Heavy Rain: ಮಹಾಮಳೆಗೆ ತತ್ತರಿಸಿದ ಸುಳ್ಯ, ಗೃಹಪ್ರವೇಶಕ್ಕೆ ಸಿದ್ಧಗೊಂಡಿದ್ದ ಮನೆ ನೆಲಸಮ!

ಜುಲೈ 10 ರಂದು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನೂ ನೀಡಲಾಗಿತ್ತು. ಈ ಕಾರಣಕ್ಕಾಗಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಅನ್ನೂ ಘೋಷಿಸಿತ್ತು. ಇದೇ ದಿನ ಈ ಘಟನೆ ನಡೆದಿದ್ದು, ಗುಡ್ಡ ಕುಸಿಯುವ ವಾರದ ಹಿಂದೆ ಗುಡ್ಡದ ಮೇಲಿಂದ ಮರವೊಂದು ಮನೆ ಮೇಲೆ ಬಿದ್ದು, ಮನೆ ಹಿಂಬದಿಯ ಗೋಡೆಗೆ ಹಾನಿಯಾಗಿತ್ತು. 

ಮಳೆಗೆ ಕುಸಿದು ಬಿದ್ದ ಹೊಸ ಮನೆ

ಮಳೆಗೆ ಕುಸಿದು ಬಿದ್ದ ಹೊಸ ಮನೆ

  • Share this:
ಸುಳ್ಯ, ದಕ್ಷಿಣ ಕನ್ನಡ: ಇನ್ನೇನು ಮನೆಯ (House) ಎಲ್ಲಾ ಕೆಲಸ ಮುಗಿದು ಗೃಹ ಪ್ರವೇಶಕ್ಕೆ‌ (House Opening Ceremony) ಸಿದ್ಧಗೊಳ್ಳುತ್ತಿದ್ದ ಮನೆಯೊಂದು ಪ್ರಕೃತಿಯ ವಿಕೋಪಕ್ಕೆ ನೆಲಸಮವಾಗಿದೆ. ತಮ್ಮ ಮನೆ ಇತರ ಮನೆಗಳಿಗಿಂತ ಕೊಂಚ ಭಿನ್ನವಾಗಿರಬೇಕೆಂದು ಸಾಂಪ್ರದಾಯಿಕ ಶೈಲಿಯಲ್ಲಿ (Traditional) ನಿರ್ಮಿಸಿದ್ದ ಆ ಮನೆಯ ಅವಶೇಶವೂ ಸಿಗದ ರೀತಿಯಲ್ಲಿ ನಾಶವಾಗಿದೆ. ಹೌದು ಇಂಥಹ ಒಂದು ದುರಾದೃಷ್ಟಕರ ಘಟನೆಯೊಂದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ತಾಲೂಕಿನ ಹರಿಹರ ಪಲ್ಲತಡ್ಕ ಎಂಬಲ್ಲಿ ನಡೆದಿದೆ. ಕಳೆದ ಒಂದು ವಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಘಟ್ಟ ಪ್ರದೇಶಗಳಲ್ಲಿ ನಿರಂತರ ಎಡೆಬಿಡದೆ ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ನದಿ (River), ಹಳ್ಳ, ತೊರೆಗಳು ತುಂಬಿ ತುಳುಕುತ್ತಿದೆ. ನದಿ, ತೋಡುಗಳಲ್ಲಿ ಮಾತ್ರವಲ್ಲದೆ ಬೆಟ್ಟ-ಗುಡ್ಡಗಳ ಸೆಲೆಯಿಂದಲೂ ಮಣ್ಣಿನೊಂದಿಗೆ ನೀರು ಹರಿಯುತ್ತಿದ್ದು, ಇದೇ ರೀತಿ ಗುಡ್ಡದೊಳಗಿಂದ ನೀರು ಹರಿದ ಪರಿಣಾಮ ಇಡೀ ಗುಡ್ಡದ ಮಣ್ಣು ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ಮೇಲೆ ಬಿದ್ದಿದೆ. 

ಮನೆ ಮೇಲೆ ಕುಸಿದು ಬಿದ್ದಿದ್ದ ಗುಡ್ಡ

ಜುಲೈ 10 ರಂದು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನೂ ನೀಡಲಾಗಿತ್ತು. ಈ ಕಾರಣಕ್ಕಾಗಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಅನ್ನೂ ಘೋಷಿಸಿತ್ತು. ಇದೇ ದಿನ ಈ ಘಟನೆ ನಡೆದಿದ್ದು, ಗುಡ್ಡ ಕುಸಿಯುವ ವಾರದ ಹಿಂದೆ ಗುಡ್ಡದ ಮೇಲಿಂದ ಮರವೊಂದು ಮನೆ ಮೇಲೆ ಬಿದ್ದು, ಮನೆ ಹಿಂಬದಿಯ ಗೋಡೆಗೆ ಹಾನಿಯಾಗಿತ್ತು. ಇದರಿಂದಾಗಿ ಮನೆ ಗೋಡೆಗಳಲ್ಲಿ  ಬಿರುಕೂ ಕೂಡಾ ಬಿಟ್ಟಿತ್ತು. ಈ ಕಾರಣಕ್ಕಾಗಿ  ಬಿರುಕು ಬಿಟ್ಟಿರುವ ಗೋಡೆ ರಿಪೇರಿ ಕೆಲಸವನ್ನೂ  ಮಾಡಲಾಗಿತ್ತು. ಜುಲೈ 18ರಂದು ಗೃಹಪ್ರವೇಶ ನೆರವೇರಿಸಲು ಎಲ್ಲ ತಯಾರಿ ನಡೆದಿತ್ತು. ಆದರೆ ಅಷ್ಟರಲ್ಲೇ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ.

ಮಳೆಗೆ ಕುಸಿದು ಬಿದ್ದ ಮನೆ


ಸ್ವಲ್ಪದರಲ್ಲೇ ತಪ್ಪಿದ ಜೀವಹಾನಿ

ಹರಿಹರಪಳ್ಳತ್ತಡ್ಕದ  ತೇಜ್ ಕುಮಾರ್ ಮತ್ತು ತಾರಾಮತಿ ದಂಪತಿಯ ಮನೆ ಇದಾಗಿದ್ದು, ದಂಪತಿಗಳ ಇಬ್ಬರು ಮಕ್ಕಳಾದ  ಪ್ರಜ್ವಲ್ ಮತ್ತು ಉಜ್ವಲ್ ಎಂಬ ಸಹೋದರರು ಘಟನೆ ಸಂಭವಿಸುವಾಗ  ಮನೆಯಲ್ಲೇ ಇದ್ದರು. ಮನೆಯ ನೆಲಕ್ಕೆ ಹಾಸಲು 1.5 ಲಕ್ಷದ ಟೈಲ್ಸ್ ಗಳನ್ನು ಜುಲೈ 9 ರಂದು ಖರೀದಿಸಿ ತಂದು ಮನೆಯಲ್ಲಿಡಲಾಗಿತ್ತು. ಈ ಕಾರಣಕ್ಕಾಗಿ ಸೋದರರಿಬ್ಬರೂ ಮನೆಯ ಹಾಲ್​ನಲ್ಲಿ‌ ಮಲಗಿ, 6.30 ಕ್ಕೆ ಮನೆಯಿಂದ ಹೊರಬಂದಿದ್ದರು. ಈ ವೇಳೆ ಗುಡ್ಡ ಕುಸಿದು 3 ಬೆಡ್ ರೂಮ್ ಗಳ ತುಂಬ ಮಣ್ಣು ಆವರಿಸಿಕೊಂಡಿದೆ. ಇನ್ನು ಗುಡ್ಡ ಕುಸಿದ ಹಿನ್ನೆಲೆ ಮನೆ ಬಳಿಯಿದ್ದ 3 ಬೈಕ್​ಗಳು ಮಣ್ಣಲ್ಲಿ ಸಿಲುಕಿ ಹಾನಿಯಾಗಿವೆ. ಮನೆಯಲ್ಲಿದ್ದವರು ಹೊರ ಬಂದಿರೋದ್ರಿಂದ ದುರಂತವೊಂದು ತಪ್ಪಿದೆ.

ಇದನ್ನೂ ಓದಿ: Flood: ಮಹಾಮಳೆಗೆ ಕೃಷ್ಣೆ, ಭೀಮೆಯರ ಅಬ್ಬರ; ದೇವರಿಗೂ ಜಲದಿಗ್ಬಂಧನ!

20 ಲಕ್ಷ ರೂಪಾಯಿ ನೀರಿನಲ್ಲಿ ಹೋಮ

ಸುಮಾರು 20 ಲಕ್ಷ ವೆಚ್ಚದಲ್ಲಿ ಈ ಮನೆಯ ಕೆಲಸವನ್ನು ಮಾಡಲಾಗುತ್ತಿತ್ತು. ಈ ಹಿಂದೆ ಇದ್ದ ಮನೆಯನ್ನು ಸಂಪೂರ್ಣ ನವೀಕರಣಗೊಳಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಮನೆಯನ್ನು ಹೊಸದಾಗಿ ನಿರ್ಮಿಸಲಾಗುತ್ತಿತ್ತು.  ಮನೆಯ ಗೃಹ ಪ್ರವೇಶ ನಡೆದ ಬಳಿಕ ಎರಡು ತಿಂಗಳು ಕಳೆದು ಮನೆಯ ಹಿರಿಯ ಮಗ ಪ್ರಜ್ವಲ್ ಮದುವೆಯನ್ನೂ ಇದೇ ಮನೆಯಲ್ಲಿ ಮಾಡಲು ಯೋಜನೆ ಹಾಕಲಾಗಿತ್ತು. ಈಗಾಗಲೇ ಪ್ರಜ್ವಲ್ ಗೆ ಹುಡುಗಿಯನ್ನೂ ಹುಡುಕಿ ಮದುವೆಗೆ ದಿನ ಮಾತ್ರ ನಿಗದಿಯಾಗಲು ಬಾಕಿ ಉಳಿದಿತ್ತು. ಆದರೆ ಹಾಕಿಕೊಂಡ ಯೋಜನೆಯನ್ನೆಲ್ಲಾ ಪ್ರಕೃತಿ ಒಂದೇ ಕ್ಷಣದಲ್ಲಿ ಮಣ್ಣುಪಾಲು ಮಾಡಿದೆ.

ಮಳೆಗೆ ಕುಸಿದು ಬಿದ್ದ ಮನೆ


ಇದನ್ನೂ ಓದಿ: Compensation: ಮಹಾಮಳೆಯಿಂದ ಬದುಕು ಕಳೆದುಕೊಂಡವರಿಗೆ ಸರ್ಕಾರದ ಆಸರೆ, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ

ಮಳೆಗೆ ಕುಸಿದು ಬಿದ್ದ ಮನೆ


ಮನೆಯನ್ನೇ ಮುಚ್ಚಿದ ಗುಡ್ಡದ ಮಣ್ಣು

ಗುಡ್ಡದ ಮಣ್ಣು ಮನೆಯನ್ನೇ ಮುಚ್ಚಿದ್ದು, ಮನೆಯ ಮೇಲೆ ಇದೀಗ ಸುಮಾರು 400 ಲಾರಿ ಲೋಡ್ ನಷ್ಟು ಮಣ್ಣು ತುಂಬಿದೆ. ಹಲವು ಆಸೆ,ನಿರೀಕ್ಷೆಗಳನ್ನು ಇಟ್ಟುಕೊಂಡು ಮನೆ ಸಿದ್ಧಪಡಿಸಲಾಗಿತ್ತು. ಆದರೆ ಮಳೆ ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಆಹುತಿ ಪಡೆದಿದೆ ಎಂದು ಮನೆ ಮಗ ಉಜ್ವಲ್ ಬೇಸರ ವ್ಯಕ್ತಪಡಿಸುತ್ತಾರೆ. ಘಟನೆ ನಡೆದ ಬಳಿಕ ಸ್ಥಳೀಯ ಗ್ರಾಮಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟಕ್ಕೆ ಪರಿಹಾರ ಸಿಗಲಿದೆಯೇ ಎನ್ನುವ ನಿರೀಕ್ಷೆಯಲ್ಲಿ ಮನೆ ಕಳೆದುಕೊಂಡ ಕುಟುಂಬವಿದೆ.
Published by:Annappa Achari
First published: