ಡಿ. 9ರ ನಂತರ ಸರ್ಕಾರ ಪತನ: ಮತ್ತೊಮ್ಮೆ ಭವಿಷ್ಯ ನುಡಿದ ಸಿದ್ದರಾಮಯ್ಯ

ಇದು ಯಾರಿಗೂ ಬೇಡವಾದ ಚುನಾವಣೆ. ಇದರಿಂದ ಯಾರಿಗೆ ಲಾಭ? ನಿಮಗೆ ಲಾಭವಾಗಿಲ್ಲ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್​​ ಅವರಿಗೆ ಲಾಭವಾಗಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್ ಬಿಟ್ಟಿರುವುದಾಗಿ ಹೇಳುತ್ತಿರುವುದು ಅನರ್ಹ ಶಾಸಕರು ಹಸಿ ಸುಳ್ಳು ಹೇಳುತ್ತಿದ್ದಾರೆ.

news18-kannada
Updated:November 29, 2019, 2:38 PM IST
ಡಿ. 9ರ ನಂತರ ಸರ್ಕಾರ ಪತನ: ಮತ್ತೊಮ್ಮೆ ಭವಿಷ್ಯ ನುಡಿದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ಧರಾಮಯ್ಯ
  • Share this:
ಬೆಳಗಾವಿ(ನ.29): ಡಿಸೆಂಬರ್​ 9ರ  ನಂತರ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಎಲ್ಲ 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಇದು ಅತೀಶಯೋಕ್ತಿ ಅಲ್ಲ, ಯಡಿಯೂರಪ್ಪ ಎಷ್ಟೇ ರೌಂಡ್ ಹೊಡಿಲಿ, ನಾವು ಅಧಿಕಾರಕ್ಕೆ ಬರ್ತೆವೆ ಎಂದು  ಮತ್ತೊಮ್ಮೆ ಸರಕಾರ ಪತನದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. 

ಅಥಣಿಯ ತೆಲಸಂಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ. ಇದು ಯಾರಿಗೂ ಬೇಡವಾದ ಚುನಾವಣೆ. ಇದರಿಂದ ಯಾರಿಗೆ ಲಾಭ? ನಿಮಗೆ ಲಾಭವಾಗಿಲ್ಲ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್​​ ಅವರಿಗೆ ಲಾಭವಾಗಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್ ಬಿಟ್ಟಿರುವುದಾಗಿ ಹೇಳುತ್ತಿರುವುದು ಅನರ್ಹ ಶಾಸಕರು ಹಸಿ ಸುಳ್ಳು ಹೇಳುತ್ತಿದ್ದಾರೆ. ಇವರೆಲ್ಲ ಮಾರಾಟವಾದವರು. ಸಂತೆಯಲ್ಲಿ ಪಶುಗಳಂತೆ ಮಾರಾಟವಾದ ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮನ್ನು ಕೇಳಿ ಕಾಂಗ್ರೆಸ್ ಬಿಟ್ಟಿದ್ದಾರಾ? ತೆಲಸಂಗ ಮತದಾರರಿಗೆ ಸಿದ್ಧರಾಮಯ್ಯ ಪ್ರಶ್ನೆ ಮಾಡಿದ್ದರು.

ನಿಮ್ಮನ್ನು ಕೇಳದೆ ಬಿಜೆಪಿಗೆ ಹೋಗಿದ್ದು ನಿಮ್ಮನ್ನು ಅವಮಾನ ಮಾಡಿದಂತೆ ಈಗ ನಿಮಗೆ ಅವಕಾಶ ಬಂದಿದೆ. ಕುಮಟಳ್ಳಿ ಸ್ವಂತ ಊರು ತೆಲಸಂಗಕ್ಕೆ ಅವಮಾಡಿದ್ದಾರೆ. ಅಗೌರವ ಮಾಡಿದ ಮಹೇಶ ಕುಮಟಳ್ಳಿ ನೀವು ಎಂಎಲ್ಎ ಆಗಲು ಯೋಗ್ಯರಲ್ಲ ಎಂದು ಹೇಳಿ ರಾಣೆಬೆನ್ನೂರಿನಲ್ಲಿ ಮುಂಬೈ ಓಟು, ಬನ್ನಿಕೋಡ ಓಟು ಎಂಬುದು ಜನರ ಸ್ಲೋಗನ್ ಆಗಿತ್ತು. ಅದನ್ನು ನಾನು ಹೇಳಿದ್ದು, ನಮ್ಮ ಕಡೆ ಕುರುಬರು ಗೌಡರೇ. ನಮ್ಮಪ್ಪ ಸಿದ್ದನಗೌಡ ನನ್ನ ತಮ್ಮಂದಿರು ರಾಮೇಗೌಡ, ಸಿದ್ದೇಗೌಡ ಎಂದರು.

ಇದನ್ನೂ ಓದಿ : ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆಶಿ ಮೊದಲಾದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಅನರ್ಹರೆಂದರೆ ಎಂಎಲ್ಎ ಆಗಲು ನಾಲಾಯಕ್ ಎಂದರ್ಥ ನಾಲಾಯಕ್ ಮನುಷ್ಯ ಮತ್ತೆ ತನ್ನನ್ನು ಲಾಯಕ್ ಮಾಡು‌ ಎಂದು ನಿಮ್ಮ ಬಳಿ ಬರ್ತಾನೆ ಆಗ ನೀವು ಸುಪ್ರೀಂ ಕೋರ್ಟ್ ನಿನ್ನನ್ನು ಅನರ್ಹ ಮಾಡಿದೆ ಎಂದು ಪರ್ಮನೆಂಟಾಗಿ ಮನೆಗೆ ಕಳುಹಿಸಿ ಎಂದು  ಅಥಣಿ ಮತದಾರರಿಗೆ ಸಿದ್ದರಾಮಯ್ಯ ಸಲಹೆ ನೀಡಿದರು.

ಮಹಾರಾಷ್ಟ್ರ, ಗುಜರಾತ ಚುನಾವಣೆಯಲ್ಲಿ‌ ಪಕ್ಷಾಂತರಿಗಳಿಗೆ ಮತದಾರರು ಸೋಲಿಸಿದ್ದಾರೆ. ಇಲ್ಲಿಯೂ ಅಂಥದ್ದೆ ವಾತಾವರಣವಿದೆ. ಮತದಾರರೂ ತಾವಾಗಿಯೇ ಈ ರೀತಿ ಹೇಳುತ್ತಿದ್ದಾರೆ. ಹಿರೇಕೆರೂರಿನಲ್ಲಿ ಮತದಾರರು ಬಿ.ಸಿ.ಪಾಟೀಲ್​​​ ರನ್ನು ಮನೆಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಅಥಣಿಯಲ್ಲಿಯೂ‌ ಅದೇ ಆಗಬೇಕು. ಕುಮಟಳ್ಳಿ ನಿಮಗೆ ಮನುಷ್ಯತ್ವ ಇದೆಯಾ? ಮನುಷ್ಯತ್ವ ಇದೆಯಾ? ಅಭಿವೃದ್ಧಿ ಹೆಸರಲ್ಲಿ ಹೀಗೆ ಮಾಡಿದ್ದು ಸರಿನಾ? 17 ಜನ ಹೋಗಿದ್ದರಿಂದ ಸಮ್ಮಿಶ್ರ ಸರಕಾರ ಬಿದ್ದು ಹೋಯ್ತು ಎಂದು  ಕುಮಟಳ್ಳಿ, ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ನಮ್ಮಪ್ಪನ ಮನೆಯಿಂದ ಹಣ ತಂದು ರೈತರ ಸಾಲ ಮನ್ನಾ ಮಾಡಲಿಲ್ಲ - ನಿಮ್ಮ ಹಣದಿಂದ್ಲೇ ಸಾಲ ಮನ್ನಾ ಮಾಡಿದೆ; ಸಿದ್ಧರಾಮಯ್ಯಶ್ರೀಮಂತ ಪಾಟೀಲ್ ಅವರು ತಮ್ಮ ಶುಗರ್ ಫ್ಯಾಕ್ಟರಿ ವಿದ್ಯುತ್ ಕೆಲಸದ ಬಗ್ಗೆ ನನ್ನ ಬಳಿ‌ ಬಂದಿದ್ದರು ನಾನು ಕುಮಾರಸ್ವಾಮಿಯವರಿಗೆ ಫೋನ್ ಮಾಡಿ ಕೆಲಸ ಮಾಡಲು ಹೇಳಿದೆ ಅದಾದ ಅರ್ಧ ಗಂಟೆಯಲ್ಲಿಯೇ ಶ್ರೀಮಂತ ಪಾಟೀಲ್ ಓಡಿ ಹೋದರು ಎಂದು ಹೇಳಿದರು.
First published: November 29, 2019, 2:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading