ಮುಗ್ದ ಬಾಲಕಿಗೆ ಕಾಡುತ್ತಿವೆ ವಿಚಿತ್ರ ಕಾಯಿಲೆ- ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ

ಆ ಮಗುವಿಗೆ ಅಂಗವಿಕಲತೆ ಇರುವದು ಕಳೆದ 2 ವರ್ಷದಿಂದ ಗೊತ್ತಾಗಿದ್ದು ಈ ಮಗುವನ್ನು ಎಲ್ಲಾ ಮಕ್ಕಳಂತೆ ಬೆಳೆಯಬೇಕು ಎನ್ನುವ ಆಸೆಯಿಂದ ರಾಯಚೂರು, ಬೆಂಗಳೂರು ನಿಮ್ಹಾನ್ಸ್ ಹಾಗೂ ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ, ಆದರೆ ಪ್ರಯೋಜನವಾಗಿಲ್ಲ

ಪಾಲಕರೊಂದಿಗೆ ಇರುವ ಮಗು

ಪಾಲಕರೊಂದಿಗೆ ಇರುವ ಮಗು

  • Share this:
ರಾಯಚೂರು(ಫೆ.08) : ಈ ಬಾಲಕಿ ಯಾರ ಶಾಪದಿಂದ ಹುಟ್ಟಿದ್ದಳೋ ಗೊತ್ತಿಲ್ಲ, ಮುದ್ದಾದ ಈ ಮಗುವಿನಲ್ಲಿ ಬಹು ಅಂಗವೈಕಲ್ಯ ಕಾಡುತ್ತಿದೆ, ಈ ಮಗುವಿಗಾಗಿ ಸಾಕಷ್ಟು ಖರ್ಚು ಮಾಡಿದ ತಂದೆ ತಾಯಿ ಮುಂದೆ ಖರ್ಚು ಮಾಡಲು ಆಗದೆ ದಿಕ್ಕು ತೋಚದಂತಾಗಿದ್ದಾರೆ.

ನೋಡಲು ಮುಂದಾಗಿರುವ ಈ ಮಗುವಿಗೆ ಈ ಲೋಕದ ಅರಿವು ಇಲ್ಲ, ಮೂರು ವರ್ಷದ ಹಿಂದೆ ಹುಟ್ಟಿದ ಈ ಮಗುವಿಗೆ ಕಣ್ಣು ಕಾಣುವುದಿಲ್ಲ, ಮಾತು ಬರುವುದಿಲ್ಲ, ಸ್ಪರ್ಶ ಜ್ಞಾನವಿದ್ದರೂ ಯಾರು ಮುಟ್ಟಿದ್ದಾರೆ, ಯಾವ ವಸ್ತು ಎಂಬುವುದು ಗೊತ್ತಾಗುವುದಿಲ್ಲ. ಕುಳಿತುಕೊಳ್ಳಲು ಆಗುವುದಿಲ್ಲ, ಒಂದು ಜೀವ ಇರುವ ಮುದ್ದೆಯಂತೆ ಇದ್ದಾಳೆ,

ಈ ಮಗು ರಾಯಚೂರು ಬಳಿಯ ಯರಮರಸ್ ಕ್ಯಾಂಪಿನಲ್ಲಿರುವ ಅಹ್ಮದ್ ಹುಸೇನ ಹಾಗೂ ಸಮೀನಾ ದಂಪತಿಯ ನಾಲ್ಕನೆಯ ಮಗು, ಅಹ್ಮದ್ ಹುಸೇನ ಖಾಸಗಿ ಕಂಪನಿಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ, ಸಮೀನಾ ಖಾಸಗಿ ಶಾಲೆಯೊಂದರಲ್ಲಿ ಆಯಾಳಾಗಿ ಕೆಲಸ ಮಾಡುತ್ತಿದ್ದಾರೆ, ಇಬ್ಬರು ದುಡಿಮೆಯು ಸೇರಿ ತಿಂಗಳಿಗೆ 20 ಸಾವಿರ ದಾಟುವುದಿಲ್ಲ, ಇವರಿಗೆ ಒಟ್ಟು ನಾಲ್ಕು ಮಕ್ಕಳಲ್ಲಿ ಮೂರು ಮಕ್ಕಳು ಚೆನ್ನಾಗಿದ್ದರೆ ಕೊನೆಯ ಮಗಳು ಶೀರಿಯಾ ಫಾತಿಮಾ ಬಹು ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾಳೆ,

ಆಕೆಯಲ್ಲಿ ಅಂಗವಿಕಲತೆ ಇರುವದು ಕಳೆದ 2 ವರ್ಷದಿಂದ ಗೊತ್ತಾಗಿದ್ದು ಈ ಮಗುವನ್ನು ಎಲ್ಲಾ ಮಕ್ಕಳಂತೆ ಬೆಳೆಯಬೇಕು ಎನ್ನುವ ಆಸೆಯಿಂದ ರಾಯಚೂರು, ಬೆಂಗಳೂರು ನಿಮ್ಹಾನ್ಸ್ ಹಾಗೂ ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ, ಆದರೆ ಪ್ರಯೋಜನವಾಗಿಲ್ಲ. ಈಗ ಮಗುವಿಗೆ ಚಿಕಿತ್ಸೆಗಾಗಿ ಮುಂಬೈ ಅಥವಾ ಬೇರೆ ಯಾವುದೋ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ, ಆದರೆ ಬಡತನದಲ್ಲಿರುವ ಈ ಕುಟುಂಬಕ್ಕೆ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ : ರಾಯಚೂರಿನಲ್ಲಿ ಕಳ್ಳರಿಗೆ ವರದಾನವಾದ ಸಿಸಿ ಕ್ಯಾಮರಾಗಳ ಕಣ್ಣಾಮುಚ್ಚಾಲೆ

ನಿಮ್ಹಾನ್ಸ್ ಹಾಗೂ ಕಲಬುರಗಿ ಆಸ್ಪತ್ರೆಯಲ್ಲಿ ಎಂಆರ್ ಐ ಸ್ಕಾನಿಂಗ್ ಸೇರಿದಂತೆ ಹಲವಾರು ಪರೀಕ್ಷೆ ಮಾಡಿಸಲಾಗಿದೆ. ಕಲಬುರ್ಗಿ ಯಲ್ಲಿ ಸ್ಕಾನ್ ಮಾಡಿಸಿ ಒಂದು ವರ್ಷವಾಗಿದೆ. ಈಗ ಆಕೆಗೆ ಬೇರೆ ಕಡೆ ಚಿಕಿತ್ಸೆ ಕೊಡಿಸಬೇಕಾಗಿದೆ. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿರುವದರಿಂದ ಅವರ ಬಳಿ ಹಣವಿಲ್ಲದೆ ಪರದಾಡುತ್ತಿದ್ದಾರೆ.

ನಿತ್ಯ ದುಡಿಯದಿದ್ದರೆ ಅವರ ಕುಟುಂಬ ನಿರ್ವಹಣೆ ಮಾಡುವುದು ಕಷ್ಟ, ಆದರೆ ಅಂಗವಿಕಲತೆಯ ಮಗು, ಈ ಮಗುವಿಗೆ ಈ ಲೋಕದ ಯಾವುದೇ ಪ್ರಜ್ಞೆ ಇಲ್ಲ, ಸಂಕಷ್ಟದಲ್ಲಿರುವ ಈ ಕುಟುಂಬದ ನೆರವಿಗೆ ಯಾರಾದರೂ ಬಂದರೆ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿ ಗುಣ ಪಡಿಸಬಹುದು. ಇವರಿಗೆ ಸರಕಾರದಿಂದಾದರೂ ಅಥವಾ ದಾನಿಗಳಿಂದಾದರೂ ಸೂಕ್ತ ಮಾರ್ಗದರ್ಶನ ಹಾಗು ಚಿಕಿತ್ಸೆ ಅವಶ್ಯವಿದೆ.
First published: