ನೇತ್ರಾಣಿ ಎಂಬ ನಿಗೂಢ ಸ್ಥಳ: ನೋಡಲು ಹಣವಲ್ಲ ಅದೃಷ್ಟ ಬೇಕು

ಮಳೆಗಾಲದಲ್ಲಿ ಭೂಮಿಯಲ್ಲಿ ಕೃಷಿ ಮಾಡುವ ಕಡಲಮಕ್ಕಳು, ಮಳೆಗಾಲ ಮುಗಿಯುತ್ತಿದ್ದ ಹಾಗೆ ಸಮುದ್ರಕ್ಕೆ ಇಳಿದು ಮೀನುಗಾರಿಕೆ ಮಾಡುತ್ತಾರೆ. ಮೀನುಗಾರಿಕೆ ನಡುವೆ ವರ್ಷಕ್ಕೆ ಒಮ್ಮೆ ಈ ನೇತ್ರಾಣಿ ದೀಪಕ್ಕೆ ಹೋಗಿ ಬರ್ತಾರೆ. ಕೇವಲ ಮೋಜು ಮಸ್ತಿ ಇವರ ಪ್ರವಾಸದ ಉದ್ದೇಶವಲ್ಲ. ಇಲ್ಲಿ ಹೋಗಿ ಪೂಜೆ ಸಲ್ಲಿಸಿ ನಮ್ಮನ್ನು ಕಾಪಾಡು ದೇವರೇ ಎಂದು ಬೇಡಿಕೊಂದು ಬರುವುದು ಇಲ್ಲಿನವರ ನಂಬಿಕೆ. ಧಾರ್ಮಿಕ ಭಾವೈಕ್ಯತೆ ಮೆರೆಯುವ ಖಾರ್ವಿ, ಮೊಗವೀರ ಸಮುದಾಯ, ಹಿಂದೂ, ಮುಸಲ್ಮಾನ, ಕ್ರೈಸ್ತ ಧರ್ಮದ ಆಚರಣೆಗಳನ್ನು ಪಾಲಿಸ್ತಾರೆ.

news18-kannada
Updated:February 20, 2020, 9:59 PM IST
ನೇತ್ರಾಣಿ ಎಂಬ ನಿಗೂಢ ಸ್ಥಳ: ನೋಡಲು ಹಣವಲ್ಲ ಅದೃಷ್ಟ ಬೇಕು
ನೇತ್ರಾಣಿ
  • Share this:
ಪ್ರವಾಸ ಹೋಗುವುದು ಹಲವರ ಹವ್ಯಾಸ. ಇನ್ನೂ ಕೆಲವರು ಕೆಲಸ ಕಾರ್ಯಗಳ ಜಂಜಾಟದಿಂದ ವಿಶ್ರಾಂತಿ ಪಡೆಯಲು ಪ್ರವಾಸ ಹೋಗುತ್ತಾರೆ. ಅದರಲ್ಲೂ ಕೆಲವರು ಬೆಟ್ಟ, ಗುಡ್ಡಗಳನ್ನು ಹತ್ತುವ ಹ್ಯವ್ಯಾಸ ಇಟ್ಟುಕೊಂಡಿರುತ್ತಾರೆ. ಇನ್ನು ಸ್ವಲ್ಪ ಜನ ನದಿ, ಸಮುದ್ರ ತೀರದಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತ ಮನಸ್ಸಿನ ಭಾರಗಳನ್ನು ಇಳಿಸಿಕೊಂಡು ವಾಪಸ್‌ ಬರುತ್ತಾರೆ. ಬಹುತೇಕ ಎಲ್ಲಾ ಸ್ಥಳಗಳಿಗೂ ಪ್ರವಾಸ ಕೈಗೊಳ್ಳಲು ಹಣವಿದ್ದರೆ, ಗೈಡ್‌ ಮೂಲಕವೋ, ಇಂಟರ್‌ನೆಟ್‌ ಮೂಲಕವೋ ಮಾಹಿತಿ ಪಡೆದು ಪ್ರವಾಸ ಕೈಗೊಳ್ಳಬಹುದು. ಸರ್ಕಾರಗಳು ಸಹ ಪ್ರವಾಸೋದ್ಯಮ ಹೆಸರಲ್ಲಿ ಅಭಿವೃದ್ಧಿ ಮಾಡುವ ಭರದಲ್ಲಿ ನೈಸರ್ಗಿಕ ತಾಣವನ್ನೂ ನಗರವನ್ನಾಗಿ ಮಾಡಿರುತ್ತಾರೆ. ಆದರೆ ಈಗ ನಾನು ಹೇಳಲು ಹೊರಟಿರುವ ಈ ಸ್ಥಳ ಹಣವಿದ್ದರೆ ಹೋಗಿ ಬರಲು ಸಾಧ್ಯವಿಲ್ಲ. ಇಲ್ಲಿಗೆ ಹೋಗಬೇಕಾದರೆ ಅದೃಷ್ಟ ಇರಬೇಕು.ಅದೃಷ್ಟ ಎಂದರೆ ಮೈಮೇಲಿರುವ ಯಾವುದೋ ರೇಖೆ, ಮಚ್ಚೆ ಇರಬೇಕು ಎಂದಲ್ಲ. ಇದೊಂದು ಸಮುದ್ರದ ನಡುವೆ ಇರುವ ದ್ವೀಪ. ಅಂಡಮಾನ್‌ ನಿಕೋಬಾರ್‌, ಲಕ್ಷದೀಪಗಳಂತೆ ಇದೊಂದು ದೀಪ. ಇಷ್ಟೇನಾ ಎಂದು ಹುಬ್ಬೇರಿಸಬೇಡಿ. ಲಕ್ಷದೀಪ, ಅಂಡಮಾನ್‌ ನಿಕೋಬಾರ್‌ಗೆ ನೀವು ಸ್ವತಂತ್ರವಾಗಿ ಪ್ರವಾಸ ಕೈಗೊಳ್ಳಬಹುದು. ಆದ್ರೆ ಈ ದೀಪಕ್ಕೆ ನೀವು ಪ್ರವಾಸ ಕೈಗೊಳ್ಳಲು ಸಾಧ್ಯವೇ ಇಲ್ಲ. ಯಾಕಂದ್ರೆ ಈ ಪ್ರದೇಶ ಕೇವಲ ಕರ್ನಾಟಕದ ಕರಾವಳಿಯ ಎರಡು ಜಿಲ್ಲೆಗಳಾದ ಉಡುಪಿ ಹಾಗು ಉತ್ತರ ಕನ್ನಡ ಜನರಿಗೆ ಮೀಸಲು. ಅದರಲ್ಲೂ ಅಲ್ಲಿನ ಮೀನುಗಾರ ಕುಟುಂಬಗಳ ಪ್ರವಾಸಕ್ಕೆ ಸೀಮಿತ. ಖಾರ್ವಿ, ಮೊಗವೀರ ಸಮುದಾಯದ ಜನರು ವರ್ಷಕ್ಕೆ ಒಮ್ಮೆ ಮಾತ್ರ ನೇತ್ರಾಣಿ ದೀಪಕ್ಕೆ ಪ್ರವೇಶ ಪಡೆಯುತ್ತಾರೆ. ಒಂದು ದಿನ ಪೂರ್ತಿ ಅಲ್ಲೇ ಕಾಲಕಳೆದು ಮತ್ತೆ ವಾಪಸ್‌ ಆಗ್ತಾರೆ.ಮಳೆಗಾಲದಲ್ಲಿ ಭೂಮಿಯಲ್ಲಿ ಕೃಷಿ ಮಾಡುವ ಕಡಲಮಕ್ಕಳು, ಮಳೆಗಾಲ ಮುಗಿಯುತ್ತಿದ್ದ ಹಾಗೆ ಸಮುದ್ರಕ್ಕೆ ಇಳಿದು ಮೀನುಗಾರಿಕೆ ಮಾಡುತ್ತಾರೆ. ಮೀನುಗಾರಿಕೆ ನಡುವೆ ವರ್ಷಕ್ಕೆ ಒಮ್ಮೆ ಈ ನೇತ್ರಾಣಿ ದೀಪಕ್ಕೆ ಹೋಗಿ ಬರ್ತಾರೆ. ಕೇವಲ ಮೋಜು ಮಸ್ತಿ ಇವರ ಪ್ರವಾಸದ ಉದ್ದೇಶವಲ್ಲ. ಇಲ್ಲಿ ಹೋಗಿ ಪೂಜೆ ಸಲ್ಲಿಸಿ ನಮ್ಮನ್ನು ಕಾಪಾಡು ದೇವರೇ ಎಂದು ಬೇಡಿಕೊಂದು ಬರುವುದು ಇಲ್ಲಿನವರ ನಂಬಿಕೆ. ಧಾರ್ಮಿಕ ಭಾವೈಕ್ಯತೆ ಮೆರೆಯುವ ಖಾರ್ವಿ, ಮೊಗವೀರ ಸಮುದಾಯ, ಹಿಂದೂ, ಮುಸಲ್ಮಾನ, ಕ್ರೈಸ್ತ ಧರ್ಮದ ಆಚರಣೆಗಳನ್ನು ಪಾಲಿಸ್ತಾರೆ. ತಾವು ಮೀನುಗಾರಿಕೆ ಮಾಡುವ ದೋಣಿಗಳಿಗೆ ಅಲಂಕಾರ ಮಾಡಿಕೊಂಡು ಜಯಘೋಷಗಳೊಂದಿಗೆ ಮನೆ ಮಂದಿಯಲ್ಲಾ ನೇತ್ರಾಣಿಗೆ ಹೋಗ್ತಾರೆ. ತಲೆತಲಾಂತರಗಳಿಂದ ಅಲ್ಲೊಂದು ದರ್ಗಾ, ಕ್ರಿಸ್ತನ ಶಿಲುಬೆ ಜೊತೆಗೆ ಮೀನುಗಾರರ ಆರಾಧ್ಯ ದೈವ ಜಟ್ಟಿಗೇಶ್ವರ ಅಲ್ಲಿದ್ದಾನೆ.ಸಮುದ್ರ ತೀರದಿಂದ ಸುಮಾರು 15 ನಾಟಿಕಲ್‌ ದೂರದಲ್ಲಿರುವ ಈ ನೇತ್ರಾಣಿ ದೀಪಕ್ಕೆ ತಲುಪಲು ಕನಿಷ್ಟ ಎಂದರೂ ನಾಲ್ಕೈದು ಗಂಟೆಗಳು ದೋಣಿಯಲ್ಲಿ ಪ್ರಯಾಣ ಮಾಡಬೇಕು. ನೇತ್ರಾಣಿ ದೀಪದಲ್ಲಿ ಕೇವಲ ಒಂದು ಬೆಟ್ಟ ಮಾತ್ರವಿದ್ದು, ಮನುಷ್ಯರ ಸುಳಿವೇ ಇಲ್ಲ. ಕೇವಲ ಒಂದೇ ಒಂದು ಬಾವಿಯಲ್ಲಿ ಕುಡಿಯುವ ನೀರುಂಟು. ಹಾಗಾಗಿ ತಮ್ಮ ದೋಣಿಯಲ್ಲೇ ಓರ್ವ ಅರ್ಚಕನನ್ನೂ ಕರೆದುಕೊಂಡು ಹೋಗ್ತಾರೆ. ಜೊತೆಗೆ ಇಡೀ ಸಂಸಾರಕ್ಕೆ ಬೇಕಾದ ಆಹಾರವನ್ನು ಕೊಂಡೊಯ್ಯುತ್ತಾರೆ. ಅಲ್ಲಿರುವ ಮೂರೂ ಧರ್ಮದ ದೇವಸ್ಥಾನ, ಸಮಾಧಿ, ಶಿಲುಬೆಗೆ ಪೂಜೆ ಮಾಡುತ್ತಾರೆ. ಸಂಜೆ ತನಕ ಆ ಬೆಟ್ಟದಲ್ಲೇ ಕಾಲ ಕಳೆದು ಮತ್ತೆ ಮನೆಗಳಿಗೆ ಹಿಂದಿರುಗುತ್ತಾರೆ. ಇಲ್ಲಿಗೆ ಎಲ್ಲರೂ ಹೋಗಲು ನೌಕಾಸೇನೆ ಅವಕಾಶ ಕೊಡುವುದಿಲ್ಲ. ಕೇವಲ ಮೀನುಗಾರರ ಕುಟುಂಬಗಳು ತಮ್ಮ ನಂಬಿಕೆ ಜಟ್ಟಿಗೇಶ್ವರನಿಗೆ ಪೂಜಿಸಲು ಅವಕಾಶ ಇರುತ್ತದೆ. ಮಳೆಗಾಲದಲ್ಲಿ ಬೆಟ್ಟ ಅಪಾಯದಲ್ಲಿರುತ್ತದೆ. ಜನರ ರಕ್ಷಣಾ ದೃಷ್ಟಿಯಿಂದ ಕೇವಲ ಜನವರಿ, ಫೆಬ್ರವರಿ, ಮಾರ್ಚ್‌ನಲ್ಲಿ ಮೀನುಗಾರರು ಮಾತ್ರ ತೆರಳುತ್ತಾರೆ.ಇದನ್ನೂ ಓದಿ: ವರದಕ್ಷಿಣೆ ಕಿರುಕುಳ: ಭಾರತದ ಹಾಕಿ ಮಹಿಳಾ ತಂಡದ ಮಾಜಿ ನಾಯಕಿ ಮೇಲೆ ಗಂಡನಿಂದ ಮಾರಣಾಂತಿಕ ಹಲ್ಲೆ

ನಿಮ್ಮ ಬಳಿ ಸಾಕಷ್ಟು ಹಣವಿದ್ದರೆ ಇದೇ ರೀತಿ ಇರುವ ಬೇರೆ ಬೇರೆ ದೀಪಗಳನ್ನು ನೋಡಿಕೊಂಡು ಬರಬಹುದು. ಆದರೆ ಈ ನೇತ್ರಾಣಿಯೆಂಬ ಪುಟ್ಟ ದೀಪವನ್ನು ನೋಡಲು ಸಾಧ್ಯವಿಲ್ಲ ಎಂಬುದಂತು ಸತ್ಯ. ಕೇವಲ 10 ರಿಂದ 15 ಎಕರೆ ವಿಸ್ತೀರ್ಣದ ಭೂಪ್ರದೇಶಕ್ಕೆ ಹೋಗಲು ಸೇನಾಪಡೆ ಅವಕಾಶ ಕೊಡುವುದಿಲ್ಲ. ಹಾಗಾಗಿ ಈ ನೇತ್ರಾಣಿ ಎಲ್ಲರ ಕೈಗೂ ಎಟುಕದ ಹುಳಿದ್ರಾಕ್ಷಿ. ಹೋಗಲು ಸಾಧ್ಯವಾಗದವರು ಓದಿಕೊಂಡೂ ಅಲ್ಲಿನ ಪ್ರಕೃತಿ ಸೌಂಧರ್ಯವನ್ನು ಕಲ್ಪನಾ ಲೋಕದಲ್ಲೇ ಸವಿಯಬೇಕು.

(ಲೇಖಕರು: ಮಂಜೇಗೌಡ ಕೆ. ಮಲ್ಲೇನಹಳ್ಳಿ)
First published:February 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ