Yadagiriಯಲ್ಲಿ ಶೀಘ್ರವೇ ಮೆಡಿಕಲ್ ಕಾಲೇಜು ಆರಂಭ; 150 ಸೀಟುಗಳ ಪ್ರವೇಶಾತಿಗೆ ಅನುಮೋದನೆ

ಕೇಂದ್ರದ ನೀತಿ ಆಯೋಗದ ವರದಿ ಪ್ರಕಾರ, ಯಾದಗಿರಿ ಜಿಲ್ಲೆಯು ದೇಶದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಹಿಂದುಳಿದ ಜಿಲ್ಲೆಯಲ್ಲಿ ಆರೋಗ್ಯದ ಸೌಲಭ್ಯ ಕಲ್ಪಿಸಿ ಸುಧಾರಣೆಗಾಗಿ ಕೇಂದ್ರ ಸರಕಾರ ಮೆಡಿಕಲ್ ಕಾಲೇಜ್ ಆರಂಭಕ್ಕೆ ಹಸಿರು ನಿಶಾನೆ ನೀಡಿದೆ.

ಕಟ್ಟಡ ಕಾಮಗಾರಿ

ಕಟ್ಟಡ ಕಾಮಗಾರಿ

  • Share this:
ಯಾದಗಿರಿ: ಹಿಂದುಳಿದ ಜಿಲ್ಲೆ ಅಂತಾನೇ ಅಪಖ್ಯಾತಿ ಹೊಂದಿದ್ದ ಯಾದಗಿರಿ (Yadagiri) ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು (Medical College) ಆರಂಭದ ಕನಸು ಈಗ ನನಸಾಗಿದೆ. ಬಹು ವರ್ಷದ ಬೇಡಿಕೆಗೆ ಕೇಂದ್ರ ಸರಕಾರ (Central Government) ಗ್ರೀನ್ ಸಿಗ್ನಲ್ ನೀಡಿದ್ದು, ಶೈಕ್ಷಣಿಕ ವರ್ಷ ಮೆಡಿಕಲ್ ಕಾಲೇಜ್ ಆರಂಭಕ್ಕೆ ಅನುಮತಿ ಸಿಕ್ಕಿದ್ದು, ದಶಕದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ. ಯಾದಗಿರಿಯ ಮೆಡಿಕಲ್ ಕಾಲೇಜ್ (Yadagiri Medical College) ಆರಂಭಕ್ಕೆ ಈಗ ಕೇಂದ್ರ ಹಸಿರು ನಿಶಾನೆ ನೀಡಿದೆ. ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಕಾಲೇಜ್ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 2022-23 ನೇ ಸಾಲಿನಲ್ಲಿ 150 ಎಂ.ಬಿ.ಬಿ.ಎಸ್ ಸೀಟುಗಳಿಗೆ ನ್ಯಾಷನಲ್ ಮೆಡಿಕಲ್ ಕಮೀಷನ್ (ರಾಷ್ಟ್ರೀಯ ಆರೋಗ್ಯ ಆಯೋಗ National Medical Commission) ಅನುಮತಿ ನೀಡಿದೆ.  ಆಯೋಗವು ಕಾಲೇಜು ಆರಂಭಕ್ಕೆ ಮಂಜುರಾತಿ ಮಾಡಿದ್ದು ಖುಷಿ ತಂದಿದೆ. ದಶಕದ ಹೋರಾಟ ಪ್ರತಿಫಲವಾಗಿ ಯಾದಗಿರಿಗೆ ಕೇಂದ್ರ ಸರಕಾರ ಬಂಪರ್ ಗಿಫ್ಟ್ ನೀಡಿದೆ ಎಂದು ಸಾರ್ವಜನಿಕರು ಮತ್ತು ಹೋರಾಟಗಾರರು ಹೇಳುತ್ತಿದ್ದಾರೆ.

ಈ ಬಗ್ಗೆ ಮಾಜಿ ಶಾಸಕ ಹಾಗೂ ಹಿರಿಯ ವೈದ್ಯರಾದ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರು ಮಾತನಾಡಿ, ಮೆಡಿಕಲ್ ಕಾಲೇಜು ಆರಂಭದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೊರ್ಸ್ ಓದಲು ಅನುಕೂಲವಾಗುವ ಜೊತೆ  ಸಕಾಲಕ್ಕೆ ವೈದ್ಯಕೀಯ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಸಿಗಲಿದೆ ಎಂದರು.

ಬಿಎಸ್ ಯಡಿಯೂರಪ್ಪ ಶಂಕುಸ್ಥಾಪನೆ

ಮೆಡಿಕಲ್ ಕಾಲೇಜ್ ನಿರ್ಮಾಣ ಕಾಮಗಾರಿಯು ಭರದಿಂದ ಸಾಗಿದೆ. ಯಾದಗಿರಿ ಜಿಲ್ಲೆಯ ಮುದ್ನಾಳ ಸಮೀಪ ಮೆಡಿಕಲ್ ಕಾಲೇಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಳೆದ ಜನವರಿ 6 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರು ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

new govt medical colleges will be starting soon in Yadagiri nmpg mrq
ಕಟ್ಟಡ ಕಾಮಗಾರಿ


ಇದನ್ನೂ ಓದಿ:  Karwar: ಮಳೆ ನಿಂತ್ಮೇಲೆ ಎಲ್ಲಿ ನೋಡಿದ್ರೂ ಹಾವುಗಳು; ಒಂದೇ 7 ಜನರಿಗೆ ಕಡಿತ. 40ಕ್ಕೂ ಅಧಿಕ ಉರಗಗಳ ರಕ್ಷಣೆ

ಶೇ.50ರಷ್ಟು ಕಾಮಗಾರಿ ಪೂರ್ಣ

ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿ ಪ್ರತಿಶತ 50 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 300 ಹಾಸಿಗೆ ಸೌಲಭ್ಯವುಳ್ಳ ಜಿಲ್ಲಾ ಆಸ್ಪತ್ರೆ ಕಟ್ಟಡದ ಹಿಂಭಾಗದಲ್ಲಿಯೇ ನೂತನ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲಾಗುತ್ತಿದೆ.

ಕೇಂದ್ರ ಸರಕಾರದ 300 ಕೋಟಿ ರೂಪಾಯಿ ಅನುದಾನದಲ್ಲಿ  ಬೃಹತ್ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲಾಗುತ್ತಿದೆ. 30 ಎಕರೆ ಭೂಮಿಯಲ್ಲಿ ಕಾಲೇಜು ನಿರ್ಮಾಣ ಮಾಡಲಾಗುತ್ತಿದ್ದು, ಮೆಡಿಕಲ್ ಕಾಲೇಜ್ ಗೆ 70 ಎಕರೆ ಮೀಸಲಿಡಲಾಗಿದೆ.

ಯಾದಗಿರಿ ಅಭಿವೃದ್ಧಿಗೆ ಅನುಕೂಲ

ಕೇಂದ್ರದ ನೀತಿ ಆಯೋಗದ ವರದಿ ಪ್ರಕಾರ, ಯಾದಗಿರಿ ಜಿಲ್ಲೆಯು ದೇಶದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಹಿಂದುಳಿದ ಜಿಲ್ಲೆಯಲ್ಲಿ ಆರೋಗ್ಯದ ಸೌಲಭ್ಯ ಕಲ್ಪಿಸಿ ಸುಧಾರಣೆಗಾಗಿ ಕೇಂದ್ರ ಸರಕಾರ ಮೆಡಿಕಲ್ ಕಾಲೇಜ್ ಆರಂಭಕ್ಕೆ ಹಸಿರು ನಿಶಾನೆ ನೀಡಿದೆ.

ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಆರಂಭ ಮಾಡಿದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ ವೈದ್ಯರ ಕೊರತೆ ಹಾಗೂ ಅಗತ್ಯ ಆರೋಗ್ಯ ಸೌಲಭ್ಯ ಈಗ ಮರಿಚಿಕೆಯಾಗಿ ರೋಗಿಗಳು ದೂರದ ಬೆಂಗಳೂರು, ಮಹಾರಾಷ್ಟ್ರದ ಸೊಲ್ಲಾಪುರ, ಕಲಬುರಗಿ ಹಾಗೂ ವಿವಿಧೆಡೆ ಚಿಕಿತ್ಸೆ ಪಡೆಯಲು ತೆರಳುತ್ತಾರೆ.

ಅಂದುಕೊಂಡಂತೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯದೊಂದಿಗೆ ಮೆಡಿಕಲ್ ಕಾಲೇಜು  ಆರಂಭ ಮಾಡಿದರೆ  ರೋಗಿಗಳ ಅಲೆದಾಟ ತಪ್ಪಲಿದೆ.

ಇದನ್ನೂ ಓದಿ:  International Tiger Day: ಮುಖ್ಯಮಂತ್ರಿಗಳೇ ಮಹದೇಶ್ವರ ಬೆಟ್ಟ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿ

ಬಿಸಿಯೂಟ ತಿಂದು 100ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ

ಮಧ್ಯಾಹ್ನ ಬಿಸಿಯೂಟ (Bisiyuta) ಸೇವಿಸಿ ಶಾಲಾ ಮಕ್ಕಳು (Children) ಅಸ್ವಸ್ಥಗೊಂಡಿರೋ ಘಟನೆ ಚಾಮರಾಜನಗರ (Chamarajnagar) ಜಿಲ್ಲೆ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಬಿಸಿಯೂಟ ತಿಂದ ಬಳಿಕ ಸುಮಾರು 100 ರಿಂದ 120 ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಪೋಷಕರು ಹಾಗೂ ಶಿಕ್ಷಕರು (Teacher) ಸೇರಿ ವಿದ್ಯಾರ್ಥಿಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ
Published by:Mahmadrafik K
First published: