಳಸುತ್ತಿರುವಿರಾದರೆ ಅದಕ್ಕೆ ಸಿಎಲ್-5 ಎಂಬ ತಾತ್ಕಾಲಿಕ ಸನ್ನದು ಅಗತ್ಯ. ಇದೊಂದು ಲೈಸನ್ಸ್ ತರ ಕಾರ್ಯ ನಿರ್ವಹಿಸುತ್ತದೆ. ಒಂದು ವೇಳೆ ಸಿಎಲ್-5 ಇಲ್ಲದೆ ಕಾರ್ಯಕ್ರಗಳಲ್ಲಿ ಮದ್ಯ ನೀಡಿದರೆ ಕಾನೂನು ಪ್ರಕಾರ ಅಪರಾಧವಾಗುತ್ತದೆ.
ಇದನ್ನೂ ಓದಿ: Gyanavapi: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಯ್ತಂತೆ ಶಿವಲಿಂಗ! ನಾಳೆಯೇ ಕೋರ್ಟ್‌ಗೆ ಅಂತಿಮ ವರದಿ
ಸಿಎಲ್-5 ಪರವಾನಗಿ ಪಡೆಯುವುದು ಎಲ್ಲಿ ಮತ್ತು ಹೇಗೆ?
ಸ್ಥಳಿಯ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಎನ್ಒಸಿ ಪಡೆದು ನಂತರ ಜಿಲ್ಲಾ ಅಬಕಾರಿ ಆಯುಕ್ತರ ಬಳಿ ಸುಮಾರು 10 ಸಾವಿರ ಶುಲ್ಕ ಪಾವತಿಸಬೇಕು. ಆ ಬಳಿಕ ಒಂದು ಇನದ ಮಟ್ಟಿಗೆ ಸಿಎಲ್ 5 ಪರವಾಗಿ ಸಿಗುತ್ತದೆ.
ಅಬಕಾರಿ ಆಯುಕ್ತರು ಸಹ ಪೊಲೀಸ್ಠಢಾನೆಗೆ ಸನ್ನದು ಪ್ರತ್ನವನ್ನು ಕಳುಹಿಸುತ್ತಾರೆ. ಆದರೆ ಇದರಲ್ಲಿ ಸ್ವದೇಶಿ ಹಘೂ ವಿದೇಶಿ ಮದ್ಯಕ್ಕೆ ಅವಕಾಶವಿದೆಯೇ ಹೊರತು. ಮಿಲಿಟರಿ ಮತ್ತು ಡ್ಯೂಟಿ ಫ್ರೀ ಮದ್ಯಗಳಿಗೆ ಅವಕಾಶವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ