ರಾಮನಗರ: ನನ್ನ ಮಗ ಇದ್ದಾಗಲೂ, ಇಲ್ಲದಿದ್ದಾಗಲೂ ಕುಸುಮಾ ನನ್ನ ಸೊಸೆ. ಕುಸುಮಾ (Kusuma Hanumantharayappa) ತನ್ನ ಹೊಟ್ಟೆಪಾಡಿಗೆ ಏನೋ ಕೆಲಸ ಮಾಡಿಕೊಂಡಿದ್ದಾಳೆ. ಇಂದು ನಾನು ಆಕೆಯ ಬಗ್ಗೆಯೂ ಮಾತನಾಡಲ್ಲ. ಆದರೆ ಇಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ (IPS Officer D Roopa) ಯಾವುದೋ ವಿಷಯಗಳಿಗೆ ಜಗಳ ಮಾಡಿಕೊಳ್ತಿದ್ದಾರಂತೆ. ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರನ್ನು ಎಳೆದು ತರಬೇಡಿ ಎಂದು ಡಿಕೆ ರವಿ ತಾಯಿ ಗೌರಮ್ಮ (DK Ravi Mother Gouramma) ಮನವಿ ಮಾಡಿಕೊಂಡರು.
ಕುಸುಮಾಗೂ ನಮಗೂ ಏನು ಸಂಬಂಧವಿಲ್ಲ. ಕುಸುಮಾ ತಮ್ಮ ತವರು ಮನೆಯಲ್ಲಿದ್ರೆ ನಾನಿಲ್ಲಿದ್ದೇನೆ. ಸಿಬಿಐನವರು ನೇರವಾಗಿಯೇ ದುಡ್ಡು ಬೇಕಮ್ಮಾ ಏನು ಎಂದು ಕೇಳಿದರು. ನೀವು ನ್ಯಾಯ ಮಾಡಲು ಬಂದವರು. ನಮಗೆ ನ್ಯಾಯ ಕೊಡಿಸಿ ಎಂದು ಹೇಳಿದೆ.
ನಿಮ್ಮ ಜಗಳದಲ್ಲಿ ಮಗನ ಹೆಸರು ಯಾಕೆ?
ವೈದ್ಯರಾದ ಶಿವಪ್ಪ ಮತ್ತು ರಮೇಶ್ ಎಂಬವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾವೇ ನಿನ್ನ ಮಕ್ಕಳು ಎಂದು ಹೇಳುತ್ತಾರೆ. ನನ್ನ ಮಗನ ಹಾಗೆಯೇ ನೋಡಿಕೊಳ್ಳುತ್ತಿದ್ದಾರೆ. ಆದರೆ ಇವರೆಲ್ಲ ತಮ್ಮ ಜಗಳದಲ್ಲಿ ಮಗನ ಹೆಸರು ಯಾಕೆ ಎಳೆದು ತರುತ್ತಿದ್ದಾರೆ ಎಂದು ಗೊತ್ತಿಲ್ಲ. ನನ್ನ ಮಗನ ಹೆಸರನ್ನು ಬೀದಿಗೆ ತರಬಾರದು.
ರೂಪಾ ನೀನು ಮಾಡಿದ್ದು ತಪ್ಪು
ಡಿ ರೂಪಾ ಮಾಡೋದು ತಪ್ಪು. ನೀನು ಮಾಡಿದ್ದರಿಂದ ಇಂದು ಎಲ್ಲರೂ ನನಗೆ ಫೋನ್ ಮಾಡಿ ಮಗನ ಸಾವಿನ ಬಗ್ಗೆ ಕೇಳುತ್ತಿದ್ದಾರೆ. ನಿಮ್ಮಿಬ್ಬರ ಜಗಳದಲ್ಲಿ ಮಗನ ಹೆಸರು ಯಾಕೆ ಬಳಸಿಕೊಳ್ಳುತ್ತಿದ್ದೀರಿ. ಎಂಟು ವರ್ಷದ ಬಳಿಕ ಮಗನ ಹೆಸರು ಮುನ್ನಲೆ ತರುತ್ತಿದ್ದೀರಿ ಎಂದು ಡಿ ರೂಪಾ ಅವರಿಗೆ ಗೌರಮ್ಮ ಪ್ರಶ್ನೆ ಮಾಡಿದರು.
ಮುಖ್ಯ ಕಾರ್ಯದರ್ಶಿಗೆ ರೋಹಿಣಿ ಸಿಂಧೂರಿ ದೂರು
ಮುಖ್ಯಮಂತ್ರಿಗಳು ನೋಟಿಸ್ ನೀಡಿದ ಹಿನ್ನೆಲೆ ಇಂದು ರೋಹಿಣಿ ಸಿಂಧೂರಿ ಅವರು ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ ಅವರನ್ನು ಭೇಟಿಯಾಗಿ ಡಿ ರೂಪಾ ವಿರುದ್ಧ ದೂರು ನೀಡಿದ್ದಾರೆ. ಅಧಿಕಾರಿಗಳು ಮೀಡಿಯಾ ಮುಂದೆ ಹೋಗಬಾರದು. ವೈಯಕ್ತಿಕ ಜೀವನದ ಬಗ್ಗೆ ಯಾರೂ ಮಾತಾಡಬಾರದು. ರೂಪಾ ಮಾಡಿರುವ ಆರೋಪಗಳು ಸುಳ್ಳು ಎಂದು ರೋಹಿಣಿ ಸಿಂಧೂರಿ ಹೇಳಿದರು.
ಮುಖ್ಯ ಕಾರ್ಯದರ್ಶಿಗಳಿಗೆ ರೂಪಾ ಆರೋಪಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ. ರೂಪಾ ನನ್ನ ವಿರುದ್ಧ 20 ಸುಳ್ಳು ಆರೋಪ ಮಾಡಿದ್ದಾರೆ.ಚಾಮರಾಜನಗರ ದುರಂತದಲ್ಲಿ ನನ್ನ ಪಾತ್ರ ಇರಲಿಲ್ಲ. ಆದ್ರೂ ರೂಪಾ ಸುಖಾಸುಮ್ಮನೇ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಶೌಚಾಲಯ ನಿರ್ಮಾಣದ ಬಗ್ಗೆ ಸುಳ್ಳು ಹೇಳಿಲ್ಲ. ನನ್ನ ಕಾರ್ಯಕ್ಕೆ ಕೇಂದ್ರದಿಂದಲೇ ಪ್ರಶಸ್ತಿ ಲಭಿಸಿದೆ. ಮೂವರಿಗೆ ಫೋಟೋ ಕಳಿಸಿದ್ದೆ ಎನ್ನುವುದು ಸುಳ್ಳು ಎಂದೂ ರೋಹಿಣಿ ಸಿಂಧೂರಿ ದೂರಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Rohini Sindhuri Vs D Roopa: ರೋಹಿಣಿ ಸಿಂಧೂರಿ ಪತಿ ಹೇಳಿಕೆ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಹರಿಬಿಟ್ಟ ರೂಪಾ
ರೋಹಿಣಿ ಸಿಂಧೂರಿ ಪತಿ ವಿರುದ್ಧ ರೂಪಾ ಕಿಡಿ
ಸಿಂಧೂರಿ ಪತಿ ವಿರುದ್ಧ ಡಿ. ರೂಪಾ ಹರಿಹಾಯ್ದಿದ್ದಾರೆ. ಗಂಡ ಪ್ರೆಸ್ಮೀಟ್ ಮಾಡ್ತಾರೆ ಅಂದ್ರೆ ಏನರ್ಥ? ಸಿಂಧೂರಿಗೆ ಮೀಡಿಯಾ ಮುಂದೆ ಬರಲು ಧೈರ್ಯ ಇಲ್ವಾ? ರೋಹಿಣಿ ಸಿಂಧೂರಿ ಬಳಿ ಉತ್ತರಗಳೇ ಇಲ್ವಾ? ಅವರ ಪತಿ ಫೋನ್ ಹ್ಯಾಕ್ ಮಾಡಿದ್ದಾರೆ ಎಂದರೆ ಏನರ್ಥ? ಇವೆಲ್ಲಾ ನಂಬುವ ಮಾತೇ? ಪಾಪಾ ಎಂದು ವ್ಯಂಗ್ಯ ಮಾನ ಹರಾಜ್ ಆಗಿದೆ ಎಂದು ರೂಪಾ FB ಪೋಸ್ಟ್ ಮಾಡಿದ್ದಾರೆ.
ಸಂಸಾರಗಳಲ್ಲಿ ಹುಳಿ ಹಿಂಡಲು ಹೀಗೆ ಮಾಡಿದರಾ? ಒಬ್ಬ ಹೆಣ್ಣಾಗಿ ಅನೇಕ ಹೆಣ್ಣು ಮಕ್ಕಳಿಗೆ ಮುಳ್ಳಾಗಿದ್ದಾಳೆ. ಸಿಂಧೂರಿ ಪರ ನಿಂತವರಿಗೆ ಡಿ ರೂಪಾ ಪ್ರಶ್ನೆ ಮಾಡಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ