ನವದೆಹಲಿ: ಕರ್ನಾಟಕ ನೂತನ ಸಿಎಂ (new CM of Karnataka) ಆಯ್ಕೆ ಕಗ್ಗಂಟು ಇಂದೂ ಮುಂದುವರೆದಿದೆ. ವಿಧಾನಸಭಾ ಚುನಾವಣಾ ಫಲಿತಾಂಶ (assembly election result) ಬಂದು 3 ದಿನವಾದರೂ ಸಿಎಂ ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ನಡುವೆ ಸಿಎಂ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆದಿತ್ತು. ತಾವೇ ಸಿಎಂ ಆಗಬೇಕು ಅಂತ ಇಬ್ಬರೂ ಪಟ್ಟು ಹಿಡಿದಿದ್ದರು. ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿ, ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಡಲಾಗಿತ್ತು. ಆದರೆ ಇಂದೂ ಅಂತಿಮ ನಿರ್ಧಾರಕ್ಕೆ ಬರಲು ಹೈಕಮಾಂಡ್ ವಿಫಲವಾಗಿದೆ. ಹೀಗಾಗಿ ನಾಳೆ ಸೋನಿಯಾಗಾಂಧಿ (Sonia Gandhi) ನೇತೃತ್ವದಲ್ಲಿ ಮಹತ್ವದ ಮೀಟಿಂಗ್ ನಡೆಯಲಿದ್ದು, ನಾಳೆಯೇ ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರು ಎನ್ನುವುದು ಫೈನಲ್ ಆಗಲಿದೆ.
ನಾಳೆ ಸಿಎಂ ಹೆಸರು ಫೈನಲ್!
ಇಂದು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಯಿತು. ನಿನ್ನೆ ನೂತನ ಶಾಸಕರಿಂದ ಸಂಗ್ರಹಿಸಿದ್ದ ಅಭಿಪ್ರಾಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯ್ತು. ಆದರೆ ಸಿಎಂ ಹೆಸರು ಫೈನಲ್ ಮಾಡಲು ಹೈಕಮಾಂಡ್ ಕೂಡ ಶಕ್ಯವಾಗಿಲ್ಲ. ಹೀಗಾಗಿ ನಾಳೆ ಮಹತ್ವದ ಮೀಟಿಂಗ್ ನಡೆಯಲಿದ್ದು, ಬಳಿಕ ಸಿಎಂ ಹೆಸರು ಘೋಷಣೆ ಆಗಲಿದೆ.
ನಾಳೆ ಸೋನಿಯಾಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸದ್ಯ ಶಿಮ್ಲಾದಲ್ಲಿರುವ ಸೋನಿಯಾಗಾಂಧಿ ನಾಳೆ ದೆಹಲಿಗೆ ವಾಪಸ್ಸಾಗಲಿದ್ದಾರೆ. ಅವರು ಬರುತ್ತಿದ್ದಂತೆ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಹೆಸರು ಅಂತಿಮಗೊಳಿಸಿ, ಘೋಷಣೆ ಮಾಡಲಿದ್ದಾರೆ ಅಂತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: DK Shivakumar: ನಾನು ಒಬ್ಬನೇ ನಿಂತು ಪಕ್ಷ ಕಟ್ಟಿದ್ದೇನೆ ಎಂದ ಡಿಕೆಶಿ! ಸಿಎಂ ಕುರ್ಚಿಗಾಗಿ ಪಟ್ಟುಬಿಡದ 'ಬಂಡೆ'!
ದೆಹಲಿಯಲ್ಲೇ ಠಿಕಾಣಿ ಹೂಡಿರುವ ಸಿದ್ದರಾಮಯ್ಯ
ನಿನ್ನೆಯೇ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ದೆಹಲಿಗೆ ತೆರಳಿರುವ ಸಿದ್ದರಾಮಯ್ಯ, ಅಲ್ಲಿ ಠಿಕಾಣಿ ಹೂಡಿದ್ದಾರೆ.
ಇದರ ನಡುವೆ ಇಂದು ದೆಹಲಿಗೆ ತೆರಳಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರವಾಸ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಟ್ಟೆ ನೋವಿನ ಕಾರಣ ಡಿಕೆ ಶಿವಕುಮಾರ್ ಅವರ ಪ್ರವಾಸ ರದ್ದಾಗಿದೆ ಎನ್ನಲಾಗಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು, ನನಗೆ ಹೊಟ್ಟೆ ಸಮಸ್ಯೆ ಆಗಿದೆ. ಸ್ವಲ್ಪ ಜ್ವರ ಕೂಡ ಬಂದಿದೆ. ಸ್ವಲ್ಪ ನನ್ನನ್ನೂ ಫ್ರೀ ಬಿಟ್ಟರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Congress ಗೆಲುವಿಗೆ ಕಾರಣ ಸಿದ್ದು-ಡಿಕೆಶಿಯೂ ಅಲ್ಲ, ರಾಹುಲ್-ಖರ್ಗೆಯೂ ಅಲ್ಲ! ರಣತಂತ್ರದ ಹಿಂದಿರೋದು ಇವರೇ!
ನಾಳೆ ದೆಹಲಿಗೆ ತೆರಳಲಿರುವ ಡಿಕೆಶಿ
ಇನ್ನು ನಾಳೆ ಬೆಳಗ್ಗೆ ಡಿಕೆಶಿ ದೆಹಲಿಗೆ ತೆರಳಿದ್ದಾರೆ, ಈ ಕುರಿತಂತೆ ಮಾತನಾಡಿದ ಅವರು, ಇಂದು ಸಂಜೆ ದೆಹಲಿಗೆ ಹೋಗಬೇಕು ಅಂದುಕೊಂಡಿದ್ದೇ ಆದ್ರೆ ಆರೋಗ್ಯ ಸರಿ ಇರಲಿಲ್ಲ, ಅದಕ್ಕೆ ಹೋಗಲು ಆಗಿಲ್ಲ ಈಗ ಆರೋಗ್ಯ ಸುಧಾರಣೆ ಆಗಿದೆ ನಾಳೆ ಬೆಳಿಗ್ಗೆ ದೆಹಲಿಗೆ ಹೋಗ್ತೀನಿ. ದೆಹಲಿಯಲ್ಲಿ ಏನು ಬೆಳವಣಿಗೆ ಆಗ್ತಿದೆ ಅನ್ನೋದು ನನಗೆ ಗೊತ್ತಿಲ್ಲ ನಾಳೆ ಸೋನಿಯಾ ಗಾಂಧಿ ಶಿಮ್ಲಾ ಇಂದ ಬರ್ತಾರೆ ನಾನು ಕೂಡ ನಾಳೆ ಹೋಗ್ತಾ ಇದೀನಿ ಸೋನಿಯಾ ಅವರು ಬರಲಿ ಅಂತಾನೆ ನಾನು ಕಾಯ್ತಾ ಇದ್ದೆ ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ