• Home
  • »
  • News
  • »
  • state
  • »
  • Chikkamagaluru: ಅಪಾಯಕ್ಕೆ ಆಹ್ವಾನ ನೀಡ್ತಿದೆ ನೆಮ್ಮಾರು ಗ್ರಾಮದ ತೂಗು ಸೇತುವೆ

Chikkamagaluru: ಅಪಾಯಕ್ಕೆ ಆಹ್ವಾನ ನೀಡ್ತಿದೆ ನೆಮ್ಮಾರು ಗ್ರಾಮದ ತೂಗು ಸೇತುವೆ

ನೆಮ್ಮಾರು ತೂಗು ಸೇತುವೆ

ನೆಮ್ಮಾರು ತೂಗು ಸೇತುವೆ

ಆದರೆ ನಿರ್ವಹಣೆ ಇಲ್ಲದೆ ಸೇತುವೆ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿದೆ. ಸೇತುವೆಗೆ ಹಾಕಿರುವ ಗ್ರಿಲ್‌ಗಳು ಕಿತ್ತು ಬಂದಿವೆ. ಸೇತುವೆಯ ಫುಟ್‌ಪಾತ್ ಹಾಗೂ ತಡೆಗೋಡೆಗೆ ಹಾಕಿರೋ ಗ್ರಿಲ್‌ಗಳ ಜಾಯಿಂಟ್ ಕೂಡ ಬಿಟ್ಟಿದ್ದು ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿಯಂತಾಗಿದೆ.

  • Share this:

ಚಿಕ್ಕಮಗಳೂರು: ಗುಜರಾತ್‌ನಲ್ಲಿ ನಡೆದ ಮೊರ್ಬಿ ದುರಂತ (Morbi bridge collapse) 141 ಜನರನ್ನು ಬಲಿಪಡೆದಿದೆ. ಕರ್ನಾಟಕದಲ್ಲಿ ಕೂಡ ಇಂತದ್ದೇ ಅಪಾಯಕಾರಿ ಸೇತುವೆಗಳಿವೆ, ಗುಜರಾತಿನ ಮೊರ್ಬಿ ಸೇತುವೆಯಷ್ಟೇ ಚಿಕ್ಕಮಗಳೂರಿನಲ್ಲಿಯೂ (Chikkamgaluru) ಅಪಾಯದ ಸೇತುವೆಗಳಿವೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು (Nemmaru Village, Sringeri) ಗ್ರಾಮದಲ್ಲಿರುವ ತೂಗು ಸೇತುವೆ ಅಪಾಯಕ್ಕೆ ಕಾದು ಕೂತಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ನೆಮ್ಮಾರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ತುಂಗಾ ನದಿ (Tunga River) ಮೇಲೆ ನಿರ್ಮಿಸಿದ ಸೇತುವೆ ಈಗ ಬೀಳುವ ಸ್ಥಿತಿಯಲ್ಲಿದೆ. ಇಲ್ಲಿನ ಸುಂಕದಮಕ್ಕಿ ಹಾಗೂ ಹೆಡದಾಳು ಗ್ರಾಮದ 150ಕ್ಕೂ ಹೆಚ್ಚು ಕುಟುಂಬಗಳಿಗೆ ಈ ಸೇತುವೆಯೇ ಆಧಾರ. ಇವರಿಗೆ ಬೇರೆ ಮಾರ್ಗ ಇದ್ದರೂ 12 ಕಿ.ಮೀ. ಸುತ್ತಿ ಬರಬೇಕು. ಹಾಗಾಗಿ 20 ವರ್ಷಗಳ ಹಿಂದೆ ಸರ್ಕಾರವೇ ತೂಗು ಸೇತುವೆ ನಿರ್ಮಿಸಿ ಕೊಟ್ಟಿತ್ತು.


ಆದರೆ ನಿರ್ವಹಣೆ ಇಲ್ಲದೆ ಸೇತುವೆ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿದೆ. ಸೇತುವೆಗೆ ಹಾಕಿರುವ ಗ್ರಿಲ್‌ಗಳು ಕಿತ್ತು ಬಂದಿವೆ. ಸೇತುವೆಯ ಫುಟ್‌ಪಾತ್ ಹಾಗೂ ತಡೆಗೋಡೆಗೆ ಹಾಕಿರೋ ಗ್ರಿಲ್‌ಗಳ ಜಾಯಿಂಟ್ ಕೂಡ ಬಿಟ್ಟಿದ್ದು ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿಯಂತಾಗಿದೆ.


ಇನ್ನು ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಸೇತುವೆಗೆ ಬಣ್ಣ ಹೊಡೆದು, ಗ್ರೀಸ್ ಹಾಕಿ ಬಂದೋಬಸ್ತ್ ಮಾಡಬೇಕೆಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.


nemmuru village bridge is in bad condition a dangerous warning for people vctv mrq
ನೆಮ್ಮಾರು ತೂಗು ಸೇತುವೆ


ಸೇತುವೆ ಸ್ಥಿತಿ ಕಂಡು ಭಯದಲ್ಲೇ ಓಡಾಡುತ್ತಿರುವ ಜನರು


ಇನ್ನು ಸೇತುವೆ ಸ್ಥಿತಿ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಸ್ಥಳಕ್ಕೆ ಬಂದು ಹೋಗುವ ಅಧಿಕಾರಿಗಳ ಕಥೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ.


ಒಂದು ವೇಳೆ ಈ ಸೇತುವೆ ಹಾಳಾದ್ರೆ, ಈ ಭಾಗದ ಜನ ಸಣ್ಣ ಕೆಲಸಕ್ಕೂ ಹೆದ್ದಾರಿಗೆ ಬರಬೇಕೆಂದ್ರೆ ಕನಿಷ್ಠ 10 ಕಿ.ಮೀ. ಸುತ್ತಿ ಬಳಸಿ ಬರಬೇಕು. ಮಳೆಗಾಲದಲ್ಲಿ ಆ 10 ಕಿ.ಮೀ. ಹೋಗೋದು ಅಸಾಧ್ಯದ ಮಾತು. ಮಕ್ಕಳು ಶಾಲಾ-ಕಾಲೇಜಿಗೆ ಹೋಗೋದಕ್ಕೆ ಆಗಲ್ಲ. ನಿತ್ಯ 20 ಕಿ.ಮೀ. ನಡೆದು ಹೋಗಬೇಕಾಗುತ್ತದೆ.


nemmuru village bridge is in bad condition a dangerous warning for people vctv mrq
ನೆಮ್ಮಾರು ತೂಗು ಸೇತುವೆ


ಒಬ್ಬಿಬ್ರು ಓಡಾಡಿದ್ರೂ ತೂಗಾಡುತ್ತೆ ಸೇತುವೆ


ಈ ಸೇತುವೆ ನಿರ್ಮಾಣವಾದಗಿನಿಂದ ಒಂದೇ ಒಂದು ಬಾರಿ ಮಾತ್ರ ಬಣ್ಣ-ಗ್ರೀಸ್ ಕಂಡಿದೆ. ಮೊದಲೆಲ್ಲಾ 4-5 ಜನ ಓಡಾಡಿದ್ರು ಏನೂ ಆಗ್ತಿರಲ್ಲಿಲ್ಲ. ಈಗ ಒಬ್ಬಿಬ್ಬರು ಓಡಾಡುದ್ರೆ ತೂಗಾಡುತ್ತೆ, ಓಡಾಡೋಕೆ ಭಯವಾಗುತ್ತೆ ಎಂದು ಸ್ಥಳೀಯರು ಹೇಳುತ್ತಾರೆ.


ಇದನ್ನೂ ಓದಿ:  IAS Officer J Manjunath: ಲಂಚ ಪಡೆದ ಆರೋಪದಡಿ ಅರೆಸ್ಟ್ ಆಗಿದ್ದ ಐಎಎಸ್ ಅಧಿಕಾರಿ ಮರುನೇಮಕ


ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು


ಸೇತುವೆ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೋರಿರುವ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇತುವೆ ಕಟ್ಟಿ ಹೋದವರು ಮತ್ತೆ ಈ ಕಡೆ ಬಂದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


nemmuru village bridge is in bad condition a dangerous warning for people vctv mrq
ನೆಮ್ಮಾರು ತೂಗು ಸೇತುವೆ


ಒಟ್ಟಾರೆ ಸರ್ಕಾರ ಬಡ ಜನರಿಗೆಂದು ತೂಗು ಸೇತುವೆಯನ್ನೇನೋ ನಿರ್ಮಿಸಿ ಕೊಡ್ತು. ಆದರೆ ಅದರ ನಿರ್ವಹಣೆ ಮರೆತಿದೆ. ಸರ್ಕಾರವೇ ಮರೆತ ಕಾರಣ ಇಂದು ಆ‌ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.


ಇದನ್ನೂ ಓದಿ:  Bengaluru Gangwar: ಒಂದೇ ಏಟಿಗೆ ಯುವಕನ ಎಡಗೈ ಕಟ್; ತುಂಡಾದ ಭಾಗ ನಾಯಿಗಳು ತಿಂದಿರುವ ಶಂಕೆ


ಸಂಪೂರ್ಣ ತೂಗಾಡ್ತಿದೆ ಸೇತುವೆ


ಕಂಬಿ ಕಿತ್ತಿವೆ, ಇಂಟರ್ ಲಿಂಕ್ ಹೋಗಿವೆ. ತೂಗು‌ಸೇತುವೆ ಸಂಪೂರ್ಣ ತೂಗಾಡ್ತಿದೆ. ಮುಂದೊಂದು ದಿನ ಏನಾದ್ರು ಅನಾಹುತವಾದಾಗ ಸರ್ಕಾರ ಪರಿಹಾರ ನೀಡುವ ಬದಲು ಈಗಲೇ ಇತ್ತ ಗಮನ ಹರಿಸಿ ಅದಕ್ಕೊಂದು ಭದ್ರತೆ ಕಲ್ಪಿಸಿದರೆ ಏನೂ ಆಗಲ್ಲ. ಸರ್ಕಾರ ಆ ನಿಟ್ಟಿನಲ್ಲಿ ಯೋಚಿಸಬೇಕಿದೆ.

Published by:Mahmadrafik K
First published: