ಹೈಕಮಾಂಡ್​ ಭೇಟಿ ಮಾಡಲು ದೆಹಲಿಗೆ ಬಂದಿಳಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ

ಇದೆಲ್ಲದರ ಜೊತೆಗೆ ಅನೇಕ ಸಮುದಾಯಗಳ ನಾಯಕರಿಂದ ನಮ್ಮ ಜಾತಿಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂದು ಹಲವು ಮೂಲಗಳಿಂದ ಒತ್ತಡ ಹೇರಲಾಗುತ್ತಿದೆ. ಹಾಲಿ ಇರುವ ಅನೇಕ ಸಚಿವರು ಸ್ಥಾನ ಕಳೆದುಕೊಳ್ಳುವರು ಎಂದು ಹೇಳಲಾಗಿದ್ದು, ಸ್ಥಾನ ಕಳೆದುಕೊಳ್ಳುವ ಸಚಿವರೆಲ್ಲ ದೆಹಲಿಯ ಬಾಗಿಲಲ್ಲಿ ಕಾಯುತ್ತಾ ನಿಂತಿದ್ದಾರೆ. 

ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

 • Share this:
  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶುಕ್ರವಾರದಂದು ಮೊದಲ ಬಾರಿಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಬೊಮ್ಮಾಯಿ ಅವರು ಶುಕ್ರವಾರ ಬೆಳಿಗ್ಗೆಯೇ ದೆಹಲಿ ತಲುಪಿದ್ದಾರೆ. ಕರ್ನಾಟಕ ಭವನ ತಲುಪಿರುವ ನೂತನ ಸಿಎಂ ಆನಂತರ ದೆಹಲಿಯಲ್ಲಿ ಬಿಜೆಪಿಯ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಅವರು ಇದೇ ವೇಳೆ ಧನ್ಯವಾದಗಳನ್ನು ತಿಳಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿ ಕೃತಜ್ಞತೆಯನ್ನು ತಿಳಿಸಲಿದ್ದಾರೆ.

  ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ವೇಳೆಗಾಗಲೆ ಸಚಿವ ಹಾಗೂ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ’’ನಾನು ನೂತನ ಸಚಿವ ಸಂಪುಟದಲ್ಲಿ ಕೆಲಸ ಮಾಡುವುದಿಲ್ಲ’’ ಎಂದು ಹೇಳಿ ಸ್ಪೋಟಕ ಸುದ್ದಿಯನ್ನು ಹೊರ ಹಾಕಿದ್ದರು. ಇವರನ್ನು ಕಂಡು ಮಾತನಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದರು.

  ಈಗ ನೂತನ ಸಚಿವ ಸಂಪುಟ ರಚನೆ ಬಗ್ಗೆ ಹೈಕಮಾಂಡ್​ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದ್ದು.  ಸಿಎಂ ಪ್ರಯಾಣಕ್ಕೂ ಮುನ್ನವೇ ಈಗಾಗಲೇ ಸಚಿವ ಆಕಾಂಕ್ಷಿಗಳ ದಂಡು ದೆಹಲಿ ತಲುಪಿದ್ದು, ಮಂತ್ರಿ ಸ್ಥಾನಕ್ಕಾಗಿ ಲಾಭಿ ನಡೆಸಲು ಮುಂದಾಗಿದ್ದಾರೆ. ಆದ ಕಾರಣ ಬೊಮ್ಮಾಯಿ ಅವರ ಮುಂದೆ ಸಾಕಷ್ಟು ಸವಾಲಗಳಿದ್ದು, ಅದನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

  ಇದೆಲ್ಲದರ ಜೊತೆಗೆ ಅನೇಕ ಸಮುದಾಯಗಳ ನಾಯಕರಿಂದ ನಮ್ಮ ಜಾತಿಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂದು ಹಲವು ಮೂಲಗಳಿಂದ ಒತ್ತಡ ಹೇರಲಾಗುತ್ತಿದೆ. ಹಾಲಿ ಇರುವ ಅನೇಕ ಸಚಿವರು ಸ್ಥಾನ ಕಳೆದುಕೊಳ್ಳುವರು ಎಂದು ಹೇಳಲಾಗಿದ್ದು, ಸ್ಥಾನ ಕಳೆದುಕೊಳ್ಳುವ ಸಚಿವರೆಲ್ಲ ದೆಹಲಿಯ ಬಾಗಿಲಲ್ಲಿ ಕಾಯುತ್ತಾ ನಿಂತಿದ್ದಾರೆ.

  ಒಂದಷ್ಟು ಬಿಜೆಪಿ ನಾಯಕರು ಸಿಎಂ ಬೊಮ್ಮಾಯಿ ಅವರಿಗಿಂತಲೂ ಮೊದಲು ದೆಹಲಿಯ ಪಕ್ಷದ ನಾಯಕರ ಮನೆ ಬಾಗಿಲನ್ನು ಬಡಿದಿದ್ದು , ಉಮೇಶ್ ಕತ್ತಿ , ಅಶೋಕ್ , ಅರವಿಂದ್ ಬೆಲ್ಲದ್, ಸಿಪಿ ಯೋಗೇಶ್ವರ್, ದೆಹಲಿಗೆ ಹೋಗಿ  ಹೈ ಕಮಾಂಡ್ ಮಟ್ಟದಲ್ಲಿ ಲಾಬಿ ಶುರು ಮಾಡಿದ್ದಾರೆ. ಸಿಎಂ ಸ್ಥಾನ ಸಿಗುತ್ತದೆ ಎಂದು ನಂಬಿದ್ದವರೆಲ್ಲಾ ಈಗ ಸಚಿವ ಸ್ಥಾನವಾದರೂ ಸಿಗಲಿ ಎಂದು ಲಾಬಿ ಶುರು ಮಾಡಿದ್ದಾರೆ.

  ಈ ಮಧ್ಯ  ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಈಶ್ವರಪ್ಪ ಮಾತ್ರ ಬೇರೆ ರೀತಿಯ ಹೇಳಿಕೆ ನೀಡಿದ್ದು,  ಹೇಗಾದರೂ ಮಾಡಿ ಇರುವ ಸ್ಥಾನವನ್ನಾದರೂ ಉಳಿಸಿಕೊಳ್ಳೋಣ ಎಂದು ಯೋಜನೆ ಹಾಕುತ್ತಿದ್ದಾರೆ. ಶೆಟ್ಟರ್​ ರೀತಿ ನಾನು ನಿರ್ಧಾರ ಮಾಡುವುದಿಲ್ಲ, ಹೈಕಮಾಂಡ್ ನಾಯಕರು ಹೇಳಿದಂತೆ ಕೇಳುತ್ತೇನೆ, ಯಾವ ಸ್ಥಾನ ಕೊಟ್ರು ನಿಭಾಯಿಸ್ತಿನಿ ಎಂದು ಹೇಳಿಕೆ ನೀಡಿದ್ದಾರೆ. ಈಗಾಗಲೇ ಪಕ್ಷದಲ್ಲಿ ಸಚಿವ ಸ್ಥಾನ ಅನುಭವಿಸಿದ ಹಾಗೂ ಹಳೆಯ ಮುಖಗಳಿಗೆ ಮಣೆ ಹಾಕುವುದು ಬೇಡ ಎಂದು ಬಿಜೆಪಿ ಹೈಕಮಾಂಡ್​ ನಿರ್ಧರಿಸಿದ್ದು, ಯುವ ಹಾಗೂ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  ಸಚಿವರಾಗಲು ಈಗಾಗಲೇ ಲಾಬಿ ಶುರುವಾಗಿದ್ದು ರೇಣುಕಾಚಾರ್ಯ , ಸೋಮಶೇಖರ್ ರೆಡ್ಡಿ, ಸುನೀಲ್ ಕುಮಾರ್ ಮತ್ತು ಶಿವಮೊಗ್ಗದ ಜಿಲ್ಲೆಯ ಅರಗ ಜ್ಞಾನೇಂದ್ರ , ರಾಮದಾಸ್ , ತಿಪ್ಪಾರೆಡಿ  ಸೇರಿದಂತೆ ಹಲವು ನಾಯಕರು ಸಿಎಂ ಮತ್ತು ಪಕ್ಷದ ಹಿರಿಯರನ್ನು ಭೇಟಿ ಮಾಡಿ ಸಮಾಲೋಚನೆ ಮಾಡ್ತಿದ್ದಾರೆ ಎಂದು ಹೇಳಲಾಗ್ತಿದೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಅನ್ನೋ ವಿಚಾರ ಗೊತ್ತಾಗ್ತಿದ್ದಂತೆ ಹಲವು ನಾಯಕರ ಅಭಿಮಾನಿಗಳು ಹಾಗೂ ಸಮುದಾಯದ ಸ್ವಾಮೀಜಿಗಳು ಅವರ ಪರ ಬ್ಯಾಟಿಂಗ್ ಮಾಡೋಕೆ ಶುರುಮಾಡ್ತಿದ್ದಾರೆ.

  ಇದೆಲ್ಲದರ ನಡುವೆ ಸಿಎಂ ಆಯ್ಕೆಯಲ್ಲಿ ತಮ್ಮ ಪ್ರಭಾವವನ್ನು ತೋರಿಸಿದ್ದ ಬಿಎಸ್​ವೈ ಅವರು ಸಚಿವರನ್ನು ಆಯ್ಕೆ ಮಾಡುವ ವಿಚಾರದಲ್ಲೂ ಕೈಯಾಡಿಸುತ್ತಾರ ಎಂಬುದು ಸದ್ಯದ ಗಾಳಿಸುದ್ದಿ. ಏಕೆಂದರೆ ಸಿಎಂ ಸ್ಥಾನ ಕೈಯಲ್ಲಿ ಇಲ್ಲದಿದ್ದರೂ ಸಹ ಸೂಪರ್​ ಸಿಎಂ ಸ್ಥಾನವನ್ನು ಬಿಟ್ಟುಕೊಡಲು ಅವರು ಮನಸು ಮಾಡುತ್ತಿಲ್ಲ ಆದ ಕಾರಣ ಇಲ್ಲೂ ಸಹ ಬಿಎಸ್​ವೈ ಕಮಾಲ್​ ನಡೆಸಲಿದ್ದಾರ ಕಾದು ನೋಡಬೇಕಿದೆ.

  ಇದನ್ನೂ ಓದಿ: ನಮ್ಮ ಮೆಟ್ರೋ ಕೆಂಗೇರಿ ಮಾರ್ಗ ಪೂರ್ಣ: ಆಗಸ್ಟ್​ 20ರ ಹೊತ್ತಿಗೆ ಸಾರ್ವಜನಿಕರ ಓಡಾಟಕ್ಕೆ ಮುಕ್ತ

  ಇದೆಲ್ಲದರ ಜೊತೆಗೆ ಅನೇಕ ಸಮುದಾಯಗಳ ನಾಯಕರಿಂದ ನಮ್ಮ ಜಾತಿಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂದು ಹಲವು ಮೂಲಗಳಿಂದ ಒತ್ತಡ ಹೇರಲಾಗುತ್ತಿದೆ. ಹಾಲಿ ಇರುವ ಅನೇಕ ಸಚಿವರು ಸ್ಥಾನ ಕಳೆದುಕೊಳ್ಳುವರು ಎಂದು ಹೇಳಲಾಗಿದ್ದು, ಸ್ಥಾನ ಕಳೆದುಕೊಳ್ಳುವ ಸಚಿವರೆಲ್ಲ ದೆಹಲಿಯ ಬಾಗಿಲಲ್ಲಿ ಕಾಯುತ್ತಾ ನಿಂತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: