Nehru Photo: ಸ್ವಾತಂತ್ರ್ಯ ಅಮೃತೋತ್ಸವ, ನೆಹರೂ ಮರೆತ ಕರ್ನಾಟಕ ಸರ್ಕಾರ- ಕಾಂಗ್ರೆಸ್ ಆಕ್ರೋಶ

ಸ್ವಾತಂತ್ರ್ಯ ಅಮೃತ ಮಹೋತೋತ್ಸವ ಭಾಗವಾಗಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಜಾಹೀರಾತು ಈಗ ವಿವಾದಕ್ಕೀಡಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಫೋಟೋವನ್ನೇ ಸರ್ಕಾರ ಕೈ ಬಿಟ್ಟಿದೆ.

ನೆಹರೂ ಜಾಹಿರಾತು ವಿವಾದ

ನೆಹರೂ ಜಾಹಿರಾತು ವಿವಾದ

  • Share this:
ದೇಶದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ (Har Ghar Tiranga) ನಡೀತಿದೆ. ಸ್ವಾತಂತ್ರ್ಯ ಅಮೃತ ಮಹೋತೋತ್ಸವ ಭಾಗವಾಗಿ ಕರ್ನಾಟಕ ಸರ್ಕಾರ (Karnataka Government) ಬಿಡುಗಡೆ ಮಾಡಿರುವ ಜಾಹೀರಾತು (Advertisement) ಈಗ ವಿವಾದಕ್ಕೀಡಾಗಿದೆ. ಕ್ಯಾಂಪೇನ್ ಅಂಗವಾಗಿ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರ್ಕಾರ ಬಿಡುಗಡೆ ಮಾಡಿರುವ ಜಾಹೀರಾತು ವಿವಾದದ (Controversy) ಕೇಂದ್ರ ಬಿಂದುವಾಗಿದೆ. ಸರ್ಕಾರಿ ಜಾಹೀರಾತಿನಲ್ಲಿ ಮುದ್ರಿಸಿರುವ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಫೋಟೋವನ್ನೇ ಸರ್ಕಾರ ಕೈ ಬಿಟ್ಟಿದೆ. ಇದನ್ನು  ಕಾಂಗ್ರೆಸ್ ನಾಯಕರು (Congress) ಅತ್ಯುಗ್ರವಾಗಿ ಖಂಡಿಸಿದ್ದಾರೆ.

ಸಿಎಂ ಬೊಮ್ಮಾಯಿ ನಾಲಾಯಕ್- ಸಿದ್ದರಾಮಯ್ಯ

ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಫೋಟೋ ಬಿಟ್ಟಿರೋದಕ್ಕೆ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಸಿಎಂ ಆಗಿ ಮುಂದುವರಿಯಲು ನಾಲಾಯಕ್. ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

ಸನ್ಮಾನ್ಯ @BSBommai ಅವರೇ, ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಜವಾಹರಲಾಲ ನೆಹರೂ ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಿ.

7/7 pic.twitter.com/6u6XjDTGhY


— Siddaramaiah (@siddaramaiah) August 14, 2022

RSSನ ಕೊಳಕು ಮನಸ್ಥಿತಿ-ಸಿದ್ದರಾಮಯ್ಯ

ಸರ್ಕಾರ, ಸಿಎಂ ಬೊಮ್ಮಾಯಿ ಮಾತ್ರವಲ್ಲದೆ, ಆರ್​​ಎಸ್​ಎಸ್​ ವಿರುದ್ಧವೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇದು ಆರ್ಎಸ್ಎಸ್ನ ಕೊಳಕು ಮನಸ್ಥಿತಿ. ಸಿಎಂ ಆರ್​​ಎಸ್​ಎಸ್ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

Nehru photo advertisement controversy in Karnataka congress criticize government
ನೆಹರೂ ಜಾಹೀರಾತು ವಿವಾದ


ಕ್ಷಮೆ ಕೋರುವಂತೆ ಸಿಎಂಗೆ ಡಿಕೆಶಿ ಆಗ್ರಹ

ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಫೋಟೋವನ್ನು ಕೈಬಿಟ್ಟಿರೋದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವಿಟ್ಟರ್​​ನಲ್ಲಿ ಕಿಡಿಕಾರಿದ್ದಾರೆ. ಮೊದಲ ಪ್ರಧಾನಿ ನೆಹರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಈಗಿನ ಸಿಎಂ ಬೊಮ್ಮಾಯಿ ಅವರ ತಂದೆ ಕೂಡ ಸಿಎಂ ಆಗಿದ್ದರು. ಹಾಗಂತ ಎಸ್​.ಆರ್.ಬೊಮ್ಮಾಯಿ ಸಿಎಂ ಆಗಿಲ್ಲ ಅಂತ ಹೇಳಲು ಆಗುತ್ತಾ..? ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಹಾಕಿದ್ದ ಟಿಪ್ಪು ಫ್ಲೆಕ್ಸ್​​ ಹರಿದ ಪುನೀತ್ ಕೆರೆಹಳ್ಳಿ-ಪೊಲೀಸರಿಂದ ಮೂವರ ಬಂಧನ

ಬೊಮ್ಮಾಯಿ ಸರ್ಕಾರ ಕೆಳಮಟ್ಟಕ್ಕೆ ಇಳಿದಿದೆ: ಸುರ್ಜೆವಾಲಾ

ನೆಹರೂ ಅವರ ಫೋಟೋ ಕೈಬಿಟ್ಟ ಬೊಮ್ಮಾಯಿ ಸರ್ಕಾರದ ನಡೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಕೂಡ ಟೀಕಿಸಿದ್ದಾರೆ. ಭಾರತದ ಮೊದಲ ಪ್ರಧಾನಿ, ರಾಷ್ಟ್ರ ನಿರ್ಮಾತೃ, ಪಂಡಿತ್ ಜವಾಹರಲಾಲ್ ನೆಹರು ಮೇಲಿನ ಕೊನೆಯಿಲ್ಲದ ದ್ವೇಷವು ಅದರ ಉತ್ತುಂಗವನ್ನು ತಲುಪಿದೆ ಎಂದು ಟ್ವೀಟ್ ಮಾಡಿ ಜರಿದಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಹಾರಲು ರೆಡಿಯಾಯ್ತು ದೇಶದ ಅತೀ ದೊಡ್ಡ ರಾಷ್ಟ್ರ ಧ್ವಜ!

ಡಿ.ಕೆ.ಸುರೇಶ್ ಅವರು ಕೂಡ ಕರ್ನಾಟಕ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ನೆಹರೂ ಹಾಗೂ ಅವರ ಕುಟುಂಬ ಸುಮಾರು ವರ್ಷಗಳ ಕಾಲ ಜೈಲಿನಲ್ಲಿ ಇದ್ದರು. ಇದನ್ನು ಬಿಜೆಪಿ ನಾಯಕರು ತಿರುಚುವುದಕ್ಕೆ ಸಾಧ್ಯ ಇಲ್ಲ. ಇಂತ ನೂರು ಬಿಜೆಪಿ ಹುಟ್ಟಿದರೂ ಯಾರೂ ನೆಹರೂ ಇತಿಹಾಸ, ನೆಹರೂ ಕೊಡುಗೆ ಅಳಿಸಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ನೆಹರೂ ಮಾರ್ಗದರ್ಶನವನ್ನು ಮರೆಮಾಚಲು ತಿರುಚುವುದಕ್ಕೆ ಸಾಧ್ಯವಿಲ್ಲ. ಇದು ಬಿಜೆಪಿಯವರ ಸಂಕುಚಿತ, ಕೀಳುಮನೋಭಾವ ತೋರಿಸುತ್ತದೆ ಅಂತ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಿಂದ ಕರಾಳ ದಿನಾಚರಣೆ

ಸರ್ಕಾರದಲ್ಲಿ ಜಾಹಿರಾತುವಿನಲ್ಲಿ ನೆಹರೂ ಫೋಟೋ ಹಾಕದ ಬಗ್ಗೆ ಕಾಂಗ್ರೆಸ್ ಟೀಕೆ ಬೆನ್ನಲ್ಲೇ ನೆಹರೂ ಮೂಲಕವೇ ಕಾಂಗ್ರೆಸ್ ಗೆ ತಿರುಗೇಟು ಕೊಡಲು ಬಿಜೆಪಿ ಪ್ಲಾನ್ ಮಾಡಿದೆ. ಇಂದು ಬಿಜೆಪಿಯಿಂದ ಕರಾಳ ದಿನ ಆಚರಣೆಗೆ ಸಿದ್ಧತೆ ನಡೆಸಿದೆ. ಪಾಕಿಸ್ತಾನ ಅಸ್ತಿತ್ವಕ್ಕೆ ಪ್ರಧಾನಿ ನೆಹರೂ ಕಾರಣ ಎಂದು ಬಿಜೆಪಿ ಕಚೇರಿಯಿಂದ ಕರಾಳ ದಿನ ಆಚರಣೆ ಮಾಡ್ತಿದೆ.

ಸಂಜೆ 6ಕ್ಕೆ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ ಬೊಮ್ಮಾಯಿ, ದೇಶ ವಿಭಜನೆ ಕುರಿತು ಮಾತನಾಡಲಿದ್ದಾರೆ. ಈ ಮೂಲಕ, ದೇಶ ವಿಭಜನೆಗೆ ಕಾಂಗ್ರೆಸ್ ಕೊಡುಗೆ ಎಂಬ ಸಂದೇಶ ರವಾನಿಸಲು ತಯಾರಿ ನಡೆಸಿದೆ.
Published by:Thara Kemmara
First published: