Arun Yogiraj: ಇಂಡಿಯಾ ಗೇಟ್‌ ಬಳಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಇದರ ಹಿಂದಿದೆ ಕನ್ನಡಿಗನ ಕೈಚಳಕ

ಇಂಡಿಯಾ ಗೇಟ್‌ ಬಳಿ ಅತ್ಯದ್ಭುತವಾಗಿ ಮೂಡಿ ಬಂದಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ನಿರ್ಮಾಣದ ಹಿಂದಿರುವ ಕೈ ಕರ್ನಾಟಕದ್ದು. ಹೌದು, ಪ್ರಧಾನಿ ಮೋದಿ ಅವರು ಅನಾವರಣಗೊಳಿಸಿರುವ 28 ಅಡಿ ಎತ್ತರದ ಗ್ರಾನೈಟ್ ಪ್ರತಿಮೆ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್‌ ಅವರ ಕೈಚಳಕದಿಂದ ಮೂಡಿಬಂದಿದೆ.

ಅರುಣ್ ಯೋಗಿರಾಜ್‌

ಅರುಣ್ ಯೋಗಿರಾಜ್‌

  • Share this:
ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಅವರ ಪುತ್ಥಳಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸೆಪ್ಟೆಂಬರ್‌ 8ರಂದು ಅನಾವರಣ ಮಾಡಿದ್ದಾರೆ. ಕಪ್ಪು ಬಣ್ಣದ ಗ್ರಾನೈಟ್ ಶಿಲೆಯಿಂದ ನೇತಾಜಿ ಅವರ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, 28 ಅಡಿ ಎತ್ತರವಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ (India Gate) ರಾಜಪಥವನ್ನು ಕರ್ತವ್ಯ ಪಥ ಎಂದು ಮರು ನಾಮಕರಣ ಮಾಡಲಾಗಿದ್ದು, ಈ ಕರ್ತವ್ಯ ಪಥದಲ್ಲಿ ಇಂಡಿಯಾ ಗೇಟ್ ಸಮೀಪದಲ್ಲೇ ನೇತಾಜಿ ಅವರ ಬೃಹತ್ ಪ್ರತಿಮೆ (Statute) ತಲೆ ಎತ್ತಿದೆ.

ಮೈಸೂರು ಮೂಲದ ಅರುಣ್ ಯೋಗಿರಾಜ್‌ ಅವರಿಂದ ಪ್ರತಿಮೆ ಕೆತ್ತನೆ
ಇಷ್ಟೆಲ್ಲಾ ಅತ್ಯದ್ಭುತವಾಗಿ ಮೂಡಿ ಬಂದಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ನಿರ್ಮಾಣದ ಹಿಂದಿರುವ ಕೈ ಕರ್ನಾಟಕದ್ದು. ಹೌದು, ಪ್ರಧಾನಿ ಮೋದಿ ಅವರು ಅನಾವರಣಗೊಳಿಸಿರುವ 28 ಅಡಿ ಎತ್ತರದ ಗ್ರಾನೈಟ್ ಪ್ರತಿಮೆ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್‌ ಅವರ ಕೈಚಳಕದಿಂದ ಮೂಡಿಬಂದಿದೆ.

"ಈ ಪ್ರತಿಮೆಗೆ ಸಂದ ಗೌರವ ವಿಶೇಷವಾಗಿದೆ"
ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತಾನಾಡಿದ ಮೈಸೂರಿನ ಹೆಮ್ಮೆಯ ಕಲಾವಿದ ಅರುಣ್ ಯೋಗಿರಾಜ್, ಈ ಬಗ್ಗೆ ಖುಷಿ ವ್ಯಕ್ತಪಡಿಸಿದರು. "ನಾನು ಸಾವಿರಾರು ಶಿಲ್ಪಗಳು ಮತ್ತು ವಿಗ್ರಹಗಳನ್ನು ಕೆತ್ತಿದ್ದೇನೆ, ಆದರೆ ಇದುವರೆಗೆ ಇಂತಹ ಗೌರವವನ್ನು ಪಡೆದಿಲ್ಲ" ಎಂದು ಯೋಗಿರಾಜ್ ಭಾವುಕರಾದರು. ಹೀಗೆ ಮಾತನಾಡುತ್ತಾ ಹೋದ 39 ವರ್ಷದ ಅವರು ಶಿಲ್ಪಕಲೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ನೇತಾಜಿ ಪ್ರತಿಮೆಯನ್ನು ನಿರ್ಮಿಸುವಲ್ಲಿ ಅವರ ಕೆಲಸ ಹೇಗಿತ್ತು ಎಂಬುದನ್ನು ಸಹ ಅವರು ವಿವರಿಸಿದರು.

ನೇತಾಜಿ ಅವರ ಮೂರ್ತಿ ನಿರ್ಮಿಸಲು ಬರೋಬ್ಬರಿ 280 ಮೆಟ್ರಿಕ್ ಟನ್ ಏಕಶಿಲಾ ಗ್ರಾನೈಟ್‌ ಕೆತ್ತನೆ ಮಾಡಿರುವ ಕಲಾವಿದರು ಇದಕ್ಕಾಗಿ ಒಟ್ಟು 75 ದಿನಗಳು ಮತ್ತು 26 ಸಾವಿರ ಮಾನವ ಗಂಟೆಗಳನ್ನು ವೆಚ್ಚ ಮಾಡಿದ್ದಾರೆ. ಯೋಗಿರಾಜ್ ಅವರ ಮಾರ್ಗದರ್ಶನದಲ್ಲಿ, ಭಾರತದಾದ್ಯಂತದ 48 ಶಿಲ್ಪಿಗಳು ಈ ಪ್ರತಿಮೆಗೆ ಕೆಲಸ ಮಾಡಿದ್ದಾರೆ. ನಂತರ ಮೂರ್ತಿ ನಿರ್ಮಾಣವಾದ ಬಳಿಕ ತೆಲಂಗಾಣದ ಖಮ್ಮಮ್‌ನಿಂದ ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ಕ್ಯಾಂಪಸ್‌ಗೆ 140-ಚಕ್ರಗಳ ಟ್ರಕ್‌ನಲ್ಲಿ 1,165 ಕಿಮೀ ಪ್ರಯಾಣಿಸಿ ಇಲ್ಲಿಗೆ ತರಲಾಯಿತು ಎಂದು ವಿವರಿಸಿದರು.

ಕೆಲಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಯೋಗಿರಾಜ್
ಯೋಗಿರಾಜ್ ಅವರು ತಮ್ಮ ಕೆಲಸದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದು, ನಾನು ನಿಜಕ್ಕೂ "ಅದೃಷ್ಟಶಾಲಿ" ಎಂದು ಹೇಳಿಕೊಂಡರು. ಕೇಂದ್ರ ಸರ್ಕಾರದಿಂದ ಪಡೆದ ಮೆಚ್ಚುಗೆ ಬಗ್ಗೆ ಭಾವುಕರಾದ ಮೈಸೂರಿನ ವ್ಯಕ್ತಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಮತ್ತು ಅವರ ವಿಷಯದ ವೈಭವವನ್ನು ಪ್ರತಿಬಿಂಬಿಸಿದ್ದಾರೆ

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆಲ ತಿಂಗಳ ಹಿಂದೆ ಪ್ರಧಾನಿ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ, ಈ ವೇಳೆ ತಾವು ಕೆತ್ತಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 2 ಅಡಿ ಎತ್ತರದ ಕಲ್ಲಿನ ಪ್ರತಿಮೆಯನ್ನು ಪ್ರಧಾನಿ ಮೋದಿಗೆ ಕಾಣಿಕೆಯಾಗಿ ನೀಡಿದ್ದರು. ಕಲಾವಿದನ ಕೆಲಸಕ್ಕೆ ಮತ್ತಷ್ಟು ತೂಕ ಬಂದಿದ್ದು ಪ್ರಸ್ತುತ 28 ಅಡಿ ಎತ್ತರ ನೇತಾಜಿ ಪ್ರತಿಮೆಯನ್ನು ಸಹ ಇವರೇ ಕೆತ್ತಿದ್ದಾರೆ ಎಂಬುವುದೇ ಕನ್ನಡಿಗರ ಹೆಮ್ಮೆ.
ಇಷ್ಟೇ ಅಲ್ಲದೇ ಅರುಣ್ ಯೋಗಿರಾಜ್ ಇತ್ತೀಚೆಗೆ ಕೇದಾರನಾಥದಲ್ಲಿ ಪ್ರತಿಷ್ಠಾಪನೆಗೊಂಡ ಶಂಕರಾಚಾರ್ಯರ ಪ್ರತಿಮೆಯನ್ನು ಸಹ ಕೆತ್ತನೆ ಮಾಡಿದ್ದಾರೆ.

ಕಾರ್ಪೊರೇಟ್ ಉದ್ಯೋಗ ತೊರೆದು ಶಿಲ್ಪಕೆತ್ತನೆಯತ್ತ ಒಲವು
ತಮ್ಮ ತಂದೆಯಿಂದ ಕಲ್ಲುನ್ನು ಕೆತ್ತಿ ಉತ್ತಮ ಕಲಾಕೃತಿ ಆಗಿಸುವ ಕಲೆಯನ್ನು ಅರುಣ್ ಯೋಗಿರಾಜ್ ಕಲಿತಿದ್ದಾರೆ. ತಾಯಿಯ ವಿರೋಧದ ನಡುವೆಯೂ ಎಂಬಿಎ ಪದವೀಧರಾಗಿದ್ದ ಇವರು 2008 ರಲ್ಲಿ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ಈ ಕೆಲಸವನ್ನು ಪ್ರಾರಂಭಿಸಿದರು. ಪ್ರಸ್ತುತ ಮೈಸೂರಿನ ಅರುಣ್ ಯೋಗಿರಾಜ್‌ ಅವರಿಗೆ ದೇಶದ ಅತ್ಯದ್ಭುತವಾದ ಕಲಾವಿದ ಎಂಬ ಹೆಗ್ಗಳಿಕೆ ಇದೆ.
Published by:Ashwini Prabhu
First published: