Elephant: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಯ ಆಗಮನ, ಮತ್ತೊಂದೆಡೆ ಪ್ರವಾಸಿಗರ ಹೀರೋ ನಿಧನ!

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈಗ ಮತ್ತೊಂದು ಸಂಭ್ರಮ. ಯಾಕೆಂದರೆ ಈ ಉದ್ಯಾನವನಕ್ಕೆ ನೂತನ ಅತಿಥಿಯ ಆಗಮನವಾಗಿದೆ. ಇಲ್ಲಿನ ಸಾಕಾನೆ ವನಶ್ರೀ ಹೆಣ್ಣು ಮರಿಗೆ ಜನ್ಮನೀಡಿದೆ. ಈ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆಗಳ ಸಂಖ್ಯೆ 25 ಏರಿಕೆಯಾಗಿದೆ.

ಹೆಣ್ಣು ಮರಿಗೆ ಜನ್ಮ ನೀಡಿದ ಸಾಕಾನೆ ವನಶ್ರೀ

ಹೆಣ್ಣು ಮರಿಗೆ ಜನ್ಮ ನೀಡಿದ ಸಾಕಾನೆ ವನಶ್ರೀ

  • Share this:
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (Bannerghatta National Park) ನೂತನ ಅತಿಥಿ (New Guest) ಆಗಮನವಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ವನಶ್ರೀ ಹೆಣ್ಣು ಮರಿಗೆ (Baby Elephant) ಜನ್ಮ ನೀಡಿದ್ದು, ತಾಯಿ ಆನೆ (Elephant) ಮತ್ತು ಮರಿ ಆನೆ ಆರೋಗ್ಯವಾಗಿದೆ. ಉದ್ಯಾನವನ ವ್ಯಾಪ್ತಿಯ ಸೀಗೆಕಟ್ಟೆ ಆನೆ ನಿರ್ವಹಣಾ ಕೇಂದ್ರದಲ್ಲಿ ಹೆಣ್ಣು ಮರಿಗೆ ಸಾಕಾನೆ ವನಶ್ರೀ ಜನ್ಮ ನೀಡಿದೆ. ಈಗ ಇತರೆ ಆನೆಗಳೊಂದಿಗೆ ತಾಯಿ ಆನೆ ಜೊತೆ ನೂತನ ಅತಿಥಿ ಮರಿಯಾನೆ ಆಟವಾಡಿಕೊಂಡಿದೆ (Playing). ಮಾವುತರು ಮತ್ತು ಕಾವಾಡಿಗಳ ಪೋಷಣೆ ಮತ್ತು ಉದ್ಯಾನವನದ ವೈದ್ಯಕೀಯ ತಂಡದ ಉಸ್ತುವಾರಿಯಲ್ಲಿ ತಾಯಿ ಮತ್ತು ಮರಿ ಆನೆಯನ್ನು ಪೋಷಣೆ ಮಾಡಲಾಗುತ್ತಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈಗ ಮತ್ತೊಂದು ಸಂಭ್ರಮ. ಯಾಕೆಂದರೆ ಈ ಉದ್ಯಾನವನಕ್ಕೆ ನೂತನ ಅತಿಥಿಯ ಆಗಮನವಾಗಿದೆ. ಇಲ್ಲಿನ ಸಾಕಾನೆ ವನಶ್ರೀ ಹೆಣ್ಣು ಮರಿಗೆ ಜನ್ಮನೀಡಿದೆ. ಈ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆಗಳ ಸಂಖ್ಯೆ 25 ಏರಿಕೆಯಾಗಿದೆ.

New guest to Bannerghatta biological park elephant gave birth to a baby
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ


3ನೇ ಮರಿಗೆ ಜನ್ಮ ನೀಡಿರುವ ಸಾಕಾನೆ ವನಶ್ರೀ
15 ವರ್ಷದ ಸಾಕಾನೆ ವನಶ್ರೀ ಮೂರನೇ ಮರಿಗೆ ಜನ್ಮ ನೀಡಿದೆ. ಇದಕ್ಕೂ ಮೊದಲು 2014ರಲ್ಲಿ ವನಶ್ರೀ ಗಂಡು ಮರಿ ಸಂಪತ್ಗೆ ಜನ್ಮ ನೀಡಿತ್ತು. ನಂತರ 2020ರಲ್ಲಿ ಹೆಣ್ಣು ಮರಿ ತುಳಸಿಗೆ ಜನ್ಮ ನೀಡಿತ್ತು. ಇದೀಗ ಮತ್ತೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಈಗ್ಲೂ ನಡೀತಿದೆ ಗೋಮಾಂಸ ವ್ಯಾಪಾರ; ಕಾನೂನು ಪ್ರಶ್ನಿಸಿ ಟೀಕೆ!

ಬನ್ನೇರುಘಟ್ಟದಲ್ಲಿ ಆನೆಗಳ ಸಂಖ್ಯೆ 25ಕ್ಕೆ ಏರಿಕೆ
ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ತಾಯಿ ಆನೆ ಮತ್ತು ಮರಿ ಆನೆ ಎರಡು ಆರೋಗ್ಯವಾಗಿದೆ. ಪ್ರಸ್ತುತ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸೀಗೆಕಟ್ಟೆ ಸಾಕಾನೆಗಳ ಬಿಡಾರದಲ್ಲಿ ಆನೆಗಳನ್ನು ನೋಡಿಕೊಳ್ಳಲಾಗುತ್ತಿದೆ. ವನಶ್ರೀ ಮರಿಗೆ ಜನ್ಮ ನೀಡಿದ ಹಿನ್ನೆಲೆ ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆಗಳ ಸಂಖ್ಯೆ 25 ಏರಿಕೆಯಾಗಿದೆ.

New guest to Bannerghatta biological park elephant gave birth to a baby
ಹೆಣ್ಣು ಮರಿಗೆ ಜನ್ಮ ನೀಡಿದ ವನಶ್ರೀ


ಸಂತಸದ ಜೊತೆ ಆವರಿಸಿದ ಸೂತಕ
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂತಸದ ಜೊತೆಗೆ ಸೂತಕ ಕೂಡ ಆವರಿಸಿದೆ. ಆನಾರೋಗ್ಯದ ಹಿನ್ನೆಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸುಂದರ್ ಎಂಬ ಸಾಕಾನೆ ಸಾವನ್ನಪ್ಪಿದೆ. ಕಳೆದೊಂದು ವಾರದಿಂದ ಅನಾರೋಗ್ಯ ಪೀಡಿತವಾಗಿದ್ದ ಸಾಕಾನೆ ಸುಂದರ್ಗೆ ಉದ್ಯಾನವನದ ವೈದ್ಯಕೀಯ ತಂಡ ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಸುಂದರ್​ ಆನೆ
ಆದರೂ ಚಿಕಿತ್ಸೆ ಫಲಕಾರಿಯಾಗದೆ ಸುಂದರ್ ಅನ್ನೋ ಆನೆ ಸಾವನ್ನಪ್ಪಿದೆ. 2014 ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ದೇವಸ್ಥಾನದಿಂದ ರಕ್ಷಣೆ ಮಾಡಿ ಈ ಆನೆಯನ್ನು ತರಲಾಗಿತ್ತು. ಸುಂದರ್ ಆನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆಗಳಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.

New guest to Bannerghatta biological park elephant gave birth to a baby
ಸುಂದರ್ ಅನ್ನೋ ಆನೆ ಸಾವು


ಹೆಣ್ಣಾನೆಗಳಿಗೆ ಕಾವಲುಗಾರನಾಗಿದ್ದ ಸುಂದರ್
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆಗಳ ಲೀಡರ್ ಆಗಿದ್ದ ಸುಂದರ್ ಆನೆ, ಪ್ರಾರಂಭದಲ್ಲಿ ಆಟಾಟೋಪ ಮಾಡುತ್ತಿದ್ದ. ದಿನ ಕಳೆದಂತೆ ಸಾಕಾನೆಗಳೊಂದಿಗೆ ಪಳಗಿ ಸೌಮ್ಯ ಸ್ವಭಾವಿಯಾಗಿ ಬದಲಾಗಿದ್ದ. ಸಾಕಾನೆಗಳೊಂದಿಗೆ ರಾತ್ರಿ ವೇಳೆ ಆಹಾರಕ್ಕೆ ತೆರಳುತ್ತಿದ್ದ ಸುಂದರ್ ಉದ್ಯಾನವನದ ಹೆಣ್ಣಾನೆಗಳಿಗೆ ಕಾವಲುಗಾರನಾಗಿದ್ದ.

ಸ್ವಾತಂತ್ರ್ಯ ದಿನದಂದು ಭರ್ಜರಿ ಕಲೆಕ್ಷನ್
ಕೊರೋನಾ ಕಾಟದಿಂದ ಥಂಡಾ ಹೊಡೆದಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ವಾತಂತ್ರ್ಯ ಅಮೃತಮಹೋತ್ಸವ ಬೂಸ್ಟರ್ ಡೋಸ್ ನೀಡಿದೆ. 75ನೇ ಸ್ವತಂತ್ರ ಅಮೃತ ಮಹೋತ್ಸವದಂದು ಬರೋಬ್ಬರಿ 29,571 ಮಂದಿ ಪ್ರವಾಸಿಗರು ಬನ್ನೇರುಘಟ್ಟ ಪಾಕ್ರ್ನ್ನು ವೀಕ್ಷಣೆ ಮಾಡಿದ್ದಾರೆ. ಉದ್ಯಾನವನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರವಾಸಿಗರು ಆಗಮಿಸಿದಂತೆ.

ಇದನ್ನೂ ಓದಿ: ಹೆಜ್ಜೆ ಗುರುತು ಇದೆ, ಆದ್ರೆ ಚಿರತೆ ಸಿಕ್ತಿಲ್ಲ! 24ನೇ ದಿನವೂ ಫಲಕೊಡದ ಆಪರೇಷನ್!

ಉದ್ಯಾನವನದಲ್ಲಿ ದಾಖಲೆಯ 50,13,980 ರೂಪಾಯಿ ಹಣ ಸಂಗ್ರಹವಾಗಿದೆ. ಅದೇ ದಿನ ಸಫಾರಿಗೆ 6 ಸಾವಿರಕ್ಕೂ ಅಧಿಕ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 3 ದಿನ ಸರಣಿ ಸರ್ಕಾರಿ ರಜೆ, ಪ್ರಕೃತಿ ಮತ್ತು ವನ್ಯಜೀವಿಗಳ ಮೇಲಿನ ಪ್ರೀತಿಯಿಂದ ಪ್ರವಾಸಿಗರು ಭೇಟಿ ನೀಡಿದ್ದರು. ಅಲ್ಲದೇ 75ನೇ ಸ್ವತಂತ್ರ ಅಮೃತ ಮಹೋತ್ಸವ ಅಂಗವಾಗಿ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರಿಂದ ಹೆಚ್ಚು ಪ್ರವಾಸಿಗರು ಭೇಟಿ ನೀಡಲು ಸಾಧ್ಯವಾಗಿದೆ.
Published by:Thara Kemmara
First published: