HOME » NEWS » State » NEW RECORD CREATED IN IKALA KAMABALA ZP

ಭಾವನಾತ್ಮಕ ಸನ್ಮಾನದೊಂದಿಗೆ ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಐಕಳ ‌ಕಂಬಳ

ಕನೆಹಲಗೆ, ಅಡ್ಡಹಲಗೆ, ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ ಎಂಬ ವಿಭಾಗಗಳಲ್ಲಿ ಕಂಬಳ ಕ್ರೀಡೆ ಜರುಗಿದ್ದು, ಕರೊನಾ ಆತಂಕದ ನಡುವೆಯೂ ಇನ್ನೂರಕ್ಕೂ ಅಧಿಕ ಜೊತೆ ಕೋಣಗಳು ಕಂಬಳ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.

news18-kannada
Updated:February 8, 2021, 7:17 AM IST
ಭಾವನಾತ್ಮಕ ಸನ್ಮಾನದೊಂದಿಗೆ ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಐಕಳ ‌ಕಂಬಳ
ಸಾಂದರ್ಭಿಕ ಚಿತ್ರ
  • Share this:
ಕೋವಿಡ್ ನಿಯಮಗಳ ನಡುವೆ ಕರಾವಳಿಯಲ್ಲಿ ಕಂಬಳ ಕ್ರೀಡೆ ಅದ್ಧೂರಿಯಾಗಿ ನಡೆಯುತ್ತಿದೆ. ಮಂಗಳೂರು ನಗರ ಹೊರವಲಯದ ಐಕಳದಲ್ಲಿ ಎರಡನೇ ಕಂಬಳ ಕ್ರೀಡೆ ಭಾರೀ ವಿಜೃಂಭಣೆಯಿಂದ ಜರುಗಿದೆ. ಈ ಕಂಬಳ ಕೂಟ ಐತಿಹಾಸಿಕ ದಾಖಲೆಯ ಜೊತೆ ಭಾವನಾತ್ಮಕ ಸನ್ನಿವೇಶಕ್ಕೂ ಸಾಕ್ಷಿಯಾಗಿದೆ.

ಹೌದು..ಮಂಗಳೂರು ಹೊರವಲಯದ ಐಕಳ ಎಂಬಲ್ಲಿ ನಡೆದ ಕಂಬಳ ಎರಡು ಘಟನೆಗಳಿಗೆ ಸಾಕ್ಷಿಯಾಯಿತು. ಒಂದು 100 ಮೀ ದೂರವನ್ನು 9.15 ಸೆಕೆಂಡಲ್ಲಿ ಬೈಂದೂರಿನ ವಿಶ್ವನಾಥ್ ಕೋಣಗಳನ್ನು ಓಡಿಸಿ ನೂತನ ದಾಖಲೆ ಮಾಡಿದ್ರೆ, ಇನ್ನೊಂದು ಕಂಬಳ ಇತಿಹಾಸದಲ್ಲೇ ದಾಖಲೆ ಬರೆದಿರುವ ಚೆನ್ನ ಎಂಬ ಕೋಣಕ್ಕೆ ಸನ್ಮಾನ ಕಾರ್ಯಕ್ರಮ ಮಾಡುವ ಮೂಲಕ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಕಳೆದ ವರ್ಷ ಇದೇ ಐಕಳಬಾವ ಕಂಬಳದಲ್ಲಿ ಕೋಣಗಳನ್ನು 9.55 ಸೆಕೆಂಡ್‌ನಲ್ಲಿ 100 ಮೀ ಓಡಿಸುವ ಮೂಲಕ ಶ್ರೀನಿವಾಸ್ ಗೌಡ ದಾಖಲೆ ಮಾಡಿದ್ದರು. ಆದರೆ ಈ ಬಾರಿ ಕಂಬಳದ ಹುಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್ ಗೌಡ ದಾಖಲೆಯನ್ನು ಬೈಂದೂರಿನ ವಿಶ್ವನಾಥ್ ಮುರಿದಿದ್ದಾರೆ. 9.15 ಸೆಕೆಂಡಲ್ಲಿ ಓಡಿಸುವ ಮೂಲಕ ವಿಶ್ವನಾಥ್ ಹೊಸ ದಾಖಲೆ ಮಾಡಿದ್ದಾರೆ.

ಇನ್ನು ಈ ಐಕಳ ಕಂಬಳ ಕೂಟದಲ್ಲಿ ವಿಶೇಷವಾಗಿ ಕಂಬಳ ಇತಿಹಾಸದ ದಾಖಲೆಗಳ ಸರದಾರ ಚೆನ್ನ ಎಂಬ ಕೋಣಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಿತು. ಬರೋಬ್ಬರಿ 164 ಚಿನ್ನದ ಪದಕಗಳನ್ನು ಗಳಿಸಿರುವ ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಎಂಬುವವರಿಗೆ ಸೇರಿದ ಕೋಣ ಇದಾಗಿದ್ದು, ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಚೆನ್ನ ಎಂಬ ಕೋಣಕ್ಕೆ ಸನ್ಮಾನ ಮಾಡಲಾಯಿತು. ಮಂಗಳೂರು ನೂತನ ಪೊಲೀಸ್ ಕಮೀಷನರ್ ಎನ್‌.ಶಶಿಕುಮಾರ್ ಕೂಡಾ ಸಾಮಾನ್ಯ ಪ್ರೇಕ್ಷಕರಂತೆ ಕುಟುಂಬ ಸಮೇತವಾಗಿ ಬಂದು ಕಂಬಳವನ್ನು ನೋಡಿ ಸಂಭ್ರಮಪಟ್ಟರು.

ಕನೆಹಲಗೆ, ಅಡ್ಡಹಲಗೆ, ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ ಎಂಬ ವಿಭಾಗಗಳಲ್ಲಿ ಕಂಬಳ ಕ್ರೀಡೆ ಜರುಗಿದ್ದು, ಕರೊನಾ ಆತಂಕದ ನಡುವೆಯೂ ಇನ್ನೂರಕ್ಕೂ ಅಧಿಕ ಜೊತೆ ಕೋಣಗಳು ಕಂಬಳ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು. ಒಟ್ಟಿನಲ್ಲಿ ಈ ಬಾರಿಯು ಕಂಬಳ ನಿರ್ವಿಘ್ನವಾಗಿ ನಡೆಯುತ್ತಿರುವುದ ಕಂಬಳ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ.

ಇತಿಹಾಸ ಪ್ರಸಿದ್ಧ ಐಕಳ ಬಾವ "ಕಾಂತಾಬಾರೆ - ಬೂದಾಬಾರೆ" ಜೋಡುಕರೆ ಕಂಬಳ ಕೂಟದ ಫಲಿತಾoಶ
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :ಕನೆಹಲಗೆ: 5 ಜೊತೆ

ಅಡ್ಡಹಲಗೆ: 7 ಜೊತೆ

ಹಗ್ಗ ಹಿರಿಯ: 17 ಜೊತೆ

ನೇಗಿಲು ಹಿರಿಯ: 23 ಜೊತೆ

ಹಗ್ಗ ಕಿರಿಯ: 22 ಜೊತೆ

ನೇಗಿಲು ಕಿರಿಯ: 101 ಜೊತೆ

ಒಟ್ಟು ಕೋಣಗಳ ಸಂಖ್ಯೆ : 175 ಜೊತೆ

ಫಲಿತಾಂಶ:-
ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ಚಂದ್ರ ಆಳ್ವ , ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ಟ, ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಅಡ್ಡ ಹಲಗೆ:
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ, ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ಕೃಷ್ಣ ನಾಯ್ಕ್
ದ್ವಿತೀಯ: ಆಲದಪದವು ಮೇಗಿನಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ, ಹಲಗೆ ಮುಟ್ಟಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ್ರು

ಹಗ್ಗ ಹಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ, "A"ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.
ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ, "B"ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಹಗ್ಗ ಕಿರಿಯ:
ಪ್ರಥಮ: ಮೂಡಬಿದ್ರಿ ನಿವ್ ಪಡಿವಾಲ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್ಸ್ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.
ದ್ವಿತೀಯ: ಜಪ್ಪು ಮನ್ಕುತೋಟಗುತ್ತು ಸಾಚಿ ಅನಿಲ್ ಶೆಟ್ಟಿ, ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್

ನೇಗಿಲು ಹಿರಿಯ:
ಪ್ರಥಮ: ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ, "B"ಓಡಿಸಿದವರು: ಬಾರಾಡಿ ನತೀಶ್.

ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ,  "A"ಓಡಿಸಿದವರು: ಬೈಂದೂರು ವಿವೇಕ್,
Youtube Video

ನೇಗಿಲು ಕಿರಿಯ:
ಪ್ರಥಮ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್, ಓಡಿಸಿದವರು: ಮರೋಡಿ ಶೀಧರ್.

ದ್ವಿತೀಯ: ಕಾರಿಂಜ ಕೊಂಬೆಲ್ ಗುತ್ತು ಪ್ರಶಾಂತ್ ಪೂಜಾರಿ, "A"ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್.

ಫೋಟೋ ಕೃಪೆ: ಕೃಷ್ಣ ಮೋಹನ್ ಫೋಟೋಗ್ರಾಫಿ
Published by: zahir
First published: February 8, 2021, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories