ಯೋಗೇಶ್‌ ಗೌಡ ಕೊಲೆ ಪ್ರಕರಣ; ಸಿಬಿಐ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲಿಗೆ

ನಾಗರಾಜ ವಿಚಾರಣೆ ವೇಳೆ ಹೇಳಿದ ವಿಷಯಗಳು ಸಿಬಿಐ ಅಧಿಕಾರಿಗಳನ್ನು ದಂಗುಬಡಿಸಿದೆ. ಕಾಂಗ್ರೆಸ್ ಸೇರ್ಪಡೆ ಆಗಲು ಹಾಗೂ ಕೊಲೆ ಪ್ರಕರಣದ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಮಲ್ಲಮ್ಮಳನ್ನು ಒಪ್ಪಿಸಿ‌ದ್ದೇವೆ. ಈಗಾಗಲೇ 60 ಲಕ್ಷ ರೂಪಾಯಿ ಹಣ ಕೊಡಲಾಗಿದೆ. ಇನ್ನೂ ಒಂದು ಕೋಟಿ ರೂಪಾಯಿ ಕೊಡಬೇಕಾಗಿದೆ. ವಿನಯ್ ಕುಲಕರ್ಣಿ ಒಂದು ಕೋಟಿ ಹಣ ನೀಡಲಿದ್ದಾರೆ.

ಮೃತ ಯೋಗೇಶ್ ಗೌಡ

ಮೃತ ಯೋಗೇಶ್ ಗೌಡ

  • Share this:
ಧಾರವಾಡ(ನ.12): ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಹಿಂಡಲಗಾ ಜೈಲಿಗೆ ಕಳಿಸಿರುವ ಸಿಬಿಐ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಕಾಂಗ್ರೆಸ್ ಮುಖಂಡ ನಾಗರಾಜ ಗೌರಿಗೆ ಸಿಬಿಐನಿಂದ ಭರ್ಜರಿ ಡ್ರಿಲ್ ಮಾಡಿದ್ದಾರೆ. ಸತತ ನಾಲ್ಕು ಗಂಟೆಗಳ‌ ಕಾಲ ನಾಗರಾಜ ಗೌರಿಗೆ ಡ್ರಿಲ್‌ ಮಾಡಿದ ಮಾಡಲಾಗಿದೆ. ಕೊಲೆ ಸಾಕ್ಷ್ಯ ನಷ್ಟ ಮಾಡಲು ಯೋಗೇಶ್‌ಗೌಡ ಪತ್ನಿ ಮಲ್ಲಮ್ಮಳನ್ನು ವ್ಯವಸ್ಥಿತವಾಗಿ ಹೈಜಾಕ್ ಮಾಡಿರುವುದು ಪತ್ತೆಯಾಗಿದೆ. ಯೋಗೇಶ್‌ಗೌಡ ಕೊಲೆ‌ ಪ್ರಕರಣ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಜೊತೆ ನಾಗರಾಜ್ ಗೌರಿ ಸಭೆ ನಡೆಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್‌‌ನಲ್ಲಿ ಸಭೆ ನಡೆಸಿದ್ದಾಗಿ ಸಿಬಿಐ ಅಧಿಕಾರಿಗಳ ಬಳಿ ನಾಗರಾಜ ಗೌರಿ ಬಾಯಿ ಬಿಟ್ಟಿದ್ದಾನೆ.

ನಾಗರಾಜ ವಿಚಾರಣೆ ವೇಳೆ ಹೇಳಿದ ವಿಷಯಗಳು ಸಿಬಿಐ ಅಧಿಕಾರಿಗಳನ್ನು ದಂಗುಬಡಿಸಿದೆ. ಕಾಂಗ್ರೆಸ್ ಸೇರ್ಪಡೆ ಆಗಲು ಹಾಗೂ ಕೊಲೆ ಪ್ರಕರಣದ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಮಲ್ಲಮ್ಮಳನ್ನು ಒಪ್ಪಿಸಿ‌ದ್ದೇವೆ. ಈಗಾಗಲೇ 60 ಲಕ್ಷ ರೂಪಾಯಿ ಹಣ ಕೊಡಲಾಗಿದೆ. ಇನ್ನೂ ಒಂದು ಕೋಟಿ ರೂಪಾಯಿ ಕೊಡಬೇಕಾಗಿದೆ. ವಿನಯ್ ಕುಲಕರ್ಣಿ ಒಂದು ಕೋಟಿ ಹಣ ನೀಡಲಿದ್ದಾರೆ. ಮಿಕ್ಕ ಹಣವನ್ನು ಬಸವರಾಜ್ ಮುತ್ತಗಿ ಕೊಡಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಮೊದಲು ಮಲ್ಲಮ್ಮಳಿಗೆ 60 ಲಕ್ಷ ರೂಪಾಯಿ ನೀಡಿ ಅಗ್ರಿಮೆಂಟ್ ಬಾಂಡ್ ಬರೆಸಿಕೊಳ್ಳಲಾಗಿತ್ತು.

ಕಲ್ಲಾಗಿಬಿಡುವ ಭಯದಿಂದ ಕೊಂಗಳ್ಳಿಬೆಟ್ಟಕ್ಕೆ ಕಾಲಿಡದ ಮಹಿಳೆಯರು; ವಿಚಿತ್ರವಾದರೂ ಸತ್ಯ

ಈ ‌ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ. ಅಂದಿನ ಸಭೆಯಲ್ಲಿ ಮತ್ತೋರ್ವ ಜಿಲ್ಲಾ ಪಂಚಾಯತ ಸದಸ್ಯ ಸುರೇಶ್‌ಗೌಡ ಸಹ ಭಾಗಿಯಾಗಿದ್ದ. ನಾಗರಾಜ ಗೌರಿ, ಬಸವರಾಜ ಮುತ್ತಗಿ, ಸುರೇಶ್ ಗೌಡ ಮೂವರು ಖಾಸಗಿ ಹೊಟೆಲ್‌ನಲ್ಲಿ ಸಭೆ ನಡೆಸಿದ್ದರು.  ಈ ಎಲ್ಲಾ ಬೆಚ್ಚಿ ಬೀಳಿಸುವ ಅಂಶಗಳು ಸಿಬಿಐ ವಿಚಾರಣೆಯಲ್ಲಿ ಬಯಲಿಗೆ ಬಂದಿವೆ.‌

ಹೀಗಾಗಿ ಕೊಲೆ‌ ಸಾಕ್ಷ್ಯ ನಾಶದ ಸಂಚಿನ ಕುರಿತು ಸಿಬಿಐ ತನಿಖೆ  ತೀವ್ರಗೊಂಡಿದೆ.‌‌ ಒಂದೇ ದಿನ ಮೂರು ಬಾರಿ ಬಸವರಾಜ ಮುತ್ತಗಿಯನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಸಿಬಿಐ ಪ್ರಶ್ನೆಗಳಿಗೆ ಬಸವರಾಜ್ ಮುತ್ತಗಿ ಕಕ್ಕಾಬಿಕ್ಕಿಯಾಗಿದ್ದಾನೆ. ಕೊಲೆ ಆರೋಪಿ ಬಸವರಾಜ ಮುತ್ತಗಿ ಚಲನವಲನದ ಇಂಚಿಂಚು ಮಾಹಿತಿಯನ್ನು ಸಿಬಿಐ ಕಲೆ‌ ಹಾಕುತ್ತಿದೆ.

ಕೊಲೆ ಪ್ರಕರಣದಲ್ಲಿ ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗೆ ಹಣ ಸಂದಾಯ ಮಾಡಿದ ಬಗ್ಗೆ ಪ್ರಶ್ನೆ ಕೇಳಿರುವ ಸಿಬಿಐ ಅಧಿಕಾರಿಗಳು ಬಸವರಾಜ ಮುತ್ತಗಿ ಬೆವರಿಳಿಸಿದ್ದಾರೆ. ಈಗಾಗಲೆ ಆರೋಪಿತರು ಸಭೆ ನಡೆಸಿದ್ದ ಹೋಟೆಲ್‌ಗೆ ಭೇಟಿ ನೀಡಿ‌‌ರುವ ಸಿಬಿಐ ತಂಡ ಸಮಗ್ರ ಮಾಹಿತಿ ಕಲೆ‌ ಹಾಕಿದೆ.
Published by:Latha CG
First published: