• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Next CM: ಡಿಕೆಶಿ-ಸಿದ್ದರಾಮಯ್ಯ ಬಣದ ಶಾಸಕರು ತೆಗೆದುಕೊಂಡ ಒಂದು ಸಾಲಿನ ನಿರ್ಣಯ ಏನು?

Karnataka Next CM: ಡಿಕೆಶಿ-ಸಿದ್ದರಾಮಯ್ಯ ಬಣದ ಶಾಸಕರು ತೆಗೆದುಕೊಂಡ ಒಂದು ಸಾಲಿನ ನಿರ್ಣಯ ಏನು?

ಡಿಕೆ ಶಿವಕುಮಾರ್/ಸಿದ್ದರಾಮಯ್ಯ

ಡಿಕೆ ಶಿವಕುಮಾರ್/ಸಿದ್ದರಾಮಯ್ಯ

DK Shivakumar And Siddaramaiah: ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ಶಾಸಕರು ವೀಕ್ಷಕರು ಒಂದು ವಾಕ್ಯದಲ್ಲಿ ತಮ್ಮ ನಾಯಕ ಏಕೆ ಸಿಎಂ ಆಗಬೇಕು ಎಂಬ ವಾದವನ್ನು ಮಂಡಿಸಿದ್ದಾರೆ ಎನ್ನಲಾಗಿದೆ. ವೀಕ್ಷಕರ ಮುಂದೆ ಎರಡೂ ಬಣದ ಶಾಸಕರು ಹೇಳಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.

 • Share this:

ಬೆಂಗಳೂರು: ಕರ್ನಾಟಕ ಸಿಎಂ (Karnataka CM) ಆಯ್ಕೆ ಚೆಂಡು ದೆಹಲಿ ಅಂಗಳ ತಲುಪಿದೆ. ಸಿಎಂ ಸ್ಥಾನದ ಆಕಾಂಕ್ಷಿಗಳಾದ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ಇಬ್ಬರಿಗೂ ದೆಹಲಿಗೆ ಬರುವಂತೆ ಹೈಕಮಾಂಡ್ (Cogress High command) ಬುಲಾವ್ ನೀಡಿದೆ. ಈಗಾಗಲೇ ಸಿದ್ದರಾಮಯ್ಯ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಭಾನುವಾರ ನಡೆದ ಸಿಎಲ್​ಪಿ ಸಭೆಗೆ ಕಾಂಗ್ರೆಸ್ ಹೈಕಮಾಂಡ್ ಮೂವರು ವೀಕ್ಷಕರನ್ನು ಕಳಿಸಿತ್ತು. ವೀಕ್ಷಕರು ಎಲ್ಲಾ ನೂತನ ಶಾಸಕರ (New MLAs) ಅಭಿಪ್ರಾಯ ಪಡೆದುಕೊಂಡು ಹೈಕಮಾಂಡ್​ಗೆ ನೀಡಿದ್ದಾರೆ. ವೀಕ್ಷಕರಿಂದ ಶಾಸಕರ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಅವರಿಗೆ ತಲುಪಿಸಲಾಗಿದೆ. ಈ ವರದಿ ಆಧಾರದ ಮೇಲೆಯೇ ಮುಂದಿನ ಮುಖ್ಯಮಂತ್ರಿಯನ್ನು ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.


ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ಶಾಸಕರು ವೀಕ್ಷಕರು ಒಂದು ವಾಕ್ಯದಲ್ಲಿ ತಮ್ಮ ನಾಯಕ ಏಕೆ ಸಿಎಂ ಆಗಬೇಕು ಎಂಬ ವಾದವನ್ನು ಮಂಡಿಸಿದ್ದಾರೆ ಎನ್ನಲಾಗಿದೆ. ವೀಕ್ಷಕರ ಮುಂದೆ ಎರಡೂ ಬಣದ ಶಾಸಕರು ಹೇಳಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.


ಡಿಕೆ ಶಿವಕುಮಾರ್ ಬಣದ ವಾದ ಏನು?


1.ದಶಕಗಳ ಬಳಿಕ ಒಕ್ಕಲಿಗ ಸಮುದಾಯ ಸಂಪೂರ್ಣವಾಗಿ ಪಕ್ಷದ ಪರ ನಿಂತಿದೆ


2.ಒಕ್ಕಲಿಗ ಮತಬ್ಯಾಂಕ್ ನಿರ್ವಹಣೆ ಹಿನ್ನೆಲೆಯಲ್ಲಿ ಅವಕಾಶ ಕೊಡಬೇಕು.


3.KPCC ಅಧ್ಯಕ್ಷರೇ ಸಿಎಂ ಆಗುವ ಸಂಪ್ರದಾಯ ಇರೋದನ್ನೂ ಪರಿಗಣಿಸಬೇಕು.


4.ಡಿಕೆ ಪಕ್ಷ ನಿಷ್ಠೆ, ಸಂಘಟನೆ ಬಗ್ಗೆ ಅಖಿಲ ಭಾರತ ಕಾಂಗ್ರೆಸ್ಸಿಗೇ ಗೊತ್ತಿದೆ


5.ಸಿದ್ದರಾಮಯ್ಯ ಈಗಾಗಲೇ ಸಿಎಂ ಆಗಿದ್ದಾರೆ. ಲಿಂಗಾಯತ ವಿರೋಧಿ ಆರೋಪವಿದೆ.


DK shivakumar birthday celebrate in clp meeting mrq
ಸಿಎಲ್​ಪಿ ಸಭೆ


ಸಿದ್ದರಾಮಯ್ಯ ಬಣದ ವಾದ ಏನು?


1.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ಮತಬ್ಯಾಂಕ್ ನಿರ್ವಹಣೆ ಮಾಡಬೇಕು.


2.ಡಿಕೆ ಶಿವಕುಮಾರ್ ಬರೀ ಹಳೇ ಮೈಸೂರಿಗಷ್ಟೇ ಸೀಮಿತವಾದ ನಾಯಕ


3.ಉತ್ತರ ಕರ್ನಾಟಕದ ಮತಕ್ಷೇತ್ರಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಮಾನ್ಯತೆ ಕೊಡಬೇಕು.
4.ಈಗಾಗಲೇ ಆಡಳಿತ ನಡೆಸಿದ ಅನುಭವ ಮತ್ತು ಕ್ಲೀನ್ ಇಮೇಜ್ ಇರುವ ನಾಯಕ

top videos


  5.ಧರ್ಮವಿಭಜಕ ಹಣೆಪಟ್ಟಿ ಪ್ರತಿಪಕ್ಷಗಳ ಆರೋಪವಷ್ಟೆ, ಈಗದು ಮುಗಿದ ಅಧ್ಯಾಯ

  First published: