• Home
  • »
  • News
  • »
  • state
  • »
  • Dattapeetha: ದತ್ತಪೀಠದಲ್ಲಿ ಹೊಸ ವಿವಾದ; ತುಳಸಿ ಕಟ್ಟೆ ಜಾಗದಲ್ಲಿ ಹೋಮಕ್ಕೆ ಭಜರಂಗದಳ ಪಟ್ಟು

Dattapeetha: ದತ್ತಪೀಠದಲ್ಲಿ ಹೊಸ ವಿವಾದ; ತುಳಸಿ ಕಟ್ಟೆ ಜಾಗದಲ್ಲಿ ಹೋಮಕ್ಕೆ ಭಜರಂಗದಳ ಪಟ್ಟು

ದತ್ತಪೀಠ ವಿವಾದ

ದತ್ತಪೀಠ ವಿವಾದ

ಹೋಮದ ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಅನ್ನೋದು ಭಜರಂಗದಳದ ಉದ್ದೇಶ. ಅದಕ್ಕೆ ಜಿಲ್ಲಾಡಳಿತ ಕೂಡ ಬೆಂಬಲಿಸಲಿ ಎಂದು ಮನವಿ ಮಾಡಿದ್ದಾರೆ.

  • Share this:

ಚಿಕ್ಕಮಗಳೂರು: ಹಿಂದೂ ಸಂಘಟನೆಗಳು (Hindu Organization) ಈ ಬಾರಿಯ ದತ್ತ ಜಯಂತಿಯಲ್ಲಿ (Datta Jayanti) ನಾವು ಮಂಟಪದಲ್ಲಿ ಹೋಮ ಮಾಡಲ್ಲ ಎಂದು ಚಿಕ್ಕಮಗಳೂರು (Chikkamagluru) ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಹೇಗೆ ತುಳಸಿಕಟ್ಟೆ ಇದ್ದ ಜಾಗದಲ್ಲಿ ಹೋಮ ನಡೆಯುತ್ತಿತ್ತೋ ಅದೇ ಜಾಗದಲ್ಲಿ ಈ ವರ್ಷ ಹೋಮ ಮಾಡುತ್ತೇವೆ. ಹೋಮ ಮಂಟಪ ಅಪವಿತ್ರವಾಗಿದೆ. ಆ ಜಾಗದಲ್ಲಿ ಹೋಮ ಮಾಡಲ್ಲ ಎಂದು ಜಿಲ್ಲಾಡಳಿತಕ್ಕೆ ತಿಂಗಳ ಮುಂಚೆಯೇ ಭಜರಂಗದಳ ಕಾರ್ಯಕರ್ತರು (Bhajarangadala Activist) ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 28ರಿಂದ ಆರಂಭವಾಗುವ ದತ್ತಜಯಂತಿ ಎಂಟು ದಿನಗಳ ಕಾಲ ನಡೆಯಲಿದ್ದು ಡಿಸೆಂಬರ್ 8ನೇ ತಾರೀಖಿನಂದು ಹೋಮ ಮಂಟಪದಲ್ಲಿ (Homa Mantapa) ಹೋಮ ಮಾಡೋದಿಲ್ಲ. ತುಳಸಿಕಟ್ಟೆಯೇ ಬಳಿ ಮಾಡೋದು ಎಂದು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದು, ನಮಗೆ ಹೋಮ ಮಾಡಲು ಬೇರೆ ಜಾಗ ಕೊಡಿ ಎಂದು ತಿಂಗಳ ಮುಂಚೆಯೇ ಭಜರಂಗದಳ ಪತ್ರ ಬರೆದಿದ್ದಾರೆ.


ಹೋಮದ ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಅನ್ನೋದು ಭಜರಂಗದಳದ ಉದ್ದೇಶ. ಅದಕ್ಕೆ ಜಿಲ್ಲಾಡಳಿತ ಕೂಡ ಬೆಂಬಲಿಸಲಿ ಎಂದು ಮನವಿ ಮಾಡಿದ್ದಾರೆ.


ಜಿಲ್ಲಾಡಳಿತಕ್ಕೆ ಭಜರಂಗದಳದ ಪ್ರಶ್ನೆ


ದತ್ತಪೀಠದ ಆವರಣದ 200 ಮೀಟರ್ ವ್ಯಾಪ್ತಿಯಲ್ಲಿ ಏನನೂ ಮಾಡಬಾರದು ಎಂದು ಜಿಲ್ಲಾಡಳಿತ ಹೇಳುತ್ತೆ. ಆದರೆ, ಜಿಲ್ಲಾಡಳಿತವೇ ಕಟ್ಟಿದ ಹೋಮ ಮಂಟಪದಲ್ಲಿ ಹೇಗೆ ಮಾಂಸ ಮಾಡಿದ್ರು. ನಮಾಜ್ ಹೇಗೆ ಮಾಡಿದ್ರು. ಮೈಕ್ ಕಟ್ಟಿಕೊಂಡು ಬಾಂಗ್ ಹೇಗೆ ಕೂಗಿದ್ರು. ಇದೆಲ್ಲಾ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಅಲ್ವಾ ಎಂದು ಭಜರಂಗದಳ ಜಿಲ್ಲಾಡಳಿತಕ್ಕೆ ಪ್ರಶ್ನಿಸಿದೆ.


ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ


ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಲು ಜಿಲ್ಲಾಡಳಿತವೇ ಪ್ರೋತ್ಸಾಹ ನೀಡಿರುವಾಗ, ನಾವು ನಮ್ಮ ಧಾರ್ಮಿಕ ಭಾವನೆ ನಡೆಸಲು ಯಾರ ಅಪ್ಪಣೆ ಕೇಳಬೇಕು ಎಂದು ಜಿಲ್ಲಾಡಳಿತದ ವಿರುದ್ದ ಭಜರಂಗದಳ ಕಾರ್ಯಕರ್ತರು ಕಿಡಿಕಾರಿದ್ದಾರೆ. ನಮ್ಮ ಆಚಾರ-ವಿಚಾರ ಪದ್ಧತಿಗಳನ್ನ ನಾವು ಮಾಡೇ ಮಾಡ್ತೀವಿ ಎಂದು ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.


ತುಳಸಿಕಟ್ಟೆಯಲ್ಲಿ ಪೂಜೆ ಮಾಡುವಂತಿಲ್ಲವಾ?


ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕೋಮು ಸೌಂದರ್ಯ ವೇದಿಕೆ ಮುಖಂಡ ಗೌಸ್ ಮೊಯಿವುದ್ದೀನ್, ತುಳಸಿಕಟ್ಟೆ ಜಾಗದಲ್ಲಿ ಹೋಮ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ, ಕಾನೂನಿನಲ್ಲಿ ಅವಕಾಶ ಇಲ್ಲದ ಆಚರಣೆಗೆ ಸಂಘ ಪರಿವಾರ ಮುಂದಾಗುತ್ತದೆ. ಜಿಲ್ಲಾಡಳಿತ ಕಟ್ಟು ನಿಟ್ಟಿನ ಕಾನೂನು ಪಾಲನೆ ಮಾಡಬೇಕು. ಯಾವುದೋ ಹೊಸ ಆಚರಣೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: ಬಿ ಎಸ್ ಯಡಿಯೂರಪ್ಪಗೆ ದತ್ತಾತ್ರೇಯನ ಶಾಪ ಇದೆ, ಶಾಪ ವಿಮೋಚನೆಗೆ ದತ್ತಪೀಠಕ್ಕೆ ಬರಬೇಕು: ಗಂಗಾಧರ್ ಕುಲಕರ್ಣಿ


21 ಅಡಿ ಎತ್ತರದ ಆಂಜನೇಯನ ಮೂರ್ತಿ


ಮುಳ್ಳಯ್ಯನಗಿರಿ ಶ್ರೇಣಿಯು ಸಮುದ್ರಮಟ್ಟದಿಂದ 1930 ಮೀಟಲರ್ ಎತ್ತರದಲ್ಲಿದೆ. ಹಿಮಾಲಯದಿಂದ ನೀಲಗಿರಿಯವರೆಗೆ, ಕೇವಲ ಚೆಂಬ್ರ, ಬನೊರ, ಮತ್ತು ವೆಲ್ಲರಿ ಮಾಲಾ ಶಿಖರಗಳನ್ನು ಹೊರತುಪಡಿಸಿದರೆ ಮುಳ್ಳಯ್ಯನಗಿರಿ ಶಿಖರ ಅತಿ ಎತ್ತರದ್ದೆಂದು ದಾಖಲಿಸಲಾಗಿದೆ.


ಇಂತಹ ಮುಳ್ಳಯ್ಯನ ಗಿರಿ ಈಗ ಮತ್ತೊಂದು ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಮುಂದಾಗಿದೆ. ಹೌದು ಇಲ್ಲಿ ಬರೋಬ್ಬರಿ 21 ಅಡಿಯ ವೀರ ಹನುಮನ ಏಕಶಿಲಾ ವಿಗ್ರಹ ತಲೆಎತ್ತಲಿದೆ.


ಏಕಶಿಲಾಕಲ್ಲಿಗೆ ಪೂಜೆ ಮಾಡಿ ಪುರಪ್ರವೇಶ


ಈಗಾಗಲೇ ಮೂರ್ತಿ ಕೆತ್ತನೆಗೆ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಭರದಿಂದ ಸಿದ್ಧತೆ ನಡೆದಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಕೃಷ್ಣಶಿಲೆ ಕಲ್ಲುಗಳು ಕೂಡ ಚಿಕ್ಕಮಗಳೂರು ನಗರಕ್ಕೆ ಆಗಮಿಸಿವೆ.


ಇದನ್ನೂ ಓದಿ:  Datta Peetha: ದತ್ತಪೀಠದ ಹೋಮ ನಡೆಯುವ ಪವಿತ್ರ ಜಾಗದಲ್ಲಿ ಮಾಂಸಾಹಾರ! ಗೋರಿಗೆ ಅರ್ಪಿಸಿದರಾ ಕಿಡಿಗೇಡಿಗಳು?


ನಗರದ ದ್ವಾರಬಾಗಿಲು ದಾಸರಹಳ್ಳಿ ಬಳಿ ಏಕಶಿಲಾಕಲ್ಲಿಗೆ ಪೂಜೆ ಮಾಡಿ ಪುರಪ್ರವೇಶ ಮಾಡಿಕೊಳ್ಳಲಾಗಿದೆ.


ಈ ಮೂರ್ತಿ ಕವಿಕಲ್ ಗಂಡಿ ಬಳಿ ನೆಲೆ ನಿಂತರೇ ಸುತ್ತಮುತ್ತಲಿನ ಸುಮಾರು 30 ಕಿ.ಮೀ. ದೂರಕ್ಕೂ ಎದ್ದು ಕಾಣುತ್ತದೆ.

Published by:Mahmadrafik K
First published: