New Labour Code: ಅಕ್ಟೋಬರ್ 1ರಿಂದ ಕೆಲಸದ ಅವಧಿ 9 ಗಂಟೆಯಿಂದ 12 ಗಂಟೆಗೆ ಏರಿಸಲು ಕೇಂದ್ರದ ಚಿಂತನೆ!

Salary-PF-gratuity likely to change: ಹೊಸ ಕಾರ್ಮಿಕರ ಕಾನೂನಿನ ಅನುಷ್ಠಾನದ ನಂತರ ನೌಕರರ ಸಂಬಳವೂ ಬದಲಾಗುತ್ತದೆ. ಅಕ್ಟೋಬರ್​ 1ರಿಂದ ಸಂಬಳ, ಪಿಎಫ್, ಗ್ರಾಚ್ಯುಟಿ, ಕೆಲಸದ ಸಮಯ ಬದಲಾಗುವ ಸಾಧ್ಯತೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
labour law from October 1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಕ್ಟೋಬರ್ 1 ರಿಂದ ಕಾರ್ಮಿಕರ ಕಾನೂನಿನ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತರಲು ಹೊರಟಿದೆ. ಹೊಸ ಕಾರ್ಮಿಕರ ಕಾನೂನಿನ ಪ್ರಕಾರ, ಉದ್ಯೋಗಿಗಳ ಕೆಲಸದ ಸಮಯವನ್ನು 9 ಗಂಟೆಯಿಂದ 12 ಗಂಟೆಗೆ (increased from 9 hours to 12 hours) ಹೆಚ್ಚಿಸಲಾಗುವುದು. ಹೊಸ ಕಾರ್ಮಿಕರ ಕಾನೂನಿನ ಅನುಷ್ಠಾನದ ನಂತರ ನೌಕರರ ಸಂಬಳವೂ ಬದಲಾಗುತ್ತದೆ. ಅಕ್ಟೋಬರ್​ 1ರಿಂದ ಸಂಬಳ, ಪಿಎಫ್, ಗ್ರಾಚ್ಯುಟಿ, ಕೆಲಸದ ಸಮಯ ಬದಲಾಗುವ ಸಾಧ್ಯತೆ ಇದೆ.

ಅಕ್ಟೋಬರ್​ 1ರಿಂದ ವೇತನದಲ್ಲಿ ಬದಲಾವಣೆ? 

ಕರಡು ಹಂತದಲ್ಲಿರುವ ಕಾರ್ಮಿಕರ ಕಾನೂನಿನ ಪ್ರಕಾರ, ನೌಕರರ ಮೂಲ ವೇತನ(basic pay of the employees) ಒಟ್ಟು ಸಂಬಳದ 50% ಅಥವಾ ಹೆಚ್ಚಿನದಾಗಿರುತ್ತದೆ. ಕಾರ್ಮಿಕರ ಕಾನೂನಿನ ಅನುಷ್ಠಾನವು ಹೆಚ್ಚಿನ ಉದ್ಯೋಗಿಗಳ ಸಂಬಳ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಸಂಬಳದ ಲಾಭರಹಿತ ಭಾಗವು ಒಟ್ಟು ಸಂಬಳದ ಶೇಕಡಾ 50 ಕ್ಕಿಂತ ಕಡಿಮೆಯಿರುತ್ತದೆ. ಹೊಸ ಕಾರ್ಮಿಕರ ಕಾನೂನಿನ ಅನುಷ್ಠಾನದ ನಂತರ ಒಟ್ಟು ವೇತನದಲ್ಲಿ ಇತರ ಭತ್ಯೆಗಳು ಬದಲಾಗುವ ಸಾಧ್ಯತೆಯಿದೆ.

ಗ್ರಾಚ್ಯುಟಿ & ಪಿಎಫ್ ಹೆಚ್ಚಳ ಸಾಧ್ಯತೆ 

ಮೂಲ ವೇತನದ ಹೆಚ್ಚಳವು ಮೂಲ ವೇತನವನ್ನು ಆಧರಿಸಿರುವುದರಿಂದ ಪಿಎಫ್ (PF)ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ. ಮೂಲ ವೇತನದಲ್ಲಿ ಹೆಚ್ಚಳವು PF ಅನ್ನು ಹೆಚ್ಚಿಸುತ್ತದೆ. ಇದು ಟೇಕ್ ಹೋಮ್ ಸಂಬಳದಲ್ಲಿ ಕಡಿತಕ್ಕೆ ಕಾರಣವಾಗುತ್ತದೆ. ತಜ್ಞರ ಪ್ರಕಾರ ಗ್ರಾಚ್ಯುಟಿ ಮತ್ತು ಪಿಎಫ್ ಗೆ ಕೊಡುಗೆ ಹೆಚ್ಚಳವಾಗುತ್ತದೆ. ಅಂದರೆ ನಿವೃತ್ತಿಯ ನಂತರ ಉದ್ಯೋಗಿ ಪಡೆಯುವ ಮೊತ್ತ ಹೆಚ್ಚಾಗುತ್ತದೆ. ವೇತನ ರಚನೆಯಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳು ಹೆಚ್ಚಿನ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಪಿಎಫ್ ಮತ್ತು ಗ್ರಾಚ್ಯುಟಿ ಹೆಚ್ಚಳದಿಂದ ಕಂಪನಿಗಳ ವೆಚ್ಚವೂ ಹೆಚ್ಚಾಗುತ್ತದೆ. ಆಗ ಕಂಪನಿಗಳು ಉದ್ಯೋಗಿಗಳಿಗೆ ಪಿಎಫ್‌ಗೆ ಹೆಚ್ಚಿನ ಕೊಡುಗೆ ನೀಡಬೇಕಾಗುತ್ತದೆ.

ಕೆಲಸದ ಸಮಯದಲ್ಲಿ ಬದಲಾವಣೆ? 

ಹೊಸ ಕರಡು ಕಾನೂನಿನಲ್ಲಿ, ಗರಿಷ್ಠ ಕೆಲಸದ ಸಮಯವನ್ನು 9 ಗಂಟೆಗಳಿಂದ 12 ಗಂಟೆಗಳಿ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಕರಡು ನಿಯಮಗಳು 15 ರಿಂದ 30 ನಿಮಿಷಗಳ ನಡುವಿನ ಹೆಚ್ಚುವರಿ ಕೆಲಸವನ್ನು 30 ನಿಮಿಷಗಳ ಕಾಲ ಅಧಿಕಾವಧಿ ಎಂದು ಎಣಿಕೆ ಮಾಡುತ್ತವೆ. ಪ್ರಸ್ತುತ ನಿಯಮದ ಪ್ರಕಾ 30 ನಿಮಿಷಗಳಿಗಿಂತ ಕಡಿಮೆ ಅವಧಿಯನ್ನು ಅರ್ಹ ಅಧಿಕಾವಧಿ ಎಂದು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ: ಕೇವಲ 1 ರೂಪಾಯಿ ನಾಣ್ಯ ಇದ್ದರೆ ₹10 ಕೋಟಿ ನಿಮ್ಮ ಕೈಯಲ್ಲಿ..! ಎಲ್ಲಿ, ಹೇಗೆ ಅನ್ನೋ ಮಾಹಿತಿ ಇಲ್ಲಿದೆ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: