Chikkamagaluru: ಚಿಕ್ಕಮಗಳೂರಿನ ಗಿರಿ-ಪರ್ವತಕ್ಕೆ ನೀಲಿ ಚಿತ್ತಾರ, ಕಾಫಿನಾಡಿನ ಬೆಟ್ಟ-ಗುಡ್ಡಗಳಿಗೆ ಹೊಸ ಬಣ್ಣ!

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಚಿಕ್ಕಮಗಳೂರಿನ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಳ್ತಿವೆ. ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸೋ ಕಾಲ ಸನ್ನಿಹಿತವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರೋ ನೀಲಕುರುಂಜಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ನೀಲುಕುರುಂಜಿ

ನೀಲುಕುರುಂಜಿ

  • Share this:
ಚಿಕ್ಕಮಗಳೂರು ಅಂದರೇನೇ ಹಚ್ಚ ಹಸಿರಿನ ನಾಡು. ಈಗ ಇಲ್ಲಿನ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಂಡಿದೆ. ಕಾಫಿನಾಡಿನ ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸೋ ಕಾಲ ಸನ್ನಿಹಿತವಾಗಿದೆ. 12 ವರ್ಷಕೊಮ್ಮೆ ಅರಳೋ ನೀಲ ಕುರುಂಜಿ ಹೂವು ಕಾಫಿನಾಡನ್ನ ಭೂಲೋಕದ ಸ್ವರ್ಗವಾಗಿಸ್ತಿದೆ. ಕಾಫಿನಾಡಲ್ಲಿ ಅರಳಿ ನಿಂತಿರೋ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿದೆ. 12 ವರ್ಷಗಳಿಗೊಮ್ಮೆ ಅರಳೋ ಈ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲಾ ಕಾಣೋ ಅಪರೂಪದ ನೀಲಿ ಕುರುಂಜಿ ನೋಡುಗರ ಕಣ್ಮನ ಸೆಳೆಯೋದ್ರ ಜೊತೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಚಿಕ್ಕಮಗಳೂರಿನ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಳ್ತಿವೆ. ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸೋ ಕಾಲ ಸನ್ನಿಹಿತವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರೋ ಕುರುವಂಜಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ಕಲ್ಲುಬಂಡೆಗಳ ಸಾಲಿನಲ್ಲಿ ನೀಲಿ ದೃಶ್ಯವೈಭವ
ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯ ಸಾಲಿನಲ್ಲಿ ಮಾತ್ರ ಅರಳೋ ಈ ಹೂವು ಕಾಫಿನಾಡಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಅರಳಿ ನಿಂತಿದೆ. ಮುಳ್ಳಯ್ಯನಗಿರಿ, ಮಲ್ಲಂದೂರಿನ ಕಲ್ಲುಬಂಡೆಗುಡ್ಡ ಸುತ್ತಲೂ ಹುಲುಸಾಗಿ ಅರಳಿ ನಿಂತಿದೆ.

Neelakurunji flower in chikkamagaluru after 12 year blooming tourists captured photo
ನೀಲಕುರುಂಜಿ ಹೂವು


ಪ್ರವಾಸಿಗರನ್ನು ಸ್ವಾಗತಿಸ್ತಿದೆ ನೀಲ ಕುರುಂಜಿ ಹೂವು
ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಓಡಾಡೋ ಪ್ರವಾಸಿಗರನ್ನು ಸ್ವಾಗತಿಸ್ತಿರೋದೆ ಈ ನೀಲಿ ಕುರುಂಜಿ ಹೂವು. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶವಾಗಿರೋದ್ರಿಂದ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಕಾಫಿನಾಡನ್ನ ಭೂ ಲೋಕದ ಸ್ವರ್ಗವಾಗಿಸ್ತಿದೆ.

ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಯ ಆಗಮನ, ಮತ್ತೊಂದೆಡೆ ಪ್ರವಾಸಿಗರ ಹೀರೋ ನಿಧನ!

ನೀಲುಕುರುಂಜಿ ಹೂವಿಗಿದೆ ಧಾರ್ಮಿಕ ಇತಿಹಾಸ
ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವಳ್ಳಿನ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ರಿಂದ ಈ ಗುರ್ಗಿಯನ್ನ ಪ್ರೇಮದ ಸಂಕೇತವಾಗಿ ಪ್ರೇಮದ ಹೂವು ಅಂತಲೂ ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ.

Neelakurunji flower in chikkamagaluru after 12 year blooming tourists captured photo
ನೀಲಕುರುಂಜಿ ಹೂವು


ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಅರಳುತ್ತದೆ
ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳುತ್ತೆ. ಗುರ್ಗಿ ಹೂವಿನಲ್ಲಿ ನಾನಾ ವಿಧಗಳಿದ್ದು 5, 7, 12, 14 ವರ್ಷಗಳಿಗೆ ಅರಳೋ ಪ್ರಭೇದ ಹೂವುಗಳೂ ಇವೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿರೋದ್ರಿಂದ ನಾನಾ ಖಾಯಿಲೆಗೂ ಬಳಸುತ್ತಾರೆ.

ಸದ್ಯಕ್ಕೆ ಕಾಫಿನಾಡಿನ ಗಿರಿಶಿಖರಗಳಲ್ಲಿ ಅರಳಿ ನಿಂತಿರೋ, ಮತ್ತಷ್ಟು ಅರಳೋ ಸನಿಹದಲ್ಲಿದ್ದು ಬೆಟ್ಟಗುಡ್ಡಗಳ ಸೌಂದರ್ಯವನ್ನೆ ಬದಲಿಸಿ, ನೋಡುಗನ ಕಣ್ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಪ್ರಕೃತಿಯ ಒಡಲಾಳದಲ್ಲಿ ಇನ್ನೆಷ್ಟು ಸೌಂದರ್ಯದ ರಾಶಿ ಮನೆ ಮಾಡಿದ್ಯೊ ಬಲ್ಲೋರ್ಯಾರು ಇಲ್ಲ.

ನೀಲುಕುರುಂಜಿ ನೋಡಬೇಕಾದರೆ ಕಾಫಿನಾಡಿಗೆ ಬನ್ನಿ
ಕಾಫಿನಾಡಲ್ಲಿ ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತೆ. ಈವರೆಗೆ ಹಸಿರಿನಿಂದ ಕಂಗೊಳಿಸೋ ಬೆಟ್ಟಗುಡ್ಡಗಳನ್ನ ನೋಡಿದ್ದ ನಾವು-ನೀವು ಇನ್ಮುಂದೆ ನೀಲಿ ಬೆಟ್ಟಗಳನ್ನ ನೋಡ್ಬೇಕು ಅಂದ್ರೆ, ಕಾಫಿನಾಡಿಗೆ ಬರಲೇಬೇಕು. ತಿಂಗಳ ಕಾಲ ಅರಳಿ ನಿಲ್ಲೋ ಇಲ್ಲಿನ ಸೌಂದರ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ ಅನ್ನೋದಂತು ಸತ್ಯ.

ಇದನ್ನೂ ಓದಿ: ಬ್ರಿಟಿಷರು ಕುದುರೆಗಳಿಗೆ ನೀರು ಕುಡಿಸುತ್ತಿದ್ದ ಜಾಗ ಇದು! ಐತಿಹಾಸಿಕ ಕೆರೆಗೆ ಈಗ ಧಕ್ಕೆ

ಮುಳ್ಳಯ್ಯನಗಿರಿಯಲ್ಲಿ ಹನುಮಂತನ ಏಕಶಿಲಾ ವಿಗ್ರಹ
ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಥಟ್ ಅಂತ ನೆನಪಾಗೋದು ರಾಜ್ಯದ ಎತ್ತರದ ಶಿಖರ ಮುಳ್ಳಯ್ಯನಗಿರಿ. ಇದೀಗ ಮುಳ್ಳಯ್ಯನಗಿರಿ ಜೊತೆಗೆ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಲು ಹೊರಟಿದ್ದಾನೆ ರಾಮನ ಭಕ್ತ ಹನುಮಂತ. ಅರೇ, ಮುಳ್ಳಯ್ಯನಗಿರಿಗೂ ಆಂಜನೇಯನಿಗೂ ಎತ್ತಣ ಸಂಬಂಧ ಅಂತಾ ಅಚ್ಚರಿ ಪಡಬೇಡಿ.

ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ಸಾಗುವ ಮಾರ್ಗ ಮಧ್ಯೆ ಸಿಗುವ ಕವಿಕಲ್ ಗಂಡಿ ಗುಡ್ಡದ ಮೇಲೆ ಬರೋಬ್ಬರಿ 21 ಅಡಿಯ ವೀರ ಹನುಮನ ಏಕಶಿಲಾ ವಿಗ್ರಹ ಶೀಘ್ರದಲ್ಲೇ ತಲೆ ಎತ್ತಲಿದೆ. ಚಿಕ್ಕಮಗಳೂರು ಶಾಸಕ ಸಿಟಿ ರವಿ ನೇತೃತ್ವದಲ್ಲಿ ತಾಲೂಕಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ಪರ್ವತ ಆಂಜನೇಯನನ್ನ ನಿರ್ಮಿಸಲು ಯೋಜನೆ ಸಿದ್ದಗೊಂಡಿದೆ.
Published by:Thara Kemmara
First published: